Madyantara bele parihara – ಹೊಸಪೇಟೆ (ವಿಜಯನಗರ): ಬರಗಾಲದಿಂದ ತತ್ತರಿಸಿರುವ ವಿಜಯನಗರ ಜಿಲ್ಲೆಯ ರೈತರಿಗೆ ಕೊನೆಗೂ ಒಂದು ಸಂತಸದ ಸುದ್ದಿ ಲಭಿಸಿದ್ದು, ಬೆಳೆ ವಿಮೆ ಮಾಡಿಸಿದ 26,254 ಕೃಷಿಕರಿಗೆ ಮುಂಗಾರು ಹಂಗಾಮಿನ ಮಧ್ಯಂತರ ಬೆಳೆ ಪರಿಹಾರವಾಗಿ 719.27 ಕೋಟಿ ವಿಮಾ ಪರಿಹಾರ ಹಣ ಸಂದಾಯವಾಗಿದೆ.

ಮುಂಗಾರು ಹಂಗಾಮಿನ ಬೆಳೆ ನಷ್ಟದ ಸಮೀಕ್ಷೆಯನ್ನು ಕಳೆದ ತಿಂಗಳು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳು ಹಾಗೂ ವಿಮಾ ಕಂಪನಿಗಳು ಜಂಟಿಯಾಗಿ ನಡೆಸಿದ್ದವು. ಅದರ ವರದಿಯನ್ನು ಆಧರಿಸಿ ಇದೀಗ ಮಧ್ಯಂತರ ವಿಮಾ ಪರಿಹಾರ ದೊರೆತಿದೆ. ತಾಲ್ಲೂಕುವಾರು ಮಧ್ಯಂತರ ವಿಮಾ ಪರಿಹಾರದ ಪಟ್ಟಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

➡️ ಇಲ್ಲಿಯವರೆಗೂ ನಿಮಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ??

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

Release of interim crop insurance :-

ಕೊಪ್ಪಳದ ರೈತರಿಗೆ ಬಂತು ಫಸಲ್ ಬಿಮಾ ವಿಮಾ ಯೋಜನೆಯ ಮಧ್ಯಂತರ ಪರಿಹಾರ: ಸಂಕಟದಲ್ಲಿರುವ ಅನ್ನದಾತನಿಗೆ ಆಸರೆ ಮಳೆಯಿಲ್ಲದೆ ಬರದಿಂದ ಕಂಗೆಟ್ಟಿದ್ದ ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿತ್ತು. ಸರ್ಕಾರದಿಂದ ಬರ ಪರಿಹಾರ ಶೀಘ್ರ ಬರುವ ನಿರೀಕ್ಷೆಯ ನಡುವೆಯೇ, ವಿಮೆ ತುಂಬಿತ ರೈತರಿಗೆ ಮಧ್ಯಂತರ ಪರಿಹಾರ ಹಣ ಬಿಡುಗಡೆಯಾಗಿದೆ. ಕೊಪ್ಪಳದಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ, ತೊಗರಿ ಬೆಳೆಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ.ಮಧ್ಯಂತರ ಪರಿಹಾರ ಬಂದಿದೆ..

➡️ ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ 👇🏻

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/Premium/CheckStatusMain_aadhaar.aspx

ಹರಪನಹಳ್ಳಿಯಲ್ಲಿ ಒಬ್ಬ ರೈತರಿಗೆ ಗರಿಷ್ಠ 71.48 ಲಕ್ಷದಷ್ಟು ಹಣ ಬಂದಿದ್ದರೆ, ಹೂವಿನಹಡಗಲಿಯಲ್ಲಿ ಇನ್ನೊಬ್ಬ ರೈತರಿಗೆ 31.14 ಲಕ್ಷದಷ್ಟು ಪರಿಹಾರ ದೊರೆತಿದೆ. ಹರಪನಹಳ್ಳಿಯ ಈ ರೈತ ತಮ್ಮ 49 ಎಕರೆ ಕೃಷಿ ಭೂಮಿಗೆ ವಿಮೆ ಮಾಡಿಸಿದ್ದರು.

‘ವಿಮೆ ಮಾಡಿಸುವ ವಿಚಾರದಲ್ಲಿ ರೈತರು ಹಿಂದೇಟು ಹಾಕಬಾರದು. ಬರಗಾಲ, ಪ್ರವಾಹದಂತಹ ಪರಿಸ್ಥಿತಿಗಳಲ್ಲಿ ಅದು ರೈತರ ಕೈಯನ್ನು ನಿಜವಾಗಿಯೂ ಹಿಡಿಯುತ್ತದೆ. ಅದರ ಹೊರತಾಗಿಯೂ ಬೆಳೆ ತೆನೆಕಟ್ಟುವ ಹಂತದಿಂದ ಕಟಾವು ನಂತರದ 15 ದಿನಗಳ ವರೆಗೆ ಒಟ್ಟು ಐದು ಸಂದರ್ಭಗಳಲ್ಲಿ ವಿಮೆ ಪರಿಹಾರ ಪಡೆಯುವ ಅವಕಾಶ ಇದೆ. ಮುಂಗಾರು ಹಂಗಾಮಿಗೆ ಬಂದಿರುವ ಮಧ್ಯಂತರ ಪರಿಹಾರ ಇದು, ಪೂರ್ಣ ಪ್ರಮಾಣದ ಪರಿಹಾರ ಬಂದಾಗ ಆಗಿರುವ ಬೆಳೆ ನಷ್ಟದ ಶೇ 70ರಷ್ಟು ಪರಿಹಾರ ವಿಮೆ ರೂಪದಲ್ಲಿ ರೈತರಿಗೆ ಸಿಗಲಿದೆ. ಇದು ನಿಜಕ್ಕೂ ಈ ಸಂದಿಗ್ಧ ಸ್ಥಿತಿಯಲ್ಲಿ ಉತ್ತಮ ಪರಿಹಾರವೇ ಆಗಿದೆ. ಜಿಲ್ಲೆಯಲ್ಲಿ ಬಜಾಜ್ ಅಲಯನ್ಸ್ ವಿಮಾ ಕಂಪನಿ ಕೃಷಿ ವಿಮೆ ಮಾಡುವ ಹೊಣೆ ಹೊತ್ತುಕೊಂಡಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ದಲ್ ‘

ಬೆಳೆ ವಿಮೆ ಮಾಡಿಸಿ ಪರಿಹಾರದ ಪ್ರಮಾಣ ಗಮನಿಸಿದರೆ ವಿಮಾ ಕಂತು ಹೆಚ್ಚೇನೂ ಅಲ್ಲ ಎಂಬುದನ್ನು ರೈತರು ಅರ್ಥ ಮಾಡಿಕೊಳ್ಳಬೇಕು.

ಶರಣಪ್ಪ ಮುದ್ದಲ್‌, ಜಂಟಿ ಕೃಷಿ ನಿರ್ದೇಶಕ..

ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ಈ ಜಿಲ್ಲೆಯ ರೈತರಿಗೆ ಬೆಳೆವಿಮೆ ಜಮೆಯಾಗಿದೆ:-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬರ ಪರಿಹಾರ ಕುರಿತು ನೀಡಿದ ಮಾಹಿತಿ ಉಪಯೋಗವಿದೆ.

ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️💸ರೈತರ ಖಾತೆಗೆ ಹವಾಮಾನ ಆಧಾರಿತ ಬೆಳೆ ವಿಮೆ ಮೊತ್ತ ಜಮೆ! 79,197 ಪ್ರಸ್ತಾವಗಳಿಗೆ ₹78.39 ಕೋಟಿ ವಿಮಾ ಪರಿಹಾರ ಘೋಷಣೆ!👇🏻 https://krushivahini.com/2023/11/24/78-39-crore-insurance-relief-announced-for-79197-proposals/

➡️ 226 ತಾಲೂಕುಗಳಿಗೆ ಶೀಘ್ರದಲ್ಲಿ ಬರ ಪರಿಹಾರ! ನಿಮ್ಮ ತಾಲೂಕಿಗೆ ಎಷ್ಟು ಪರಿಹಾರ ಹಣ ಬರುತ್ತದೆ! ಇಲ್ಲಿದೆ ಮಹತ್ವದ ಮಾಹಿತಿ https://krushivahini.com/2023/11/23/immediate-drought-relief-distribution-to-226-drought-talukas/

Leave a Reply

Your email address will not be published. Required fields are marked *