500 incentive per tonne of sugarcane :- ಒಂದೊಂದು ಸಕ್ಕರೆ ಕಾರ್ಖಾನೆಯವರು ಒಂದೊಂದು ದರ ನಿಗದಿ ಮಾಡುತ್ತಿದ್ದಾರೆ. ಇಳುವರಿ ಕಡಿಮೆ ತೋರಿಸುತ್ತಿದ್ದಾರೆ. ಕಬ್ಬು ಕಟಾವು ವಿಧಾನದಿಂದಲೂ ಇಳುವರಿ ಕಡಿಮೆ ಬರುತ್ತಿದೆ. ಅದಕ್ಕಾಗಿ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹ 500 ಪ್ರೋತ್ಸಾಹಧನ ನೀಡಬೇಕು ಮತ್ತು ಎಲ್ಲ ಕಾರ್ಖಾನೆಗಳು ಪ್ರತಿ ಟನ್‌ಗೆ ₹3500 ದರ ನೀಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡಾಪುರ ಮತ್ತು ಈರಣ್ಯ ಮಾಕನೂರ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ರೈತರೊಂದಿಗೆ ನಡೆದ ಸಭೆಯಲ್ಲಿ ಸಕ್ಕರೆ : ಸಚಿವ ಶಿವಾನಂದ ಪಾಟೀಲ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಕಬ್ಬು ಬೆಳೆಯನ್ನು ತೋರಿಸಿ ಮನವಿ ಮಾಡಿದರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, `ಗ್ಯಾಂಗ್‌ಮನ್ ಅಥವಾ ಯಂತ್ರ ಯಾವುದರಿಂದ ಕಬ್ಬು ಕಟಾವು ಮಾಡಬೇಕು ಎಂಬುದನ್ನು ರೈತರೇ ನಿರ್ಧರಿಸಬೇಕು. 12 ತಾಸಿನೊಳಗೆ ಕಬ್ಬು ಕಟಾವು ಮಾಡುವಂತೆ ಕಾರ್ಖಾನೆಯವರಿಗೆ ಸೂಚಿಸಬೇಕು. 3,150 ಎಫ್.ಆರ್.ಪಿ ದರಕ್ಕಿಂತ ಕಡಿಮೆ ದರಕ್ಕೆ ಕಬ್ಬನ್ನು ಕೊಡಬೇಡಿ, ರೈತರು ಯಾವು ಕಾರ್ಖಾನೆಗೆ ಬೇಕಾದರೂ ಕಬ್ಬು ಮಾರಾಟ ಮಾಡಲು ಸ್ವತಂತ್ರರಾಗಿದ್ದಾರೆ. ಸರ್ಕಾರ: ನಿಮ್ಮೊಂದಿಗಿದೆ ಎಂದು ಭರವಸೆ ನೀಡಿದರು.
ಕಬ್ಬು ಹಿಂದಿನ ವರ್ಷ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿರುವ ಕೆಲವು ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅಡಕೆ ಬೆಳೆಗಾರರ ಪರಿಹಾರ ತಹಶೀಲ್ದಾರ್ ಲಾಗಿನ್ ನಲ್ಲೇ ಉಳಿದಿದೆ. ಈ ತಾಂತ್ರಿಕ ಸಮಸ್ಯೆ ಬಗೆಹರಿಸಿ, ರೈತರಿಗೆ ಪರಿಹಾರವನ್ನು ಖಾತೆಗಳಿಗೆ ಜಮಾ ಮಾಡಬೇಕು. ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕೊಡಬಾರದು ಎಂಬ ಸರ್ಕಾರದ ಆದೇಶ ಸರಿಯಲ್ಲ. ಸೋಲಾರ್ ಪಂಪ್‌ಸೆಟ್ ಹಾಕಿಕೊಳ್ಳುವುದುರೈತರಿಗೆ ಹೊರೆಯಾಗಲಿದೆ. ಆದ್ದರಿಂದ ಆಯ್ಕೆಯನ್ನು ರೈತರಿಗೇ ಬಿಡಬೇಕು ಎಂದು ಮನವಿ ಮಾಡಿದರು.
ಭೂ ಪರಿಹಾರ ನೀಡಿ: ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಂಚಛೇರ ಮಾತನಾಡಿ, ಹೊಲಕ್ಕೆ ಸರ್ಕಾರದಿಂದ ದಾರಿ ನಿರ್ಮಿಸಲು ಭೂ ಪರಿಹಾರ ಕೊಟ್ಟುದಾರಿ ಮಾಡುವಂತಾಗಬೇಕು, ಭೂಮಿ ಸಾಫ್ಟ್‌ವೇರ್ ಮೊದಲಿದ್ದಂತೆ ಆಗಬೇಕು. ಬೆಳೆ ಹಾನಿ ತಂತ್ರಾಂಶವನ್ನು ಆಪರೇಟ್ ಮಾಡಲು ಸಂಬಂಧಪಟ್ಟ ಇಲಾಖೆಗೆ ತರಬೇತಿಯೊಂದಿಗೆ ವಿರ್ದೇಶನ ನೀಡಬೇಕು. ಬೆಳೆ : ಸಮೀಕ್ಷೆಯನ್ನು ಗ್ರಾಮಲೆಕ್ಕಾಧಿಕಾರಿಗಳಿಗೆ ತರಬೇತಿ ಕೊಟ್ಟು ಬೆಳೆ ಸಮೀಕ್ಷೆಮಾಡುವಂತಗಬೇಕು.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ರಾಮಣ್ಣ ಮೂಲಸೌಲಭ್ಯ ಒದಗಿಸಿ ಪಂಚಾಯಿತಿ ಮಟ್ಟದಲ್ಲಿ ರೈತರ ಕಾರ್ಯ ನಿರ್ವಹಿಸುವಂತಾಗಬೇಕು ಎಂದು ಮನವಿ ಮಾಡಿದರು.
ರೈತ ಮುಖಂಡರಾದ ಗಂಗಣ್ಣ ಎಲಿ, ರುದ್ರಗೌಡ ಕಾಡನಗೌಡ, ಮರಿಗೌಡ ಪಾಟೀಲ, ದಿಳ್ಳೆಪ್ಪ ಮಣ್ಣೂರ, ಶಿವಬಸಪ್ಪ ಗೋವಿ, ಸುರೇಶ್ ಚಲವಾದಿ, ಶಿವಯೋಗಿ ಹೊಸಗೌಡ್ರ, ಮುತ್ತಪ್ಪ ಗುಡಗೇರಿ, ಜಾನ್ ಪುನಿತ್, ಪಕ್ಕಿರೆಶ ಅಜಗೊಂಡ, ಮಾಲತೇಶ ಪೂಜಾರ, ಚನ್ನಪ್ಪ ಮರಡೂರ, ರಾಜು ಕರ್ಲಗಟ್ಟ ಇದ್ದರು.
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ಮತ್ತೆ ಬರಪೀಡಿತ ತಾಲೂಕುಗಳ ಪಟ್ಟಿಗೆ ಏಳು ತಾಲೂಕುಗಳು ಸೇರ್ಪಡೆ! 324 ಕೋಟಿ ಬರ ಪರಿಹಾರ ಘೋಷಣೆ ಮಾಡಲಾಗಿದೆ ನಿಮ್ಮ ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ ಇಲ್ಲಿ ನೋಡಿ
https://krushivahini.com/2023/11/0/addition-of-7-talukas-affected-by-drought/