jowar price increased by Rs 8000 per quintal :-

ಜೋಳದ ದರ ಕ್ವಿಂಟಾಲ್‌ಗೆ 8000 ರೂ.ಗೆ ಏರಿಕೆ, ಒಂದೇ ವರ್ಷದಲ್ಲಿ ರೇಟ್‌ ಡಬಲ್‌, ರೊಟ್ಟಿ ಪ್ರಿಯರಿಗೆ ಟ್ರಬಲ್‌!

ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ದಿನ ನಾವು ಜೋಳದ ದರ ಒಂದು ಕ್ವಿಂಟಲ್ ಗೆ 8,000 ಏರಿಕೆಯಾಗಿದೆ. ಅದರ ಬಗ್ಗೆ ಬರೆದಿರುವ ಈ ಸಂಪೂರ್ಣ ಲೇಖನವನ್ನು ಕೊನೆಯವರೆಗೂ ಓದಿ ಹಾಗೂ ತಪ್ಪದೆ ಈ ಲೇಖನವನ್ನು ಶೇರ್ ಮಾಡಿ 🙏🏻..

ಮಾರುಕಟ್ಟೆಯಲ್ಲಿ ಬಿಳಿ ಜೋಳದ ದರ ಗಗನಕ್ಕೇರಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜೋಳದ ದರ ದುಪ್ಪಟ್ಟು ಏರಿಕೆಯಾಗಿದೆ. ಆದರೆ, ಈ ದರ ಹೆಚ್ಚಳದ ಲಾಭ ಅತ್ತ ಬೆಳೆದವರಿಗೂ ಸಿಗುತ್ತಿಲ್ಲ. ಇತ್ತ ರೊಟ್ಟಿ ಪ್ರಿಯರಿಗೂ ಬೆಲೆ ಹೆಚ್ಚಳದ ಶಾಕ್‌ ತಟ್ಟಿದೆ. ಎಪಿಎಂಸಿಗೆ ಬಿಳಿ ಜೋಳದ ಆವಕ ಕಡಿಮೆಯಾಗಿದ್ದು, ಕಲಬುರಗಿಯಲ್ಲಿ ಕ್ವಿಂಟಾಲ್‌ ಜೋಳ ದಾಖಲೆಯ 8000 ರೂ.ವರೆಗೆ ಮಾರಾಟವಾಗುತ್ತಿದೆ.

ವೆಂಕಟೇಶ ಏಗನೂರು ಕಲಬುರಗಿ

ಮಾರುಕಟ್ಟೆಯಲ್ಲಿ ಬಿಳಿ ಜೋಳದ ರೇಟ್‌ ಆಕಾಶದೆತ್ತರಕ್ಕೆ ಜಿಗಿದಿದೆ. ಹಿಂದಿನ ವರ್ಷಕ್ಕಿಂತ ಜೋಳದ ದರ ಡಬಲ್‌ ಏರಿಕೆಯಾಗಿದೆ. ಆದರೆ, ದರ ಹೆಚ್ಚಳದ ಲಾಭ ಅನ್ನದಾತರಿಗೂ ಸಿಗುತ್ತಿಲ್ಲ. ಆದರೆ ರೊಟ್ಟಿ ಪ್ರಿಯರಿಗೆ ಬೆಲೆ ಹೆಚ್ಚಳದ ಶಾಕ್‌ ತಟ್ಟಿದೆ.

ಪ್ರತಿ ವರ್ಷ ಸಾಮಾನ್ಯವಾಗಿ 2,500 ರಿಂದ 3,000 ರೂ.ಗೆ ಕ್ವಿಂಟಾಲ್‌ ಜೋಳ ಮಾರಾಟವಾಗುತಿತ್ತು. ಆದರೆ, ಈ ಬಾರಿ ಗರಿಷ್ಠ 8,000 ರೂ.ವರೆಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಜೋಳದ ದರ ಮತ್ತಷ್ಟು ಏರಿಕೆಯಾಗುವ ಭೀತಿಯೂ ಎದುರಾಗಿದೆ.

ಬಹುತೇಕ ಹಿಂಗಾರು ಬೆಳೆಯಾಗಿ ಜೋಳವನ್ನು ರೈತರು ಬೆಳೆಯುತ್ತಾರೆ. ಆದರೆ, ಪ್ರಸ್ತುತ ಮಾರುಕಟ್ಟೆಗೆ ಜೋಳದ ಆವಕ ಕಡಿಮೆಯಾಗಿದ್ದರಿಂದ ಸ್ಟಾಕ್‌ ಇಟ್ಟ ರೈತರು ಮಾತ್ರ ಮಾರುಕಟ್ಟೆಗೆ ತರುತ್ತಿದ್ದಾರೆ. ಇದರಿಂದ ಜೋಳ ತುಟ್ಟಿಯಾಗಿದೆ. ಈ ಬಾರಿ ಹಿಂಗಾರು ಬಹುತೇಕ ಕೈ ಕೊಟ್ಟಿದ್ದರಿಂದ ಮತ್ತಷ್ಟು ಜೋಳದ ದರ ಹೆಚ್ಚಾಗುವ ಆತಂಕವಿದ್ದು, ಉತ್ತರ ಕರ್ನಾಟಕ ರೊಟ್ಟಿ ಪ್ರಿಯರಿಗೆ ಬೆಲೆ ಏರಿಕೆಯಿಂದ ಜೇಬಿಗೆ ಕತ್ತರಿ ಬೀಳಲಿದೆ.

ದಾಖಲೆ ಬರೆದ ಬಿಳಿ ಜೋಳದ ದರ, ಕೆಜಿಗೆ 60-65 ರೂ.ಗೆ ಮಾರಾಟ, ತಲೆ ಮೇಲೆ ಕೈ ಹೊತ್ತ ಗ್ರಾಹಕರು

ಜೋಳದ ಏರಿಯಾ ಕಡಿಮೆ👇🏻

ಬಹುತೇಕ ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಜೋಳ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಜೋಳ ಬೆಳೆಯುವ ಬದಲು ವಾಣಿಜ್ಯ ಬೆಳೆಗಳಾದ ತೊಗರಿ, ಉದ್ದು, ಹೆಸರು, ಹತ್ತಿ ಬೆಳೆದರೆ ಸಾಕು ಹೆಚ್ಚಿನ ಬೆಲೆ ಸಿಗುತ್ತದೆ ಎಂಬ ಅಭಿಪ್ರಾಯ ರೈತರಲ್ಲಿ ಮೂಡಿದೆ. ಇದರಿಂದ ಪ್ರತಿ ವರ್ಷ ಜೋಳ ಬೆಳೆಯುವ ಏರಿಯಾ ಕಡಿಮೆಯಾಗುತ್ತಿದೆ.

ಜೋಳ ಬೆಳೆದರೆ ರಿಸ್ಕ್‌:-

ಜೋಳ ಹಿಂಗಾರು ಬೆಳೆ ಆಗಿರುವುದರಿಂದ ಈಗ ಬಿತ್ತನೆ ಆರಂಭವಾಗುತ್ತದೆ. ಬಹುತೇಕ ರೈತರು ಮನೆಗೆ ಬೇಕಾದಷ್ಟು ಜೋಳ ಮಾತ್ರ ಬಿತ್ತನೆ ಮಾಡುತ್ತಿದ್ದಾರೆ. ಜೋಳ ಹಾಕಿದರೆ ಬಿತ್ತನೆ ಖರ್ಚು, ಲೇಬರ್‌ ಖರ್ಚು, ಕಟಾವ್‌ ಖರ್ಚು, ಗೂಡು ಹಾಕಿ, ತೆನಿ ಕತ್ತರಿಸಬೇಕು. ಬಳಿಕ ಮಷಿನ್‌ಗೆ ಹಾಕಬೇಕು ಎಂಬ ರಿಸ್ಕ್‌ ಇದೆ. ಇದರಿಂದ ಕ್ವಿಂಟಾಲ್‌ಗೆ ಗರಿಷ್ಠ 4 ರಿಂದ 5 ಸಾವಿರ ಸಿಕ್ಕರೂ ಖರ್ಚು 3 ರಿಂದ 4 ಸಾವಿರ ರೂ. ಬರುತ್ತದೆ ಎಂಬ ಅಭಿಪ್ರಾಯ ಇದೆ. ಇದರಿಂದ ಜೋಳ ಬೆಳೆಯಲು ಹಿಂದೇಟು ಹಾಕುದ್ದೇ ಬೆಲೆ ಏರಿಕೆ ಕಾರಣ ಎನ್ನುತ್ತಾರೆ ಅಧಿಕಾರಿಗಳು.

ರೊಟ್ಟಿ ಪ್ರಿಯರಿಗೆ ಪೆಟ್ಟು

ಬಹುತೇಕ ಉತ್ತರ ಕರ್ನಾಟಕದ ಜನರು ರೊಟ್ಟಿ ಪ್ರಿಯರು. ಇದರಿಂದ ಬಿಳಿ ಜೋಳ ಬೆಲೆ ಎಷ್ಟೇ ಹೆಚ್ಚಾದರೂ ಖರೀದಿಸುವ ಅನಿವಾರ್ಯತೆ ಜನರಿಗಿದೆ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ 2,500ರಿಂದ 3,000 ರೂ.ವರೆಗೆ ಕ್ವಿಂಟಾಲ್‌ ಬಿಳಿ ಜೋಳ ಮಾರಾಟ ಆಗುತ್ತಿತ್ತು. ಆದರೆ, ಈಗ ಇದರ ಬೆಲೆ ಡಬಲ್‌ ಆಗಿದ್ದರಿಂದ ರೊಟ್ಟಿ ಬಹಳ ತುಟ್ಟಿಯಾಗಿದೆ. ಖಾನಾವಳಿಯಲ್ಲಿ ಒಂದು ರೊಟ್ಟಿ ಬೆಲೆ 2ರಿಂದ 3 ರೂ. ಹೆಚ್ಚಾಗಿದೆ. ಪ್ರತಿ ಊಟದ ಬೆಲೆಯಲ್ಲಿಯೂ ಏರಿಕೆಯಾಗಿದೆ.

ಪಡಿತರದಾರರಿಗೂ ಜೋಳ ವಿತರಣೆ ಬಂದ್‌

ಪಡಿತರದಾರರಿಗೆ ಈ ಹಿಂದೆ ಜೋಳವೂ ವಿತರಿಸಲಾಗುತಿತ್ತು. ಆದರೆ, ಈ ಬಾರಿ ಜೋಳ ಹೆಚ್ಚಿನ ಸ್ಟಾಕ್‌ ಇರದ ಹಿನ್ನೆಲೆಯಲ್ಲಿ ಜೋಳ ವಿತರಣೆ ಬಂದ್‌ ಮಾಡಲಾಗಿದೆ. ಇದರ ಬದಲಿಗೆ ಅಕ್ಕಿಯೇ ವಿತರಿಸಲಾಗುತ್ತಿದೆ.

ಬಿಳಿ ಜೋಳ ಬೆಳೆಯುವ ಪ್ರದೇಶ ಕಡಿಮೆ ಆಗುತ್ತಿದೆ. ಜತೆಗೆ ಹೆಚ್ಚು ಬೆಲೆ ಸಿಗುವ ಬೆಳೆಗಳತ್ತ ರೈತರು ಮುಖ ಮಾಡುತ್ತಿದ್ದಾರೆ. ಜೋಳದಲ್ಲಿ ಹೆಚ್ಚಿನ ಲಾಭ ಬರಲ್ಲ ಎಂಬ ದೃಷ್ಟಿಕೋನದಿಂದ ಅವರು ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ಅನಿವಾರ್ಯವಾಗಿ ಬೆಲೆ ಹೆಚ್ಚಾಗಿರಬಹುದು ಎನ್ನುತ್ತಾರೆ ಕಲಬುರಗಿಯ ಜಂಟಿ ಕೃಷಿ ನಿರ್ದೇಶಕ ಸಮದ್‌ ಪಾಟೀಲ್‌.

ಕೃಷಿ ಉತ್ಪನ್ನ ಮಾರುಕಟ್ಟೆಗೆ ಜೋಳ ಕಡಿಮೆ ಬರುತ್ತಿದೆ. ಇದರಿಂದ ಬೆಲೆ ಹೆಚ್ಚಾಗಿದೆ. ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಅನಿವಾರ್ಯ. ಕಳೆದ ವರ್ಷಕ್ಕಿಂತ ಈ ವರ್ಷ ಜೋಳದ ಬೆಲೆ ಡಬಲ್‌ ಆಗಿದೆ ಎನ್ನುತ್ತಾರೆ ಕಲಬುರಗಿಯ ವರ್ತಕ ಶ್ರೀನಿವಾಸ್‌.

ಜೋಳದ ಸಂಗ್ರಹ ಕಡಿಮೆ ಆಗಿದೆ. ರಾಯಚೂರು, ಬಳ್ಳಾರಿಯಲ್ಲಿ ಸಂಗ್ರಹಿಸಿ ಕಲಬುರಗಿಗೆ ಹಂಚಿಕೆ ಮಾಡಲಾಗುತ್ತಿತ್ತು. ಈಗ ಕಡಿಮೆ ಸಂಗ್ರಹವಿದ್ದರಿಂದ ಪಡಿತರದಲ್ಲಿ ಜೋಳ ವಿತರಿಸುತ್ತಿಲ್ಲ. ಜೋಳದ ಬದಲಿಗೆ ಅಕ್ಕಿಯೇ ವಿತರಿಸುತ್ತಿದ್ದೇವೆ ಎನ್ನುತ್ತಾರೆ ಕಲಬುರಗಿ

ಆಹಾರ ಇಲಾಖೆ ಡಿಡಿ ಶಾಂತಗೌಡ ಗುಣಕಿ.

ಕಲಬುರಗಿ ಮಾರುಕಟ್ಟೆಯ ಜೋಳದ ದರ:-

ದಿನಾಂಕ ಕ್ವಿಂಟಾಲ್‌ಗೆ ದರ

ನವೆಂಬರ್‌ 1) 7,000 ರೂ.

ನವೆಂಬರ್‌ 2) 8,000 ರೂ.

ನವೆಂಬರ್‌ 3) 7,800 ರೂ.

ನವೆಂಬರ್‌ 4) 7,500 ರೂ.

ನವೆಂಬರ್‌ 6) 7,000 ರೂ.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ಜೋಳದ ದರ ಗಗನಕ್ಕೆ ಏರಿಕೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಗಗನಕ್ಕೆ ಏರಿದ ಜೋಳದ ಬೆಲೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ

> ರೈತರು ಬರ ಪರಿಹಾರ ಪಡೆಯಲು ಇಲ್ಲಿದೆ ಮಹತ್ವದ ಮಾಹಿತಿ 👇🏻👇🏻

➡️ ರೈತರಿಗೆ ಎಷ್ಟು ಎಕರೆಗೆ ಎಷ್ಟು ಬರ ಪರಿಹಾರ ಬರುತ್ತದೆ?? ನಿಮಗೆ ಬರ ಪರಿಹಾರ ಬೇಕೆಂದರೆ ಈ ಕೆಲಸವನ್ನು ತಪ್ಪದೇ ಮಾಡಿರಿ ನಿಮಗೆ 👇🏻 https://krushivahini.com/2023/11/08/this-work-is-mandatory-to-get-flood-relief/

➡️ ಈ ಪಟ್ಟಿಯಲ್ಲಿ ಇರುವ ರೈತರಿಗೆ ಬರ ಪರಿಹಾರ ಬೆಳೆ ಹಾನಿ ಹಾಗೂ ಬೆಳೆ ವಿಮೆ ಹಣ ಜಮೆಯಾಗುವುದಿಲ್ಲ ನಿಮ್ಮ ಹೆಸರನ್ನು ಇಲ್ಲಿ ನೋಡಿ https://krushivahini.com/2023/11/08/drought-relief-not-coming-to-these-people/

Leave a Reply

Your email address will not be published. Required fields are marked *