50% agricultural subsidy for purchasing land :- ನಮಸ್ಕಾರ, ರೈತ ಬಾಂಧವರೇ ಇಂದಿನ ದಿನ ನಾವು “ಭೂ ಒಡೆತನ ಯೋಜನೆ ” ಅಡಿಯಲ್ಲಿ ರೈತರಿಗೆ ಕೃಷಿ ಭೂಮಿಯನ್ನು ಖರೀದಿಸಲು 50% ಸಹಾಯಧನವನ್ನು ನೀಡಲಾಗುತ್ತಿದೆ. ನಿಮಗೆ ಎಷ್ಟು ಸಬ್ಸಿಡಿ ದೊರೆಯಲಿದೆ?? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕ?? ಅಗತ್ಯ ದಾಖಲೆಗಳೇನು?? ಹಾಗೂ ನಿಮಗೆ ಎಷ್ಟು ಸಹಾಯಧನ ಸಿಗುತ್ತದೆ. ಈ ಲೇಖನವನ್ನು ಸಂಪೂರ್ಣವಾಗಿ ತಿಳಿದುಕೊಂಡು ತಪ್ಪದೇ ಈ ಅರ್ಥಪೂರ್ಣವಾದ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ 🙏🏻..
ಸಮಾಜ ಕಲ್ಯಾಣ ಇಲಾಖೆವತಿಯಿಂದ ವಿವಿಧ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಕಲ್ಯಾಣ ನಿಗಮಗಳ ಮೂಲಕ (ಭೂ ಒಡೆತನ ಯೋಜನೆ) ಯಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಸಹಾಯಧನದಲ್ಲಿ ಜಮೀನು ಖರೀದಿಸಲು ಅರ್ಜಿ ಯನ್ನು ಕರೆಯಲಾಗಿದೆ.
ಸಮಾಜ ಕಲ್ಯಾಣ ಇಲಾಖೆವತಿಯಿಂದ ವಿವಿಧ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಕಲ್ಯಾಣ ನಿಗಮಗಳ ಮೂಲಕ “ಭೂ ಒಡೆತನ ಯೋಜನೆ” ಯಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಸಹಾಯಧನದಲ್ಲಿ ಜಮೀನು ಖರೀದಿಸಲು ಅರ್ಜಿ ಈಗಾಗಲೇ ಆಹ್ವಾನ ಮಾಡಲಾಗಿದೆ.
ಭೂ ಒಡೆತನ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಈ ಯೋಜನೆ ಪಡೆದುಕೊಳ್ಳಲು ಕೊಡಬೇಕಾದ ಅಗತ್ಯ ದಾಖಲಾತಿಗಳೇನು? ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಕಂಡಂತೆ ಓದಿ 👇🏻.
ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿ SC ಮತ್ತು ಪರಿಶಿಷ್ಟ ಪಂಗಡದ ST ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರನ್ನು ಭೂ ಒಡೆಯರನ್ನಾಗಿ ಮಾಡುವ ಉದ್ದೇಶದಿಂದ ಜಾರಿಗೆ ತರಲಾಗಿದ್ದು. ಖರೀದಿಸುವ ಜಮೀನು ಫಲಾಪೇಕ್ಷಿಯ ವಾಸಿಸುವ ಸ್ಥಳದಿಂದ 10 ಕಿಮೀ ವ್ಯಾಪ್ತಿಯಲ್ಲಿರಬೇಕು.
ಒಟ್ಟು ಯೋಜನೆಯ ಘಟಕ ವೆಚ್ಚದ ಮಿತಿಯೊಳಗೆ ಕನಿಷ್ಟ 2.00 ಎಕರೆ ಖುಸ್ಕಿ 1.00 ಎಕರೆ ನೀರಾವರಿ, 1/2 ಎಕರೆ ಭಾಗಾಯ್ತು ಅಂದರೆ ತೋಟದ ಜಮೀನನ್ನು ಖರೀದಿಸಿ ಭೂ-ರಹಿತ ಮಹಿಳಾ ಕೃಷಿ ಕಾರ್ಮಿಕರ ಹೆಸರಿನಲ್ಲಿ ನೊಂದಾಯಿಸಲಾಗುತ್ತದೆ ಎಂದು ಈ ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿಯನ್ನು ನೀಡುವ ಅಧಿಕಾರವನ್ನು ಆಯಾ ಜಿಲ್ಲೆಯಲ್ಲಿನ ಜಿಲ್ಲಾಧಿಕಾರಿಗಳಿಗೆ ನೀಡಲಾಗಿರುತ್ತದೆ.
ಸಹಾಯಧನ ಹೇಗೆ ಪಡೆಯಬಹುದು?
ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮತ್ತು ಜಿಲ್ಲೆಗಳಿಗೆ ಸೀಮಿತಗೊಂಡಂತೆ ಈ ಯೋಜನೆಯಡಿ ಒಟ್ಟೂ ಘಟಕ ವೆಚ್ಚವನ್ನು 25.00 ಲಕ್ಷ ರೂ ಎಂದು ನಿಗದಿಪಡಿಸಲಾಗಿರುತ್ತದೆ ಉಳಿದಂತೆ ಇತರೆ ಇನ್ನುಳಿದ 26 ಜಿಲ್ಲೆಗಳಲ್ಲಿ ಘಟಕ ವೆಚ್ಚವನ್ನು 20.00 ಲಕ್ಷಗಳಿಗೆ ನಿಗದಿಪಡಿಸಲಾಗಿರುತ್ತದೆ.
ಒಟ್ಟು ಘಟಕ ವೆಚ್ಚದಲ್ಲಿ ಶೇ.50 ರಷ್ಟು ಸಹಾಯಧನ ನೀಡಲಾಗುತ್ತದೆ ಉದಾಹರಣೆಗೆ ಜಮೀನು ಖರೀದಿಸಲು 20 ಲಕ್ಷ ವೆಚ್ಚವಾದಲ್ಲಿ 10 ಲಕ್ಷವನ್ನು ಸರಕಾರ ಭರಿಸುತ್ತದೆ ಮತ್ತು ಉಳಿದ ಶೇ.50 ರಷ್ಟು ಹಣವನ್ನು ಅವಧಿ ಸಾಲ ಒದಗಿಸಲಾಗುತ್ತದೆ. ಅವಧಿ ಸಾಲವನ್ನು ನಿಗಮದಿಂದಲೇ ಭರಿಸಲಾಗುತ್ತದೆ. ಇದಕ್ಕೆ ವಾರ್ಷಿಕ ಶೇ.6ರ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ. ಸಾಲ ಮತ್ತು ಬಡ್ಡಿಯನ್ನು 10 ವರ್ಷಗಳ ಅವಧಿಯಲ್ಲಿ ವಾರ್ಷಿಕ ಸಮ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ.
ಜಮೀನಿನ ಹಣವನ್ನು ಯಾರು ನಿಗದಿ ಮಾಡುತ್ತಾರೆ?
ಜಮೀನು ಮಾರಾಟ ಮಾಡುವ ಭೂ ಮಾಲೀಕರು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬಾರದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು ಜಮೀನಿನ ದರವನ್ನು ನಿಗದಿಪಡಿಸುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು ಯಾವುವು?
1. ಪರಿಶಿಷ್ಟ ಜಾತಿ/ಪಂಗಡದವರಾಗಿದ್ದು, ಜಾತಿ ಪ್ರಮಾಣಪತ್ರ ಹೊಂದಿರಬೇಕು.
2. ಭೂ-ರಹಿತ ಮಹಿಳಾ ಕೃಷಿ ಕಾರ್ಮಿಕ ಪ್ರಮಾಣಪತ್ರ ಹೊಂದಿರಬೇಕು.
3. ಆಧಾಯ ಪ್ರಮಾಣ ಪತ್ರ.(ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ ರೂ.1.5 ಲಕ್ಷ, ನಗರ ಪ್ರದೇಶದಲ್ಲಿ ರೂ.2.00 ಲಕ್ಷ)
4. ವಯೋಮಿತಿ ಕನಿಷ್ಠ 21 ಹಾಗೂ ಗರಿಷ್ಠ 50 ವರ್ಷ.
5. ಕುಟುಂಬದ ಪಡಿತರ ಚೀಟಿ.
6. ಬ್ಯಾಂಕ್ ಪಾಸ್ ಬುಕ್ ಪ್ರತಿ.
7. ಆಧಾರ್ ಕಾರ್ಡ್ ಪ್ರತಿ.
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಆಸಕ್ತ ಅರ್ಹ ಅರ್ಜಿದಾರರು ನಿಗದಿಪಡಿಸಿದ ಕೊನೆಯೆ ದಿನಾಂಕದ ಒಳಗಾಗಿ ಸೇವಾ ಸಿಂಧು:
ಅರ್ಜಿ ಸಲ್ಲಿಸಲು ಮೊದಲು ಕೆಳಗೆ ಕೊಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ 👇🏻 https://sevasindhu.karnataka.gov.in/Sevasindhu/Kannada?ReturnUrl=%2F
ವೆಬ್ಬೆಟ್ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬವುದು ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ , ಕಂಪ್ಯೂಟರ್ ಸೆಂಟರ್ ಗಳಿಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.
➡️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ??
ಈಗಾಗಲೇ ಇಲಾಖೆಯಿಂದ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಲು 29 ನವೆಂಬರ್ 2023 ಕೊನೆಯ ದಿನಾಂಕವಾಗಿದೆ.
ಅರ್ಜಿ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ.
ಅರ್ಜಿದಾರರು ಅರ್ಜಿ ಸಲ್ಲಿಸಿದ ಬಳಿಕ ಇಲ್ಲಿ ಕ್ಲಿಕ್ ಮಾಡಬೇಕು :- https://kmvstdcl.karnataka.gov.in/info-2/Land+Purchase+Scheme/kn
ನೀವು ಸಲ್ಲಿಸಿದ ಅರ್ಜಿ ಯಾವ ಹಂತದಲ್ಲಿದೆ ಎಂದು ಸೇವಾ ಸಿಂಧು ಪೋರ್ಟ ಭೇಟಿ ಮಾಡಿ ತಿಳಿದುಕೊಳ್ಳಬವುದು ಒಂದೊಮ್ಮೆ ನೀವೆನಾದರು ಗ್ರಾಮ್ ಒನ್ ಅಥವಾ ಕರ್ನಾಟಕ ಒನ್ ಕೇಂದ್ರದಿಂದ ಅರ್ಜಿ ಸಲ್ಲಿದಲ್ಲಿ ಆಯಾ ವೆಬ್ಬೆಟ್ ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬವುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ನಂಬರನ್ನು ಸಂಪರ್ಕಿಸಿ ಕಲ್ಯಾಣ ಮಿತ್ರ 24×7 ಸಹಾಯವಾಣಿ: >9482300400
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/HLCYrALalJpLbeEMnLRyZB
ಭೂ ಒಡೆತನ ಯೋಜನೆ 50% ಸಹಾಯದನ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಭೂ ಒಡೆತನ ಯೋಜನೆ 50% ಸಹಾಯದನ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.