maize price increased :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ದಿನ ನಾವು ಮೆಕ್ಕೆಜೋಳದ ಬೆಲೆಯಲ್ಲಿ ಏರಿಕೆ ಕಂಡಿದೆ ಅದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.. ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಪ್ಪದೇ ಎಲ್ಲರಿಗೂ ಶೇರ್ ಮಾಡಿ 🙏🏻🙏🏻..

ಕ್ಷೀಣಗೊಂಡ ಮೆಕ್ಕೆಜೋಳ ಆವಕದಿಂದ ದರ ಏರಿಕೆ, ಗುಣಮಟ್ಟದ ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ 2,350 ರೂ.!

ದಾವಣಗೆರೆ ಎಪಿಎಂಸಿಗೆ ನವೆಂಬರ್‌ ತಿಂಗಳಲ್ಲಿ ನಿತ್ಯ ಹತ್ತಾರು ಸಾವಿರ ಕ್ವಿಂಟಾಲ್‌ ಬಂದಿಳಿಯುತ್ತಿದ್ದ ಮೆಕ್ಕೆಜೋಳ ಆವಕ ಈ ಬಾರಿ ಇಳಿಕೆ ಕಂಡಿದೆ. ಸದ್ಯಕ್ಕೆ ಆವಕ ಎಷ್ಟರಮಟ್ಟಿಗೆ ಇಳಿಕೆಯಾಗಿದೆಯೆಂದರೆ ಸ್ಥಳೀಯ ಬೇಡಿಕೆಯನ್ನೂ ಪೂರೈಸಲಾಗದ ಪರಿಸ್ಥಿತಿ ಇದೆ. ಇನ್ನೊಂದೆಡೆ ದರವೂ ಭಾರೀ ಏರಿಕೆ ಕಂಡಿದ್ದು ಗುಣಮಟ್ಟದ ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ 2,350 ರೂ.ವರೆಗೆ ದರ ಸಿಗುತ್ತಿದೆ.

ಮೆಕ್ಕೆಜೋಳ ಕಣಜ ಖಾಲಿಯಾಗಿದೆ. ನವೆಂಬರ್‌ ತಿಂಗಳಲ್ಲಿ ನಿತ್ಯ ಹತ್ತಾರು ಸಾವಿರ ಕ್ವಿಂಟಾಲ್‌ ಮೆಕ್ಕೆಜೋಳ ದಾವಣಗೆರೆ ಎಪಿಎಂಸಿಗೆ ಬಂದಿಳಿಯುತ್ತಿತ್ತು. ಆದರೀಗ ನಿತ್ಯ ಮೂರ್ನಾಲ್ಕು ಸಾವಿರ ಕ್ವಿಂಟಾಲ್‌ ಕೂಡ ಆವಕ ಆಗದೆ ರೈತರ ಜತೆ ವರ್ತಕರು ಕೂಡ ಬಸವಳಿದಿದ್ದಾರೆ. ಆವಕ ಇಲ್ಲದೆ ಬೆಲೆಯಲ್ಲಿ ಏರಿಕೆಯೂ ಆಗಿದ್ದು ಉತ್ತಮ ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ 2,250 ರೂ. ಬೆಲೆಯಿದೆ.

ಈ ಹಿಂದೆ ನವೆಂಬರ್‌ ತಿಂಗಳು ಬಂತೆಂದರೆ ನೂರಾರು ಲೋಡ್‌ ಮೆಕ್ಕೆಜೋಳ ದಾವಣಗೆರೆ ಎಪಿಎಂಸಿಗೆ ದಾಂಗುಡಿಯಿಡುತ್ತಿತ್ತು. ಆದರೆ, ಮಳೆ ಕೊರತೆಯಿಂದ ಈ ಬಾರಿ ಮೆಕ್ಕೆಜೋಳ ಬೆಳೆ ಹಾಳಾಗಿ ಉತ್ಪನ್ನವೇ ಇಲ್ಲದಂತಾಗಿದೆ. ಈ ಸುಗ್ಗಿ ಕಾಲದಲ್ಲಿ ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿದ್ದ ಮೆಕ್ಕೆಜೋಳ ವರ್ತಕರು ಈ ಬಾರಿ ಕೈ ಕಟ್ಟಿ ಕೂರುವಂತಾಗಿದೆ. ಸ್ಥಳೀಯ ಬೇಡಿಕೆಯನ್ನು ಪೂರೈಸಲು ಆಗದ ಸ್ಥಿತಿ ನಿರ್ಮಾಣ ಆಗಿದೆ..

25 ಲಕ್ಷ ಕ್ವಿಂಟಾಲ್‌ ಉತ್ಪನ್ನ

ಮಧ್ಯ ಕರ್ನಾಟಕದ ದಾವಣಗೆರೆ ಮೆಕ್ಕೆಜೋಳ ಕಣಜ ಎಂದೇ ಹೆಸರಾಗಿದೆ. ಅತಿ ಹೆಚ್ಚು ಮಕ್ಕೆಜೋಳ ಬೆಳೆಯುವ ಜಿಲ್ಲೆಯಲ್ಲಿ ದಾವಣಗೆರೆಯೂ ಒಂದಾಗಿದ್ದು, ಇಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಗುರಿಯ ಮುಕ್ಕಾಲು ಪಾಲು ಮೆಕ್ಕೆಜೋಳ ಆಕ್ರಮಿಸಿಕೊಂಡಿದೆ. ಸುಮಾರು 1.25 ಲಕ್ಷ ಹೆಕ್ಟೇರ್‌ನಲ್ಲಿ ಇಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಕಳೆದ ವರ್ಷ ದಾವಣಗೆರೆ ಎಪಿಎಂಸಿ ಒಂದರಲ್ಲಿಯೇ ಬರೋಬ್ಬರಿ 10,71,869 ಕ್ವಿಂಟಾಲ್‌ ಆವಕ ಆಗಿತ್ತು. ಎಲ್ಲ ತಾಲೂಕುಗಳ ಎಪಿಎಂಸಿ ಹಾಗೂ ಜಮೀನುಗಳಲ್ಲಿಯೇ ರೈತರ ನೇರ ಮಾರಾಟ ಸೇರಿದರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 25 ಲಕ್ಷ ಕ್ವಿಂಟಾಲ್‌ಗೂ ಹೆಚ್ಚು ಮೆಕ್ಕೆಜೋಳ ಆವಕ ಆಗಿ ಸಾವಿರಾರು ಕೋಟಿ ರೂ. ವ್ಯವಹಾರ ಆಗುತ್ತಿತ್ತು.

ಬರಕ್ಕೆ ಬೋರಲು ಬಿದ್ದ ಎಪಿಎಂಸಿ ವಹಿವಾಟು, ಅಂಗಡಿಗಳ ಬಾಗಿಲೇ ತೆಗೆದಿಲ್ಲ ಕೆಲ ವರ್ತಕರು!

ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿದಾವಣಗೆರೆ ಎಪಿಎಂಸಿಯಲ್ಲಿ ಒಟ್ಟು 1,81,287 ಕ್ವಿಂಟಾಲ್‌ ಮೆಕ್ಕೆಜೋಳ ಆವಕ ಆಗಿತ್ತು. ಈ ತಿಂಗಳು 17 ದಿನಗಳಲ್ಲಿ ಕೇವಲ 41,416 ಕ್ವಿಂಟಾಲ್‌ ಮಾತ್ರ ಆವಕ ಆಗಿದೆ. ಪ್ರತಿ ದಿನ 3 ರಿಂದ 4 ಸಾವಿರ ಕ್ವಿಂಟಾಲ್‌ ಉತ್ಪನ್ನ ಮಾರುಟ್ಟೆಗೆ ಬರುತ್ತಿದ್ದು, ಈ ತಿಂಗಳು ಕೊನೇ ಹೊತ್ತಿಗೆ 60 ರಿಂದ 70 ಸಾವಿರ ಕ್ವಿಂಟಾಲ್‌ ಆವಕ ಆಗಬಹುದು ಎಂದು ವರ್ತಕರು ಹೇಳುತ್ತಿದ್ದಾರೆ.

ಉತ್ತಮ ಬೆಲೆ

ಈಗ ಮೆಕ್ಕೆಜೋಳ ಆವಕ ಇಲ್ಲದೆ ಉತ್ತಮ ಬೆಲೆಯೂ ಇದೆ, ಕನಿಷ್ಟ 1,660 ರೂ.ನಿಂದ ಗರಿಷ್ಟ 2350 ರೂ.ವರೆಗೂ ಬೆಲೆಯಿದೆ, 2,250 ಮಾದರಿ ಬೆಲೆ ಸಿಗುತ್ತಿದೆ. ಕಳೆದ ವರ್ಷವೇ ಮೆಕ್ಕೆಜೋಳ ಬೆಲೆ 2,200 ರೂ.ಮುಟ್ಟಿತ್ತು. ಈ ವರ್ಷ ಇನ್ನಷ್ಟು ಏರಿಕೆಯಾಗಿದೆ. ಆದರೆ ರೈತರ ಬಳಿ ಉತ್ಪನ್ನವೇ ಇಲ್ಲ.

ವಿದೇಶಗಳಿಗೆ ರಫ್ತು ಇಲ್ಲ

ದಾವಣಗೆರೆ ಮೆಕ್ಕೆಜೋಳ ಮಲೇಷಿಯಾ, ಥೈಲ್ಯಾಂಡ್‌ ಸೇರಿ ವಿದೇಶಗಳಿಗೆ ಹಾಗೂ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್‌ ಸೇರಿದಂತೆ ಹೊರ ರಾಜ್ಯಗಳಿಗೆ ನಿತ್ಯ ಹತ್ತಾರು ಲೋಡ್‌ ರವಾನೆ ಆಗುತ್ತಿತ್ತು. ಆದರೀಗ ಉತ್ಪನ್ನ ಇಲ್ಲದೆ ಇಲ್ಲಿನ ಸ್ಥಳೀಯ ಕಾರ್ಗಲ್‌ ಸೇರಿದಂತೆ ಇತರೆ ಮೆಕ್ಕೆಜೊಳ ಉದ್ದಿಮೆಗಳ ಬೇಡಿಕೆಯನ್ನು ಪೂರೈಸಲಾಗುತ್ತಿಲ್ಲ ಎಂದು ವರ್ತಕರು ಹೇಳುತ್ತಿದ್ದಾರೆ.

ಮೆಕ್ಕೆಜೋಳ ಉತ್ಪನ್ನವೇ ಇಲ್ಲ, ವಿದೇಶ ಮತ್ತು ಹೊರ ರಾಜ್ಯಗಳಿಗೆ ಹೋಗುವುದು ಸಂಪೂರ್ಣ ನಿಂತಿದೆ. ಸ್ಥಳೀಯ ಬೇಡಿಕೆಯನ್ನು ಮಾತ್ರ ಪೂರೈಸಲಾಗುತ್ತಿದೆ, ನಮಗೂ ವ್ಯಾಪಾರ ಇಲ್ಲದಂತಾಗಿದೆ ಎನ್ನುತ್ತಾರೆ ದಾವಣಗೆರೆ ಮೆಕ್ಕೆಜೋಳ ವರ್ತಕರ ಸಂಘದ ಕಾರ್ಯದರ್ಶಿ ಜಾವೇದ್‌.

ಪಶು, ಕೋಳಿ ಆಹಾರ ಬೆಲೆ ಹೆಚ್ಚಳ

ರಾಜ್ಯದಲ್ಲಿ ಮೆಕ್ಕೆಜೋಳ ಅತಿ ಹೆಚ್ಚು ಬಳಕೆ ಆಗುವುದು ಪಶು ಮತ್ತು ಕೋಳಿ ಆಹಾರ ತಯಾರಿಕೆಗೆ. ಇದರ ಜತೆ ರವೆ ಸೇರಿದಂತೆ ಕುರ್‌ಕುರೆಗೆ ಬಳಸುತ್ತಾರೆ. ಈಗ ರಾಜ್ಯದ ಬೇಡಿಕೆಯೂ ಪೂರೈಕೆ ಆಗುವಷ್ಟು ಮೆಕ್ಕೆಜೋಳ ಉತ್ಪನ್ನ ಇಲ್ಲ. ಹಾಗಾಗಿ ಪಶು ಮತ್ತು ಕೋಳಿ ಆಹಾರ ಬೆಲೆ ಹೆಚ್ಚಳ ಆಗುವ ಆತಂಕ ಎದುರಾಗಿದೆ.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ಮೆಕ್ಕೆಜೋಳ ಬೆಲೆ ಏರಿಕೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಮೆಕ್ಕೆಜೋಳ ಬೆಲೆ ಏರಿಕೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ನಿಮ್ಮ ಬೆಳೆ ಸಮೀಕ್ಷೆ ಸ್ಟಿತಿ ಹೇಗಿದ್ದರೆ ಮಾತ್ರ ಪರಿಹಾರ ಹಣ ಬರುತ್ತದೆ 👇🏻👇🏻

➡️ ಬೆಳೆ ಸಮೀಕ್ಷೆಯ ಸ್ಥಿತಿ ಹೀಗಿದ್ದರೆ ಮಾತ್ರ ನಿಮಗೆ ಪರಿಹಾರದ ಹಣ ಬರುತ್ತದೆ! ಬರ ಪರಿಹಾರ ಪಡೆಯಲು ಈ ಕೆಲಸ ಕಡ್ಡಾಯ ತಪ್ಪದೇ ನೋಡಿ https://krushivahini.com/2023/11/20/check-bele-samikshe-status/

➡️ ಈ ದಿನ ಬರಲಿದೆ ರೈತರಿಗೆ ಬರ ಪರಿಹಾರ ಹಣ ಸಾಧಾರಣ ಹಾಗೂ ತೀರ್ವ ಬರಪೀಡಿತ ತಾಲೂಕು ಎಷ್ಟು ಪರಿಹಾರವನ್ನು ಕೊಡುತ್ತಾರೆ👇🏻https://krushivahini.com/2023/11/18/this-work-is-mandatory-to-get-drought-relief-2/

Leave a Reply

Your email address will not be published. Required fields are marked *