Adhaar pan link status check :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು, ಬಹಳಷ್ಟು ಜನರ ಪಾನ್ ಕಾರ್ಡ್ ಅನ್ನು ರದ್ದು ಮಾಡಲಾಗಿದೆ ಅದಕ್ಕೆ ಕಾರಣ ಏನು ಹಾಗೂ ನಿಮ್ಮ ಪಾನ್ ಕಾರ್ಡ್ ರದ್ದಾಗಿದೆಯೋ ಅಥವಾ ಇಲ್ಲವೋ ಎಂಬುವ ಸ್ಟೇಟಸ್ ಅನ್ನು ನೀವೇ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ. ದಯವಿಟ್ಟು ಈ ಲೇಖನವನ್ನು ಪೂರ್ಣವಾಗಿ ಓದಿ ತಪ್ಪದೇ ಎಲ್ಲರಿಗೂ ಶೇರ್ ಮಾಡಿ 🙏🏻..

ದೇಶಾದ್ಯಂತ ಹಲವು ಜನರ ಪಾನ್ ಕಾರ್ಡ್ ರದ್ದು:

ಶಾಶ್ವತ ಖಾತೆ ಸಂಖ್ಯೆ( PAN ) ಕಾರ್ಡ್ ಮತ್ತು ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ನಿರ್ಣಾಯಕ ಗುರುತಿನ ದಾಖಲೆಗಳಾಗಿವೆ. ಆದಾಯ ತೆರಿಗೆ (Income Tax)ನಿಯಮದ ಪ್ರಕಾರ, ನಿಮ್ಮ ಆಧಾರ್‌ನೊಂದಿಗೆ ನಿಮ್ಮ ಪ್ಯಾನ್ ಅನ್ನು ಲಿಂಕ್ ಮಾಡುವ ಪ್ರಕ್ರಿಯೆಯು ಕಡ್ಡಾಯವಾಗಿದೆ. ಈ ಪ್ರಕ್ರಿಯೆಗೆ ಕೊನೆಯ ದಿನಾಂಕವು ಜೂನ್ 30 2023 ಆಗಿತ್ತು. ಆದರೆ ವರದಿಯ ಪ್ರಕಾರ 11.5 ಕೋಟಿ ಜನರು ನಿಗದಿತ ಸಮಯದೊಳಗೆ ಆಧಾರ್ ಲಿಂಕ್ ಮಾಡಲು ವಿಫಲರಾಗಿದ್ದಾರೆ. ಈ ಕಾರಣದಿಂದಾಗಿ 11.5 ಕೋಟಿ ಜನರ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿಯಿಂದ RTI ಪ್ರತಿಕ್ರಿಯೆ ವರದಿ ಮಾಡಿದೆ.

➡️ ಪಾನ್ ಕಾರ್ಡ್ ಆಕ್ಟಿವೇಟ್ ಮಾಡಲು ಒಂದು ಸಾವಿರ ದಂಡ :

ಮಧ್ಯಪ್ರದೇಶದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರಿಗೆ RTI ಪ್ರತಿಕ್ರಿಯೆಯ ಅನುಸಾರ, ಭಾರತದಲ್ಲಿ 70.2 ಕೋಟಿ ಜನರು ಪ್ಯಾನ್ ಕಾರ್ಡ್‌ ಹೊಂದಿದ್ದಾರೆ. ಇವರಲ್ಲಿ ಸುಮಾರು 57.25 ಕೋಟಿ ಜನರು ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಿದ್ದಾರೆ. ಮತ್ತು ಇನ್ನುಳಿದ ಸುಮಾರು 12 ಕೋಟಿ ಜನರು ನಿಗದಿತ ಸಮಯದೊಳಗೆ ಆಧಾರ್ ಪ್ಯಾನ್ ಲಿಂಕ್ (Adhar pan link failed) ಮಾಡಿಸುವಲ್ಲಿ ವಿಫಲಾರಾಗಿದ್ದಾರೆ. ಈ ಪೈಕಿ 11.5 ಕೋಟಿ ಜನರ ಪ್ಯಾನ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಕಳೆದ ವಾರ ವರದಿಗಳು ತಿಳಿಸಿವೆ. ಅಷ್ಟೇಅಲ್ಲದೆ ₹ 1,000ರೂ ದಂಡವನ್ನು ಪಾವತಿಸುವ ಮೂಲಕ ಪ್ಯಾನ್ ಕಾರ್ಡ್ ಗಳನ್ನು ಪುನಃ ಸಕ್ರಿಯಗೊಳಿಸಬಹುದು ಎಂದು RTI ಉತ್ತರ ನೀಡುವ ಮೂಲಕ ಸ್ಪಷ್ಟಪಡಿಸಿದೆ.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139AA ಅಡಿಯಲ್ಲಿ, ಜುಲೈ 1, 2017 ರ ಮೊದಲು ಪ್ಯಾನ್ ಕಾರ್ಡ್ ಪಡೆದವರು ಕಡ್ಡಾಯವಾಗಿ ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಆದೇಶವನ್ನು ನೀಡಲಾಗಿದೆ.

➡️ ಪ್ಯಾನ್-ಆಧಾರ್ ಲಿಂಕ್ ಮಾಡುವ ಸ್ಥಿತಿ(Status)ಯನ್ನು ಪರಿಶೀಲಿಸುವುದು ಹೇಗೆ ಎಂಬುದು ಇಲ್ಲಿದೆ.👇🏻

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಮತ್ತು ಸ್ಟೇಟಸ್ ಅನ್ನು ಚೆಕ್ ಮಾಡುವುದಕ್ಕೆ ನಾವು ಈ ಕೆಳಗೆ ತೋರಿಸುವ ಹಂತಗಳ ಮೂಲಕ ಅನುಸರಿಸಿ👇🏻..

ಹಂತ 1 : ಮೊದಲಿಗೆ ಈ ಕೆಳಗೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.incometax.gov.in/iec/foportal/

ಹಂತ 2 : ಮೇಲೆ ಕಾಣುತ್ತಿರುವ “link aadhaar status” ಮೇಲೆ ಕ್ಲಿಕ್ ಮಾಡಿ,

ಹಂತ 3 : ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ. ನಂತರ ಕೆಳಗೆ ಕಾಣುತ್ತಿರುವ View link aadhaar status ಮೇಲೆ ಕ್ಲಿಕ್ ಮಾಡಿ..

ಹಂತ 4: ಈಗ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರುವ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.

ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಆಗಿದ್ದರೆ ಅದು ಪರದೆಯ ಮೇಲೆ ತೋರಿಸಲಾಗುತ್ತದೆ ಇಲ್ಲವೇ, ಲಿಂಕ್ ಮಾಡದಿದ್ದರೆ ಲಿಂಕ್ ಆಗಿಲ್ಲ ಎಂದು ತೋರಿಸುತ್ತದೆ. ಆಧಾರ್ ಲಿಂಕ್ ಮಾಡದಿದ್ದರೆ, ತಡ ಮಾಡದೆ ಲಿಂಕ್ ಮಾಡಲು ಮುಂದಿನ ಅಗತ್ಯ ಕ್ರಮಗಳನ್ನು ತಗೆದುಕೊಳ್ಳಿ.

ದಯವಿಟ್ಟು ಈ ಮೇಲೆ ತಿಳಿಸಿದ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ ಮೇಲೆ ನಿಮ್ಮ ಬಂದು ಬಳಗದವರಿಗೆ ತಪ್ಪದೆ ಈ ಲೇಖನವನ್ನು ಶೇರ್ ಮಾಡಿ..

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ನಿಮ್ಮ ಫ್ಯಾನ್ ಕಾರ್ಡ್ ಹಾಗೂ ಆಧಾರ್ ಸ್ಟೇಟಸ್ ಲಿಂಕ್ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಸ್ಟೇಟಸ್ ಲಿಂಕ್ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ಈ ದಿನ ಬರಲಿದೆ ರೈತರಿಗೆ ಬರ ಪರಿಹಾರ ಹಣ ಸಾಧಾರಣ ಹಾಗೂ ತೀರ್ವ ಬರಪೀಡಿತ ತಾಲೂಕು ಎಷ್ಟು ಪರಿಹಾರವನ್ನು ಕೊಡುತ್ತಾರೆ👇🏻https://krushivahini.com/2023/11/18/this-work-is-mandatory-to-get-drought-relief-2/

➡️ಮತ್ತೆ ಏರಿಕೆಯಾಗುತ್ತಾ ಟೊಮೇಟೊ ಬೆಲೆ? ಟೊಮೇಟೊ ಬೆಳೆಗಾರರಿಗೆ ಸಂತಸದ ಸುದ್ದಿ👇🏻 https://krushivahini.com/2023/11/16/tomato-rate-increased/

Leave a Reply

Your email address will not be published. Required fields are marked *