Why drought relief not given HD kumaraswamy :- ಬರ: ದುಡ್ಡಿದ್ದರೂ ಯಾಕೆ ಪರಿಹಾರ ಕೊಟ್ಟಿಲ್ಲ? ಕುಮಾರಸ್ವಾಮಿ ಪ್ರಶ್ನೆ

ರಾಮನಗರ: ‘ಸರ್ಕಾರದ ಮಾಹಿತಿ ಪ್ರಕಾರ ಬರದಿಂದಾಗಿ ರಾಜ್ಯದಲ್ಲಿ ₹33 ಸಾವಿರ ಕೋಟಿಯಷ್ಟು ಬೆಳೆ ನಷ್ಟವಾಗಿದೆ. ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಗಳಲ್ಲಿ ₹800 ಕೋಟಿ ಹಣವಿದೆ ಎನ್ನುವ ಸರ್ಕಾರ, ಯಾಕಿನ್ನೂ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಟ್ಟಿಲ್ಲ?’ ಎಂದು ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ತಾಲ್ಲೂಕಿನ ದಾಸೇಗೌಡನದೊಡ್ಡಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈತರಿಗೆ ಪರಿಹಾರ ಕೊಡದಿದ್ದರೆ, ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಯಾವ ಉದ್ದೇಶಕ್ಕೆ ಹಣ ಇಟ್ಟಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ನುಡಿದಂತೆ ನಡೆದಿದ್ದೇವೆ ಅಂತಾರೆ. ಅದು ಇದೇನಾ’ ಎಂದರು.

ಫಸಲ್ ಭೀಮಾ ಯೋಜನೆಯಡಿ ರೈತರಿಗಿಂತ ಹೆಚ್ಚಾಗಿ ಖಾಸಗಿ ಕಂಪನಿಗಳಿಗೆ ಹೆಚ್ಚಿನ ಲಾಭವಾಗುತ್ತಿದೆ. ಶಾಲಾ ಮಕ್ಕಳಿಗೆ ಬಸ್‌ ವ್ಯವಸ್ಥೆಯೇ ಇಲ್ಲ. ಮಕ್ಕಳು ಜೆಸಿಬಿಯಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ನಿತ್ಯ ವರ್ಣಯಮ ಫೋಟೊ ಹಾಕೊಂಡು ಫೋಸ್ ಕೊಡ್ತಾರೆ. ಆದರೆ, ವಾಸ್ತವ ಸ್ಥಿತಿಯೇ ಬೇರೆ ಇದೆ’ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದ ತಪ್ಪುಗಳನ್ನು ಏಕಾಂಗಿಯಾಗಿ ಪ್ರಶ್ನಿಸುವುದು ಕುಮಾರಸ್ವಾಮಿ ಒಬ್ಬನೇ. ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಅಕ್ರಮ ಸಂಪತ್ತು, ವರ್ಗಾವಣೆ ದಂಧೆ ಬಗ್ಗೆ ಧ್ವನಿ ಎತ್ತಿದ್ದು ನಾನು. ಇಲ್ಲಿಯವರೆಗೂ ನಾನು ಎತ್ತಿದ ವಿಷಯಗಳಿಗೆ ಸರ್ಕಾರ ಒಂದಕ್ಕೂ ಉತ್ತರ ಕೊಟ್ಟಿಲ್ಲ’ ಎಂದು ಕಿಡಿಕಾರಿದರು.

‘ರಾಜ್ಯಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಜನರ ಜನರ ಕಷ್ಟ-ಸುಖ ಕೇಳಲು ಬಂದಿಲ್ಲ. ಜನರ ಹಣ ಲೂಟಿ ಮಾಡುವ ನಿಗಮ ಮಂಡಳಿ ನೇಮಕ ಮಾಡುವುದಕ್ಕೆ ಬರುತ್ತಿದ್ದಾರೆ. ಮುಖ್ಯಮಂತ್ರಿ ಕ್ಷೇತ್ರದಲ್ಲಿ ಶಾಲಾ ಕಟ್ಟಡ ಕಟ್ಟಲು ದುಡ್ಡಿಲ್ಲವೆಂದು ಸಿಎಸ್‌ಆ‌ರ್ ಅನುದಾನ ಕೇಳುತ್ತಿದ್ದಾರೆ. ಸಿ.ಎಂ ಮನೆ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವವರಿಗೆ ಶಾಲೆ ಕಟ್ಟಡ ನಿರ್ಮಾಣಕ್ಕೆ ಹಣವಿಲ್ಲ’ ಎಂದರು.

`ಬಿಜೆಪಿ ಜೊತೆಗಿನ ಮೈತ್ರಿ ಕುರಿತು ನಿಲುವು ಬದಲಾಯಿಸಿಕೊಳ್ಳಿ’ ಎಂಬ ಉಚ್ಛಾಟಿತ ಜೆಡಿಎಸ್ ನಾಯಕ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ಮಾತನಾಡಲಿ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ತಿರುಗೇಟು ನೀಡಿದರು.

‘ಕಳ್ಳರು ಒಂದೇ, ಸುಳ್ಳರೂ ಒಂದೇ’:-

‘ಎಚ್‌ಡಿಕೆ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವೆ’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ‘ಕೊಳ್ಳೆ ಹೊಡೆದಾಗಿದೆ. ಅವರ ಜೀವನವೇನು ಅಂತಾ ಗೊತ್ತಿದೆ. ದೇಶದ ವ್ಯವಸ್ಥೆಯಲ್ಲಿ ಕಳ್ಳರು ಒಂದೇ, ಸುಳ್ಳರು ಒಂದೇ. ಭಗವಂತ ಇದ್ದಾನೆ. ಅಂತಿಮವಾಗಿ ಎಲ್ಲಾ ತೀರ್ಮಾನ ಮಾಡ್ತಾನೆ. ಈ ಸಮಾಜದಲ್ಲಿ ಹಣದ ಮದ ಇದ್ದವರು ಎಲ್ಲವನ್ನೂ ಕೊಂಡುಕೊಳ್ಳುತ್ತೇವೆ ಅಂದುಕೊಂಡಿದ್ದಾರೆ. ಎಲ್ಲದಕ್ಕೂ ಒಂದು ಅಂತಿಮ ಇದ್ದೇ ಇದೆ’ ಎಂದು ವ್ಯಂಗ್ಯವಾಡಿದರು.

ಸರ್ಕಾರದ ಅಕ್ರಮಗಳ ಕುರಿತು ಪ್ರಶ್ನೆ ಮಾಡಿದರೆ, ನನ್ನ ವಿರುದ್ಧ ಪೋಸ್ಟರ್ ಹಾಕ್ತಾರೆ. ಎಷ್ಟಾದರೂ ಅಂಟಿಸಿಕೊಳ್ಳಲಿ. ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ

ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ಅಧ್ಯಕ್ಷ

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ದುಡ್ಡಿದ್ದರೂ ಯಾಕೆ ಪರಿಹಾರ ಕೊಟ್ಟಿಲ್ಲ, ಎಚ್‌.ಡಿ. ಕುಮಾರಸ್ವಾಮಿ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬೆಳೆ ಸಮೀಕ್ಷೆ ಸ್ಟೇಟಸ್ ಚೆಕ್ ಮಾಡುವ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ 226 ತಾಲೂಕುಗಳಿಗೆ ಶೀಘ್ರದಲ್ಲಿ ಬರ ಪರಿಹಾರ! ನಿಮ್ಮ ತಾಲೂಕಿಗೆ ಎಷ್ಟು ಪರಿಹಾರ ಹಣ ಬರುತ್ತದೆ! ಇಲ್ಲಿದೆ ಮಹತ್ವದ ಮಾಹಿತಿ https://krushivahini.com/2023/11/23/immediate-drought-relief-distribution-to-226-drought-talukas/

➡️ 💸📖ಈ ಪಟ್ಟಿಯಲ್ಲಿ ಇರುವ ಜನರಿಗೆ ಬರ ಪರಿಹಾರ ಬರುವುದಿಲ್ಲ ಕಾರಣ ತಿಳಿಯಿರಿ! ಬರ ಪರಿಹಾರ ಜಮೆಯಗಲು ಈ ಸಣ್ಣ ಕೆಲಸ ಮಾಡಿ⬇️⬇️ https://krushivahini.com/2023/11/22/know-the-reason-why-these-farmers-do-not-get-relief-from-drought/

ಬರ ಪರಿಹಾರಕ್ಕಾಗಿ 800 ಕೋಟಿ ಬಿಡುಗಡೆ ಸಿಎಂ ಸಿದ್ದರಾಮಯ್ಯ👇🏻👏🏻🙏🏻 https://krushivahini.com/2023/11/22/cm-siddaramaiah-releases-rs-800-crore-for-drought-relief/

Leave a Reply

Your email address will not be published. Required fields are marked *