New Drought Affected Taluks added :-
ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಮತ್ತೆ ಬರಪೀಡಿತ ತಾಲೂಕುಗಳ ಪಟ್ಟಿಗೆ ಹೊಸ ತಾಲೂಕುಗಳನ್ನು ಸೇರ್ಪಡೆ ಮಾಡಿದ್ದಾರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ತಪ್ಪದೇ ಈ ಲೇಖನವನ್ನು ಪೂರ್ಣವಾಗಿ ಓದಿ ಎಲ್ಲರಿಗೂ ಶೇರ್ ಮಾಡಿ
ಕರ್ನಾಟಕದ ಸಾಧಾರಣ ಬರ ತಾಲೂಕುಗಳ ಪಟ್ಟಿಗೆ ಮಾಗಡಿ, ಚನ್ನಪಟ್ಟಣ ಸೇರ್ಪಡೆ
ಇತ್ತೀಚೆಗೆ, ಕರ್ನಾಟಕ ರಾಜ್ಯ ಸರ್ಕಾರ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಹೆಸರಿಸಿತ್ತು. ಅದರಲ್ಲಿ ಸಾಧಾರಣ ಬರ ತಾಲೂಕುಗಳ ಪಟ್ಟಿಗೆ ರಾಮನಗರ ಜಿಲ್ಲೆಯ ಮಾಗಡಿ ಹಾಗೂ ಚನ್ನಪಟ್ಟಣ ತಾಲೂಕುಗಳನ್ನು ಸೇರಿಸಲಾಗಿದೆ. ಶೇ. 60ಕ್ಕಿಂತ ಮಳೆ ಕಡಿಮೆಯಾದ ಪ್ರದೇಶಗಳು ಹಾಗೂ ಸತತ 3 ವಾರಗಳ ಕಾಲ ಶುಷ್ಕತೆ ಮುಂದುವರಿಯುವುದನ್ನು ಪರಿಗಣಿಸಿ ಮತ್ತೆ ರಾಜ್ಯ ಸರ್ಕಾರ 22 ತಾಲೂಕುಗಳಲ್ಲಿ ಅಧ್ಯಯನ ನಡೆಸಿತ್ತು. ಅವುಗಳಲ್ಲಿ ಮಾಗಡಿ, ಚನ್ನಪಟ್ಟಣವೂ ಸೇರಿದ್ದವು. ಅಧ್ಯಯನ ವರದಿ ಆಧಾರದ ಮೇರೆಗೆ, ಈ ಎರಡೂ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ವ್ಯಾಪ್ತಿಗೆ ಸೇರಿಸಲಾಗಿದೆ.
ಇತ್ತೀಚೆಗೆ, 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದ ರಾಜ್ಯ ಸರ್ಕಾರ.
ಆನಂತರ, ಪುನಃ 22 ತಾಲೂಕುಗಳಲ್ಲಿ ನಿರ್ದಿಷ್ಟ ಮಾನದಂಡಗಳನ್ನಿಟ್ಟುಕೊಂಡು ಅಧ್ಯಯನ;
ಇತ್ತೀಚೆಗೆ ನಡೆಸಲಾದ ಸಮೀಕ್ಷೆಯಲ್ಲಿ ಮಾಗಡಿ, ಚನ್ನಪಟ್ಟಣ ತಾಲೂಕುಗಳು ಸಾಧಾರಣ ಬರದ ವ್ಯಾಪ್ತಿಗೆ.- ತಿ.ನಾ. ಪದ್ಮನಾಭ
ಮಾಗಡಿ ಗ್ರಾ.: ರಾಜ್ಯ ಸರಕಾರ ಕೈಗೊಂಡ ಬರ ಪರಿಸ್ಥಿತಿ ಅವಲೋಕನದ 3ನೇ ಹಂತದ ಸಮೀಕ್ಷೆಯಲ್ಲಿ ಜಿಲ್ಲೆಯ ಮಾಗಡಿ, ಚನ್ನಪಟ್ಟಣ ‘ಸಾಧಾರಣ ಬರಪೀಡಿತ ತಾಲೂಕು’ಗಳ ಪಟ್ಟಿಯಲ್ಲಿಸ್ಥಾನ ಪಡೆದುಕೊಂಡಿವೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಪ್ರಸ್ತಾವನೆ ಹಾಗೂ ಅಧ್ಯಯನ ಆಧಾರದ ಮೇಲೆ ಬರ ಪರಿಸ್ಥಿತಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳ ಅನ್ವಯ, 3ನೆ ಹಂತದ ಸಮೀಕ್ಷೆಯಲ್ಲಿ ಜಿಲ್ಲೆಯ ಮಾಗಡಿ, ಚನ್ನಪಟ್ಟಣ ಸಾಧಾರಣ ಬರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
3 ಹಂತಗಳಲ್ಲಿ ಸಮೀಕ್ಷೆ
ಸರಕಾರ ಬಿಡುಗಡೆಗೊಳಿಸಿದ ಮೊದಲ ಹಂತದ ಬರ ಪರಿಸ್ಥಿತಿಯ ತಾಲೂಕುಗಳ ಪಟ್ಟಿಯಲ್ಲಿ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 195 ತಾಲೂಕುಗಳನ್ನು ಬರ ಪರಿಸ್ಥಿತಿಯ ಪಟ್ಟಿಗೆ ಘೋಷಣೆ ಮಾಡಲಾಗಿತ್ತು. ಇದಾದ ಬಳಿಕ ಶೇಕಡ 60ಕ್ಕಿಂತ ಕಡಿಮೆ ಮಳೆಯಾದ ಹಾಗೂ ಸತತ 3 ವಾರಗಳಿಗಿಂತ ಹೆಚ್ಚಿನ ಶುಷ್ಕ ವಾತಾವರಣ ಅಂದರೆ ಕೃಷಿ ತೇವಾಂಶ ಕೊರತೆ, ನದಿ, ಕೆರೆಕಟ್ಟೆ ಜಲಾಶಯಗಳ ಹರಿವು, ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟ ಸೂಚ್ಯಂಕಗಳ ತೀವ್ರತೆ ಆಧರಿಸಿ ಹೆಚ್ಚುವರಿ ಯಾಗಿ 2ನೇ ಮತ್ತು 3ನೇ ಹಂತದಲ್ಲಿ 22 ತಾಲೂಕುಗಳಲ್ಲಿ ಮರುಅಧ್ಯಯನ ಕೈಗೊಳ್ಳಲಾಗಿತ್ತು.
ಅವುಗಳಲ್ಲಿ17 ತಾಲೂಕುಗಳನ್ನು ತೀವ್ರ ಬರಪಟ್ಟಿಗೆ ಸೇರಿಸಿ, ಇನ್ನು 4 ತಾಲೂಕುಗಳನ್ನು ಸಾಧಾರಣ ಬರ ಪರಿಸ್ಥಿತಿ ಪಟ್ಟಿಗೆ ಸರಕಾರ ಸೇರ್ಪಡೆಗೊಳಿಸಿದೆ. ಅವುಗಳಲ್ಲಿ ರೇಷ್ಮೆ ಜಿಲ್ಲೆಯ ಮಾಗಡಿ ಹಾಗೂ ಚನ್ನಪಟ್ಟಣಕ್ಕೂ ಸ್ಥಾನ ದೊರೆತಿದೆ. ಈಗ ಒಟ್ಟಾರೆ 216 ತಾಲೂಕುಗಳು ಬರದ ಪಟ್ಟಿಯಲ್ಲಿಸ್ಥಾನ ಪಡೆದಿವೆ.
ಕೇಂದ್ರ ಸರಕಾರದ ಕೈಪಿಡಿ ಆಧಾರ
ಬರ ಪರಿಸ್ಥಿತಿ ಘೋಷಣೆ ಮಾಡಲು ರಾಜ್ಯ ಸರಕಾರ ಕೇಂದ್ರ ಸರಕಾರದ 2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನ ದಂಡಗಳನ್ನು ಅಳವಡಿಸಿಕೊಂಡು ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿಜಿಲ್ಲಾಧಿಕಾರಿಗಳ ತಂಡ ನೀಡುವ ವರದಿ ಹಾಗೂ ಸ್ಥಳೀಯ ಶಾಸಕರ ಶಿಫಾರಸು ಸಹ ತಾಲೂಕುಗಳ ಬರ ಪಟ್ಟಿಗೆ ಸೇರ್ಪಡೆಗೊಳ್ಳಲು ಪ್ರಮುಖ ಪಾತ್ರ ವಹಿಸಿದೆ ಎಂಬ ಮಾತುಗಳು ಕೇಳಿಬಂದಿವೆ.
ರಾಮನಗರ ಜಿಲ್ಲೆಯ 3 ತಾಲೂಕು ಬರಪೀಡಿತ, ಮುಂಗಾರಿನಲ್ಲಿ ಶೇ 69 ರಷ್ಟು ಮಳೆ ಕೊರತೆ
6 ತಿಂಗಳಗಳವರೆಗೆ ಚಾಲ್ತಿಯಲ್ಲಿ
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಂದಾಯ ಕೃಷಿ ತೋಟ ಗಾರಿಕೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಬರ ಕೈಪಿಡಿಯಲ್ಲಿಸಮಗ್ರ ಅಂಕಿ ಅಂಶವುಳ್ಳ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಬರ ಪಟ್ಟಿ ಬಿಡುಗಡೆಗೊಳಿಸಿದೆ. ಸರಕಾರ ಈಗ ನಡೆಸಿರುವ ಬರ ಅಧ್ಯಯನ ಮುಂದಿನ 6 ತಿಂಗಳ ಅವಧಿಗೆ ಹಾಗೂ ಸರ ಕಾರದ ಮುಂದಿನ ಆದೇಶದವರೆಗೂ ಚಾಲ್ತಿ ಯಲ್ಲಿಇರುತ್ತದೆ ಎಂದು ಸರಕಾರ ಬಿಡುಗಡೆ ಮಾಡಿರುವ ಆದೇಶದಲ್ಲಿ ಉಲ್ಲೇಖಿಸಿದೆ.
ಸಾಧಾರಣ ಹಾಗೂ ತೀವ್ರ ಬರ ತಾಲೂಕುಗಳಿಗೆ ಸಿಗುವುದೇನು..?
ರಾಜ್ಯ ಸರ ಕಾರ ಸಂಪುಟ ಒಪ್ಪಿಗೆಯ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿ ಕೇಂದ್ರದ ಹಾಗೂ ರಾಜ್ಯದ ಪರಿಹಾರ ಎರಡನ್ನು ಲೆಕ್ಕಹಾಕಿ ಬೆಳೆ ಹಾನಿಯಾಗಿರುವ ರೈತರಿಗೆ ತೀವ್ರ ಬರದ ಪಟ್ಟಿಯಲ್ಲಿ ಸೇರಿರುವ ತಾಲೂಕುಗಳಿಗೆ ಎಕ ರೆಗೆ ಇಂತಿಷ್ಟು ಎಂದು ಹಾಗೂ ಸಾಧಾರಣ ಬರದ ಪಟ್ಟಿಯಲ್ಲಿರುವ ತಾಲೂಕುಗಳಲ್ಲಿನ ಬೆಳೆ ಹಾನಿ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ವರದಿ ಪಡೆದು ಎಕರೆಗೆ ಇಂತಿಷ್ಟು ಎಂದು ಪ್ರತ್ಯೇಕವಾದ ಪರಿಹಾರ ವನ್ನು ಸರಕಾರ ನಿಗದಿಗೊಳಿಸುತ್ತದೆ.
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/HLCYrALalJpLbeEMnLRyZB
ಮತ್ತೆ ಹೊಸದಾಗಿ ಬರಪೀಡಿತ ತಾಲೂಕು ಘೋಷಣೆ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಮತ್ತೆ ಹೊಸದಾಗಿ ಬರಪೀಡಿತ ತಾಲೂಕು ಘೋಷಣೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ಈ ಪಟ್ಟಿಯಲ್ಲಿ ಇದ್ದವರ ಪಾನ್ ಕಾರ್ಡ್ ರದ್ದಾಗಿದೆ ಕೂಡಲೇ ನಿಮ್ಮ ಹೆಸರನ್ನು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ👇🏻 https://krushivahini.com/2023/11/15/adhaar-pan-link-status-check/