Fruits ID mandatory for drought relief :- ಅವರ ಆತ್ಮೀಯ ರೈತ ಬಾಂಧವರು ಇಂದಿನ ಲೇಖನದಲ್ಲಿ ನಾವು ಈಗಾಗಲೇ ಸರ್ಕಾರದಿಂದ ನಿಮಗೆ ಬರ ಪರಿಹಾರ ಬೇಕಿದ್ದಲ್ಲಿ ಕಡ್ಡಾಯವಾಗಿ ನೀವು ಫ್ರೂಟ್ಸ್ ಐಡಿ ತಂತ್ರಾಂಶದ ಅಡಿಯಲ್ಲಿ ನಿಮ್ಮ ಸರ್ವೇ ನಂಬರ್ ಗಳನ್ನು ದಾಖಲಿಸಬೇಕು.

ಈಗಾಗಲೇ ನೀವು ಸರ್ವೆ ನಂಬರನ್ನು ದಾಖಲಿಸಿದರೆ ತಪ್ಪದೇ ನಿಮಗೆ ಸಂಬಂಧಿಸಿದ ಎಲ್ಲ ಜಮೀನುಗಳ ಸರ್ವೆ ನಂಬರ್‌ಗಳು ಜೋಡಣೆಯಾಗಿದೆಯೋ ಅಥವಾ ಇಲ್ಲವೋ ಎಂದು ಕೂಡಲೇ ಪರಿಶೀಲಿಸಿಕೊಳ್ಳಬೇಕು. ನಂತರ ನಿಮಗೆ ಪರಿಹಾರ ಹಣ, ಸರಕಾರದಿಂದ ಕೊಡುವ ಸಾಲ ಸೌಲಭ್ಯ, ಹಾಗೂ ಮುಂತಾದ ಯೋಜನೆಗಳ ಹಣ ನಿಮ್ಮ ಖಾತೆಗೆ ಬರುವುದು ಖಚಿತವಾಗುತ್ತದೆ. 🙏🏻🙏🏻 ದಯವಿಟ್ಟು ಈ ಲೇಖನವನ್ನು ಕೊನೆಯವರೆಗೆ ಓದಿ ತಪ್ಪದೇ ಎಲ್ಲರಿಗೂ ಶೇರ್ ಮಾಡಿ🙏🏻

ಫ್ರೂಟ್ಸ್‌ ಐಡಿ ಶೇ.70 ಸಾಧನೆ: ಪೂರ್ಣಪ್ರಮಾಣದಲ್ಲಿ ಬೆಳೆ ವಿವರ ನಮೂದಿಸಿದರೆ ಮಾತ್ರ ರೈತರಿಗೆ ಪರಿಹಾರ

ಫ್ರೂಟ್ಸ್‌ ಐಡಿ ಇಲ್ಲದೆ, ರೈತರಿಗೆ ಬರ ಪರಿಹಾರ ಬಿಡುಗಡೆಯೂ ಆಗುವುದಿಲ್ಲ. ಹೀಗಾಗಿ ಈಗಾಗಲೇ 70 ಗುರಿ ಸಾಧನೆ ಆಗಿರುವ ಧಾರವಾಡದಲ್ಲಿ ಶೇ 100 ರಷ್ಟು ಸಾಧಿಸಲು ಕೃಷಿ ಇಲಾಖೆ ಕಸರತ್ತು ನಡೆಸುತ್ತಿದೆ. ಅಧಿಕಾರಿಗಳು ಸೆ. 30 ರೊಳಗೆ ಬೆಳೆ ಸಮೀಕ್ಷೆ ನಡೆಸಬೇಕೆಂದು ಸರ್ಕಾರ ಹೇಳಿತ್ತು. ಆದರೆ ಶೇ 100 ರಷ್ಟು ಬೆಳೆ ಸಮೀಕ್ಷೆ ನಡೆಸದ ಹಿನ್ನೆಲೆಯಲ್ಲಿ ಗಡುವು ವಿಸ್ತರಣೆ ಮಾಡಲಾಗಿದೆ.

ಫ್ರೂಟ್ಸ್‌ ಐಡಿ ಶೇ.100 ಸಾಧನೆ ಮಾಡಬೇಕು ಎಂದು ರಾಜ್ಯ ಸರಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಎಲ್ಲೆಡೆ ಈಗ ಫ್ರೂಟ್ಸ್‌ ಐಡಿ ಮಾಡಿಸುವ ಕಸರತ್ತು ನಡೆಸಿದೆ.

ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಎಲ್ಲಾ ಜಮೀನುಗಳ ಪಹಣಿ, ಆಧಾರ್‌ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್‌ ಪಾಸ್‌ಬುಕ್‌ ಕೊಟ್ಟು ಫ್ರೂಟ್ಸ್‌ ಐಡಿಯನ್ನು ಮಾಡಿಸಬೇಕು.

ಸರಕಾರದ ಎಲ್ಲಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಪ್ರತಿ ರೈತರಿಗೆ ತಮ್ಮ ಹಕ್ಕಿನಲ್ಲಿರುವ ಎಲ್ಲಾ ಸಾಗುವಳಿ ಭೂಮಿಗಳ ವಿವರ ಹೊಂದಿರುವ ಫ್ರೂಟ್ಸ್‌ ಐಡಿ ಹೊಂದುವುದು ಅಗತ್ಯ.

➡️ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ನಿಮಗೆ ಜಮೆ ಆಗುತ್ತದೆ.

ಬರ ಪರಿಹಾರದ ಹಣ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಲೇಬೇಕು. ಒಂದು ವೇಳೆ ಎಫ್‌ಐಡಿ ಮಾಡಿಸದಿದ್ದರೆ ಹಣ ಬರುವುದಿಲ್ಲ. ಎಫ್‌ಐಡಿ ಮಾಡದೆ ಇರುವ ಕೂಡಲೇ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್‌ಐಡಿ ಮಾಡಿಸಬೇಕು.

➡️ ಆಧಾರ್ ನಂಬರ್ ಹಾಕಿ ನಿಮ್ಮ FID ಸ್ಟೇಟಸ್ ತಿಳಿದುಕೊಳ್ಳಿ👇🏻

ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ👇🏻

https://fruitspmk.karnataka.gov.in/MISReport/GetDetailsByAadhaar.aspx

ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಎಫ್ ಐ ಡಿ ಜನರೇಟ್ ಆಗಿರುವುದು ನಿಮಗೆ ಕಾಣುತ್ತದೆ…

ಈವರೆಗೆ ಎಫ್‌ಐಡಿ ಮಾಡಿಸದೇ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೊಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತಮ್ಮ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೂಬೈಲ್ ಸಂಖ್ಯೆಯೊಂದಿಗೆ ಹೋಗಿ ತುರ್ತಾಗಿ ಎಫ್‌ಐಡಿ ಮಾಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ರೈತರು ವಂಚಿತರಾಗಬೇಕಾಗುತ್ತದೆ.

➡️ ನಿಮ್ಮ ಮೊಬೈಲ್ ನಲ್ಲೇ FID ನೊಂದಣಿ ಮಾಡುವುದು ಹೇಗೆ?ಇಲ್ಲಿ ನೋಡಿರಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://fruits.karnataka.gov.in/OnlineUserLogin.aspx

ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ.”Citizen Registration” ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,l agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ OTP ಅನ್ನು ಅಲ್ಲಿ ಹಾಕಿ, ನಂತರ Submit ಮೇಲೆ ಕ್ಲಿಕ್ ಮಾಡಬೇಕು.

ನಂತರ ನೀವು Password create ಮಾಡಿಕೊಂಡು ಮುಂದೆ ಲಾಗಿನ್ ಆಗಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದರೆ ನಿಮ್ಮ FID (ಫ್ರೂಟ್ಸ್ ಐ ಡಿ ) ನಿಮಗೆ ಸಿಗಲಿದೆ.

ಹೀಗೆ ಬಂದಿರುವ FID ಯನ್ನು ಕೃಷಿ ಇಲಾಖೆ,ರೇಷ್ಮೆ, ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರೀಶಿಲಿಸಿ Approve ಕೊಡಬೇಕು.

ನಂತರ FID ಯನ್ನು ಪಿ ಎಂ ಕಿಸಾನ್ ಯೋಜನೆ, ಬೆಳೆಸಾಲ, ಬೆಳೆವಿಮೆ ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ನೀವು ಈ FID ಅನ್ನು ಬಳಸಬಹುದು.

➡️ ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..👇🏻

https://landrecords.karnataka.gov.in/PariharaPayment/

ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ drought ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ.

31 ಜಿಲ್ಲೆಗಳಿಗೆ 324 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಈ ಬಾರಿ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಅಂತ ರಾಜ್ಯ ಸರ್ಕಾರ (Karnataka Govt) ಘೋಷಣೆ ಮಾಡಿತ್ತು. ಆದರೆ ಈಗ ಮತ್ತೆ ಏಳು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ.

➡️ ಇಲ್ಲಿಯವರೆಗೂ ನಿಮಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ??

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

Release of interim crop insurance :-

ಕೊಪ್ಪಳದ ರೈತರಿಗೆ ಬಂತು ಫಸಲ್ ಬಿಮಾ ವಿಮಾ ಯೋಜನೆಯ ಮಧ್ಯಂತರ ಪರಿಹಾರ: ಸಂಕಟದಲ್ಲಿರುವ ಅನ್ನದಾತನಿಗೆ ಆಸರೆ

ಮಳೆಯಿಲ್ಲದೆ ಬರದಿಂದ ಕಂಗೆಟ್ಟಿದ್ದ ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿತ್ತು. ಸರ್ಕಾರದಿಂದ ಬರ ಪರಿಹಾರ ಶೀಘ್ರ ಬರುವ ನಿರೀಕ್ಷೆಯ ನಡುವೆಯೇ, ವಿಮೆ ತುಂಬಿತ ರೈತರಿಗೆ ಮಧ್ಯಂತರ ಪರಿಹಾರ ಹಣ ಬಿಡುಗಡೆಯಾಗಿದೆ. ಕೊಪ್ಪಳದಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ, ತೊಗರಿ ಬೆಳೆಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಲಾಗಿದೆ.

ಈ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ.ಮಧ್ಯಂತರ ಪರಿಹಾರ ಬಂದಿದೆ..

➡️ ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ 👇🏻

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/Premium/CheckStatusMain_aadhaar.aspx

➡️ ಈ ರೈತರ ಸಾಲ ಮನ್ನಾ ಪಟ್ಟಿ ಬಿಡುಗಡೆ ನಿಮಗೆ ಎಷ್ಟು ಸಾಲ ಮನ್ನಾ ಆಗಿದೆ ಇಲ್ಲಿ ನೋಡಿ 🙏🏻👇🏻

ವಾಣಿಜ್ಯ ಬ್ಯಾಂಕ್ ಸಾಲ ಪಡೆದ ರೈತರ ಪಟ್ಟಿ ಯನ್ನು ಇಲ್ಲಿ ನೋಡಿ?? ನಿಮ್ಮ ಹೆಸರಿದೆಯೆ ಇಲ್ಲಿ ಚೆಕ್ ಮಾಡಿಕೊಳ್ಳಿ..

https://mahitikanaja.karnataka.gov.in/Revenue/LoanWaiverReportBANKNew?ServiceId=2059&Type=TABLE&DepartmentId=2066

ನಂತರ ಅಲ್ಲಿ ರೈತ ಎಂದು ಸೆಲೆಕ್ಟ್(select) ಮಾಡಿಕೊಳ್ಳಿ

ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸು” ಮೇಲೆ ಒತ್ತಿರಿ..

➡️ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ನಿಮ್ಮ ಸಾಲ ಮನ್ನಾ ಎಷ್ಟು ಆಗಿದೆ ಎಂದು ಇಲ್ಲಿ ಚೆಕ್ ಮಾಡಿಕೊಳ್ಳಿ..

https://mahitikanaja.karnataka.gov.in/Revenue/LoanWaiverReportPACSNew?ServiceId=2060&Type=TABLE&DepartmentId=2066

ನಂತರ ಅಲ್ಲಿ ರೈತ ಎಂದು ಸೆಲೆಕ್ಟ್(select) ಮಾಡಿಕೊಳ್ಳಿ

ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸು” ಮೇಲೆ ಒತ್ತಿರಿ..

ಮಲ್ಲಿಕಾರ್ಜುನ ಬಾಳನಗೌಡ್ರ

ಧಾರವಾಡ: ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯ 8 ತಾಲೂಕುಗಳನ್ನು ರಾಜ್ಯ ಸರಕಾರ ಬರಪೀಡಿತ ಎಂದು ಘೋಷಿಸಿದೆ. ರೈತರಿಗೆ ಸೂಕ್ತ ಪರಿಹಾರ ಸಿಗಬೇಕಾದರೆ ಫ್ರೂಟ್ಸ್‌ ಐಡಿ ಇರಲೇಬೇಕು. ಎಲ್ಲ ರೈತರೂ ಫ್ರೂಟ್ಸ್‌ ಐಡಿ ಹೊಂದಲೇಬೇಕು, ಈ ನಿಟ್ಟಿನಲ್ಲಿ ಶೇ.100 ಸಾಧನೆ ಮಾಡಬೇಕು ಎಂದು ರಾಜ್ಯ ಸರಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಎಲ್ಲೆಡೆ ಈಗ ಫ್ರೂಟ್ಸ್‌ ಐಡಿ ಮಾಡಿಸುವ ಕಸರತ್ತು ನಡೆಸಿದೆ.

ಧಾರವಾಡ ಜಿಲ್ಲೆಯಲ್ಲಿ ಶೇ.70 ರೈತರು ಫ್ರೂಟ್ಸ್‌ ಐಡಿಯಲ್ಲಿ ಜಮೀನಿನ ಮಾಹಿತಿ ನೀಡಿದ್ದಾರೆ. ಉಳಿದ ಶೇ.30 (1,26,456 ಪ್ಲಾಟ್‌ಗಳು) ರೈತರು ತಮ್ಮ ಫ್ರೂಟ್ಸ್‌ ಐಡಿ ಮೂಲಕ ತಮ್ಮ ಹಕ್ಕಿನಲ್ಲಿರುವ ಎಲ್ಲ ಸಾಗುವಳಿ ಭೂಮಿಗಳ ವಿವರಗಳನ್ನು ಸೇರಿಸುವುದು ಬಾಕಿ ಇದೆ. ಬರಪೀಡಿತ ತಾಲೂಕುಗಳಲ್ಲಿ ಅಧಿಕಾರಿಗಳು ಶೇ.100ರಷ್ಟು ಬೆಳೆ ವಿವರ ನಮೂದಿಸಿದರೆ ಮಾತ್ರ ರೈತರಿಗೆ ಬೆಳೆ ನಷ್ಟ ತುಂಬಿಕೊಡಲು ಸಾಧ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳು ಸೆಪ್ಟೆಂಬರ್‌ 30 ಶೇರೊಳಗೆ ಬೆಳೆ ಸಮೀಕ್ಷೆ ನಡೆಸಬೇಕು ಎಂದು ರಾಜ್ಯ ಸರಕಾರ ಸೂಚನೆ ನೀಡಿತ್ತು. ಆದರೆ ಇನ್ನೂ ಶೇ.100 ಸಾಧನೆ ಮಾಡಲು ಆಗಿಲ್ಲ. ಹೀಗಾಗಿ ಗಡುವನ್ನು ವಿಸ್ತರಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಧಾರವಾಡ ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಬರ ಅಧ್ಯಯಮ, ಒಣಗಿದ ಬೆಳೆ ಹಿಡಿದು ಜಿಲ್ಲಾಧಿಕಾರಿಗೆ ಮನವಿ

ಎಲ್ಲಿ ಎಷ್ಟು ಬಾಕಿ:

ಧಾರವಾಡ ತಾಲೂಕಿನಲ್ಲಿ 28,310 ಪ್ಲಾಟ್‌ಗಳು, ನವಲಗುಂದ 16,689, ಹುಬ್ಬಳ್ಳಿ 20,077, ಕಲಘಟಗಿ 17,742, ಕುಂದಗೋಳ 13,595, ಹುಬ್ಬಳ್ಳಿ ನಗರ 21,043, ಅಳ್ನಾವರ 1,922, ಮತ್ತು ಅಣ್ಣಿಗೇರಿ 7,078 ಪ್ಲಾಟ್‌ಗಳು ಎಫ್‌ಐಡಿ ಅಡಿ ಸೇರಿರುವುದಿಲ್ಲ. ಕೂಡಲೇ ರೈತರು ಫ್ರೂಟ್ಸ್‌ ಐಡಿ ಮಾಡಿಸಿಕೊಳ್ಳಬೇಕು ಹಾಗೂ ಫ್ರೂಟ್ಸ್‌ ಐಡಿ ಹೊಂದಿದವರು ತಮ್ಮ ಎಲ್ಲಸರ್ವೇ ನಂಬರ್‌ಗಳನ್ನು ಎಫ್‌ಐಡಿಯಲ್ಲಿ ಸೇರಿಸಿಕೊಂಡರೆ ಪರಿಹಾರದ ಹಣ ಬಂದ ಕೂಡಲೇ ಕಂದಾಯ ಇಲಾಖೆಯಿಂದ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಡಿಬಿಟಿ ಮುಖಾಂತರ ಹಣ ವರ್ಗಾವಣೆ ಮಾಡಲು ಅನುಕೂಲವಾಗಲಿದೆ ಎನ್ನುವುದು ಅಧಿಕಾರಿಗಳ ಸಲಹೆ.

ರೈತರು ಏನು ಮಾಡಬೇಕು?

ಫ್ರೂಟ್ಸ್‌ ಐಡಿ ಆಗದೇ ಇರುವ ರೈತರು ಕೂಡಲೇ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಎಲ್ಲಾ ಜಮೀನುಗಳ ಪಹಣಿ, ಆಧಾರ್‌ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್‌ ಪಾಸ್‌ಬುಕ್‌ ಕೊಟ್ಟು ಫ್ರೂಟ್ಸ್‌ ಐಡಿಯನ್ನು ಮಾಡಿಸಬೇಕು. ಎನ್‌ಡಿಆರ್‌ಫ್‌ ಮಾರ್ಗಸೂಚಿ ಅನ್ವಯ ಪರಿಹಾರ ಹಣವನ್ನು ಪಡೆದುಕೊಳ್ಳಲು ಹಾಗೂ ಕೃಷಿ ಇಲಾಖೆಯ ಇತರೆ ಸವಲತ್ತುಗಳನ್ನು ಪಡೆಯಲು ಈಗಾಗಲೇ ಫ್ರೂಟ್ಸ್‌ ಐಡಿ ಆಗಿರುವ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾಸರ್ವೇ ನಂಬರ್‌ಗಳ ಜಮೀನನ್ನು ತಮ್ಮ ಫ್ರೂಟ್ಸ್‌ ಐಡಿಗೆ ಲಿಂಕ್‌ ಮಾಡಬೇಕು. ಅಲ್ಲದೇ ಬ್ಯಾಂಕ್‌ ಖಾತೆ ಬದಲಾವಣೆಯಾಗಿದ್ದರೆ ಸರಿಪಡಿಸಿಕೊಳ್ಳಬೇಕು.

ಫ್ರೂಟ್ಸ್‌ ಐಡಿ ಇಲ್ಲದಿದ್ದರೆ ಬರ ಪರಿಹಾರ, ಕೃಷಿ ಸಾಲ ಸೌಲಭ್ಯ ಸಿಗೋದಿಲ್ಲ : ತಪ್ಪು ಮಾಹಿತಿಯಿಂದಲೂ ರೈತರಿಗೆ ನಷ್ಟ ಸೌಲಭ್ಯಕ್ಕೆ ಫ್ರೂಟ್ಸ್‌ ಐಡಿ ಕಡ್ಡಾಯ

ಸರಕಾರದ ಎಲ್ಲಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಪ್ರತಿ ರೈತರಿಗೆ ತಮ್ಮ ಹಕ್ಕಿನಲ್ಲಿರುವ ಎಲ್ಲಾ ಸಾಗುವಳಿ ಭೂಮಿಗಳ ವಿವರ ಹೊಂದಿರುವ ಫ್ರೂಟ್ಸ್‌ ಐಡಿ ಹೊಂದುವುದು ಅಗತ್ಯ. ತಹಸೀಲ್ದಾರ್‌ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿ ರೈತರ ಫ್ರೂಟ್ಸ್‌ ಐಡಿ ಮಾಡಲೇಬೇಕು. ಆಗ ಮಾತ್ರ ರೈತರಿಗೆ ನ್ಯಾಯಯುತ ಬೆಳೆ ನಷ್ಟ ಪರಿಹಾರ ನೀಡುವುದು ಸಾಧ್ಯ. ಬೆಳೆ ನಷ್ಟಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌)ಯಿಂದ ಜಮೀನಿನ ವಿಸ್ತೀರ್ಣ ಮತ್ತು ಬೆಳೆಹಾನಿ ಆಧರಿಸಿ ಪರಿಹಾರ ಧನ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಲಿದೆ. ಆದರೆ ಈ ಹಣ ಪಡೆಯಲು ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರೂಟ್ಸ್‌ ಐಡಿ) ಮಾಡಿಸುವುದು ಕಡ್ಡಾಯವಾಗಿದೆ.

ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಫ್ರೂಟ್ಸ್‌ ಐಡಿ ಮಾಡಿಸಿಕೊಳ್ಳಬೇಕು. ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಶೇ.70ರಷ್ಟು ಸಾಧನೆಯಾಗಿದೆ. ಈಗಾಗಲೇ ಮಾಡಿಸಿದ್ದರೆ ನಿಮಗೆ ಸಂಬಂಧಿಸಿದ ಎಲ್ಲ ಜಮೀನುಗಳ ಸರ್ವೆ ನಂಬರ್‌ಗಳು ಜೋಡಣೆಯಾಗಿದೆಯೋ ಅಥವಾ ಇಲ್ಲವೋ ಎಂದು ಕೂಡಲೇ ಪರಿಶೀಲಿಸಿಕೊಳ್ಳಬೇಕು. ಇದರಿಂದ ಸರಕಾರದ ಸೌಲಭ್ಯ ಪಡೆಯಲು ರೈತರಿಗೆ ಅನುಕೂಲವಾಗಲಿದೆ ಎಂದು ಧಾರವಾಡ

ಕೃಷಿ ಇಲಾಖೆ ಜಂಟಿ ನಿರ್ದೇಶಕ, ಡಾ.ಕಿರಣಕುಮಾರ ಹೇಳಿದ್ದಾರೆ.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/BV4GiFXeLXJKfXFJFZSiGj

ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ನಿಮ್ಮ ಸರ್ವೆ ನಂಬರ್ ಗಳು ಜೋಡಣೆ ಆಗಿದೆ ಇಲ್ಲವೋ ಚೆಕ್ ಮಾಡಿಕೊಳ್ಳಿ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲಿಸ್ಟ್ ನಲ್ಲಿ ಇದ್ದವರಿಗೆ ಬರ ಪರಿಹಾರ ಬರುವುದಿಲ್ಲ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ನಿಮ್ಮ ಹೊಲದ ಎಷ್ಟು ಸರ್ವೇ ನಂಬರ್ ಗಳು ದಾಖಲೆಯಾಗಿವೆ?? ನಿಮ್ಮ ಎಷ್ಟು ಹೊಲಕ್ಕೆ ಎಷ್ಟು ಪರಿಹಾರ ಬರುತ್ತದೆ ಇಲ್ಲಿ ಚೆಕ್ ಮಾಡಿಕೊಳ್ಳಿ👇🏻 https://krushivahini.com/2023/11/28/fruits-id-linked-survey-number/

➡️ ಈ ಜಿಲ್ಲೆಯ ರೈತರಿಗೆ ಬಾಕಿ ಇರುವ ಪರಿಹಾರದ ಹಣ ಜಮೆ ಮಾಡಲಾಗಿದೆ! ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಚೆಕ್ ಮಾಡಿಕೊಳ್ಳಿ https://krushivahini.com/2023/11/27/crop-compensation/

Leave a Reply

Your email address will not be published. Required fields are marked *