Crop loss compensation status check :-

ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ದಿನ ನಾವು ನಿಮಗೆ ಇಲ್ಲಿಯವರೆಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುವುದರ ಬಗ್ಗೆ ಇವತ್ತಿನ ಈ ಲೇಖನದಲ್ಲಿ ತಿಳಿಯೋಣ. ತಪ್ಪದೇ ಈ ಲೇಖನವನ್ನು ಪೂರ್ಣವಾಗಿ ಓದಿ ಹಾಗೂ ನಿಮಗೆ ಎಷ್ಟು ಬೆಳೆ ಹಾನಿ ಹಣ ಜಮೆಯಾಗಿದೆ ಮತ್ತು ಬೆಳೆ ವಿಮೆ ಈ ಜಿಲ್ಲೆಯ ರೈತರಿಗೆ 26.17 ಕೋಟಿ ರೂ ಫಸಲ್ ಭೀಮಾ ಯೋಜನೆಯ ವಿಮಾ ಕಂಪನಿ ಅಡಿ ಬೆಳೆ ವಿಮೆ ಜಮೆಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ.

ಇಲ್ಲಿಯವರೆಗೂ ನಿಮಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ??

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಹಳ್ಳಿಯ ಬೆಳೆ ಹಾನಿ ಜಮೆ ಆಗಿರುವ ರೈತರ ಪಟ್ಟಿ ಕಾಣುತ್ತದೆ.

ಅದೇ ರೀತಿಯಾಗಿ ಈ ಮುಖಪುಟದಲ್ಲಿ ಕಾಣುವ ಹಾಗೆ ಕೊನೆಯಲ್ಲಿ ಕಾಣುವ view status ಮೇಲೆ ಒತ್ತಿದರೆ ನಿಮಗೆ ಬೆಳೆ ಹಾನಿ ಹಣ ಸಂದಾಯ ಆಗಿರುವ ಸಂಪೂರ್ಣ ವಿವರ ತಿಳಿಯುತ್ತದೆ..

ಮಧ್ಯಂತರ ಬೆಳೆ ವಿಮೆ :- mid season crop insurance – ಈ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ.ಮಧ್ಯಂತರ ಪರಿಹಾರ ಬಂದಿದೆ.

ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿತ್ತು. ಸರ್ಕಾರದಿಂದ ಬರ ಪರಿಹಾರ ಶೀಘ್ರ ಬರುವ ನಿರೀಕ್ಷೆಯ ನಡುವೆಯೇ, ವಿಮೆ ತುಂಬಿತ ರೈತರಿಗೆ ಮಧ್ಯಂತರ ಪರಿಹಾರ ಹಣ ಬಿಡುಗಡೆಯಾಗಿದೆ. ಕೊಪ್ಪಳದಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ, ತೊಗರಿ ಬೆಳೆಗೆ ವಿಮಾ ಕಂಪನಿಯಿಂದ ಮಧ್ಯಂತರ ಪರಿಹಾರ ಬಿಡುಗಡೆ ಮಾಡಲಾಗಿದೆ.

ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ 👇🏻

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/Premium/CheckStatusMain_aadhaar.aspx

ನಂತರ ಈ ಮೇಲೆ ಕಾಣುವ ಮುಖಪುಟದಲ್ಲಿ ಪ್ರೊಪೋಸಲ್ ನಂಬರ್ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಅನ್ನು ನಮೂದಿಸಿ ನಂತರ ಸೀಸನ್ ಹಾಗೂ Captcha ಎಂಟ್ರಿ ಮಾಡಿ search ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಬೆಳೆ ವಿಮೆ ಹಣ ಜಮೆ ಸ್ಟೇಟಸ್ ನ್ನು ಮೊಬೈಲ್ ನಲ್ಲೆ ನೋಡಬಹುದು..

* ಕೊಪ್ಪಳ ಜಿಲ್ಲೆಯ ರೈತರಿಗೆ ಈ ವಿಮಾ ಕಂಪನಿಯಿಂದ ಬೆಳೆ ವಿಮೆ ಹಣ ಜಮೆಯಾಗಿದೆ

ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಗೆ ಯಾವ ಇನ್ಶೂರೆನ್ಸ್ ಕಂಪನಿ ಇರುವ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ.👇🏻

https://samrakshane.karnataka.gov.in/HomePages/frmKnowYourInsCompany.aspx

Fruits id :- ಈ ಕೆಲಸ ಮಾಡಿದವರಿಗೆ ಮಾತ್ರ ಬೆಳೆವಿಮೆ ಬೆಳೆಹಾನಿ ಪರಿಹಾರ ನಿಮ್ಮ ಖಾತೆಗೆ ಜಮೆ ಯಾಗುತ್ತವೆ..ತಪ್ಪದೆ ತಿಳಿಯಿರಿ ಮಹತ್ವದ ಮಾಹಿತಿ..

ಬರ ಪರಿಹಾರದ ಹಣ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಲೇಬೇಕು. ಒಂದು ವೇಳೆ ಎಫ್‌ಐಡಿ ಮಾಡಿಸದಿದ್ದರೆ ಹಣ ಬರುವುದಿಲ್ಲ. ಎಫ್‌ಐಡಿ ಮಾಡದೆ ಇರುವ ಕೂಡಲೇ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್‌ಐಡಿ ಮಾಡಿಸಬೇಕು.

ಈವರೆಗೆ ಎಫ್‌ಐಡಿ ಮಾಡಿಸದೇ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೊಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತಮ್ಮ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೂಬೈಲ್ ಸಂಖ್ಯೆಯೊಂದಿಗೆ ಹೋಗಿ ತುರ್ತಾಗಿ ಎಫ್‌ಐಡಿ ಮಾಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ರೈತರು ವಂಚಿತರಾಗಬೇಕಾಗುತ್ತದೆ.

* ಆಧಾರ್ ನಂಬರ್ ಹಾಕಿ ನಿಮ್ಮ FID ಸ್ಟೇಟಸ್ ತಿಳಿದುಕೊಳ್ಳಿ..

ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/GetDetailsByAadhaar.aspx

ನಂತರ ನಿಮ್ಮ ಆಧಾರ್ ನಂಬರ್ ಹಾಕಿ,search ಮೇಲೆ ಕ್ಲಿಕ್ ಮಾಡಿ ನಂತರ ಸರ್ಕಾರದಿಂದ ಜನರೇಟ್ ಆಗಿರುವ ನಿಮ್ಮ ಫ್ರೂಟ್ಸ್ ಐಡಿ ಬರುತ್ತದೆ.

FID-ನಿಮ್ಮ ಮೊಬೈಲ್ ನಲ್ಲಿಯೇ FID ನೊಂದಣಿ ಮಾಡುವುದು ಹೇಗೆ? ಇಲ್ಲಿ ನೋಡಿರಿ

ಬೆಳೆ ಸಾಲ ಪಡೆಯುವ ಸಮಯ ಇದು ಈ ಸಲ ಬೆಳೆ ಸಾಲ ಪಡೆಯಲು ಫ್ರಟ್ಸ್ ನಲ್ಲಿ ನೋಂದಣಿ ಮಾಡಿಸಿಕೊಂಡಿರುವುದು ಕಡ್ಡಾಯವಾಗಿದೆ. ಫ್ರಟ್ಸ್ (FID)ಎಂದರೆ ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯೂನಿಫೈಡ್ ಬೆನಿಫಿಷಿಯರಿ ಇಸ್ಲಾರ್ಮಶನ್ ಸಿಸ್ಟಮ್. ಇದು ಕೃಷಿ ಇಲಾಖೆಗೆ ಸಂಬಂಧಿಸಿದ ಕೃಷಿಕರ ಮಾಹಿತಿಗಳನ್ನು ಒಂದೇ ಸೂರಿನಡಿ ಹಿಡಿದಿಟ್ಟುಕೊಳ್ಳುವ ಪೋರ್ಟಲ್. ಇದರ ಮೂಲಕ ಕೃಷಿಕರು ಹಲವು ಪ್ರಯೋಜನ ಪಡೆಯಬಹುದಾಗಿದೆ ರಾಜ್ಯ ಸರ್ಕಾರದ ಆದೇಶದಂತೆ ಈ ವೆಬ್ ಪೋರ್ಟಲ್ ನಲ್ಲಿ ಎಲ್ಲ ತರಹದ ವಾಣಿಜ್ಯ ಬೆಳೆ ಆಹಾರ ಬೆಳೆಯನ್ನು ಒಳಗೊಂಡ ಎಲ್ಲ ವರ್ಗದ ಕೃಷಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ.

ಫ್ರಟ್ಸ್ ನಂಬರ್ ಅಂದರೆ ಏನು?ಯಾವುದಕ್ಕೆ ಉಪಯೋಗವಿದೆ?

ಕೃಷಿಕ ತಮ್ಮ ಕೃಷಿ ಜಮೀನಿನ ಮಾಹಿತಿಯನ್ನು ಈ ಪೋರ್ಟಲ್ ನಲ್ಲಿ ನೋಂದಾಯಿಸಿದಾಗ ಆತನಿಗೆ FID(ಫಾರ್ಮರ್ ಐಡೆಂಟಿಟಿ) ನಂಬರ್ ದೊರೆಯುತ್ತದೆ. ಹೇಗೆ ಒಬ್ಬ ವ್ಯಕ್ತಿಗೆ ಆಧಾರ್ ಗುರುತಿನ ಚೀಟಿಯಾಗಿದೆಯೋ ಅಂತೆಯೇ ಕೃಷಿಕನಿಗೆ FID ಗುರುತಿನ ಚೀಟಿ ಇದ್ದಂತೆ. ಇದು ಕೃಷಿಕನ ಜಾಗದ ವಿವರ ಹಾಗೂ ತಾನು ಬೆಳೆದ ಬೆಳೆಗಳ ಎಲ್ಲಾ ವಿವರವನ್ನು ಒಳಗೊಂಡಿರುವ ಸಾಧಾನವಾಗಿದೆ. ಸರ್ಕಾರದಿಂದ ದೊರೆಯುವ ಎಲ್ಲಾ ಕೃಷಿ ಸೌಲಭ್ಯ ಪಡೆದುಕೊಳ್ಳಲು ಕೃಷಿಕರು ಇಲ್ಲಿ ಮಾಹಿತಿ ನೋಂದಾಯಿಸಿಕೊಳ್ಳಬೇಕಿದೆ.

ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ!

ನಿಮ್ಮ ಹತ್ತಿರದ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ಪಶುಸಂಗೋಪನ ಇಲಾಖೆ,ಕಂದಾಯ ಇಲಾಖೆಗಳಲ್ಲಿ ಯಾವುದಾದರೂ ಒಂದು ಇಲಾಖೆಗೆ ಭೇಟಿ ನೀಡಿ ಕೃಷಿಕನ RTC ಉತಾರ, ಆಧಾರ್ ಕಾರ್ಡ, ರಾಷ್ಟ್ರೀಕೃತ ಬ್ಯಾಂಕ್‌ನ ಪಾಸ್ ಬುಕ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಫೋಟೋ, ಮೊಬೈಲ್ ನಂಬರ್ ನೀಡಿದರೆ 24 ಗಂಟೆಯೊಳಗೆ ನಿಮ್ಮ ಹೆಸರು ಪೋರ್ಟಲ್ ನಲ್ಲಿ ಸೇರ್ಪಡೆಗೊಳ್ಳುತ್ತದೆ.

ಏಕೆ ನೋಂದಾಯಿಸಬೇಕು?ಏನಿದರ ಲಾಭ??

ಸರ್ಕಾರದ ಆದೇಶದಂತೆ ಈ ಪೋರ್ಟಲ್ಲಿ ಕೃಷಿಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳದೆ ಇದ್ದರೆ ಆತನಿಗೆ ಬೆಳೆ ಸಾಲ, ಬೆಳೆ ವಿಮೆ,ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ, ಕೃಷಿಗೆ ಪೂರಕವಾದ ಇತರೆ ಸೌಲಭ್ಯಗಳು ದೊರೆಯುವುದಿಲ್ಲ. ಈಗಾಗಲೇ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ ರೈತ ಶಕ್ತಿ ಯೋಜನೆ ಅಡಿ ಪ್ರತಿಯೊಬ್ಬ ಕೃಷಿಕನಿಗೆ ಒಂದು ಎಕರೆಗೆ 250 ನಂತೆ ಗರಿಷ್ಠ 5 ಎಕರೆಗೆ 1,250 ಇಂಧನ ವೆಚ್ಚ ಕೃಷಿಕನ ಖಾತೆಗೆ ನೇರ ಜಮೆಗೊಳ್ಳಲಿದೆ. ಎಲ್ಲಾ ದಾಖಲೆಗಳಿದ್ದರೂ ಫ್ರಟ್ಸ್ ಪೋರ್ಟಲ್ ನಲ್ಲಿ ಹೆಸರು ನಮೂದಿಸದಿದ್ದರೆ ಸರ್ಕಾರದಿಂದ ಪಡೆಯುವ ಎಲ್ಲಾ ಸೌಲಭ್ಯಗಳಿಂದ ವಂಚಿತನಾಗುತ್ತಾನೆ.ಅದಕ್ಕಾಗಿ ಕೂಡಲೇ ಫೂಟ್ಸ್ ಪೋರ್ಟಲ್ ನಲ್ಲಿ ನಿಮ್ಮ ಹೆಸರು ನೊಂದಾಯಿಸಿಕೊಂಡು,ನಿಮ್ಮ FID ಪಡೆದುಕೊಳ್ಳಿ ಹಾಗೂ ಅದನ್ನು ಸರ್ಕಾರದ ಸೌಲತ್ತು ಪಡೆಯಲು ಬಳಸಿ.

* ನಿಮ್ಮ ಮೊಬೈಲ್ ನಲ್ಲೇ FID ನೊಂದಣಿ ಮಾಡುವುದು ಹೇಗೆ?ಇಲ್ಲಿ ನೋಡಿರಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://fruits.karnataka.gov.in/OnlineUserLogin.aspx

ಹಂತ 1) ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ.”Citizen Registration” ಮೇಲೆ ಕ್ಲಿಕ್ ಮಾಡಿ.

ಹಂತ 2) ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,l agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ.

ಹಂತ 3) ನಂತರ ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಬೇಕು.

ಹಂತ 4) ನಂತರ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ OTP ಅನ್ನು ಅಲ್ಲಿ ಹಾಕಿ, ನಂತರ Submit ಮೇಲೆ ಕ್ಲಿಕ್ ಮಾಡಬೇಕು.

ಹಂತ 5) ನಂತರ ನೀವು Password create ಮಾಡಿಕೊಂಡು ಮುಂದೆ ಲಾಗಿನ್ ಆಗಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದರೆ ನಿಮ್ಮ FID (ಫ್ರೂಟ್ಸ್ ಐ ಡಿ ) ನಿಮಗೆ ಸಿಗಲಿದೆ.

ಹೀಗೆ ಬಂದಿರುವ FID ಯನ್ನು ಕೃಷಿ ಇಲಾಖೆ,ರೇಷ್ಮೆ, ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರೀಶಿಲಿಸಿ Approve ಕೊಡಬೇಕು.

ನಂತರ FID ಯನ್ನು ಪಿ ಎಂ ಕಿಸಾನ್ ಯೋಜನೆ, ಬೆಳೆಸಾಲ, ಬೆಳೆವಿಮೆ ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ನೀವು ಈ FID ಅನ್ನು ಬಳಸಬಹುದು.

-: ಲೇಖನ ಮುಕ್ತಾಯ :-

ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಬೆಳೆ ಹಾನಿ ಮತ್ತು ಬೆಳೆ ವಿಮೆ ಜಮಾ ಕುರಿತು :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬೆಳೆ ಹಾನಿ ಮತ್ತು ಬೆಳೆ ವಿಮೆ ಜಮೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

ಮಹತ್ವದ ಮಾಹಿತಿ:-

ಈ ಲಿಸ್ಟ್ ನಲ್ಲಿ ಇರುವ ತಾಲೂಕುಗಳಿಗೆ ಬರ ಪರಿಹಾರ ಹಣ ಬರುವುದಿಲ್ಲ ನಿಮ್ಮ ತಾಲೂಕು ಇದೆ ಚೆಕ್ ಮಾಡಿಕೊಳ್ಳಿ 👇🏻👇🏻🙏🏻

➡️ 324 ಕೋಟಿ ಬರ ಪರಿಹಾರ ಘೋಷಣೆ ಆದರೆ ಈ ತಾಲೂಕುಗಳಿಗೆ ಬರ ಪರಿಹಾರ ಹಣ ಬರುವುದು ಅನುಮಾನ👇🏻🙏🏻 https://krushivahini.com/2023/11/05/drought-relief-is-doubtful-for-these-taluks/

ತಪ್ಪದೇ ಓದಿರಿ ನೇರ ನಗದು ಸ್ಥಿತಿ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ 👇🏻👇🏻

➡️ ಸರ್ಕಾರಿ ಯೋಜನೆ ಅಡಿ ನಿಮಗೆ ಎಷ್ಟು ಹಣ ಬಂದಿದೆ?? ಪಿಎಂ ಕಿಸಾನ್? ಗೃಹಲಕ್ಷ್ಮಿ ಹಣ? ಹಾಗೂ ರೈತ ಶಕ್ತಿ ಯೋಜನೆ? ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ https://krushivahini.com/2023/11/03/direct-benefit-transfer-2/

➡️ ವಾಣಿಜ್ಯ ಬ್ಯಾಂಕ್ ಮತ್ತು ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಸಾಲ ಮನ್ನಾ ಆಗಿರುವ ಪಟ್ಟಿ ಬಿಡುಗಡೆ https://krushivahini.com/2023/11/02/crop-loan-waiver-status/

➡️ ಕೇಂದ್ರದಿಂದ 17.901 ಕೋಟಿ ರೂ ಬಿಡುಗಡೆ ರೈತರ ಖಾತೆಗೆ ಯಾವಾಗ ಜಮೆಯಾಗುತ್ತದೆ ಇಲ್ಲಿ ನೋಡಿ https://krushivahini.com/2023/11/01/bara-parihara-update/

➡️ 100 ರ ಗಡಿ ದಾಟಿದ ಈರುಳ್ಳಿ ಬೆಲೆ! ಒಂದು ಟನ್ ಈರುಳ್ಳಿ ಗೆ 65 ಸಾವಿರ ರಫ್ತು ಬೆಲೆ ನಿಗದಿ ಮಾಡಿದ ಸರ್ಕಾರ https://krushivahini.com/2023/11/01/onion-rate-increased-2/

➡️ ಇನ್ನೊಂದು ಹಂತದ ಬರ ಅಧ್ಯಯನ ಆರಂಭ? ಸದ್ಯದಲ್ಲೇ ಬರಲಿದೆ ರೈತರ ಖಾತೆಗೆ ಬರ ಪರಿಹಾರ ಹಣ💸 https://krushivahini.com/2023/10/31/drought-situation-study/

➡️ ಇನ್ನೂ ಆದರೂ ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬರುತ್ತಿಲ್ಲ?? ಮತ್ತೆ ಏಕೆ ಬರ ಅದ್ಯಯನ?? ಎಂದು ಸಿಎಂ ಪ್ರಶ್ನೆ ಮೊದಲು ಪರಿಹಾರ ಕೊಡಿ https://krushivahini.com/2023/10/31/why-drought-relief-has-not-been-given/

➡️🌱ರಾಜ್ಯದಲ್ಲಿ ಮತ್ತೆ 54,000 ಗಡಿ ದಾಟಿದ ಅಡಿಕೆ ಧಾರಣೆ ನಿಮ್ಮ ಜಿಲ್ಲೆಯಲ್ಲಿ ಎಷ್ಟು ಬೆಲೆ ಇದೆ ಇಲ್ಲಿ ಚೆಕ್ ಮಾಡಿ 👇🏻
https://krushivahini.com/2023/10/30/arecanut-price-hike/

5 thoughts on “Crop loss compensation status check”

Leave a Reply

Your email address will not be published. Required fields are marked *