Drought situation study :- ಬೆಂಗಳೂರು: ಬರ ಪರಿಸ್ಥಿತಿ ಅಧ್ಯಯನಕ್ಕೆ ನ.3 ರಿಂದ ಬಿಜೆಪಿಯ 17 ತಂಡಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, ನ.10 ರಂದು ವರದಿಯನ್ನು ಬಿಡುಗಡೆ ಮಾಡಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.

ಪ್ರತಿಯೊಂದು ತಂಡವು ತಲಾ ಎರಡು ಜಿಲ್ಲೆಗಳಿಗೆ ಭೇಟಿ ನೀಡಲಿವೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇಲ್ಲಿಯವರೆಗೂ ನಿಮಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ??

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಹಳ್ಳಿಯ ಬೆಳೆ ಹಾನಿ ಜಮೆ ಆಗಿರುವ ರೈತರ ಪಟ್ಟಿ ಕಾಣುತ್ತದೆ.

ಅದೇ ರೀತಿಯಾಗಿ ಈ ಮುಖಪುಟದಲ್ಲಿ ಕಾಣುವ ಹಾಗೆ ಕೊನೆಯಲ್ಲಿ ಕಾಣುವ view status ಮೇಲೆ ಒತ್ತಿದರೆ ನಿಮಗೆ ಬೆಳೆ ಹಾನಿ ಹಣ ಸಂದಾಯ ಆಗಿರುವ ಸಂಪೂರ್ಣ ವಿವರ ತಿಳಿಯುತ್ತದೆ..

ಬರಪೀಡಿತ ತಾಲೂಕುಗಳ ಅಂತಿಮ ಪಟ್ಟಿ

ಬಿ.ಎಸ್.ಯಡಿಯೂರಪ್ಪ ನೇತೃತ್ವದ ತಂಡ ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ನಳಿನ್‌ಕುಮಾರ್ ಕಟೀಲ್‌ ತಂಡವು ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಭೇಟಿ ಕೊಡಲಿದೆ. ಸಿ.ಟಿ.ರವಿ ನೇತೃತ್ವದ ತಂಡವು ಕೋಲಾರ ಮತ್ತು ಚಿಕಬಳಾಪುರಕ್ಕೆ ತೆರಳಲಿದೆ ಎಂದರು.

ಕೆ.ಎಸ್.ಈಶ್ವರಪ್ಪ ತಂಡ ಬಳ್ಳಾರಿ, ಕೊಪ್ಪಳ, ಡಿ.ವಿ.ಸದಾನಂದಗೌಡರ ತಂಡ ಮಂಡ್ಯ, ಹಾಸನ, ಗೋವಿಂದ ಕಾರಜೋಳ ತಂಡ ಧಾರವಾಡ, ವಿಜಯನಗರ, ಬಸನಗೌಡ ಪಾಟೀಲ ಯತ್ನಾಳರ ತಂಡ ಮೈಸೂರು, ಚಾಮರಾಜನಗರಕ್ಕೆ ಭೇಟಿ ನೀಡಲಿದೆ.

ಬಿ.ವೈ.ವಿಜಯೇಂದ್ರ, ಅರವಿಂದ ಬೆಲ್ಲದ, ಶ್ರೀರಾಮುಲು, ಅರವಿಂದ ಲಿಂಬಾವಳಿ, ಆರಗ ಜ್ಞಾನೇಂದ್ರ, ವಿ. ಸುನೀಲ್‌ಕುಮಾರ್‌, ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್.ಅಶೋಕ, ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ತಂಡಗಳು ವಿವಿಧ ಜಿಲ್ಲೆಗಳಿಗೆ ಹೋಗಲಿವೆ ಎಂದು ವಿವರ ನೀಡಿದರು.

“ನ.10 ರಂದು ವರದಿ ಬಿಡುಗಡೆ ಮಾಡಿದ ಬಳಿಕ ಸರ್ಕಾರಕ್ಕೂ ಅದನ್ನು ಸಲ್ಲಿಸುತ್ತೇವೆ. ಬರದ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ವಿಶೇಷ ಸಮಯ ನಿಗದಿ ಮಾಡಲು ಬೇಡಿಕೆ ಸಲ್ಲಿಸಲಿದ್ದೇವೆ’ ಎಂದು ರವಿಕುಮಾರ್ ಹೇಳಿದರು.

‘ರಾಜ್ಯದ ಅಣೆಕಟ್ಟೆಗಳಲ್ಲಿ ನೀರಿಲ್ಲ. ಜಮೀನುಗಳು ಒಣಗಿ ಬಿರುಕು ಬಿಟ್ಟಿವೆ. ಕುಡಿಯುವ ನೀರು ಲಭಿಸುತ್ತಿಲ್ಲ. ಟ್ಯಾಂಕರ್‌ಗಳಲ್ಲಿ ನೀರು ಪೂರೈಸುವ ಪರಿಸ್ಥಿತಿ ಇದೆ. ವಿದ್ಯುತ್ ದುಬಾರಿಯಾಗಿ, ಸಣ್ಣ ಕೈಗಾರಿಕೆಗಳು ಬಂದ್ ಆಗಿವೆ’ ಎಂದು ಅವರು ವಿವರಿಸಿದರು.

‘ಕೊಳವೆಬಾವಿಗಳು ಬತ್ತಿ ಹೋಗಿವೆ. ನೀರಿದ್ದರೂ ಅದನ್ನು ಸರಬರಾಜು ಮಾಡಲು ವಿದ್ಯುತ್‌ ಇಲ್ಲ. ಎಪಿಎಂಸಿಗಳಿಗೆ ಸಂಪೂರ್ಣ ವ್ಯಾಪಾರ ಇಲ್ಲವಾಗಿದೆ. ಇದು ಸೇರಿ ಗೋಶಾಲೆಗಳಿಗು ತಂಡಗಳು ಭೇಟಿ ನೀಡಲಿವೆ’ ಎಂದರು.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಬರ ಅದ್ಯಯನ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬರ ಅದ್ಯಯನ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

ತಪ್ಪದೆ ಓದಿರಿ :-

ಮಹತ್ವದ ಮಾಹಿತಿ 👇🏻

➡️ ಸರ್ಕಾರಿ ಯೋಜನೆ ಅಡಿ ನಿಮಗೆ ಎಷ್ಟು ಹಣ ಬಂದಿದೆ?? ಪಿಎಂ ಕಿಸಾನ್? ಗೃಹಲಕ್ಷ್ಮಿ ಹಣ? ಹಾಗೂ ರೈತ ಶಕ್ತಿ ಯೋಜನೆ? ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ https://krushivahini.com/2023/11/03/direct-benefit-transfer-2/

➡️ ವಾಣಿಜ್ಯ ಬ್ಯಾಂಕ್ ಮತ್ತು ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಸಾಲ ಮನ್ನಾ ಆಗಿರುವ ಪಟ್ಟಿ ಬಿಡುಗಡೆ https://krushivahini.com/2023/11/02/crop-loan-waiver-status/

➡️ ಕೇಂದ್ರದಿಂದ 17.901 ಕೋಟಿ ರೂ ಬಿಡುಗಡೆ ರೈತರ ಖಾತೆಗೆ ಯಾವಾಗ ಜಮೆಯಾಗುತ್ತದೆ ಇಲ್ಲಿ ನೋಡಿ https://krushivahini.com/2023/11/01/bara-parihara-update/

➡️ ಇನ್ನೂ ಆದರೂ ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬರುತ್ತಿಲ್ಲ?? ಮತ್ತೆ ಏಕೆ ಬರ ಅದ್ಯಯನ?? ಎಂದು ಸಿಎಂ ಪ್ರಶ್ನೆ ಮೊದಲು ಪರಿಹಾರ ಕೊಡಿ https://krushivahini.com/2023/10/31/why-drought-relief-has-not-been-given/

7 thoughts on “Drought situation study”

Leave a Reply

Your email address will not be published. Required fields are marked *