Mixed breed cattle will get subsidy loan of Rs 58,500 :- ನಮಸ್ಕಾರ ಆತ್ಮೀಯ ರೈತ ಬಾಂಧವರೇ, ಇಂದಿನ ಲೇಖನದಲ್ಲಿ ನಾವು ಮಿಶ್ರ ತಳಿ ಹಸು ಸಾಕಾಣಿಕೆಗೆ ಉತ್ತೇಜಿಸಿದ ರಾಜ್ಯ ಸರ್ಕಾರದಿಂದ ಸಾಲ ಸೌಲಭ್ಯ ಒದಗಿಸಲಿದೆ. ಎಷ್ಟು ಸಾಲ ಸೌಲಭ್ಯ ಸಿಗುತ್ತದೆ?? ಈ ಯೋಜನೆ ಪಡೆಯಲು ಬೇಕಾದ ಅರ್ಹತೆಗಳು ಏನು?? ಈ ಕೂಡಲೇ ಅರ್ಜಿ ಸಲ್ಲಿಸಿದವರಿಗೆ ಸಿಗುತ್ತದೆ ಸಾಲ ಸೌಲಭ್ಯ… 🙏🏻

ಈ ವರ್ಷ ಕೃಷಿಯನ್ನೇ ನಂಬಿಕೊಂಡಿರುವ ರೈತರಿಗೆ ಆಘಾತಕಾರಿ ವಿಷಯವೆಂದರೆ ಮಳೆ ಸರಿಯಾಗಿ ಆಗದೆ ಇರುವುದರಿಂದ ಸರಿಯಾದ ಫಸಲು ಬರುತ್ತಿಲ್ಲ. ಇದರಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವಂತಾಗಿದೆ.

ಆದರೆ ಕೃಷಿ ಜೊತೆಗೆ ಉಪ ಕಸುಬು ಅಂದರೆ ಹೈನುಗಾರಿಕೆ ಯನ್ನು ಕೂಡ ಮಾಡಿಕೊಂಡು ಬರುತ್ತಿರುವ ರೈತರು ಸಮಾಧಾನ ಪಟ್ಟುಕೊಳ್ಳಬಹುದು.

ಹೈನುಗಾರಿಕೆ ಮಾಡುವವರಿಗೆ ಸರ್ಕಾರವೂ ಕೂಡ ಹೆಚ್ಚಿನ ಉತ್ತೇಜನ ನೀಡುತ್ತಿದ್ದು ಸಬ್ಸಿಡಿ ಸಾಲ ಸೌಲಭ್ಯ ಬಡ್ಡಿ ರಹಿತ ಸಾಲ ಮೊದಲಾದ ಸೌಕರ್ಯಗಳನ್ನು ಒದಗಿಸಿಕೊಡುತ್ತಿದೆ. ಮಿಶ್ರತಳಿ ಹಸು ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಶೇಕಡ 90% ನಷ್ಟು ಸಹಾಯಧನ (subsidy Loan) ಸಿಗಲಿದೆ.

ಮಿಶ್ರ ತಳಿ ಹಸು ಸಾಕಾಣಿಕೆಗೆ ಉತ್ತೇಜಿಸಿದ ರಾಜ್ಯ ಸರ್ಕಾರ!

ರಾಜ್ಯದಲ್ಲಿ ವಾಸಿಸುವ ಸಾಕಷ್ಟು ರೈತರು ಇಂದಿಗೂ ಕೂಡ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ, ಅಂತವರಿಗೆ ಇನ್ನೊಂದಿಷ್ಟು ಸಹಾಯ ಮಾಡುವ ಸಲುವಾಗಿ ಮಿಶ್ರತಳಿ ಹಸು ಸಾಕಾಣಿಕೆಗೆ ಸರ್ಕಾರದಿಂದ ಸಹಾಯಧನ ಸಿಗುತ್ತದೆ.

ಹಸು ಖರೀದಿಯ ಶೇಕಡ 90ರಷ್ಟು ಅಂದರೆ 58,500 ಸಹಾಯವಾಗಿ ಸರ್ಕಾರ ನೀಡುತ್ತದೆ. ಇನ್ನುಳಿದ 10% ಅಂದರೆ 6,500 ಬ್ಯಾಂಕಿನಿಂದ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಇದರಲ್ಲಿ ಪುರುಷ ರೈತರಿಗೆ ಮಾತ್ರವಲ್ಲದೆ 33.3% ನಷ್ಟು ಮಹಿಳೆಯರಿಗೆ ಹಾಗೂ 3% ವಿಕಲಚೇತನರಿಗೆ ಆದ್ಯತೆ ಮೇರೆಗೆ ಸಹಾಯಧನ ನೀಡಲಾಗುವುದು.

➡️ ಮಿಶ್ರ ತಳಿ ಹಸು ಘಟಕ ಯೋಜನೆಗೆ ಬೇಕಾಗಿರುವ ಅರ್ಹತೆ??

2023-24ನೇ ಸಾಲಿನಲ್ಲಿ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಸಲುವಾಗಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ ಅಡಿಯಲ್ಲಿ ಸಹಾಯಧನ ಘೋಷಿಸಲಾಗಿದೆ.

ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು, ಪಶುಸಂಗೋಪನೆ ಮಾಡಲು ಆಸಕ್ತಿ ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ (SC – ST) ಕೃಷಿಕರು, ಕೂಲಿ ಕಾರ್ಮಿಕರು ಅರ್ಜಿ ಸಲ್ಲಿಸಬಹುದು.

*ಈ ಯೋಜನೆಯ ಫಲಾನುಭವಿಗಳು ಹಾಲು ಉತ್ಪಾದನಾ ಸಂಘದ ಸದಸ್ಯರಾಗಿರಬೇಕು ಒಂದು ವೇಳೆ ಸದಸ್ಯರಾಗಿರದೆ ಇದ್ದಲ್ಲಿ ಅರ್ಜಿ ಸಲ್ಲಿಸಿದ ನಂತರವಾದರೂ ಸದಸ್ಯತ್ವ ವನ್ನು ಪಡೆದುಕೊಳ್ಳಬೇಕು.

*ಸರ್ಕಾರದ ಸಹಾಯಧನ ಪಡೆದುಕೊಳ್ಳಲು ಬಯಸುವವರು ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಹಾಲು ವಿತರಣೆ ಮಾಡುವ ಬಗ್ಗೆ ಅಧಿಕೃತ ಮುಚ್ಚಳಿಕೆ ಬರೆದು ಕೊಡಬೇಕು.

*ಕಳೆದ ಐದು ವರ್ಷಗಳಲ್ಲಿ ಪಶು ಸಂಗೋಪನ ಇಲಾಖೆಯಿಂದ ಯಾವುದೇ ಸಹಾಯಧನ ಪಡೆದುಕೊಂಡಿದ್ದರೆ ಅಂತವರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

➡️ ಸಹಾಯಧನ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು ಯಾವುವು??

1) ರೈತರ ಆಧಾರ್ ಕಾರ್ಡ್‌ (Aadhaar card)

2) ಜಾತಿ ಪ್ರಮಾಣ ಪತ್ರ (cast certificate)

3) ಆದಾಯ ಪ್ರಮಾಣ ಪತ್ರ (income certificate) 4) ವಿಕಲಚೇತನರಾಗಿದ್ದರೆ ಅವರ ಪ್ರಮಾಣ ಪತ್ರ (handicapped certificate)

5) ಬ್ಯಾಂಕ್ ಖಾತೆಯ ವಿವರ (Bank Account Details)

6) ಮೊಬೈಲ್ ಸಂಖ್ಯೆ

ಮಿಶ್ರತಳಿ ಹಸು ಸಾಕಾಣಿಕೆ ಮಾಡಲು ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ (last date for application) 25, 2023. ದಯವಿಟ್ಟು ಈ ಕೂಡಲೇ ನಿಮ್ಮ ಜಿಲ್ಲೆಗೆ ವ್ಯಾಪ್ತಿಗೆ ಬರುವ ಪಶುಸಂಗೋಪನೆ ಇಲಾಖೆಯಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ..

ಮಿಶ್ರ ತಳಿ ಹಸು ಸಾಕಣೆಗೆ 58,500 ರೂಪಾಯಿ ಸಬ್ಸಿಡಿ ಸಾಲ ದೊರೆಯಲಿದೆ..

ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻🙏🏻. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ಮಿಶ್ರ ತಳಿ ಹಸುವನ್ನು ಖರೀದಿಸಲು ಸರ್ಕಾರದಿಂದ ಸಾಲ ಸೌಲಭ್ಯ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಹಸು ಖರೀದಿಸಲು ಸಾಲ ಸೌಲಭ್ಯ ಕುರಿತು ನೀಡಿದ ಮಾಹಿತಿ ಉಪಯೋಗವಿದೆ.

ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

ನಿಮ್ಮ ಬೆಳೆ ಸಮೀಕ್ಷೆ ಸ್ಟಿತಿ ಹೇಗಿದ್ದರೆ ಮಾತ್ರ ಪರಿಹಾರ ಹಣ ಬರುತ್ತದೆ 👇🏻👇🏻

➡️ ಬೆಳೆ ಸಮೀಕ್ಷೆಯ ಸ್ಥಿತಿ ಹೀಗಿದ್ದರೆ ಮಾತ್ರ ನಿಮಗೆ ಪರಿಹಾರದ ಹಣ ಬರುತ್ತದೆ! ಬರ ಪರಿಹಾರ ಪಡೆಯಲು ಈ ಕೆಲಸ ಕಡ್ಡಾಯ ತಪ್ಪದೇ ನೋಡಿ https://krushivahini.com/2023/11/20/check-bele-samikshe-status/

➡️💸ಯಾವ ಜಿಲ್ಲೆಯಲ್ಲಿ ಎಷ್ಟು ಅಡಿಕೆ ಧಾರಣೆ ಇದೆ ತಪ್ಪದೆ ಇಲ್ಲಿ ನೋಡಿ👇🏻 https://krushivahini.com/2023/11/19/arecaunt-rate-today-3/

Leave a Reply

Your email address will not be published. Required fields are marked *