Loan facility to start cow farming :-

ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ದಿನ ನಾವು, ಹೈನುಗಾರಿಕೆ ಕೋಳಿ ಸಾಕಾಣಿಕೆ ಕುರಿ ಸಾಕಾಣಿಕೆ ಹಾಗೂ ಹಂದಿ ಸಾಕಾಣಿಕೆ ಆರಂಭಿಸಲು ಸಾಲ ಸೌಲಭ್ಯವನ್ನು ಕೊಡುವುದರ ಬಗ್ಗೆ ತಿಳಿದುಕೊಳ್ಳೋಣ.

ಹೌದು ರೈತ ಬಾಂಧವರೇ ಹೈನುಗಾರಿಕೆ ಕೋಳಿ ಹಾಗೂ ಕುರಿ ಸಾಕಾಣಿಕೆ ಮಾಡಲು ಸಾಲ ಸೌಲಭ್ಯವನ್ನು ಒದಗಿಸುತಿದ್ದಾರೆ. ಹಾಗಾಗಿ ತಪ್ಪದೆ ಎಲ್ಲರೂ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ

. ಸಾರ್ವಜನಿಕ ಪ್ರಕಟಣೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯಲು ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಅಭಿಯಾನ ( ದನ, ಆಡು, ಹಂದಿ, ಕೋಳಿ ಸಾಕಾಣಿಕೆ ನಿರ್ವಹಣೆಗಾಗಿ ) ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ವಯ (KCC) ಈ ಕೆಳಗಿನ ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ರಾಷ್ಟ್ರೀಕೃತ ಬ್ಯಾಂಕ್ / ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಹೊಸ ಕಿಸಾನ ಕ್ರೆಡಿಟ್ ಕಾರ್ಡಗಳನ್ನು ವಿತರಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ . ಆಸಕ್ತ ರೈತಾಪಿ ವರ್ಗದವರು ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ, ಅರ್ಜಿ ನಮೂನೆಗಳನ್ನು ಪಡೆದು ಸಲ್ಲಿಸಬಹುದಾಗಿದೆ.

ಬೇಕಾಗುವ ಅವಶ್ಯಕ ದಾಖಲಾತಿಗಳು!

ಆಧಾರ,ಪಹಣಿ ಪತ್ರ ಮತ್ತು ಭಾವ ಚಿತ್ರ ಅರ್ಜಿಯನ್ನು ಸಲ್ಲಿಸಬೇಕಾದರೆ ಈ ದಾಖಲೆಗಳು ಕಡ್ಡಾಯವಾಗಿ ರೈತರು ಸೇವಾ ಸಿಂಧು ಕೇಂದ್ರ ಅಥವಾ ನಿಮ್ಮ ಹತ್ತಿರದ ಬ್ಯಾಂಕುಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಸಂಕ್ಷಿಪ್ತ ಸಾಲಗಳ ವಿವರಣೆ ಇಲ್ಲಿದೆ!

1)ಹೈನುಗಾರಿಕೆ : ಮಿಶ್ರತಳಿ ದನಗಳ ನಿರ್ವಹಣೆ (1+1) : ಪ್ರತಿ ದನಕ್ಕೆ ಮಾಸಿಕ ಗರಿಷ್ಠ ರೂ . 7,000 / – ರಂತೆ ಎರಡು ತಿಂಗಳಿಗೆ ರೂ . 14,000 / – ಗಳಂತೆ, ಒಟ್ಟೂ ಎರಡು ಜಾನುವಾರುಗಳಿಗೆ ರೂ . 28,000 / – ಸಾಲ ಸೌಲಭ್ಯ ಒದಗಿಸಲಾಗುವುದು. ಮೇಲೆ ತಿಳಿಸಿದಂತೆ ಹೈನುಗಾರಿಕೆಗಾಗಿ ಈ ರೀತಿಯಾಗಿ ಸಾಲವನ್ನು ಅಂದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ನಿಮಗೆ ಹಣವನ್ನು ನೀಡಿರಲಾಗುತ್ತದೆ.

2) ಕುರಿ ಸಾಕಾಣಿಕೆ : ಮರಿಗಳ ಸಾಕಾಣಿಕೆಗೆ (ಗರಿಷ್ಠ 8 ತಿಂಗಳುಗಳ ಅವಧಿಗೆ ) · 10 + 1 ಘಟಕ್ಕೆ ರೂ . 24,000 / – ಸಾಲ ಸೌಲಭ್ಯ . 20 +1 ಘಟಕ್ಕೆ ರೂ . 18,000 / – ಸಾಲ ಸೌಲಭ್ಯ: ಕುರಿ ಸಾಕಾಣಿಕೆಯು ಕಿಸಾನ್ ಕ್ರೆಡಿಟ್ ಕಾರ್ಡ್ ಲಾಭದಾಯಕವಾಗಿದ್ದು ರೈತರಿಗೆ ತಮಗೆ ಅವಶ್ಯಕತೆ ಸಮಯದಲ್ಲಿ ಹಣ ಸಿಗದಿದ್ದರೆ ಕುರಿ ಸಾಕಾಣಿಕೆಯು ಸಹ ಕಿಸಾನ್ ಕ್ರೆಡಿಟ್ ಕಾರ್ಡ್ ತುಂಬಾನೇ ಲಾಭದಾಯಕ ವಾಗಿದೆ ಎಂದು ಹೇಳಬಹುದು. *

3) ಹಂದಿ ಸಾಕಾಣಿಕೆ: 10 ಹಂದಿಗಳ ಘಟಕಕ್ಕೆ 6 ತಿಂಗಳುಗಳ ಅವಧಿಗೆ ರೂ . 60,000 / – ಸಾಲ ಸೌಲಭ್ಯ. ಹಲವಾರು ಜನರು ಹಂದಿ ಸಾಕಾಣಿಕೆಗೆ ಹಿಂಜರಿಯುತ್ತಾರೆ ಆದರೆ ರೈತ ಮಿತ್ರರೇ ಹಂದಿ ಸಾಕಾಣಿಕೆಯಲ್ಲಿ ಇರುವ ಲಾಭವು ಬೇರೆ ಯಾವುದೇ ಕೃಷಿ ಪದ್ದತಿಯಲ್ಲಿ ಇಲ್ಲ ಅದಕ್ಕಾಗಿ ಇದರ ಲಾಭ ಸಹ ನೀವು ಪಡೆದುಕೊಳ್ಳಲು ಅವಕಾಶವಿದೆ.

4) ಕೋಳಿ ಸಾಕಾಣಿಕೆ : ಮಾಂಸದ ಕೋಳಿ ಸಾಕಾಣಿಕೆ ಪ್ರತಿ ಕೋಳಿಗೆ ರೂ . 80 / – ರಂತೆ 60 ದಿನಗಳಿಗೆ ರೂ . 1,60,000 / -ವರೆಗೆ ಸಾಲ ಸೌಲಭ್ಯ . ಕೋಳಿ ಸಾಕಾಣಿಕೆಯು ಕೃಷಿಯಲ್ಲಿ ಬಾಳ ದಿನಗಳಿಂದ ಲಾಭದಾಯಕವಾಗಿದ್ದು ಆದರೆ ಇದನ್ನು ಸ್ವಲ್ಪ ಸಣ್ಣ ಪ್ರಮಾಣದಲ್ಲಿ ಮಾಡಿದರೆ ಅಷ್ಟೊಂದು ಲಾಭವಿಲ್ಲ ಆದರೆ ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಖಂಡಿತವಾಗಿಯೂ ಲಾಭದಾಯಕ ವಾಗಿದೆ ಎಂದು ಹೇಳಬಹುದು. ಇದಕ್ಕೂ ಸಹ ಸಾಲ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸುವುದು : ತಾಲೂಕಿನ ಮುಖ್ಯ ಪಶುವೈದ್ಯ ಅಧಿಕಾರಿಗಳು (ಆಡಳಿತ), ಸಂಪರ್ಕಿಸಬಹುದು ಅಥವಾ ನೀವು ನೇರವಾಗಿ ಸೇವಾ ಸಿಂಧೂ ಕೇಂದ್ರ ಅಥವಾ ತಮ್ಮ ಹತ್ತಿರದ ಬ್ಯಾಂಕುಗಳಲ್ಲಿ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಬಹುದು.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ಹೈನುಗಾರಿಕೆ ಕುರಿ ಹಾಗೂ ಕೋಳಿ ಸಾಕಾಣಿಕೆಗೆ ಸಾಲ ಸೌಲಭ್ಯ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಹೊಸ ರೇಷನ್ ಕಾರ್ಡ್ ವಿತರಣೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ಈ ಪಟ್ಟಿಯಲ್ಲಿ ಇದ್ದವರ ಪಾನ್ ಕಾರ್ಡ್ ರದ್ದಾಗಿದೆ ಕೂಡಲೇ ನಿಮ್ಮ ಹೆಸರನ್ನು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ👇🏻 https://krushivahini.com/2023/11/15/adhaar-pan-link-status-check/

Leave a Reply

Your email address will not be published. Required fields are marked *