Release of interim crop insurance :-

ಕೊಪ್ಪಳದ ರೈತರಿಗೆ ಬಂತು ಫಸಲ್ ಬಿಮಾ ವಿಮಾ ಯೋಜನೆಯ ಮಧ್ಯಂತರ ಪರಿಹಾರ: ಸಂಕಟದಲ್ಲಿರುವ ಅನ್ನದಾತನಿಗೆ ಆಸರೆ ಮಳೆಯಿಲ್ಲದೆ ಬರದಿಂದ ಕಂಗೆಟ್ಟಿದ್ದ ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿತ್ತು. ಸರ್ಕಾರದಿಂದ ಬರ ಪರಿಹಾರ ಶೀಘ್ರ ಬರುವ ನಿರೀಕ್ಷೆಯ ನಡುವೆಯೇ, ವಿಮೆ ತುಂಬಿತ ರೈತರಿಗೆ ಮಧ್ಯಂತರ ಪರಿಹಾರ ಹಣ ಬಿಡುಗಡೆಯಾಗಿದೆ. ದಯವಿಟ್ಟು ಈ ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿ ಹಾಗೂ ಈ ಜಿಲ್ಲೆಗೆ ಬಂದಿರುವ ಮಧ್ಯಂತರ ಬೆಳೆ ವಿಮೆ ಹಣವನ್ನು ಈ ಕೆಳಕಂಡ ವಿಮಾ ಕಂಪನಿಯಿಂದ ಜಮೆಯಾಗಿದೆ.

ಕೊಪ್ಪಳದಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ, ತೊಗರಿ ಬೆಳೆಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಲಾಗಿದೆ.

ಆಪತ್ಕಾಲಕ್ಕೆ ನೆರವು ಎಂಬಂತೆ ಬರದಿಂದ ಬಳಲಿ ಬೆಂಡಾಗಿರುವ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ.ಮಧ್ಯಂತರ ಪರಿಹಾರ ಬಂದಿದೆ.

ವರದಿಯನ್ವಯ ಸರಕಾರ, ವಿಮಾ ಕಂಪನಿಗಳಿಗೆ ರೈತರಿಗೆ ನೀಡಬೇಕಾದ ಮಧ್ಯಂತರ ಪರಿಹಾರ ನೀಡಿ ಎಂದು ಆದೇಶಿಸಿತ್ತು. ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಗೆ ಹಣ ಬಿಡುಗಡೆಯಾಗಿದ್ದು, ಅನ್ನದಾತರ ಖಾತೆಗೆ ಹಂತ-ಹಂತವಾಗಿ ಜಮೆಯಾಗುತ್ತಿದೆ.

ಕೈ ಹಿಡಿದ ವಿಮೆ:

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 1.15 ಲಕ್ಷ ಹೆಕ್ಟೇರ್‌ ಮೆಕ್ಕೆಜೋಳ, 56 ಸಾವಿರ ಹೆಕ್ಟೇರ್‌ ಸಜ್ಜೆ, 19 ಸಾವಿರ ಹೆಕ್ಟೇರ್‌ ತೊಗರಿ, 8 ಸಾವಿರ ಹೆಕ್ಟೇರ್‌ ಶೇಂಗಾ, 13 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಈ ಪೈಕಿ 47,228 ಹೆಕ್ಟೇರ್‌ ಪ್ರದೇಶಕ್ಕೆ 74,781 ರೈತರು ಬೆಳೆ ವಿಮೆ ಪಾವತಿ ಮಾಡಿದ್ದಾರೆ. ಮೆಕ್ಕೆಜೋಳ, ಹತ್ತಿ, ಶೇಂಗಾ, ತೊಗರಿ ಬೆಳೆಗೆ ಮಧ್ಯಂತರ ಪರಿಹಾರ ನೀಡಲು ಸರಕಾರ ಆದೇಶ ಮಾಡಿದ್ದು, ವಿಮಾ ಕಂಪನಿಯಿಂದ ಹಣ ಬಿಡುಗಡೆ ಮಾಡಲಾಗಿದೆ.

ಈ ಜಿಲ್ಲೆ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ.ಮಧ್ಯಂತರ ಪರಿಹಾರ ಬಂದಿದೆ.

ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ 👇🏻

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/Premium/CheckStatusMain_aadhaar.aspx

ಈ ಮೇಲೆ ಕಾಣುವ ಮುಖಪುಟದಲ್ಲಿ ನಿಮ್ಮ ಪ್ರಪೋಸಲ್ ನಂಬರ್ ಅಥವಾ ಮೊಬೈಲ್ ನಂಬರ್ ಇಲ್ಲವಾದಲ್ಲಿ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ. ಅಲ್ಲಿ ಸೀಸನ್ ಆಯ್ಕೆ ಮಾಡಿಕೊಂಡು. Search ಮೇಲೆ ಒತ್ತಿರಿ. ನಿಮಗೆ ಎಷ್ಟು ಹಣ ಜಮೆ ಆಗಿದೆ ಎಂಬ ಸ್ಟೇಟಸ್ ಅನ್ನು ಅಲ್ಲಿ ನೋಡಿ.

* ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಯಾವ ಕಂಪನಿಯಿಂದ ನಿಮಗೆ ವಿಮೆ ಜಮೆಯಾಗಿದೆ ಇಲ್ಲಿ ನೋಡಿ..

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಗೆ ಯಾವ ಇನ್ಶೂರೆನ್ಸ್ ಕಂಪನಿ ಇರುವ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ.👇🏻

https://samrakshane.karnataka.gov.in/HomePages/frmKnowYourInsCompany.aspx

ನಮ್ಮ ರಾಜ್ಯದಲ್ಲಿ ಇರುವಂತಹ ಇನ್ಸೂರೆನ್ಸ್ ಕಂಪನಿಗಳ ಪಟ್ಟಿ ಈ ಕೆಳಗಿನಂತಿವೆ👇🏻

Bajaj allianz GIC

SBI General Insurance

Future general India Insurance Company

HDFC ergo General Insurance Company Limited

Universal sompo GIC

SBI General Insurance

Agriculture insurance company of India

ICICI Lombard GI

ಹೊಸ ಓಪನ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಗ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂಬುದರ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೊಲದ ಸರ್ವೆ ನಂಬರನ್ನು ನಮೂದಿಸಿ ಬೆಳೆ ವಿಮೆ ಏನೇನೋ ಪರಿಸ್ಥಿತಿಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

Pradhan Mantri Fasal Bima Yojana

ಶ್ರೀಕಾಂತ ಅಕ್ಕಿ

ಕೊಪ್ಪಳ: ಆಪತ್ಕಾಲಕ್ಕೆ ನೆರವು ಎಂಬಂತೆ ಬರದಿಂದ ಬಳಲಿ ಬೆಂಡಾಗಿರುವ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ.ಮಧ್ಯಂತರ ಪರಿಹಾರ ಬಂದಿದೆ.

ಭೀಕರ ಬರ ಹಿನ್ನೆಲೆ ವಿಮೆ ತುಂಬಿದ ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿಸುವಂತೆ ಕಳೆದ ವಾರ ಜಿಲ್ಲಾಡಳಿತ ಸರಕಾರಕ್ಕೆ ವರದಿ ಸಲ್ಲಿಸಿತ್ತು.

ವರದಿಯನ್ವಯ ಸರಕಾರ, ವಿಮಾ ಕಂಪನಿಗಳಿಗೆ ರೈತರಿಗೆ ನೀಡಬೇಕಾದ ಮಧ್ಯಂತರ ಪರಿಹಾರ ನೀಡಿ ಎಂದು ಆದೇಶಿಸಿತ್ತು. ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಗೆ ಹಣ ಬಿಡುಗಡೆಯಾಗಿದ್ದು, ಅನ್ನದಾತರ ಖಾತೆಗೆ ಹಂತ-ಹಂತವಾಗಿ ಜಮೆಯಾಗುತ್ತಿದೆ.

ಕೈ ಹಿಡಿದ ವಿಮೆ:

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 1.15 ಲಕ್ಷ ಹೆಕ್ಟೇರ್‌ ಮೆಕ್ಕೆಜೋಳ, 56 ಸಾವಿರ ಹೆಕ್ಟೇರ್‌ ಸಜ್ಜೆ, 19 ಸಾವಿರ ಹೆಕ್ಟೇರ್‌ ತೊಗರಿ, 8 ಸಾವಿರ ಹೆಕ್ಟೇರ್‌ ಶೇಂಗಾ, 13 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಈ ಪೈಕಿ 47,228 ಹೆಕ್ಟೇರ್‌ ಪ್ರದೇಶಕ್ಕೆ 74,781 ರೈತರು ಬೆಳೆ ವಿಮೆ ಪಾವತಿ ಮಾಡಿದ್ದಾರೆ. ಮೆಕ್ಕೆಜೋಳ, ಹತ್ತಿ, ಶೇಂಗಾ, ತೊಗರಿ ಬೆಳೆಗೆ ಮಧ್ಯಂತರ ಪರಿಹಾರ ನೀಡಲು ಸರಕಾರ ಆದೇಶ ಮಾಡಿದ್ದು, ವಿಮಾ ಕಂಪನಿಯಿಂದ ಹಣ ಬಿಡುಗಡೆ ಮಾಡಲಾಗಿದೆ.

ವಿಮೆ ತುಂಬಿದ ಎಲ್ಲ ರೈತರಿಗೆ ನಿಗದಿಪಡಿಸುವ ಪರಿಹಾರ ಮೊತ್ತದ ಶೇ.25ರಷ್ಟು ಪರಿಹಾರ ಬಿಡುಗಡೆಯಾಗಿದೆ. ಇದರಿಂದ ಸಂಕಟದಲ್ಲಿರುವ ರೈತರಿಗೆ ಕೊಂಚ ನೆರವು ದೊರೆತಿದೆ. ರೈತರಿಗೆ ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬರಲೆಂದೇ ಪ್ರಧಾನ ಮಂತ್ರಿ ಫಸಲ್‌ ಬಿಮಾ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ರೈತರು ಆಸಕ್ತಿಯಿಂದ ವಿಮೆ ತುಂಬಿದ್ದರು. ಪ್ರತಿಕೂಲ ಹವಾಮಾನ ಪರಿಸ್ಥಿತಿ ನಿರ್ಮಾಣವಾದಲ್ಲಿ ಹಾಗೂ ಶೇ.75ಕ್ಕಿಂತ ಹೆಚ್ಚಿನ ಬಿತ್ತನೆ ಕ್ಷೇತ್ರ ವಿಫಲವಾದಲ್ಲಿ ವಿಮಾ ಮೊತ್ತದ ಶೇ.25ರಷ್ಟು ನೀಡಲು ಅವಕಾಶವಿದೆ. ಅದರಂತೆ ಜಿಲ್ಲೆಯಲ್ಲಿ ಬೆಳೆ ಹಾನಿಯಾಗಿರುವುದರಿಂದ ವಿಮಾ ಕಂಪನಿಯೂ ಹಣ ಬಿಡುಗಡೆ ಮಾಡಿದೆ.

ಮಳೆರಾಯನ ಮುನಿಸು:

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಮಳೆರಾಯನ ಮುನಿಸಿನಿಂದ ಜಿಲ್ಲೆಯ 7 ತಾಲೂಕುಗಳನ್ನು ಸರಕಾರ ಬರ ಪೀಡಿತ ಪ್ರದೇಶವೆಂದು ಘೋಷಿಸಿದೆ. ಮುಂಗಾರಿನಲ್ಲಿ 2.93 ಲಕ್ಷ ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಿದೆ. ಈ ಪೈಕಿ 2.50 ಲಕ್ಷ ಹೆಕ್ಟೇರ್‌ ಹಾನಿ ಸಂಭವಿಸಿದೆ. ಒಟ್ಟಾರೆ, 2ಲಕ್ಷ ರೈತರಿಗೆ 1437 ಕೋಟಿ ರೂ. ನಷ್ಟವಾಗಿದೆ. ಮೆಕ್ಕೆಜೋಳ ಸೇರಿದಂತೆ ಎಲ್ಲ ಬೆಳೆಗಳು ಮಳೆಯಿಲ್ಲದೇ ಹಾಳಾಗಿವೆ. ಇತ್ತ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ ಬರ ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಮನ್ವಯದ ಕೊರತೆಯಿಂದ ಬರ ಪರಿಹಾರ ಕ್ರಮಗಳು ಈವರೆಗೆ ಅನುಷ್ಠಾನಗೊಳ್ಳುತ್ತಿಲ್ಲ. ಇದರಿಂದ ರೈತರು ಯಮಯಾತನೆ ಪಡುವಂತಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆ ವಿಮೆ ತುಂಬಿದ್ದರು. ಅದರಂತೆ 33,375 ರೈತರಿಗೆ ಮಧ್ಯಂತರ ಪರಿಹಾರ ಬಂದಿದೆ. ಮಳೆಯಿಲ್ಲದೆ ಸಂಕಷ್ಟ ಎದುರಿಸುತ್ತಿದ್ದರಿಂದ ಅನ್ನದಾತರಿಗೆ ಮಧ್ಯಂತರ ಪರಿಹಾರದಿಂದ ಸ್ವಲ್ಪ ಅನುಕೂಲವಾಗಲಿದೆ. ಉಳಿದಂತೆ ಸರಕಾರದಿಂದ ಬರ ಪರಿಹಾರ ಶೀಘ್ರ ಬರುವ ವಿಶ್ವಾಸವಿದೆ ಎಂದು ಕೃಷಿ ಇಲಾಖೆ,ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌. ಹೇಳಿದ್ದಾರೆ.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻.. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಮಧ್ಯಂತರ ಬೆಳೆ ವಿಮೆ ಬಿಡುಗಡೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಮಧ್ಯಂತರ ಬೆಳೆ ವಿಮೆ ಬಿಡುಗಡೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

ತಪ್ಪದೆ ಓದಿರಿ:-

➡️ ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 324 ಕೋಟಿ ರೂ ಅನುದಾನ ಬಿಡುಗಡೆ ಯಾವ ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆ ಇಲ್ಲಿ ನೋಡಿರಿ 👇🏻https://krushivahini.com/2023/11/03/324-crore-drought-relief-released/

➡️ ಕೇಂದ್ರದಿಂದ 17.901 ಕೋಟಿ ರೂ ಬಿಡುಗಡೆ ರೈತರ ಖಾತೆಗೆ ಯಾವಾಗ ಜಮೆಯಾಗುತ್ತದೆ ಇಲ್ಲಿ ನೋಡಿ https://krushivahini.com/2023/11/01/bara-parihara-update/

➡️ ಇನ್ನೊಂದು ಹಂತದ ಬರ ಅಧ್ಯಯನ ಆರಂಭ? ಸದ್ಯದಲ್ಲೇ ಬರಲಿದೆ ರೈತರ ಖಾತೆಗೆ ಬರ ಪರಿಹಾರ ಹಣ💸 https://krushivahini.com/2023/10/31/drought-situation-study/

➡️ ಇನ್ನೂ ಆದರೂ ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬರುತ್ತಿಲ್ಲ?? ಮತ್ತೆ ಏಕೆ ಬರ ಅದ್ಯಯನ?? ಎಂದು ಸಿಎಂ ಪ್ರಶ್ನೆ ಮೊದಲು ಪರಿಹಾರ ಕೊಡಿ https://krushivahini.com/2023/10/31/why-drought-relief-has-not-been-given/

➡️ ನಿಮಗೆ ಎಷ್ಟು ಬೆಳೆ ಹಾನಿ ಹಣ ಜಮೆಯಾಗಿದೆ?? ವಿಮಾ ಕಂಪನಿಯಿಂದ ಈ ಜಿಲ್ಲೆಗೆ 26.17 ಕೋಟಿ ಬೆಳೆ ವಿಮೆ ಜಮಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ https://krushivahini.com/2023/10/30/crop-loss-compensation-status-check/

➡️ ದೀಪಾವಳಿ ಹಬ್ಬಕ್ಕೆ ರೈತರಿಗೆ ಭರ್ಜರಿ ಸುದ್ದಿ ಈ ದಿನ ಬರಲಿದೆ ರೈತರ ಖಾತೆಗೆ 2000 ಹಣ https://krushivahini.com/2023/10/30/pm-kisan-15-th-installment/

➡️ ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಗೆ ಗುಡುಗು ಮಿಂಚು ಸಹಿತ ಭಾರಿ ಮಳೆಯ ಸಾಧ್ಯತೆ https://krushivahini.com/2023/10/29/karnataka-rain-update/

Leave a Reply

Your email address will not be published. Required fields are marked *