when will drought relief come :-

ಸರ್ಕಾರಕ್ಕೆ ಬರ ನಿರ್ವಹಣೆ ಸವಾಲಾಗಿದೆ. ಬರ ಸಮೀಕ್ಷೆ ಮುಗಿದು ಎರಡೂ ತಿಂಗಳು ಗತಿಸಿದರೂ ರೈತರ ಖಾತೆಗೆ ಬರ ಪರಿಹಾರ ವಿತರಣೆ ಆಗಿಲ್ಲ. ಪರಿಹಾರ ವಿತರಣೆಯ ಆಡಳಿತಾತ್ಮಕ ಪ್ರಕ್ರಿಯೆ ವಿಳಂಬ ಆಗುತ್ತಿದೆ. ಜಿಲ್ಲೆಯಿಂದ ಪ್ರಸ್ತಾವನೆ ಸಲ್ಲಿಕೆ ಆಗಿ ತಿಂಗಳು ಗತಿಸಿದೆ. ಒಂದೆಡೆ ಬರ, ಮತ್ತೊಂದೆಡೆ ಪರಿಹಾರ ವಿಳಂಬದಿಂದ ಸಣ್ಣ ಹಿಡುವಳಿ ರೈತ ವರ್ಗ ಗೊಂದಲದಲ್ಲಿದೆ. ಇನ್ನೂ ಭಾಗಶಃ ಹಿಂಗಾರು ಕೂಡ ಕೈಕೊಟ್ಟಿದೆ.

ಪರಿಹಾರ ವಿಳಂಬದಿಂದ ವಂಚಿತರಾಗಿರುವ ರೈತರಿಗೆ ಸಾಲದ ಕಟಬಾಕಿ ಪಾವತಿಸುವಂತೆ ಬ್ಯಾಂಕ್ಗಳು ನೋಟೀಸ್ ನೀಡಲಾಗುತ್ತಿರುವ ಪ್ರಕರಣಗಳು ಕೇಳಿಬರುತ್ತಿದೆ. ಈ ಬೆಳವಣಿಗೆಯಿಂದ ಹಬ್ಬದ ವಾತಾವರಣ ಅದರಶ್ಯಗೊಂಡು ರೈತವರ್ಗದಲ್ಲಿ ನಿಶ್ಯಬ್ದತೆ ಮೂಡಿದೆ.

ಜಿಲ್ಲೆಗೆ ನ.6 ರಂದು ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಬರ ಸಮೀೆ ನಡೆಸಿದೆ. ತದನಂತರ ಬರ ಸಮೀಾ ಕಾರ್ಯವನ್ನು ಪೂರ್ಣಗೊಳಿಸಿರುವ ಜಿಲ್ಲಾಡಳಿತ ರಾಷ್ಟ್ರೀಯ ವಿಪತ್ತು ನಿರ್ವಹಣೆ ಮಾನದಂಡ ಅನ್ವಯ ಒಟ್ಟಾರೆ 258 ಕೋಟಿ ಬೆಳೆ ಪರಿಹಾರ ವಿತರಿಸುವಂತೆ ನ.10, 2023ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ಕಾರದಿಂಬ ಇನ್ನೂ ಬೆಳೆ ಪರಿಹಾರ ಕುರಿತು ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಬಂದಿಲ್ಲ.

ಪರಿಹಾರಕ್ಕೆ ಮನವಿ:

ಮಳೆ ಕೊರತೆಯಿಂದ 1.87 ಲಕ್ಷ ಹೆಕ್ಟೇರ್ ಕೃಷಿ ಹಾಗೂ 66 ಸಾವಿರ ಹೆಕ್ಟೇರ್ ತೋಟಗಾರಿಕೆ ಭೂಮಿ ಹಾನಿಗೀಡಾಗಿದೆ. ಕೃಷಿ ಉತ್ಪನ್ನ ಹಾನಿಗೆ 197 ಕೋಟಿ ರೂ. ಮತ್ತು 61 ಕೋಟಿ ರೂ. ತೋಟಗಾರಿಕೆ ಬೆಳೆ ಹಾನಿ ಪರಿಹಾರ ವಿತರಿಸಲು ಮನವಿ ಮಾಡಲಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ನರಗುಂದ ಮತ್ತು ಮುಂಡರಗಿ ತಾಲೂಕಿಗೆ ಕ್ರಮವಾಗಿ 46 ಕೋಟಿ ರೂ. 36 ಕೋಟಿ ರೂ. ಪರಿಹಾರ ಜಮೆ ಆಗಬೇಕಿದೆ.

ಬೆಳೆ ಹಾನಿ, ಬೆಲೆ ಹೆಚ್ಚಳ: ಪ್ರಸಕ್ತ ಸಾಲಿನಲ್ಲಿ ತೋಟಗಾರಿಕೆ ಬೆಳೆ ಹಾನಿಯಿಂದ ಮಾರುಕಟ್ಟೆಯಲ್ಲಿ ತೋಟಗಾರಿಕೆ ಬೆಳೆಗಳ ಆವಕ ತೀವ್ರ ಕುಸಿದಿದೆ. ಬೇಡಿಕೆಗೆ ತಕ್ಕಂತೆ ಮೆಣಸಿನಕಾಯಿ, ಈರುಳ್ಳಿ ಹಾಗೂ ಟೆಮ್ಯಾಟೋ ಪೂರೈಕೆ ಇಲ್ಲದ ಕಾರಣ ಕೆಜಿ ಲೆಕ್ಕದಲ್ಲಿ ಬೆಲೆಗಳು ಅಧಿಕಗೊಂಡಿದೆ. ಹಣದುಬ್ಬರದಿಂದ ಮಧ್ಯಮ ಮತ್ತು ಬಡ ವರ್ಗದ ಜನರಿಗೆ ಬಿಸಿ ತಟ್ಟಿದೆ. ಜಿಲ್ಲೆಯಲ್ಲಿ ಕೆಂಪು ಮೆಣಸಿನಕಾಯಿ 42647 ಹೆಕ್ಟೇರ್, ಈರುಳ್ಳಿ 23280 ಹೆಕ್ಟೇರ್ ಹಾಗೂ ಟೋಮ್ಯಾಟೋ 80 ಹೆಕ್ಟೇರ್ ಪ್ರದೇಶ ಹಾನಿಯಾಗಿದೆ. ಕಳೆದೊಮದು ತಿಂಗಳ ಹಿಂದೆ ಕೆಜಿ ಈರುಳ್ಳಿಗೆ 20 ರೂ. ಇದ್ದ ಬೆಲೆ ಪ್ರಸ್ತುತ ಮಾರುಕಟ್ಟೆಯಲ್ಲಿ 60 ರೂ.ಗೆ ಹೆಚ್ಚಾಗಿದೆ.

ಬಾಕ್ಸ್: ಈ ವರೆಗೆ ಪರಿಹಾರ ತಂತ್ರಾಂಶ ಮೂಲಕ ಮಾಡಲಾಗುತ್ತಿದ್ದ ಬೆಳೆ ಪರಿಹಾರ ವಿತರಣೆಯನ್ನು FRUIT ತಂತ್ರಾಂಶ ಮೂಲಕ ವಿತರಣೆಗೆ ರಾಜ್ಯ ಸರ್ಕಾರ ಚಿಂತಿಸಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಸಂಪೂರ್ಣ ದಾಖಲೆಗಳನ್ನು ಅಳವಡಿಸಲಾಗಿರುತ್ತದೆ. ಬರ ಪರಿಹಾರಕ್ಕೆ ಪರಿಹಾರ ತಂತ್ರಾಂಶ ಬಳಕೆ ಮಾಡಿದ್ದಲ್ಲಿ ಮತ್ತೊಮ್ಮೆ ರೈತರ ದಾಖಲೆಗಳನ್ನು ಅಳವಡಿಸಬೇಕಾಗುತ್ತದೆ. ಇದು ಮತ್ತಷ್ಟು ವಿಳಂಬ ಪ್ರಕ್ರಿಯೆ ಆಗಿದ್ದು FRUIT ತಂತ್ರಾಂಶಕ್ಕೆ ರಾಜ್ಯ ಸರ್ಕಾರ ಆಧ್ಯತೆ ನೀಡಿದೆ ಎಂದು ಮೂಲಗಳು ತಿಳಿಸಿದೆ.

ಅಕ್ಟೋಬರ್ ತಿಂಗಳಲ್ಲಿ ಮಳೆ ಕೊರತೆ:

ತಾಲೂಕು – ಮಳೆ ಕೊರತೆ

ಗದಗ – ಶೇ.95

ಮುಂಡರಗಿ – ಶೇ. 95

ನರಗುಂದ – ಶೇ. 99

ರೋಣ – ಶೇ. 99

ಶಿರಹಟ್ಟಿ – ಶೇ. 95

ಗಜೇಂದ್ರಗಡ – ಶೇ.89

ಲಕ್ಷ್ಮೇಶ್ವರ– ಶೇ.93

➡️ ತಾಲೂಕುವಾರು ಬೆಳೆ ಹಾನಿ ಮತ್ತು ಪರಿಹಾರ

ತಾಲೂಕು – ಕೃಷಿ ಭೂಮಿ ಹಾನಿ(ಹೆ.) – ತೋಟಗಾರಿಕೆ ಹಾನಿ(ಹೆ.) – ಒಟ್ಟಾರೆ ಪರಿಹಾರ ಮೊತ್ತ(ಕೋಟಿ)

ಗದಗ – 27173 ಹೆಕ್ಟೇರ್ – 27615 ಹೆಕ್ಟೇರ್- 44.21

ಮುಂಡರಗಿ-33320 ಹೆಕ್ಟೇರ್-6595ಹೆಕ್ಟೇರ್-43.06

ನರಗುಂದ–27250 ಹೆಕ್ಟೇರ್–1050 ಹೆಕ್ಟೇರ್-47.82

ರೋಣ–26423 ಹೆಕ್ಟೇರ್–20456 ಹೆಕ್ಟೇರ್–52.55

ಶಿರಹಟ್ಟಿ-26105 ಹೆಕ್ಟೇರ್–2280 ಹೆಕ್ಟೇರ್–24.12

ಲಕ್ಷಮೆಶ್ವರ–27656 ಹೆಕ್ಟೇರ್– 4692 ಹೆಕ್ಟೇರ್ – 28

ಗಜೇಂದ್ರಗಡ–19653 ಹೆಕ್ಟೇರ್-3318 ಹೆಕ್ಟೇರ್-19.32

NDRF ಮಾನದಂಡ ಅನ್ವಯ ಬೆಳೆ ಹಾನಿ ವರದಿ ಸಲ್ಲಿಸಲಾಗಿದ್ದು, ಪರಿಹಾರ ಮಂಜೂರಿನ ನಿರೀಕ್ಷೆಯಲ್ಲಿದ್ದೇವೆ. ಆಡಳಿತಾತ್ಮಕ ಮತ್ತು ಯಾವುದೇ ತಾಂತ್ರಿಕ ತೋಡಕು ಇಲ್ಲ. ರೈತರಿಗೆ ಆದಷ್ಟು ಬೇಗ ಪರಿಹಾರ ಲಭಿಸುವ ಭರವಸೆ ಇದೆ. – ವೈಶಾಲಿ ಎಂ.ಎಲ್, ಜಿಲ್ಲಾಧಿಕಾರಿ, ಗದಗ

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ಪರಿಹಾರ ಹಣ ಯಾವಾಗ ಬರುತ್ತದೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಪರಿಹಾರ ಹಣ ಯಾವಾಗ ಬರುತ್ತದೆ ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *