jowar price increased upto 8000 per quintal :-
ಅಫಜಲಪುರ: ಉತ್ತರ ಕರ್ನಾಟಕದ ಪ್ರಮುಖ ಆಹಾರ ದಾನ್ಯ.
ಜೋಳ ಒಂದು ಕ್ವಿಂಟಲ್‌ಗೆ ₹ 8 ಸಾವಿರ ತಲುಪುವ ಸಾಧ್ಯತೆಯಿದೆ. ಇದು ಮಾರುಕಟ್ಟೆಯ ಇತಿಹಾಸದಲ್ಲಿಯೇ ಅತ್ಯಧಿಕ ದರವಾಗಿದ್ದು, ಈ ಬಾರಿ ಜೋಳ ಬೆಳೆಗಾರರಿಗೆ ಬಂಪರ್ ಲಾಭ ದೊರೆಯಲಿದೆ.
ಇತ್ತೀಚಿನ ದಿನಗಳಲ್ಲಿ ಜೋಳಕ್ಕೆ ಉತ್ತಮ ಬೆಳೆ ಸಿಗುತ್ತಿಲ್ಲ. ಹೀಗಾಗಿ ಈ ಭಾಗದ ರೈತರೂ ಕೂಡ ಜೋಳ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಜತೆಗೆ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಿದ್ದರೂ, ಬೆಲೆಯಲ್ಲಿ ಉತ್ತಮ ಬೆಲೆ ಸಿಗುತ್ತಿರಲಿಲ್ಲ. ಜತೆಗೆ ಸಾಕಷ್ಟು ರೈತರು, ಜಾನುವಾರು ಮೇವಿಗಾಗಿ ಜೋಳವನ್ನು ಬೆಳೆಯುತ್ತಿದ್ದರು. ಆದರೆ ಈಗ ಮಾರುಕಟ್ಟೆಯಲ್ಲಿ ಜೋಳಕ್ಕೆ ಬಹಳಷ್ಟು ಬೇಡಿಕೆಯಿದ್ದು, ಆವಕ ಕಡಿಮೆಯಾಗಿ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದೆ. ಹೀಗಾಗಿ ರೈತರು, ನಾವ್ಯಾಕೆ ಜೋಳ ಬೆಳೆಯಲಿಲ್ಲ ಎಂದು ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್ ಗಡಿಗಿಮನಿ ಅವರು ಜೋಳ ಬೆಳೆಗಾರರಿಗೆ ಮಾಹಿತಿ ನೀಡಿ, ರೈತರು ತಾಲ್ಲೂಕಿನಲ್ಲಿ ಮಳೆ ಆಶ್ರಯದಲ್ಲಿ ಹೆಚ್ಚು ಹತ್ತಿ ಹಾಗೂ ತೊಗರಿ ಬೆಳೆಯುತ್ತಾರೆ. ಜೋಳ ಬೆಳೆಯುವುದು ಬಹಳ ಕಡಿಮೆ. ಸಾಕಷ್ಟು ರೈತರು ಜೋಳವನ್ನು ಬಿತ್ತನೆ ಮಾಡುವುದೇ ಇಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ಜಾನುವಾರ ಸಂಖ್ಯೆ ಬಳಕೆ ಕಡಿಮೆಯಾಗುತ್ತಿದೆ.
ಹೀಗಾಗಿ ರೈತರಿಗೆ ಜೋಳದ ಅವಶ್ಯಕತೆ ಕಡಿಮೆಯಾಗುತ್ತಿದೆ. ಆದರೆ ಪ್ರತಿ ವರ್ಷ ಜೋಳದ ಬೆಲೆ ಹೆಚ್ಚಳವಾಗುತ್ತಲೇ ಇದೆ. ಪ್ರಸ್ತುತ ವರ್ಷ ಜೋಳದ ಬೆಲೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಜೋಳ ಬೆಳೆಯಲು ಕಡಿಮೆ ಖರ್ಚು ಬರುತ್ತದೆ. ಬಿತ್ತನೆ ವೇಳೆ ತೇವಾಂಶವಿದ್ದರೆ ಸಾಕು. ವಾತಾವರಣದಲ್ಲಿರುವ ತೇವಾಂಶದ ಆಧಾರದಲ್ಲೇ ಜೋಳ ಬೆಳೆಯುತ್ತದೆ. ರೈತರು ಜೋಳ ಜೋಳ ಬೆಳೆಯಲು ಆಸಕ್ತಿ ತೋರುತ್ತಿಲ್ಲ ಎಂದು ಹೇಳಿದರು.
➡️ ಜನಸಾಮಾನ್ಯರಿಗೆ ಬರೆ: ಮಾರುಕಟ್ಟೆಯಲ್ಲಿ ಜೋಳದ ಬೆಲೆ
ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದೆ. ಹೆಚ್ಚು ಬೆಳೆದ ರೈತರು, ಜೋಳವನ್ನು ಮಾರುಕಟ್ಟೆ ತರುತ್ತಾರೆ. ಅಲ್ಪಸ್ವಲ್ಪ ಜೋಳ ಬೆಳೆದ ರೈತರು, ಮನೆಗಾಗಿಯೇ ಇಟ್ಟುಕೊಂಡು ಬಿಡುತ್ತಾರೆ. ಇದರಿಂದಗಿ ಮಾರುಕಟ್ಟೆಗೆ ಜೋಳದ ಆವಕವೂ ಕಡಿಮೆಯಾಗಿದ್ದು, ಜನಸಾಮಾನ್ಯರಿಗೆ ಜೋಳ ಖರೀದಿಸುವುದು ಬರಗಾಲದ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸರ್ಕಾರ ಜೋಳ ಬೆಳೆಯಲು ಪ್ರೋತ್ಸಾಹ ನೀಡಲಿ: ಸರ್ಕಾರವು, ಈ ಭಾಗದ ರೈತರು ಜೋಳವನ್ನು ಬೆಳೆಯಲು ಪ್ರೋತ್ಸಾಹ ನೀಡಬೇಕು. ಈಗಾಗಲೇ ಕೃಷಿ ಇಲಾಖೆಯಲ್ಲಿ ಸಿರಿಧಾನ್ಯ ಬೆಳೆಯಲು ಸರ್ಕಾರದ ವತಿಯಿಂದ ಪ್ರೋತ್ಸಾಹ ನೀಡಲಾಗುತ್ತದೆ. ಅದರಲ್ಲಿ ಬಿಳಿಜೋಳ ಸೇರ್ಪಡೆಯಾಗಿಲ್ಲ. ಹೀಗಾಗಿ ಸರ್ಕಾರ ಬಿಳಿ ಜೋಳ ಬೆಳೆಯಲು ಹೆಚ್ಚಿನ ಪ್ರೋತ್ಸಾಹ ಹಾಗೂ ಉಚಿತ ಬೀಜ ವಿತರಣೆ ಮತ್ತು ತರಬೇತಿ ನೀಡಬೇಕು ಎಂದು ರೈತ ಮುಖಂಡರಾದ ಚಂದಮಾಮ ಬಳಗೊಂಡೆ ಹಾಗೂ ಬಂದರವಾಡ ಲಕ್ಷ್ಮಣ ಕಟ್ಟಿಮನಿ, ಮಾಶಾಳ ಗ್ರಾಮದ ಸಂತೋಷ ಗಂಜಿ ಹೇಳುತ್ತಾರೆ.
ಕೃಷಿ ಉತ್ಪನ್ನ ಮಾರುಕಟ್ಟೆಗೆ ಜೋಳ ಕಡಿಮೆ ಬರುತ್ತಿದೆ. ಇದರಿಂದ ಬೆಲೆ ಹೆಚ್ಚಾಗಿದೆ. ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಅನಿವಾರ್ಯ. ಕಳೆದ ವರ್ಷಕ್ಕಿಂತ ಈ ವರ್ಷ ಜೋಳದ ಬೆಲೆ ಡಬಲ್ ಆಗಿದೆ ಎನ್ನುತ್ತಾರೆ ಕಲಬುರಗಿಯ ವರ್ತಕ ಶ್ರೀನಿವಾಸ್.
ಜೋಳದ ಸಂಗ್ರಹ ಕಡಿಮೆ ಆಗಿದೆ. ರಾಯಚೂರು, ಬಳ್ಳಾರಿಯಲ್ಲಿ ಸಂಗ್ರಹಿಸಿ ಕಲಬುರಗಿಗೆ ಹಂಚಿಕೆ ಮಾಡಲಾಗುತ್ತಿತ್ತು. ಈಗ ಕಡಿಮೆ ಸಂಗ್ರಹವಿದ್ದರಿಂದ ಪಡಿತರದಲ್ಲಿ ಜೋಳ ವಿತರಿಸುತ್ತಿಲ್ಲ. ಜೋಳದ ಬದಲಿಗೆ ಅಕ್ಕಿಯೇ ವಿತರಿಸುತ್ತಿದ್ದೇವೆ ಎನ್ನುತ್ತಾರೆ ಕಲಬುರಗಿ
ಆಹಾರ ಇಲಾಖೆ ಡಿಡಿ ಶಾಂತಗೌಡ ಗುಣಕಿ.
➡️ ಕಲಬುರಗಿ ಮಾರುಕಟ್ಟೆಯ ಜೋಳದ ದರ :-
ದಿನಾಂಕ ಕ್ವಿಂಟಾಲ್‌ಗೆ ದರ
ನವೆಂಬರ್ 16 7,000 ರೂ.
ನವೆಂಬರ್ 17 8,000 ರೂ.
ನವೆಂಬರ್ 18 7,800 ರೂ.
ನವೆಂಬರ್ 19 7,500 ರೂ.
ನವೆಂಬರ್ 20 7,000 ರೂ.
ಮಾರುಕಟ್ಟೆಯಲ್ಲಿ ಜೋಳದ ಬೆಲೆ ಗಗನಕ್ಕೇರಿದೆ. ನಾವು ಕೇವಲ ಹತ್ತಿ ಮತ್ತು ತೊಗರಿ ಬಿತ್ತನೆ ಮಾಡಿದ್ದೇವೆ. ಅವು ಕೂಡ ಮಳೆ ಕೊರತೆಯಿಂದ ಹಾಳಾಗಿವೆ. ಆದರೆ ಜೋಳ ಬಿತ್ತನೆ ಮಾಡಿದ್ದರೆ ಲಾಭ ಪಡೆಯಬಹುದಾಗಿತ್ತು.
ಸ್ವಂತ ಜಮೀನಿದ್ದರೂ ಜೋಳ ಖರೀದಿಸುವಂತಾಗಿದೆ. ತೊಗರಿ ಮತ್ತು ಹತ್ತಿಗೆ ಬೆಳೆಯಲು ಆದ್ಯತೆ ನೀಡುತ್ತೇವೆ. ಈ ಬಾರಿ ಜೋಳಕ್ಕೆ ಬಂಪರ್ ಬೆಲೆಯಿದ್ದು ಜೋಳ ಬೆಳೆದವರು ಉತ್ತಮ ಲಾಭದ ಪಡೆದುಕೊಳ್ಳಬಹುದಾಗಿದೆ.
-ಶಾಮಸುಂದರ ಮಠಪತಿ, ರೈತರ ಬಳ್ಳೂರಗಿ
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/HLCYrALalJpLbeEMnLRyZB
ಜೋಳದ ದರ ಗಗನಕ್ಕೆ ಏರಿಕೆ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಗಗನಕ್ಕೆ ಏರಿದ ಜೋಳದ ಬೆಲೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ