78.39 crore insurance relief announced for 79,197 proposals :- ರೈತರ ಖಾತೆಗೆ ಹವಾಮಾನ ಆಧಾರಿತ ಬೆಳೆ ವಿಮೆ ಮೊತ್ತ ಜಮೆ
79,197 ಪ್ರಸ್ತಾವಗಳಿಗೆ ₹78.39 ಕೋಟಿ ವಿಮಾ ಪರಿಹಾರ ಘೋಷಣೆ!
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಮತ್ತು ಕಾಳುಮೆಣಸು ಕ್ಷೇತ್ರದ ಬೆಳೆ ವಿಮೆ ವ್ಯಾಪ್ತಿಗೆ ಒಳಪಟ್ಟ 79,197 ಪ್ರಸ್ತಾವಗಳಿಗೆ ಒಟ್ಟೂ ₹ 78.39 ಕೋಟಿ ವಿಮಾ ಪರಿಹಾರ ಘೋಷಣೆ ಆಗಿದ್ದು, ಆಧಾರ್ ಲಿಂಕ್ ಆದ ರೈತರ ಉಳಿತಾಯ ಖಾತೆಗಳಿಗೆ ಜಮಾ ಆಗುತ್ತಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.
➡️ ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ 👇🏻
ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ
https://samrakshane.karnataka.gov.in/Premium/CheckStatusMain_aadhaar.aspx
ಈ ಕುರಿತು ಶುಕ್ರವಾರ ಮಾಹಿತಿ ನೀಡಿರುವ ಅವರು, ‘ಶಿರಸಿ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ಸರಾಸರಿ ₹ 414.66ರಂತೆ * 29.57 ಕೋಟಿ, ಸಿದ್ದಾಪುರ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 428.60ರಂತೆ ₹13.48 ಕೋಟಿ, ಮುಂಡಗೋಡ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 625.93ರಂತೆ * 9.26 ಕೋಟಿ, ಯಲ್ಲಾಪುರ ತಾಲ್ಲೂಕಿನಲ್ಲಿ ಪ್ರತಿ On ₹ 458.88003₹ 16.78 3, ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 269.75ರಂತೆ ₹ 1.31 ಕೋಟಿ, ಅಂಕೋಲಾ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 471.96 ರಂತೆ ₹4.62 ಕೋಟಿ, ಕುಮಟಾ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 191.73ರಂತೆ * 52.82 ಲಕ್ಷ, ಹೊನ್ನಾವರ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ * 190.17ರಂತೆ ₹1.76 ಕೋಟಿ, ಭಟ್ಕಳ ತಾಲ್ಲೂಕಿನಲ್ಲಿ ಪ್ರತಿ ಗುಂಟೆಗೆ ₹ 335.56ರಂತೆ ₹ 1.06 ಕೋಟಿ ಪರಿಹಾರ ದೊರಕಿದೆ. ಹಳಿಯಾಳ ಮತ್ತು ಕಾರವಾರ ತಾಲ್ಲೂಕುಗಳಿಗೆ ಪರಿಹಾರ ದೊರೆತಿಲ್ಲ. ಮುಂದಿನ ಕಂತಿನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಲಿಸ್ಟ್ ನಲ್ಲಿ ಇರುವ ತಾಲೂಕುಗಳಿಗೆ ಬರ ಪರಿಹಾರ ಬರುವುದು ಅನುಮಾನ..
ಹಾಗೂ ಈ ಲಿಸ್ಟ್ ನಲ್ಲಿರುವ ರೈತರಿಗೂ ಕೂಡ ಹಣ ಬರುವುದಿಲ್ಲ.👇🏻
ನಿಮಗೆ ಬರ ಪರಿಹಾರ ಬೇಕಿದ್ದಲ್ಲಿ ತಪ್ಪದೆ ಕೊನೆಯವರೆಗೂ ಲೇಖನವನ್ನು ಓದಿ ನಿಮ್ಮ ತಾಲೂಕು ಇದೆಯೇ ಖಚಿತಪಡಿಸಿಕೊಳ್ಳಿ. ಹಾಗೂ ನಿಮಗೆ ಬರ ಪರಿಹಾರ, ಬೆಳೆ ವಿಮೆ, ಬೆಳೆ ಹಾನಿ ಹಣ ಬರಬೇಕೆಂದರೆ ಈ ಕೆಲಸ ತಪ್ಪದೆ ಮಾಡಿ.. ನಿಮ್ಮ ಎಫ್ ಐ ಡಿ ಸ್ಟೇಟಸ್ ಅನ್ನು ತಪ್ಪದೇ ನಿಮ್ಮ ವ್ಯಾಪ್ತಿಗೆ ಬರುವ ಗ್ರಾಮ ಲೆಕ್ಕಾಧಿಕಾರಿಗಳ ಹತ್ತಿರ ಹೋಗಿ ಪರಿಶೀಲನೆ ಮಾಡಿ ಕೊಳ್ಳಿ.
ನಿಮ್ಮ ಜಿಲ್ಲೆಗೆ ಎಷ್ಟು ಬರ ಪರಿಹಾರ ಬರುತ್ತದೆ ಹಾಗೂ ಈಗ ತಾನೇ ಹೊಸದಾಗಿ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ನಿಮ್ಮ ತಾಲೂಕು ಇರುವುದನ್ನು ಇಲ್ಲಿ ನೋಡಿರಿ. ಮತ್ತು ಈ ತಾಲೂಕುಗಳಿಗೆ ಬರ ಪರಿಹಾರ ಬರುವುದು ಅನುಮಾನ ದಯವಿಟ್ಟು ಲೇಖನವನ್ನು ಪೂರ್ತಿಯಾಗಿ ಓದಿ ತಪ್ಪದೇ ಶೇರ್ ಮಾಡಿ 🙏🏻…
ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ನಿಮಗೆ ಜಮೆ ಆಗುತ್ತದೆ?
ಬರ ಪರಿಹಾರದ ಹಣ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಲೇಬೇಕು. ಒಂದು ವೇಳೆ ಎಫ್‌ಐಡಿ ಮಾಡಿಸದಿದ್ದರೆ ಹಣ ಬರುವುದಿಲ್ಲ. ಎಫ್‌ಐಡಿ ಮಾಡದೆ ಇರುವ ಕೂಡಲೇ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್‌ಐಡಿ ಮಾಡಿಸಬೇಕು.
ಆಧಾರ್ ನಂಬರ್ ಹಾಕಿ ನಿಮ್ಮ FID ತಿಳಿದುಕೊಳ್ಳಿ
ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ👇🏻
https://fruitspmk.karnataka.gov.in/MISReport/GetDetailsByAadhaar.aspx
ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಎಫ್ ಐ ಡಿ ಜನರೇಟ್ ಆಗಿರುವುದು ನಿಮಗೆ ಕಾಣುತ್ತದೆ…
ಈವರೆಗೆ ಎಫ್‌ಐಡಿ ಮಾಡಿಸದೇ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೊಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತಮ್ಮ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೂಬೈಲ್ ಸಂಖ್ಯೆಯೊಂದಿಗೆ ಹೋಗಿ ತುರ್ತಾಗಿ ಎಫ್‌ಐಡಿ ಮಾಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ರೈತರು ವಂಚಿತರಾಗಬೇಕಾಗುತ್ತದೆ.
➡️ ನಿಮ್ಮ ಮೊಬೈಲ್ ನಲ್ಲೇ FID ನೊಂದಣಿ ಮಾಡುವುದು ಹೇಗೆ?ಇಲ್ಲಿ ನೋಡಿರಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://fruits.karnataka.gov.in/OnlineUserLogin.aspx
ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ.”Citizen Registration” ಮೇಲೆ ಕ್ಲಿಕ್ ಮಾಡಿ.
..
ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,l agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ.
…
ನಂತರ ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ OTP ಅನ್ನು ಅಲ್ಲಿ ಹಾಕಿ, ನಂತರ Submit ಮೇಲೆ ಕ್ಲಿಕ್ ಮಾಡಬೇಕು.
ನಂತರ ನೀವು Password create ಮಾಡಿಕೊಂಡು ಮುಂದೆ ಲಾಗಿನ್ ಆಗಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದರೆ ನಿಮ್ಮ FID (ಫ್ರೂಟ್ಸ್ ಐ ಡಿ ) ನಿಮಗೆ ಸಿಗಲಿದೆ.
ಹೀಗೆ ಬಂದಿರುವ FID ಯನ್ನು ಕೃಷಿ ಇಲಾಖೆ,ರೇಷ್ಮೆ, ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರೀಶಿಲಿಸಿ Approve ಕೊಡಬೇಕು.
ನಂತರ FID ಯನ್ನು ಪಿ ಎಂ ಕಿಸಾನ್ ಯೋಜನೆ, ಬೆಳೆಸಾಲ, ಬೆಳೆವಿಮೆ ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ನೀವು ಈ FID ಅನ್ನು ಬಳಸಬಹುದು.
➡️ ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..
https://landrecords.karnataka.gov.in/PariharaPayment/
ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ drought ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ.
31 ಜಿಲ್ಲೆಗಳಿಗೆ 324 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಈ ಬಾರಿ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಅಂತ ರಾಜ್ಯ ಸರ್ಕಾರ (Karnataka Govt) ಘೋಷಣೆ ಮಾಡಿತ್ತು. ಆದರೆ ಈಗ ಮತ್ತೆ ಏಳು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ.
➡️ ಇಲ್ಲಿಯವರೆಗೂ ನಿಮಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ??
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service87/
ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..
ಅಡಿಕೆ ಬೆಳೆಗೆ 75,776 ಪ್ರಸ್ತಾವಗಳಿಗೆ ₹ 77.18 ಕೋಟಿ ವಿಮೆ ಪರಿಹಾರ ದೊರಕಿದ್ದು, ಕಾಳುಮೆಣಸು ಬೆಳೆಗೆ ಸಂಬಂಧಿಸಿ 3,421 ಪ್ರಸ್ತಾವಗಳಿಗೆ ₹1.21 ಕೋಟಿ ವಿಮೆ ಪರಿಹಾರ ದೊರಕಿದೆ. ಮಳೆ ಕೊರತೆಯಿಂದ ಬರಗಾಲದ ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೆ ಬೆಳೆ ವಿಮಾ ಯೋಜನೆಯ ಪರಿಹಾರವು ಜಮೆ ಆಗಿರುವುದು ವರದಾನವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಂಡು 2022-23ನೇ ಸಾಲಿನ
ಹಂಗಾಮಿಗೆ ಸಂಬಂಧಿಸಿ ಬೆಳೆ ವಿಮೆ ರಖಂ ರೈತರಿಗೆ ಸಕಾಲದಲ್ಲಿ ದೊರೆತಿರುವುದು ಕೆ.ಡಿ.ಸಿ.ಸಿ. ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಗಲಿರುಳು ಶ್ರಮಿಸಿರುವುದರ ಫಲಶೃತಿಯಾಗಿದೆ. ರೈತರ ಆರ್ಥಿಕ ಅಭಿವೃದ್ಧಿಗೆ ಸ್ಪಂದಿಸಲು ಬ್ಯಾಂಕ್ ಸದಾ ಸಿದ್ಧ ಎಂದು ತಿಳಿಸಿದ್ದಾರೆ.
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/BV4GiFXeLXJKfXFJFZSiGj
79,197 ಪ್ರಸ್ತಾವಗಳಿಗೆ ₹78.39 ಕೋಟಿ ವಿಮಾ ಪರಿಹಾರ ಘೋಷಣೆ:-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. 79,197 ಪ್ರಸ್ತಾವಗಳಿಗೆ ₹78.39 ಕೋಟಿ ವಿಮಾ ಪರಿಹಾರ ಘೋಷಣೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ನಿಮ್ಮ ಹೊಲದ ಎಷ್ಟು ಸರ್ವೇ ನಂಬರ್ ಗಳು ದಾಖಲೆಯಾಗಿವೆ?? ನಿಮ್ಮ ಎಷ್ಟು ಹೊಲಕ್ಕೆ ಎಷ್ಟು ಪರಿಹಾರ ಬರುತ್ತದೆ ಇಲ್ಲಿ ಚೆಕ್ ಮಾಡಿಕೊಳ್ಳಿ👇🏻 https://krushivahini.com/2023/11/28/fruits-id-linked-survey-number/
➡️ ಈ ಜಿಲ್ಲೆಯ ರೈತರಿಗೆ ಬಾಕಿ ಇರುವ ಪರಿಹಾರದ ಹಣ ಜಮೆ ಮಾಡಲಾಗಿದೆ! ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಚೆಕ್ ಮಾಡಿಕೊಳ್ಳಿ https://krushivahini.com/2023/11/27/crop-compensation/