Sala manna status check :- ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೇ? ಎಷ್ಟು ಬೆಳೆ ಸಾಲ ಮನ್ನಾ ಆಗಿದೆ? ನಿಮ್ಮ ಬೆಳೆಸಾಲ ಮನ್ನಾ ಸ್ಟೇಟಸ್ ಚೆಕ್ ಹೇಗೆ ಮೊಬೈಲ್ ನಲ್ಲಿ ಮಾಡಬೇಕು ಎಂದು ಇಲ್ಲಿ ನೋಡಿ..
ಮೊದಲಿಗೆ ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಬೇಕು👇🏻
https://clws.karnataka.gov.in/clws/pacs/citizenreport/
• ನಂತರ ಅಲ್ಲಿ CLWS (ನಾಗರಿಕರ ವರದಿ) ಎಂದು ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ ಬೆಳೆಸಾಲ ಮನ್ನಾ ವರದಿ ಎಂದು ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ತಿಳಿಯಬೇಕು.
• ನಂತರ ಅಲ್ಲಿ ಆಧಾರ್ ಕಾರ್ಡ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆಸಾಲ ಮನ್ನಾ ಬಗ್ಗೆ ಮಾಹಿತಿ ಪಡೆಯುವುದು.
ಈ ಕೆಲಸ ಮಾಡುವಾಗ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಆಧಾರ್ ನಂಬರ್ ಕಾರ್ಡ್ ಕಡ್ಡಾಯವಾಗಿ ಇರಬೇಕು. ಹಾಗೂ ನಿಮ್ಮ ಬೆಳೆಸಾಲ ಮನ್ನಾ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿಯೇ ಆಧಾರ್ ಕಾರ್ಡ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ಸಂಪೂರ್ಣ ಮಾಹಿತಿ ಪಡೆಯಲು ಸಹಾಯವಾಗುತ್ತದೆ. ಸರ್ಕಾರವು ರೈತರಿಗೆ ಇದರ ಅವಕಾಶ ನಿಡುತ್ತಿದ್ದು ರೈತರಿಗೆ ಆರ್ಥಿಕ ಉತ್ತೇಜನ ನೀಡಲು ಸಹಾಯವಾಗುತ್ತದೆ.
ಬೆಳೆಸಾಲ ಎಂದರೇನು?
ಬೆಳೆಸಾಲ ಎಂದರೆ ರೈತರಿಗೆ ಸರ್ಕಾರದಿಂದ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರವು ಹಣವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಾಗುತ್ತದೆ. ಹಾಗೂ ಬೆಳೆಸಾಲವನ್ನು ಸರ್ಕಾರವು ಮೂರು ರೀತಿಯಲ್ಲಿ ನೀಡುತ್ತದೆ. ಅಲ್ಪಾವಧಿ ಸಾಲ, ದೀರ್ಘಾವಧಿ ಸಾಲ, ಹಾಗೂ ಮಧ್ಯಮಾವಧಿ ಸಾಲ, ಹೀಗೆ ಜಮೀನಿನ ಆಧಾರದ ಮೇಲೆ ಸರ್ಕಾರವು ಸಾಲವನ್ನು ನೀಡುತ್ತಿದೆ.
ಏನಿದು ಬೆಳೆಸಾಲ ಮನ್ನಾ?
ಬೆಳೆಸಾಲ ಎನ್ನುವುದು ರೈತರಿಗೆ ಕೃಷಿಯಲ್ಲಿ ಉತ್ಪನ್ನಗಳನ್ನು ತೆಗೆಯಲು ಚಟುವಟಿಕೆಗಳಿಗೆ ಸರ್ಕಾರವು ಸಾಲದ ರೂಪದಲ್ಲಿ ಹಣವನ್ನು ರೈತರಿಗೆ ನಿಡುತ್ತದೆ. ಅದೇ ರೀತಿ ರೈತರು ಆ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಾವತಿ ಮಾಡುವ ನಿಯಮ ಇರುತ್ತದೆ. ಹಾಗಾಗಿ ರೈತರಿಗೆ ಕೃಷಿಯಲ್ಲಿ ಆರ್ಥಿಕ ಉತ್ತೇಜನ ನೀಡಲು ಸರ್ಕಾರವು ಮೂರು ವಿಧಗಳಲ್ಲಿ ಸಾಲವನ್ನು ನೀಡುತ್ತಿದೆ. ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ಹೀಗೆ ನೀಡುತ್ತಿದೆ.
ಯಾರಿಗೆಲ್ಲಾ ಸಾಲ ಮನ್ನಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಿರಿ :-
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.. 👇🏻
https://mahitikanaja.karnataka.gov.in/department
ನಂತರ ಅಲ್ಲಿ ಕಾಣುವ “ಕಂದಾಯ ಇಲಾಖೆ” ಮೇಲೆ ಕ್ಲಿಕ್ ಮಾಡಬೇಕು..
ನಂತರ ಕಂದಾಯ ಇಲಾಖೆ ಸೇವೆಗಳು ಇದರ ಮೇಲೆ ಕ್ಲಿಕ್ ಮಾಡಿ
ನಂತರ ಅಲ್ಲಿ ಕಾಣುವ ವಾಣಿಜ್ಯ ಬ್ಯಾಂಕಿನ ಸಾಲ ಮನ್ನಾ ಚೆಕ್ ಮಾಡಲು ‘loan waiver report for commercial bank’ ಇದರ ಮೇಲೆ ಕ್ಲಿಕ್ ಮಾಡಬೇಕು. ಹಾಗೂ ಸೊಸೈಟಿಯಲ್ಲಿನ ಸಾಲವನ್ನು ಚೆಕ್ ಮಾಡಲು ‘ loan waiver report for primary agricultural cooperative societies” ಮೇಲೆ ಕ್ಲಿಕ್ ಮಾಡಿರಿ.
ನಂತರ ಅಲ್ಲಿ ರೈತ ಎಂದು ಸೆಲೆಕ್ಟ್(select) ಮಾಡಿಕೊಳ್ಳಿ
ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸು” ಮೇಲೆ ಒತ್ತಿರಿ..
ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆ ಎಷ್ಟು ಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಬಹುದು. Search button ಅಲ್ಲಿ ನಿಮ್ಮ ನಿಮ್ಮ ಹೆಸರನ್ನು ಹಾಕಿದರೆ ಅಲ್ಲಿ ಮಾಹಿತಿಯನ್ನು ತೋರಿಸುತ್ತದೆ.
ಬಹಳಷ್ಟು ರೈತರಿಗೆ ಅವರ ಸಾಲ ಮನ್ನಾ ಆಗಿಲ್ಲ ಎಂದು ಹೇಳುತ್ತಾರೆ ಆದರೆ ಸಾಲ ಮನ್ನಾ ಮಾಡಲು ಕೆಲವು ದಾಖಲೆ ಮತ್ತು ಅರ್ಹತೆಗಳು ಮುಖ್ಯ,
ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಾಲ ಮನ್ನಾ ಆಗಲು ಬೇಕಾದ ದಾಖಲಾತಿಗಳು ಹಾಗೂ ಅರ್ಹತೆಗಳನ್ನು ಇಲ್ಲಿ ನೋಡಿ.
* ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಸಾಲ ಮನ್ನಾ ಆಗಲು ಬೇಕಾದ ಅರ್ಹತೆ ಹಾಗೂ ದಾಖಲಾತಿಗಳನ್ನು ನೋಡಬಹುದು. 👇🏻
https://mahitikanaja.karnataka.gov.in/department
ನಂತರ ಅಲ್ಲಿ ಕಾಣುವ “ಕಂದಾಯ ಇಲಾಖೆಯ” ಮೇಲೆ ಕ್ಲಿಕ್ ಮಾಡಬೇಕು..
ನಂತರ ಕಂದಾಯ ಇಲಾಖೆ ಸೇವೆಗಳು ಇದರ ಮೇಲೆ ಕ್ಲಿಕ್ ಮಾಡಿ
ನಂತರ clws ರೈತನ ಅರ್ಹತೆ ಮೇಲೆ ಕ್ಲಿಕ್ ಮಾಡಿ
ನಂತರ ಮುಂದಿನ ಮುಖಪುಟದಲ್ಲಿ ಕಾಣುವ ನಿಮ್ಮ ಜಿಲ್ಲೆ, ಮತ್ತು ಬ್ಯಾಂಕ್ ಸೆಲೆಕ್ಟ್ ಮಾಡಿ, ಸಲ್ಲಿಸು ಮೇಲೆ ಕ್ಲಿಕ್ ಮಾಡಿ.
ನಂತರ ಈ ಕೆಳಗೆ ಸೂಚಿಸಿರುವ ಸಾಲ ಮನ್ನಾ ಅರ್ಹತೆ ಹಾಗೂ ದಾಖಲೆಗಳನ್ನು ನೀವು ನೋಡಬಹುದು.ಹಾಗೂ ಸಾಲ ಮನ್ನಾ ಸ್ಥಿತಿ ಗತಿ ಯನ್ನು ಅಲ್ಲಿ ಕಾಣುತ್ತಿರಿ.
ರೈತರ ಬೆಳೆ ಸಾಲಗಳ ಮರುರಚನೆಗೆ ತೀರ್ಮಾನ:-
ಎಲ್ಲಾ ಬ್ಯಾಂಕುಗಳು ಆರ್‌ಬಿಐಗೆ(RBI) ಸಭೆಯ ನಡವಳಿ ಸಹಿತ ಸೂಚನೆಯನ್ನು ಈಗಾಗಲೇ ಕಳುಹಿಸಲಾಗಿದೆ. ಪರಿಹಾರ ಸಂದರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡುವುದಾಗಿ ರಾಜ್ಯಮಟ್ಟದ ಬ್ಯಾಂಕ್‌ಗಳ ಸಮಿತಿ ಉಸ್ತುವಾರಿ ಸಂಚಾಲಕರಾದ ಬಿ ಪಾರ್ಶ್ವನಾಥ್ ಅವರು ತಿಳಿಸಿದ್ದಾರೆ.
ಬರ ಪರಿಹಾರ: ರೈತರ ಬೆಳೆ ಸಾಲಗಳ ಪುನರ್ ರಚಿಸುವಂತೆ ಎಲ್ಲಾ ಬ್ಯಾಂಕ್ ಗಳಿಗೆ ಸರ್ಕಾರ ಸೂಚನೆ
ಬರಗಾಲದಿಂದ ರೈತರು ಅನುಭವಿಸುತ್ತಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ರೈತರ ಸಾಲ ಪುನರ್ ರಚಿಸುವಂತೆ ಎಲ್ಲ ಬ್ಯಾಂಕ್‌ಗಳಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ಸಾಲ ಮನ್ನಾ ಸ್ಟೇಟಸ್ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಸಾಲ ಮನ್ನಾ ಸ್ಟೇಟಸ್ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ಕೇಂದ್ರದಿಂದ 17.901 ಕೋಟಿ ರೂ ಬಿಡುಗಡೆ ರೈತರ ಖಾತೆಗೆ ಯಾವಾಗ ಜಮೆಯಾಗುತ್ತದೆ ಇಲ್ಲಿ ನೋಡಿ https://krushivahini.com/2023/11/01/bara-parihara-update/
➡️ ಇನ್ನೊಂದು ಹಂತದ ಬರ ಅಧ್ಯಯನ ಆರಂಭ? ಸದ್ಯದಲ್ಲೇ ಬರಲಿದೆ ರೈತರ ಖಾತೆಗೆ ಬರ ಪರಿಹಾರ ಹಣ💸 https://krushivahini.com/2023/10/31/drought-situation-study/
➡️ ಇನ್ನೂ ಆದರೂ ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬರುತ್ತಿಲ್ಲ?? ಮತ್ತೆ ಏಕೆ ಬರ ಅದ್ಯಯನ?? ಎಂದು ಸಿಎಂ ಪ್ರಶ್ನೆ ಮೊದಲು ಪರಿಹಾರ ಕೊಡಿ https://krushivahini.com/2023/10/31/why-drought-relief-has-not-been-given/
➡️ ನಿಮಗೆ ಎಷ್ಟು ಬೆಳೆ ಹಾನಿ ಹಣ ಜಮೆಯಾಗಿದೆ?? ವಿಮಾ ಕಂಪನಿಯಿಂದ ಈ ಜಿಲ್ಲೆಗೆ 26.17 ಕೋಟಿ ಬೆಳೆ ವಿಮೆ ಜಮಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ https://krushivahini.com/2023/10/30/crop-loss-compensation-status-check/
➡️ ದೀಪಾವಳಿ ಹಬ್ಬಕ್ಕೆ ರೈತರಿಗೆ ಭರ್ಜರಿ ಸುದ್ದಿ ಈ ದಿನ ಬರಲಿದೆ ರೈತರ ಖಾತೆಗೆ 2000 ಹಣ https://krushivahini.com/2023/10/30/pm-kisan-15-th-installment/
➡️ ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಗೆ ಗುಡುಗು ಮಿಂಚು ಸಹಿತ ಭಾರಿ ಮಳೆಯ ಸಾಧ್ಯತೆ https://krushivahini.com/2023/10/29/karnataka-rain-update/
jayakumarcsj@gmail.com
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ