New Ration card :- ನಮಸ್ಕಾರ ಆತ್ಮೀಯ ರೈತ ಬಾಂಧವರಿಗೆ ಇಂದಿನ ದಿನ ನಾವು ಹೊಸ ರೇಷನ್ ಕಾರ್ಡ್ ವಿತರಣೆಯ ಬಗ್ಗೆ ಮಹತ್ವದ ಮಾಹಿತಿಯನ್ನು ತಪ್ಪದೆ ತಿಳಿದುಕೊಳ್ಳೋಣ.

ಹಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಪ್ಪದೇ ಲೇಖನವನ್ನು ಶೇರ್ ಮಾಡಿ🙏🏻.

ನಿಮಗೆ ಹೊಸ ರೇಷನ್ ಕಾರ್ಡ್ ಬೇಕೆ??

ಹೌದು ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಲು ನಿಮಗೆ ಪಡಿತರ ಚೀಟಿ ಅತ್ಯವಶ್ಯಕ, ನಿಮಗೆ ಪಡಿತರ ಚೀಟಿ ಅಡಿಯಲ್ಲಿ ಬರುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕೆ??

ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಕಡ್ಡಾಯವಾಗಿ ಪಡಿತರ ಚೀಟಿ ಬೇಕು.ಆದರೆ ಕೆಲವು ಜನರಿಗೆ ಪಡಿತರ ಚೀಟಿ ಅಲಭ್ಯತೆಯಿಂದ ಸರ್ಕಾರದ ವಿವಿಧ ಯೋಜನೆಯಿಂದ ವಂಚಿತರಾಗಿದ್ದಾರೆ.

ನೀವು ನೋಡಿರುವ ಹಾಗೆ ಚುನಾವಣೆಯ ಸಂದರ್ಭದಲ್ಲಿ ಹೊಸ ರೇಷನ್ ಕಾರ್ಡಗೆ ಅರ್ಜಿ ಸಲ್ಲಿಕೆಯನ್ನು ಸ್ಥಗಿತ ಮಾಡಲಾಗಿತ್ತು. ಆದರೆ ಇದೀಗ ಪಡಿತರ ಚೀಟಿಯನ್ನು ಕೊಡಲು ಸರ್ಕಾರ ಮುಂದಾಗಿದೆ.

ನಮ್ಮ ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಳನ್ನು ಪಡೆಯಲು ಒಟ್ಟಾರೆ 2.90 ಲಕ್ಷ್ಯ ಅರ್ಜಿಗಳನ್ನು ಸಲ್ಲಿಸಿದ್ದಾರೆ ಆದಷ್ಟು ಬೇಗ ಎಲ್ಲ ಅರ್ಜಿಗಳನ್ನು ಪರಿಶೀಲನೆ ಮಾಡಿ. ಅರ್ಹತೆ ಹೊಂದಿದ ಎಲ್ಲಾ ಪಡಿತರದಾರರಿಗೆ ಹೊಸ ರೇಷನ್ ಕಾರ್ಡನ್ನು ಸದ್ಯದಲ್ಲೇ ವಿತರಣೆ ಮಾಡಲಾಗುವುದೆಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗೃಹಕ ವ್ಯವಹಾರಗಳ ಸಚಿವರಾದ – ಕೆಎಚ್ ಮುನಿಯಪ್ಪ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

ಹೌದು ಈಗಾಗಲೇ, 2,90,000 ಅರ್ಹ ಕುಟುಂಬಗಳಿಗೆ ಹೊಸ ಪಡಿತರ ಚೀಟಿಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಅದರಲ್ಲೂ ಕೂಡ ಬರಗಾಲದ ಸಮಯದಲ್ಲಿ ಬಡವರಿಗೆ ಸಂಜೀವಿನಿ ಆದ ರೇಷನ್ ಕಾರ್ಡ್ ಹೊಂದಿದವರಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಮತ್ತು ಐದು ಕೆಜಿ ಅಕ್ಕಿ ಬದಲಿಗೆ 170 ಹಣವನ್ನು ವಿತರಿಸಲಾಗಿದೆ.

➡️ ಅನ್ನಭಾಗ್ಯ ಯೋಜನೆಯ ಅಡಿ ನಿಮಗೆ ಎಷ್ಟು ಹಣ ಜಮೆಯಾಗಿದೆ ಇಲ್ಲಿ ನೋಡಿರಿ 👇🏻

ಅನ್ನಭಾಗ್ಯ ಯೋಜನೆಯಡಿ ನಾಲ್ಕು ತಿಂಗಳ ಹಣ ಜಮೆ ಆಗಿರುವುದು ನಿಮ್ಮ ಮೊಬೈಲ್ ಗೆ ಆಗಲೇ ಮೆಸೇಜ್ ಬಂದು ಹಣವು ಜಮೆ ಆಗಿದೆ. ಅದೇ ರೀತಿಯಾಗಿ ಮತ್ತೆ ಅನ್ನ ಭಾಗ್ಯ ಹಣ ಈಗಾಗಲೇ ಸ್ಟೇಟಸ್ ಬಿಡುಗಡೆ ಮಾಡಿದ್ದು. ತಪ್ಪದೇ ನಿಮಗೆ ಎಷ್ಟು ಹಣ ಜಮೆ ಆಗಿದೆ ಎಂಬುದನ್ನು ಇಲ್ಲಿ ನೋಡಿರಿ.

ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿದ https://ahara.kar.nic.in/lpg/

ನಂತರ ಅಲ್ಲಿ ಕಾಣಿಸುವ ನಿಮ್ಮ ಜಿಲ್ಲೆಯ ಲಿಂಕ್ ಮೇಲೆ ಕಾಣಿಸುತ್ತದೆಯೋ ಅದನ್ನು ಕ್ಲಿಕ್ ಮಾಡಿಕೊಂಡು.

ನಂತರದಲ್ಲಿ ತಿಂಗಳನ್ನು ಆಯ್ಕೆ ಮಾಡಿಕೊಂಡು ನಂತರ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು(RC number)ಇಲ್ಲಿ ನಮೂದಿಸಿ ನಂತರ ಮುಂದೆ ಕ್ಲಿಕ್ ಮಾಡಿದ ಮೇಲೆ ಮತ್ತೆ ನಿಮ್ಮ ಮನೆಯಲ್ಲಿ ಎಷ್ಟು ಜನರಿಗೆ ಮತ್ತು ಎಷ್ಟು ರೂಪಾಯಿಗಳು ಜಮಾ ಆಗುತ್ತದೆ ಎಂದು ತೋರಿಸುತ್ತದೆ.

ಅನ್ನಭಾಗ್ಯ ಪ್ರತಿ ತಿಂಗಳ ಜಮೆ ಆಗಿರುವ ಸ್ಟೇಟಸ್ ಚೆಕ್ ಮಾಡಿ ನಂತರ ನಿಮ್ಮ ಖಾತೆಗೆ ಹಣ ಜಮಾ ಆಗಿರುವುದನ್ನು ಪರಿಶೀಲಿಸಿಕೊಳ್ಳಿ.

➡️ ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್:-

(ಜೂಲೈ,ಆಗಸ್ಟ್,ಸೆಪ್ಟೆಂಬರ್, ಅಕ್ಟೋಬರ್) ನಾಲ್ಕು ತಿಂಗಳ ಹಣ ಜಮಾ ಸ್ಟೇಟಸ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಂತರ ಅಲ್ಲಿ ಕಾಣಿಸುವ ತಿಂಗಳನ್ನು ಆಯ್ಕೆ ಮಾಡಿಕೊಂಡು ಕೆಳಗೆ ತೋರಿಸಿರುವ ಆರ್‌ಸಿ ನಂಬರ್ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಜಮಾ ಹಣವನ್ನು ತೋರಿಸುತ್ತದೆ.

➡️ ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಆಗಿರುವ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಹಂತ 1:- ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ahara.kar.nic.in

ಹಂತ 2:- ಮುಂದಿನ ಪುಟ್ಟ ತೆರೆದ ನಂತರ ಅಲ್ಲಿ ಇ-ಸೇವೆಗಳು ವಿಭಾಗದ ಮೇಲೆ ಕ್ಲಿಕ್ ಮಾಡಿ.

ಹಂತ 3:- ಅದರ ನಂತರ ಇ-ಸ್ಥಿತಿ ವಿಭಾಗದಲ್ಲಿ ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ ಮೇಲೆ ಕ್ಲಿಕ್ ಮಾಡಿ.

ಹಂತ 4:- ನೀವು ವಾಸವಾಗಿದ್ದ ಜಿಲ್ಲೆಯ ಮೇಲೆ ಒಂದು ಲಿಂಕ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಹಂತ 5:- ಮುಂದಿನ ಪುಟದಲ್ಲಿ ಪಡಿತರ ಚೀಟಿ ವಿವರ (status of ration card) ಮೇಲೆ ಕ್ಲಿಕ್ ಮಾಡಿ.

ಹಂತ 6:- ಮುಂದಿನ ಪುಟದಲ್ಲಿ ವಿತ್ ಓಟಿಪಿ (With OPT) ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಹಂತ 7:- ಆನಂತರ ನಿಮ್ಮ ಆರ್‌ಸಿ ನಂಬರ್ (RC number) ನಮೂದಿಸಿ ಮತ್ತು ಕೆಳಗೆ ನಿಮ್ಮ ಪರಿವಾರದ ಯಾರದಾದರೂ ಹೆಸರು ಸೆಲೆಕ್ಟ್ ಮಾಡಿ. ಅವರ ಹತ್ತಿರ ಮೊಬೈಲ್ ನಂಬರ್ ಇರುವುದು ಕಡ್ಡಾಯ. GO ಮೇಲೆ ಕ್ಲಿಕ್ ಮಾಡಿ.

ಹಂತ 8:- ನೀವು ಸೆಲೆಕ್ಟ್ ಮಾಡಿರುವ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಹೋಗುತ್ತದೆ ಅದನ್ನು ನಮೂದಿಸಿ GO ಮೇಲೆ ಕ್ಲಿಕ್ ಮಾಡಿ

ಹಂತ 9:- ಈ ಎಲ್ಲಾ ಹಂತಗಳು ಮುಗಿದ ನಂತರ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಕಾಣುತ್ತದೆ ಅಲ್ಲಿ ekyc status ವಿಭಾಗದಲ್ಲಿ ನಿಮಗೆ yes and no ಆಯ್ಕೆ ಕಾಣುತ್ತದೆ.

Yes ಅಂತ ಬಂದರೆ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಆಗಿದೆ ಅಂತ ಅರ್ಥ.

No ಅಂತ ಬಂದರೆ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಆಗಿಲ್ಲ ಅಂತ ಅರ್ಥ.

➡️ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿಲ್ಲವೆಂದರೆ ಏನು ಮಾಡಬೇಕು?

ಹಂತ 1:- ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ahara.kar.nic.in

ಹಂತ 2:- ಮುಂದಿನ ಪುಟ್ಟ ತೆರೆದ ನಂತರ ಅಲ್ಲಿ ಇ-ಸೇವೆಗಳು ವಿಭಾಗದ ಮೇಲೆ ಕ್ಲಿಕ್ ಮಾಡಿ.

ಹಂತ 3:- ಇ ಪಡಿತರ ಚೀಟಿ ವಿಭಾಗದಲ್ಲಿ ಯುಐಡಿ ಲಿಂಕ್ ಮಾಡಿ ಅನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 4:- ಹಂತ 4:- ನೀವು ವಾಸವಾಗಿದ್ದ ಜಿಲ್ಲೆಯ ಮೇಲೆ ಒಂದು ಲಿಂಕ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಹಂತ 5:- UID linking for RC members ಮೇಲೆ ಕ್ಲಿಕ್ ಮಾಡಿ.

ಹಂತ 6:- ಆನಂತರ ಆಧಾರ್ ಕಾರ್ಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಮುಂದಿನ ಪುಟದಲ್ಲಿ ನಿಮ್ಮ ಆಧಾರ್ ನಂಬರ್ ನಮೂದಿಸಿ GO ಮೇಲೆ ಕ್ಲಿಕ್ ಮಾಡಿ.

ಹಂತ 7:- ನಿಮ್ಮ ಆಧಾರ್ ಕಾರ್ಡ್ ಗ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಒಂದು ಓಟಿಪಿ ಬರುತ್ತದೆ ಅದನ್ನು ನಮೂದಿಸಿ GO ಮೇಲೆ ಕ್ಲಿಕ್ ಮಾಡಿ.

ಹಂತ 8:- ಆನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ (RC number) ಹಾಕಿ GO ಮೇಲೆ ಕ್ಲಿಕ್ ಮಾಡಿ.

ಆನಂತರ Aadhar card number link successful

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ಹೊಸ ರೇಷನ್ ಕಾರ್ಡ್ ವಿತರಣೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಹೊಸ ರೇಷನ್ ಕಾರ್ಡ್ ವಿತರಣೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ಈ ಪಟ್ಟಿಯಲ್ಲಿ ಇದ್ದವರ ಪಾನ್ ಕಾರ್ಡ್ ರದ್ದಾಗಿದೆ ಕೂಡಲೇ ನಿಮ್ಮ ಹೆಸರನ್ನು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ👇🏻 https://krushivahini.com/2023/11/15/adhaar-pan-link-status-check/

Leave a Reply

Your email address will not be published. Required fields are marked *