Fruits ID compulsory for Drought distribution :-

ಬೆಂಗಳೂರು: ಬರಗಾಲದಿಂದ ಆಗಿರುವ ಬೆಳೆ ಹಾನಿಗೆ ‘ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆ’ (ಫ್ರೂಟ್ಸ್‌) ದತ್ತಾಂಶದ ಆಧಾರದಲ್ಲೇ ಪರಿಹಾರ ವಿತರಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಹೇಳಿದರು.

ನಿನ್ನೆಯಷ್ಟೇ ಸಚಿವರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಆಯ್ದ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರ ಜೊತೆ ಸಭೆ ನಡೆಸಿದರು.

ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಹಿಂದಿನ ವರ್ಷಗಳಲ್ಲಿ ಬರ ಪರಿಹಾರ ವಿತರಣೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವುದು ಪತ್ತೆಯಾಗಿತ್ತು. ಅಕ್ರಮಗಳನ್ನು ತಡೆಯುವುದಕ್ಕಾಗಿ ಫ್ರೂಟ್ಸ್‌ ದತ್ತಾಂಶದ ಆಧಾರದಲ್ಲಿ ಪರಿಹಾರ ವಿತರಣೆಗೆ ನಿರ್ಧರಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಡಿಸೆಂಬರ್‌ನಲ್ಲಿ ರೈತರಿಗೆ ಪರಿಹಾರ ಸಿಗುವ ಸಾಧ್ಯತೆಯಿದೆ ಎಂದು ಹೇಳಿದರು.

ರಾಜ್ಯದ ಶೇಕಡ 95ರಷ್ಟು ರೈತರು ಫ್ರೂಟ್ಸ್‌ ಗುರುತಿನ ಸಂಖ್ಯೆ ಹೊಂದಿದ್ದಾರೆ. ಆದರೆ, ಒಟ್ಟು ಸಾಗುವಳಿ ವಿಸ್ತೀರ್ಣದ ಶೇ 63ರಷ್ಟು ಮಾತ್ರ ದತ್ತಾಂಶದಲ್ಲಿ ದಾಖಲಾಗಿದೆ. ಆದ್ದರಿಂದ ವಿಸ್ತೀರ್ಣದ ವಿವರವನ್ನು ದಾಖಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು. ನಂತರದಲ್ಲಿ ಫ್ರೂಟ್ಸ್‌ ದತ್ತಾಂಶದಲ್ಲಿ ದಾಖಲಾದ ವಿಸ್ತೀರ್ಣದ ಆಧಾರದಲ್ಲೇ ಪರಿಹಾರ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

👉🏻ರೈತರು ಈ ಕೆಲಸ ಮಾಡಿದಲ್ಲಿ ಮಾತ್ರ ನಿಮಗೆ ಹಣ ಜಮೆಯಾಗುತ್ತದೆ??

ರೈತರು ತಪ್ಪದೆ ಈ ಮಹತ್ವದ ಮಾಹಿತಿಯನ್ನು ಪಡೆದು ನಿಮ್ಮ ಮೊಬೈಲ್ ನಲ್ಲಿ ಫ್ರೂಟ್ಸ್ ಐಡಿಯನ್ನು ಜನರೇಟ್ ಮಾಡಿ ನಿಮಗೆ ಎಷ್ಟು ಎಕರೆ ಹೊಲ ಇದೆ ಅದನ್ನು ನಿಮ್ಮ ಫ್ರೂಟ್ಸ್ ಐಡಿಯಲ್ಲಿ ಅಳವಡಿಸದಿದ್ದರೆ ನಿಮಗೆ ಪರಿಹಾರ ಹಣ ಬರುವುದಿಲ್ಲ.

➡️ಆಧಾರ್ ನಂಬರ್ ಹಾಕಿ ನಿಮ್ಮ FID ತಿಳಿದುಕೊಳ್ಳಿ

ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/GetDetailsByAadhaar.aspx

ನಂತರ ನಿಮ್ಮ ಆಧಾರ್ ನಂಬರ್ ಹಾಕಿ,search ಮೇಲೆ ಕ್ಲಿಕ್ ಮಾಡಿ

➡️ FID-ನಿಮ್ಮ ಮೊಬೈಲ್ ನಲ್ಲೇ FID ನೊಂದಣಿ ಮಾಡುವುದು ಹೇಗೆ?

ಬೆಳೆ ಸಾಲ ಪಡೆಯುವ ಸಮಯ ಇದು ಈ ಸಲ ಬೆಳೆ ಸಾಲ ಪಡೆಯಲು ಫ್ರಟ್ಸ್ ನಲ್ಲಿ ನೋಂದಣಿ ಮಾಡಿಸಿಕೊಂಡಿರುವುದು ಕಡ್ಡಾಯವಾಗಿದೆ. ಫ್ರಟ್ಸ್ (FID)ಎಂದರೆ ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯೂನಿಫೈಡ್ ಬೆನಿಫಿಷಿಯರಿ ಇಸ್ಲಾರ್ಮಶನ್ ಸಿಸ್ಟಮ್. ಇದು ಕೃಷಿ ಇಲಾಖೆಗೆ ಸಂಬಂಧಿಸಿದ ಕೃಷಿಕರ ಮಾಹಿತಿಗಳನ್ನು ಒಂದೇ ಸೂರಿನಡಿ ಹಿಡಿದಿಟ್ಟುಕೊಳ್ಳುವ ಪೋರ್ಟಲ್. ಇದರ ಮೂಲಕ ಕೃಷಿಕರು ಹಲವು ಪ್ರಯೋಜನ ಪಡೆಯಬಹುದಾಗಿದೆ ರಾಜ್ಯ ಸರ್ಕಾರದ ಆದೇಶದಂತೆ ಈ ವೆಬ್ ಪೋರ್ಟಲ್ ನಲ್ಲಿ ಎಲ್ಲ ತರಹದ ವಾಣಿಜ್ಯ ಬೆಳೆ ಆಹಾರ ಬೆಳೆಯನ್ನು ಒಳಗೊಂಡ ಎಲ್ಲ ವರ್ಗದ ಕೃಷಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ.

ಏನಿದು ಫ್ರಟ್ಸ್ ನಂಬರ್ ??

ಕೃಷಿಕ ತಮ್ಮ ಕೃಷಿ ಜಮೀನಿನ ಮಾಹಿತಿಯನ್ನು ಈ ಪೋರ್ಟಲ್ ನಲ್ಲಿ ನೋಂದಾಯಿಸಿದಾಗ ಆತನಿಗೆ FID(ಫಾರ್ಮರ್ ಐಡೆಂಟಿಟಿ) ನಂಬರ್ ದೊರೆಯುತ್ತದೆ. ಹೇಗೆ ಒಬ್ಬ ವ್ಯಕ್ತಿಗೆ ಆಧಾರ್ ಗುರುತಿನ ಚೀಟಿಯಾಗಿದೆಯೋ ಅಂತೆಯೇ ಕೃಷಿಕನಿಗೆ FID ಗುರುತಿನ ಚೀಟಿ ಇದ್ದಂತೆ. ಇದು ಕೃಷಿಕನ ಜಾಗದ ವಿವರ ಹಾಗೂ ತಾನು ಬೆಳೆದ ಬೆಳೆಗಳ ಎಲ್ಲಾ ವಿವರವನ್ನು ಒಳಗೊಂಡಿರುವ ಸಾಧಾನವಾಗಿದೆ. ಸರ್ಕಾರದಿಂದ ದೊರೆಯುವ ಎಲ್ಲಾ ಕೃಷಿ ಸೌಲಭ್ಯ ಪಡೆದುಕೊಳ್ಳಲು ಕೃಷಿಕರು ಇಲ್ಲಿ ಮಾಹಿತಿ ನೋಂದಾಯಿಸಿಕೊಳ್ಳಬೇಕಿದೆ.

ನೋಂದಣಿ ಹೇಗೆ? ಇಲ್ಲಿ ನೋಡಿರಿ

ನಿಮ್ಮ ಹತ್ತಿರದ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ಪಶುಸಂಗೋಪನ ಇಲಾಖೆ,ಕಂದಾಯ ಇಲಾಖೆಗಳಲ್ಲಿ ಯಾವುದಾದರೂ ಒಂದು ಇಲಾಖೆಗೆ ಭೇಟಿ ನೀಡಿ ಕೃಷಿಕನ RTC ಉತಾರ, ಆಧಾರ್ ಕಾರ್ಡ, ರಾಷ್ಟ್ರೀಕೃತ ಬ್ಯಾಂಕ್‌ನ ಪಾಸ್ ಬುಕ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಫೋಟೋ, ಮೊಬೈಲ್ ನಂಬರ್

ನೀಡಿದರೆ 24 ಗಂಟೆಯೊಳಗೆ ನಿಮ್ಮ ಹೆಸರು ಪೋರ್ಟಲ್ ನಲ್ಲಿ ಸೇರ್ಪಡೆಗೊಳ್ಳುತ್ತದೆ.

ಏಕೆ ನೋಂದಾಯಿಸಬೇಕು?

ಸರ್ಕಾರದ ಆದೇಶದಂತೆ ಈ ಪೋರ್ಟಲ್ಲಿ ಕೃಷಿಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳದೆ ಇದ್ದರೆ ಆತನಿಗೆ ಬೆಳೆ ಸಾಲ, ಬೆಳೆ ವಿಮೆ,ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ, ಕೃಷಿಗೆ ಪೂರಕವಾದ ಇತರೆ ಸೌಲಭ್ಯಗಳು ದೊರೆಯುವುದಿಲ್ಲ. ಈಗಾಗಲೇ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ ರೈತ ಶಕ್ತಿ ಯೋಜನೆ ಅಡಿ ಪ್ರತಿಯೊಬ್ಬ ಕೃಷಿಕನಿಗೆ ಒಂದು ಎಕರೆಗೆ 250 ನಂತೆ ಗರಿಷ್ಠ 5 ಎಕರೆಗೆ 1,250 ಇಂಧನ ವೆಚ್ಚ ಕೃಷಿಕನ ಖಾತೆಗೆ ನೇರ ಜಮೆಗೊಳ್ಳಲಿದೆ. ಎಲ್ಲಾ ದಾಖಲೆಗಳಿದ್ದರೂ ಫ್ರೂಟ್ಸ್ ಪೋರ್ಟಲ್ ನಲ್ಲಿ ಹೆಸರು ನಮೂದಿಸದಿದ್ದರೆ ಸರ್ಕಾರದಿಂದ ಪಡೆಯುವ ಎಲ್ಲಾ ಸೌಲಭ್ಯಗಳಿಂದ ವಂಚಿತನಾಗುತ್ತಾನೆ.ಅದಕ್ಕಾಗಿ ಕೂಡಲೇ ಫೂಟ್ಸ್ ಪೋರ್ಟಲ್ ನಲ್ಲಿ ನಿಮ್ಮ ಹೆಸರು ನೊಂದಾಯಿಸಿಕೊಂಡು,ನಿಮ್ಮ FID ಪಡೆದುಕೊಳ್ಳಿ ಹಾಗೂ ಅದನ್ನು ಸರ್ಕಾರದ ಸೌಲತ್ತು ಪಡೆಯಲು ಬಳಸಿ.

➡️ ನಿಮ್ಮ ಮೊಬೈಲ್ ನಲ್ಲೇ FID ನೊಂದಣಿ ಮಾಡುವುದು ಹೇಗೆ?

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://fruits.karnataka.gov.in/OnlineUserLogin.aspx

ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ.”Citizen Registration” ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,l agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ OTP ಅನ್ನು ಅಲ್ಲಿ ಹಾಕಿ, ನಂತರ Submit ಮೇಲೆ ಕ್ಲಿಕ್ ಮಾಡಬೇಕು.

ನಂತರ ನೀವು Password create ಮಾಡಿಕೊಂಡು ಮುಂದೆ ಲಾಗಿನ್ ಆಗಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದರೆ ನಿಮ್ಮ FID (ಫ್ರೂಟ್ಸ್ ಐ ಡಿ ) ನಿಮಗೆ ಸಿಗಲಿದೆ.

ಹೀಗೆ ಬಂದಿರುವ FID ಯನ್ನು ಕೃಷಿ ಇಲಾಖೆ,ರೇಷ್ಮೆ, ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರೀಶಿಲಿಸಿ Approve ಕೊಡಬೇಕು.

ನಂತರ FID ಯನ್ನು ಪಿ ಎಂ ಕಿಸಾನ್ ಯೋಜನೆ, ಬೆಳೆಸಾಲ, ಬೆಳೆವಿಮೆ ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ನೀವು ಈ FID ಅನ್ನು ಬಳಸಬಹುದು.

➡️ ನಿಮಗೆ ಇಲ್ಲಿಯವರೆಗೂ ಎಷ್ಟು ಬೆಳೆ ಹಾನಿ ಹಣ ಜಮೆಯಾಗಿದೆ ಇಲ್ಲಿ ಚೆಕ್ ಮಾಡಿಕೊಳ್ಳಿ 👇🏻

ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..

https://landrecords.karnataka.gov.in/PariharaPayment/

ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ drought ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ.

31 ಜಿಲ್ಲೆಗಳಿಗೆ 324 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಈ ಬಾರಿ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಅಂತ ರಾಜ್ಯ ಸರ್ಕಾರ (Karnataka Govt) ಘೋಷಣೆ ಮಾಡಿತ್ತು. ಆದರೆ ಈಗ ಮತ್ತೆ ಏಳು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ.

➡️ ಇಲ್ಲಿಯವರೆಗೂ ನಿಮಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ??👇🏻

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಹಳ್ಳಿಯ ಬೆಳೆ ಹಾನಿ ಜಮೆ ಆಗಿರುವ ರೈತರ ಪಟ್ಟಿ ಕಾಣುತ್ತದೆ.

➡️ ಇಲ್ಲಿಯವರೆಗೂ ನಿಮಗೆ ಎಷ್ಟು ಬೆಳೆವಿಮೆ ಹಣ ಜಮೆಯಾಗಿದೆ ಚೆಕ್ ಮಾಡಿಕೊಳ್ಳಿ 👇🏻

ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ 👇🏻

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/Premium/CheckStatusMain_aadhaar.aspx

ನಂತರ ಈ ಮೇಲೆ ಕಾಣುವ ಮುಖಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ಇಲ್ಲವಾದಲ್ಲಿ ನಿಮ್ಮ ಎಕ್ನೋಜ್ಮೆಂಟ್ ನಂಬರ್ ಅಂದರೆ ಪ್ರಪೋಸಲ್ ಸಂಖ್ಯೆಯನ್ನು ಹಾಕಿ ನಂತರ captcha ಹಾಕಿ ಸೀಸನ್ kharif ಆಯ್ಕೆ ಮಾಡಿಕೊಂಡು ನಂತರ ಸರ್ಚ್(search)ಬಟನ್ ಅನ್ನು ಒತ್ತಿ. ಮುಂದೆ ಕಾಣುವ ಮುಖಪುಟದಲ್ಲಿ ನಿಮಗೆ ಎಷ್ಟು ಬೆಳೆವಿಮೆ ಹಣ ಜಮೆಯಾಗಿದೆ ಕಾಣುತ್ತದೆ.

➡️ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಯಾವ ಇನ್ಶೂರೆನ್ಸ್ ಕಂಪನಿಯಿಂದ ನಿಮಗೆ ಹಣ ಜಮೆ ಆಗುತ್ತದೆ ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ತಿಳಿದುಕೊಳ್ಳುತ್ತೀರಿ.👇🏻

https://samrakshane.karnataka.gov.in/HomePages/frmKnowYourInsCompany.aspx

ಹೊಸ ಓಪನ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಗ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂಬುದರ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.

ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಕಂದಾಯ ಇಲಾಖೆ ಕಚೇರಿಗಳಲ್ಲಿ ಫ್ರೂಟ್ಸ್‌ ದತ್ತಾಂಶದಲ್ಲಿ ವಿಸ್ತೀರ್ಣ ದಾಖಲಿಸಲು ಅವಕಾಶ ಕಲ್ಪಿಸಲಾಗುವುದು. ರೈತರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

ಡಿಸೆಂಬರ್ ನಲ್ಲಿಯೇ ಪರಿಹಾರ ಸಿಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಕೇಂದ್ರ ತಂಡ ಕರ್ನಾಟಕದಲ್ಲಿದ್ದು, ಈಗಾಗಲೇ ಸರ್ಕಾರ ಅಂಕಿಅಂಶವನ್ನು ನೀಡಿದೆ. ಪರಿಹಾರದ ಮೊತ್ತ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಶೀಘ್ರದಲ್ಲೇ ಬಿಡುಗಡೆಯಾಗುವ ವಿಶ್ವಾಸವಿದೆ. ರೈತರ ಅಂಕಿಅಂಶಗಳನ್ನು ಸಿದ್ಧಪಡಿಸಲಾಗುತ್ತಿದೆ. ಕೇಂದ್ರದಿಂದ ಹಣ ಬಂದರೆ ಎರಡು ದಿನದಲ್ಲಿ ಪರಿಹಾರ ನೀಡಬಹುದು ಎಂದು ಹೇಳಿದರು.

ಭೇಟಿಗೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ 10 ಬಾರಿ ಪತ್ರ ಬರೆದಿದ್ದೇವೆ. ದೆಹಲಿಯಲ್ಲಿ ಭೇಟಿಗೆ ಅವಕಾಶ ಸಿಗದಿದ್ದರೆ, ಬೇರೆ ಯಾವುದೇ ರಾಜ್ಯ, ಪ್ರದೇಶದಲ್ಲಿ ಬೇಕಾದರೂ ನಾವೇ ಭೇಟಿಗೆ ಬರುತ್ತೇವೆಂದೂ ತಿಳಿಸಿದ್ದೇವೆ. ಆದರೆ, ಇಲ್ಲಿಯವರೆಗೂ ನಮಗೆ ಸಮಯ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ವರ್ಷಗಳಲ್ಲಿ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನೀಡಿದ ಪರಿಹಾರದ ಕುರಿತು ಮಾತನಾಡಿ, ರೈತರ ಕುರಿತ ಮಾಹಿತಿಗಳನ್ನು ಅಧಿಕಾರಿಗಳು ಸ್ವತಃ ನಮೂದಿಸಿದ್ದು, ಇಲ್ಲಿ ಅಕ್ರಮಗಳು ನಡೆದಿರುವುದು, ಅಧಿಕಾರಿಗಳು ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡು ಬಂದಿದೆ. ಹೀಗಾಗಿಯೇ ಫ್ರೂಟ್ಸ್‌ ದತ್ತಾಂಶದ ಆಧಾರದಲ್ಲಿ ಪರಿಹಾರ ವಿತರಣೆಗೆ ನಿರ್ಧರಿಸಲಾಗಿದೆ ಎಂದು ಹೇಳಿದರು.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ರೈತರಿಗೆ ಫ್ರೂಟ್ಸ್ ಐಡಿ ಆಧಾರದ ಮೇಲೆ ಪರಿಹಾರವನ್ನು ಕೊಡುತ್ತಾರೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ರೈತರಿಗೆ ಫ್ರೂಟ್ಸ್ ಐಡಿ ಆಧಾರದ ಮೇಲೆ ಪರಿಹಾರವನ್ನು ಕೊಡುತ್ತಾರೆ.ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *