783 crore available in District Magistrate’s PDI account :- ಬೆಂಗಳೂರು: ‘ಬರಪೀಡಿತ 223 ತಾಲ್ಲೂಕುಗಳಲ್ಲಿ ಪರಿಹಾರ
ಕಾರ್ಯಗಳನ್ನು ಕೈಗೊಳ್ಳಲು ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ. ಪರಿಹಾರ ಕಾರ್ಯಗಳಿಗೆ 324 ಕೋಟಿ ಹೆಚ್ಚುವರಿ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು 783 ಕೋಟಿ ಲಭ್ಯವಿದೆ’ ಎಂದು ಕಂದಾಯ ಸಚಿವ (ಕೃಷ್ಣ ಬೈರೇಗೌಡ) ತಿಳಿಸಿದರು.
ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ‘ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೈಗೊಂಡ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಬರ ಘೋಷಣೆಯ ನಂತರ ಕೆಲವು ಕಡೆ ಮಳೆ ಆಗಿದ್ದರಿಂದ ಕುಡಿಯುವ ನೀರು, ಮೇವಿನ ಸಮಸ್ಯೆ ಇದ್ದ ಗ್ರಾಮಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ’ ಎಂದರು.
`ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಖಾಸಗಿ ಕೊಳವೆಬಾವಿ ಬಳಸಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಮೇವಿನ ತೀವ್ರ ಸಮಸ್ಯೆ ಎದುರಾಗಿಲ್ಲ. ಆದರೂ ಮುಂಜಾಗ್ರತೆ ವಹಿಸಲಾಗುತ್ತದೆ. ಮೇವಿನ ಕೊರತೆ ಬರಬಹುದೆಂದು 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ರೈತರಿಗೆ ವಿತರಿಸಲಾಗುತ್ತಿದೆ. ಗಡಿ ಜಿಲ್ಲೆಗಳಿಂದ ಮೇವು ಸಾಗಣೆ ನಿಲ್ಲಿಸಲು, ರಾಜ್ಯದಿಂದ ಹೊರ ರಾಜ್ಯಗಳಿಗೆ ಹೋಗುವುದನ್ನು ನಿರ್ಬಂಧಿಸಲು ನಿರ್ಣಯಿಸಲಾಗಿದೆ’ ಎಂದರು.
‘ನರೇಗಾ ಯೋಜನೆಯಲ್ಲಿ ಒಟ್ಟು 13 ಕೋಟಿ ಮಾನವ ದಿನ ಲಭ್ಯವಿದ್ದು, ಈಗಾಗಲೇ 10.30 ಕೋಟಿ ಬಳಕೆ ಆಗಿದೆ. 18 ಕೋಟಿ ಮಾನವ ದಿನಗಳಿಗೆ ಹೆಚ್ಚಿಸುವಂತೆ ಬೇಡಿಕೆ ಇಡಲಾಗಿದೆ. ಯೋಜನೆಯಡಿ 150 ದಿನ ಕೆಲಸ ಕೊಡಲು ಅವಕಾಶವಿದೆ. ಈ ಬಗ್ಗೆ ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಮೂಲಕ ಮತ್ತೊಮ್ಮೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದರು.
‘ಕೃಷಿ ಇಲಾಖೆಯಿಂದ 230 ಕೋಟಿ ಬೆಳೆ ವಿಮೆ ಪಾವತಿಯಾಗುತ್ತಿದೆ. ಬಾಕಿ ಇರುವ ಹಣವನ್ನು ತಕ್ಷಣ ಪಾವತಿಸಲು ಸೂಚಿಸಲಾಗಿದೆ. ರೈತರಿಗೆ ಬೆಳೆ ವಿಮೆ ರೂಪದಲ್ಲಿ ಗೆ 2 ಸಾವಿರ ಕೋಟಿಯಷ್ಟು ಸಿಗುವ ಸಾಧ್ಯತೆ ಇದೆ. 200 ಕೋಟಿ ವೆಚ್ಚದಲ್ಲಿ ಕೃಷಿ ಹೊಂಡ ಮಾಡಲು ತೀರ್ಮಾನಿಸಲಾಗಿದೆ. ಹನಿ ನೀರಾವರಿಗೆ ರೈತರಿಗೆ 800 ಕೋಟಿ ನೀಡಲು ಕೂಡಾ ಸೂಚನೆ ನೀಡಲಾಗಿದೆ’ ಎಂದರು.
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/HLCYrALalJpLbeEMnLRyZB
ಎಷ್ಟು ಹಣ ಖಾತೆಗೆ ಜಮೆ ಯಾಗುತ್ತದೆ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಎಷ್ಟು ಹಣ ಖಾತೆಗೆ ಜಮೆ ಯಾಗುತ್ತದೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ಈ ದಿನ ಬರಲಿದೆ ರೈತರಿಗೆ ಬರ ಪರಿಹಾರ ಹಣ ಸಾಧಾರಣ ಹಾಗೂ ತೀರ್ವ ಬರಪೀಡಿತ ತಾಲೂಕು ಎಷ್ಟು ಪರಿಹಾರವನ್ನು ಕೊಡುತ್ತಾರೆ👇🏻https://krushivahini.com/2023/11/18/this-work-is-mandatory-to-get-drought-relief-2/