Why drought relief has not been given :- ನಮಸ್ಕಾರ ಆತ್ಮೀಯ ರೈತ ಬಾಂಧವರಿಗೆ ಇಂದಿನ ದಿನ ನಾವು ಇನ್ನೂ ಆದರೂ ರೈತರಿಗೆ ಬರ ಪರಿಹಾರ ಏಕೆ ಕೊಟ್ಟಿಲ್ಲ ಯಾವಾಗ ಬರ ಪರಿಹಾರವನ್ನು ಕೊಡುತ್ತಾರೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಪ್ಪದೇ ಓದಿರಿ.. ದಯವಿಟ್ಟು ಲೇಖನವನ್ನು ಕೊನೆಯವರೆಗೂ ಓದಿ ಹಾಗೂ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ.

”ದೊರೆಯ ತನಕ ದೂರು ಕೊಂಡು ಹೋಗಲಾಗದವರು ಹೊಳೆಯ ತನಕ ಓಟ ಮಾಡಿದರಂತೆ” ಎಂಬ ಗಾದೆ ಮಾತಿನಂತಾಗಿದೆ ರಾಜ್ಯ ಬಿಜೆಪಿ ನಾಯಕರ ದಿಕ್ಕೆಟ್ಟ ಬರ ಅಧ್ಯಯನ ಯಾತ್ರೆ, ಬರಕ್ಕೆ ಪರಿಹಾರ ಕೊಡಬೇಕಾದವರು ದೆಹಲಿಯಲ್ಲಿ ಕೂತಿದ್ದಾರೆ. ಈ ಬಿಜೆಪಿ ನಾಯಕರು ಬರ ಅಧ್ಯಯನಕ್ಕೆ ರಾಜ್ಯದಲ್ಲಿ ಸುತ್ತಾಡಲು ಹೊರಟಿದ್ದಾರೆ ಎಂದಿದ್ದಾರೆ.

➡️ ಯಾರಿಗೆಲ್ಲಾ ಸಾಲ ಮನ್ನಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಿರಿ :-

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.. 👇🏻

https://mahitikanaja.karnataka.gov.in/department

ನಂತರ ಅಲ್ಲಿ ಕಾಣುವ “ಕಂದಾಯ ಇಲಾಖೆಯ” ಮೇಲೆ ಕ್ಲಿಕ್ ಮಾಡಬೇಕು..

ನಂತರ ಕಂದಾಯ ಇಲಾಖೆ ಸೇವೆಗಳು ಇದರ ಮೇಲೆ ಕ್ಲಿಕ್ ಮಾಡಿ

ನಂತರ ಅಲ್ಲಿ ಕಾಣುವ ವಾಣಿಜ್ಯ ಬ್ಯಾಂಕಿನ ಸಾಲ ಮನ್ನಾ ಚೆಕ್ ಮಾಡಲು (‘loan waiver report for commercial bank’) ಇದರ ಮೇಲೆ ಕ್ಲಿಕ್ ಮಾಡಬೇಕು. ಹಾಗೂ ಸೊಸೈಟಿಯಲ್ಲಿನ ಸಾಲವನ್ನು ಚೆಕ್ ಮಾಡಲು (‘loan waiver report for primary agricultural cooperative societies”) ಮೇಲೆ ಕ್ಲಿಕ್ ಮಾಡಿರಿ.

ನಂತರ ಅಲ್ಲಿ ರೈತ ಎಂದು ಸೆಲೆಕ್ಟ್(select) ಮಾಡಿಕೊಳ್ಳಿ.
ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸು” ಮೇಲೆ ಒತ್ತಿರಿ..

ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆ ಎಷ್ಟು ಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಬಹುದು. Search button ಅಲ್ಲಿ ನಿಮ್ಮ ನಿಮ್ಮ ಹೆಸರನ್ನು ಹಾಕಿದರೆ ಅಲ್ಲಿ ಮಾಹಿತಿಯನ್ನು ತೋರಿಸುತ್ತದೆ.

ಬಿಜೆಪಿ ನಾಯಕರೇ, ನಿಮ್ಮದೇ ಪಕ್ಷದ ಸರ್ಕಾರಕ್ಕೆ ಸೇರಿದ ತಜ್ಞರ ತಂಡವೇ ದೆಹಲಿಯಿಂದ ಬಂದು ಕರ್ನಾಟಕದಲ್ಲಿನ ಬರಪರಿಸ್ಥಿತಿಯನ್ನು ಅಧ್ಯಯನ ಮಾಡಿ ಹೋಗಿದೆ. ಈಗ ನೀವು ಅದೇ ಉದ್ದೇಶದಿಂದ ಇನ್ನೊಂದು ಪ್ರವಾಸಕ್ಕೆ ಹೊರಟಿದ್ದೀರಿ. ಯಾಕೆ, ನಿಮ್ಮದೇ ಸರ್ಕಾರ ಕಳಿಸಿರುವ ಬರ ಅಧ್ಯಯನ ತಂಡದ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರದ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ ಆಗಿರುವ ನಷ್ಟ ಅಂದಾಜು 33,770 ಕೋಟಿ ರೂಪಾಯಿ. ಕೇಂದ್ರ ಸರ್ಕಾರದಿಂದ ನಾವು ಕೇಳಿರುವುದು 17,901 ಕೋಟಿ ರೂಪಾಯಿ ಪರಿಹಾರ. ಕೇಂದ್ರ ಸರ್ಕಾರದಿಂದ ಈ ವರೆಗೆ ನಯಾಪೈಸೆ ಪರಿಹಾರದ ಹಣ ಬಂದಿಲ್ಲ. ಬಿಜೆಪಿ ನಾಯಕರೇ, ರಾಜ್ಯದ ರೈತರ ಬಗ್ಗೆ ನಿಮಗೆ ಪ್ರಾಮಾಣಿಕವಾದ ಕಾಳಜಿ ಹೊಂದಿದ್ದರೆ ಮೊದಲು ಹೆಚ್ಚು ಪರಿಹಾರಕ್ಕಾಗಿ ಒತ್ತಾಯಿಸಿ ಎಂದು ಆಗ್ರಹಿಸಿದ್ದಾರೆ.

ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ಜೇನಿನ ಹೊಳೆ ಹರಿಯತ್ತದೆ ಎಂದು ಅಮಾಯಕ ಕನ್ನಡಿಗರನ್ನು ನಂಬಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸಂಸದರನ್ನು ಗೆಲ್ಲಿಸಿಕೊಂಡರಲ್ಲಾ, ಅವರೇನು ಮಾಡುತ್ತಿದ್ದಾರೆ? ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಅವರೆಂದಾದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಬಾಯಿ ಬಿಟ್ಟಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರೇ ನೀವು ಯಾತ್ರೆ ಮಾಡಬೇಕಾಗಿರುವುದು ರಾಜ್ಯದಲ್ಲಿ ಅಲ್ಲ, ನೀವು ಯಾತ್ರೆ ಹೊರಡಬೇಕಾಗಿರುವುದು ದೆಹಲಿಗೆ, ನಿಮ್ಮ ಪಕ್ಷದ 25 ಲೋಕಸಭಾ ಸದಸ್ಯರನ್ನು ಕಟ್ಟಿಕೊಂಡು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗಾದರೂ ಬಿದ್ದು ಬರಪರಿಹಾರಕ್ಕೆ ಹೆಚ್ಚು ಹಣ ಕೊಡುವಂತೆ ಕೇಳಿ. ನಿಮಗೆ ಕೇಳುವ ಧೈರ್ಯ ಇಲ್ಲ ಎಂದಾದರೆ ಪ್ರಧಾನಿ ಜೊತೆ ಭೇಟಿಗಾಗಿ ನನಗಾದರೂ ಒಂದು ಅಪಾಯಿಂಟ್ ಮೆಂಟ್ ಕೊಡಿಸಿ ಬಿಡಿ ಎಂದು ಕೇಳಿದ್ದಾರೆ.

ನೆಲ-ಜಲ-ಭಾಷೆಯ ವಿಚಾರದಲ್ಲಿ ಕರ್ನಾಟಕಕ್ಕೆ, ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸಾಲು ಸಾಲು ಅನ್ಯಾಯ ಮಾಡಿ ಯಾವ ಮುಖ ಹೊತ್ತು ರಾಜ್ಯ ಪ್ರವಾಸ ಹೊರಟಿದ್ದೀರಿ? ಬರಪೀಡಿತ ಜನರಿಗೆ ಬೇಕಾಗಿರುವುದು ನಿಮ್ಮಬಾಯಿ ಮಾತಿನ ಸಾಂತ್ವನ ಅಲ್ಲ, ಅವರಿಗೆ ಬೇಕಾಗಿರುವುದು ಪರಿಹಾರ. ಬರಗಾಲದ ನಷ್ಟ – ನೋವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ನಿಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಜಾಗ್ರತೆಯಿಂದಿರಿ ಎಂದು ಹೇಳಿದ್ದಾರೆ.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಬರ ಪರಿಹಾರ ಇನ್ನು ಬಂದಿಲ್ಲ ಯಾವಾಗ ಕೊಡುತ್ತಾರೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬರ ಪರಿಹಾರ ಇನ್ನು ಬಂದಿಲ್ಲ ಯಾವಾಗ ಕೊಡುತ್ತಾರೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ಸರ್ಕಾರಿ ಯೋಜನೆ ಅಡಿ ನಿಮಗೆ ಎಷ್ಟು ಹಣ ಬಂದಿದೆ?? ಪಿಎಂ ಕಿಸಾನ್? ಗೃಹಲಕ್ಷ್ಮಿ ಹಣ? ಹಾಗೂ ರೈತ ಶಕ್ತಿ ಯೋಜನೆ? ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ https://krushivahini.com/2023/11/03/direct-benefit-transfer-2/

➡️ ಕೇಂದ್ರದಿಂದ 17.901 ಕೋಟಿ ರೂ ಬಿಡುಗಡೆ ರೈತರ ಖಾತೆಗೆ ಯಾವಾಗ ಜಮೆಯಾಗುತ್ತದೆ ಇಲ್ಲಿ ನೋಡಿ https://krushivahini.com/2023/11/01/bara-parihara-update/

5 thoughts on “Why drought relief has not been given”

Leave a Reply

Your email address will not be published. Required fields are marked *