Rice price increased :-ಕೋಟ: ಒಂದು ವರ್ಷದಲ್ಲಿ ಕುಚ್ಚಲಕ್ಕಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಭತ್ತದ ಖರೀದಿ ಬೆಲೆ ಮಾತ್ರ ಕೊಂಚವೂ ಏರಿಕೆಯಾಗಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಲಿದ್ದು, ಭತತದ ಧಾರಣೆಯೂ ಹೆಚ್ಚಬೇಕೆಂಬ ಒತ್ತಾಯ ರೈತ ವಲಯದ್ದು.

ಕುಚ್ಚಲಕ್ಕಿಗೆ ಕೆ.ಜಿ.ಗೆ 15 ರಿಂದ 20 ರೂ. ಹೆಚ್ಚಳವಾಗಿ 48 ರಿಂದ 50 ರೂ. ನಲ್ಲಿ ಮಾರಾಟವಾಗುತ್ತಿದೆ. ಆದರೆ ಭತ್ತದ ಬೆಲೆ ಕೆ.ಜಿ.ಗೆ 2-3 ರೂ. ಮಾತ್ರ ಏರಿಕೆಯಾಗಿದೆ. ಖಾಸಗಿ ಮಿಲ್‌ಗ‌ಳಲ್ಲಿ ಸ್ಥಳೀಯ ಭತ್ತಕ್ಕೆ ಕ್ವಿಂಟಾಲ್‌ಗೆ 2,500-2,600 ರೂ. ಇದೆ. ಕಟಾವು ಚುರುಕುಗೊಂಡ ತತ್‌ಕ್ಷಣ ಇಳಿಮುಖವಾಗುವ ಭೀತಿಯೂ ಇದೆ.

ಕರಾವಳಿಯಲ್ಲಿ ಭತ್ತದ ಕಟಾವು ಆರಂಭ: ಈ ಬಾರಿಯೂ “ಬೆಂಬಲ ಬೆಲೆ’ ಘೋಷಣೆ ವಿಳಂಬ. ತಪ್ಪದೆ ಈ ಪೂರ್ಣ ಲೇಖನವನ್ನು ಓದಿರಿ.🙏🏻. ಭತ್ತದ ಸಂಪೂರ್ಣ ಮಾಹಿತಿ ಪಡೆಯಿರಿ.

ಕರಾವಳಿ ಸೇರಿದಂತೆ ಮಲೆನಾಡು, ಬಯಲುಸೀಮೆ ಭಾಗದಲ್ಲೂ ಕಾರ್ಮಿಕರ ಕೊರತೆ, ಬೆಲೆಯ ಅಸ್ಥಿರತೆ ಇತ್ಯಾದಿ ಕಾರಣಕ್ಕೆ ಭತ್ತದ ಬೇಸಾಯ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕುಚ್ಚಲಕ್ಕಿ ಬೆಲೆ ಏರಿಕೆಯಾಗಿದೆ. ಆದರೆ ಮಧ್ಯವರ್ತಿಗಳು

ಭತ್ತದ ಬೆಳೆಯನ್ನು ಏರದಂತೆ ತಡೆಯುತ್ತಿದ್ದಾರೆ ಎಂಬ ಆಪಾದನೆ ರೈತ ವಲಯದ್ದು.

ಸರಕಾರ ಮಧ್ಯ ಪ್ರವೇಶಿಸಲಿ:- ಭತ್ತ ಹಾಗೂ ಅಕ್ಕಿ ನಡುವಿನ ಬೆಲೆ ವ್ಯತ್ಯಾಸವನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಲು ಸರಕಾರ ಮಧ್ಯಪ್ರವೇಶಿಸಿ ಕೂಡಲೇ ಭತ್ತಕ್ಕೆ ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸಬೇಕು. ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಭತ್ತ ಖರೀದಿಸದಂತೆ ಖಾಸಗಿಯವರಿಗೆ ಕಡಿವಾಣ ಹಾಕುವ ವ್ಯವಸ್ಥೆ ಜಾರಿಯಾಗಬೇಕು ಎಂಬುದು ರೈತರ ಆಗ್ರಹ.

ಕರಾವಳಿಯ ಭತ್ತಕ್ಕೆ ಸಿಗುತ್ತಿರುವ ಬೆಲೆ ತೀರಾ ಕಡಿಮೆ. ಮಾರುಕಟ್ಟೆಯನ್ನು ಖಾಸಗಿ ವ್ಯವಸ್ಥೆ ನಿಯಂತ್ರಿಸುತ್ತಿರುವುದು ಮತ್ತು ಹೊರ ಜಿಲ್ಲೆಗಳಿಂದ ಕಡಿಮೆ ಬೆಲೆಗೆ ಭತ್ತ ಪೂರೈಕೆಯಾಗುತ್ತಿರುವುದೇ ಇದಕ್ಕೆ ಕಾರಣ. ಕಳೆದ ವರ್ಷ ರಾಜ್ಯ ಸರಕಾರ ಕುಚ್ಚಲಕ್ಕಿಗೆ 500 ರೂ. ಹೆಚ್ಚುವರಿ ಬೆಂಬಲ ಬೆಲೆ ನಿಗದಿಪಡಿಸಿತ್ತು. ಈ ಬಾರಿಯೂ ಅದೇ ಮಾದರಿಯನ್ನು ಅನುಸರಿಸುವಂತೆ ಸರಕಾರದ ಗಮನ ಸೆಳೆಯಲಾಗುವುದು.

Paddy ಕರಾವಳಿಯಲ್ಲಿ ಭತ್ತದ ಕಟಾವು ಆರಂಭ: ಈ ಬಾರಿಯೂ “ಬೆಂಬಲ ಬೆಲೆ’ ಘೋಷಣೆ ವಿಳಂಬ

ಕುಂದಾಪುರ: ಕರಾವಳಿಯೆಲ್ಲೆಡೆ ಭತ್ತ ಕಟಾವು ಆರಂಭಗೊಂಡಿದ್ದರೂ ಈ ಬಾರಿಯೂ ಭತ್ತಕ್ಕೆ ಬೆಂಬಲ ಬೆಲೆ ಘೋಷಣೆಯಾಗಲಿ, ಖರೀದಿ ಕೇಂದ್ರ ಆರಂಭಿಸುವ ಬಗ್ಗೆಯಾಗಲೀ ಯಾವುದೆ ಪ್ರಕ್ರಿಯೆ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಸರಕಾರ ಪ್ರಕ್ರಿಯೆ ಆರಂಭಿಸಬೇಕೆಂಬ ಆಗ್ರಹ ಕೃಷಿಕ ವಲಯದಿಂದ ವ್ಯಕ್ತವಾಗಿದೆ.

ಪ್ರತಿ ವರ್ಷವೂ ವ್ಯಾಪಾರಸ್ಥರ ಲಾಬಿಯ ಕಾರಣದಿಂದ ರೈತರು ಭತ್ತವನ್ನೆಲ್ಲಾ ಮಾರಿದ ಮೇಲೆ ಖರೀದಿ ಕೇಂದ್ರಗಳನ್ನು ತೆರೆಯುತ್ತವೆ. ಈ ಬಾರಿಯೂ ಅದು ಪುನರಾವರ್ತನೆಯಾಗಲಿದೆ ಎಂಬ ಅಭಿಪ್ರಾಯವೂ ಕೃಷಿಕ ವಲಯದಲ್ಲಿ ಕೇಳಿಬರುತ್ತಿದೆ.

ಕಳೆದ ವರ್ಷವೂ ಸೇರಿದಂತೆ ಹಿಂದೆ ಬೆಂಬಲ ಬೆಲೆ ಘೋಷಣೆ ಹಾಗೂ ಖರೀದಿ ಕೇಂದ್ರ ತೆರೆಯುವಲ್ಲಿನ ವಿಳಂಬದಿಂದ ಕರಾವಳಿಯ ರೈತರಿಗೆ ಖರೀದಿ ಕೇಂದ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿತ್ತು.

ಕೇಂದ್ರ ಸರಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‌ಗೆ (ಕಳೆದ ಬಾರಿ 2,040 ರೂ. ಹಾಗೂ ಗ್ರೇಡ್‌ ಎ ಭತ್ತಕ್ಕೆ 2,060 ರೂ., ಕುಚ್ಚಲಕ್ಕಿ ಭತ್ತಕ್ಕೆ ಹೆಚ್ಚುವರಿ 500 ರೂ.) ದರ ನಿಗದಿಪಡಿಸಿ ರಾಜ್ಯ ಸರಕಾರಕ್ಕೆ ಭತ್ತದ ಖರೀದಿ ಕೇಂದ್ರಗಳಲ್ಲಿ ಖರೀದಿ ಮಾಡುವಂತೆ ಆದೇಶ ಹೊರಡಿಸಿತ್ತು. ಈ ಬಾರಿ ಯಾವುದೇ ಆದೇಶ ಬಂದಿಲ್ಲ.

ಉಡುಪಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದ.ಕ.ದಲ್ಲಿ ಇನ್ನೂ ಪ್ರಕ್ರಿಯೆ ಆರಂಭವಾಗಬೇಕಿದೆ. ಪ್ರತೀ ಬಾರಿಯೂ ಪ್ರಕ್ರಿಯೆ ವಿಳಂಬ ಆಗುತ್ತಿರುವುದರಿಂದ ಕರಾವಳಿಯ ರೈತರಿಗೆ ಅನ್ಯಾಯವಾಗುತ್ತಿದೆ.

2 ಜಿಲ್ಲೆ : 31 ಕ್ವಿಂಟಾಲ್‌ ಮಾತ್ರ

ಕೇಂದ್ರ ಆರಂಭದಲ್ಲಿನ ವಿಳಂಬದಿಂದ ಕಳೆದ ವರ್ಷ ದ.ಕ. ಜಿಲ್ಲೆಯ ಮಂಗಳೂರು, ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಮೂಡುಬಿದಿರೆ, ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು, ಹೆಬ್ರಿ, ಅಜೆಕಾರು, ಬ್ರಹ್ಮಾವರ, ಕೋಟದಲ್ಲಿ ಬೆಂಬಲ ಬೆಲೆಯಡಿ ಭತ್ತದ ಖರೀದಿ ಕೇಂದ್ರಗಳ ಪೈಕಿ ಉಡುಪಿ ಜಿಲ್ಲೆಯಲ್ಲಿ ಒಬ್ಬರು 31 ಕ್ವಿಂಟಾಲ್‌ ಭತ್ತ ಕೊಟ್ಟಿದ್ದರಷ್ಟೇ. 2015-16ರಲ್ಲಿ 6 ರೈತರಿಂದ 168 ಕ್ವಿಂಟಾಲ್‌ ಭತ್ತ, 20161-17ರಲ್ಲಿ 29 ರೈತರಿಂದ 68 ಕ್ವಿಂಟಾಲ್‌ ಭತ್ತವನ್ನು ಖರೀದಿಸಲಾಗಿತ್ತು. 2017ರಿಂದ ಕಳೆದ ವರ್ಷದವರೆಗೆ ಒಂದು ಕೆಜಿ ಭತ್ತ ಸಹ ಖರೀದಿ ಕೇಂದ್ರಕ್ಕೆ ಬರಲಿಲ್ಲ. ಉಡುಪಿಯಲ್ಲಿ 45 ರೈತರು ನೋಂದಾಯಿಸಿದ್ದರೆ, ದ.ಕ.ದಲ್ಲಿ ಯಾರೂ ನೋಂದಾಯಿಸಿರಲಿಲ್ಲ.

ಈ ಬಾರಿ ಮುಂಗಾರಿನ ಕೊರತೆ ಭತ್ತದ ಬೆಳೆಯ ಮೇಲೂ ಪರಿಣಾಮ ಬೀರಿದೆ. 5 ಕ್ವಿಂಟಾಲ್‌ ಇಳುವರಿ ಬರುವಲ್ಲಿ 2 ಕ್ವಿಂಟಾಲ್‌ ಸಿಗುವುದೂ ಕಷ್ಟ ಎಂಬ ಅಭಿಪ್ರಾಯದಲ್ಲಿ ದ್ದಾರೆ ಹೊಸಂಗಡಿ ಬೆಚ್ಚಳ್ಳಿಯ ಕೃಷಿಕ ರಾಜೇಂದ್ರ ಪೂಜಾರಿಯಂಥ ಹಲವರು.

ವ್ಯಾಪಾರಸ್ಥರ ಲಾಬಿ ಕಾರಣ ರೈತರಲ್ಲಿರುವ ಭತ್ತವೆಲ್ಲ ಖಾಸಗಿಯವರಿಗೆ ಮಾರಾಟವಾದ ಬಳಿಕ ಸರಕಾರ ಖರೀದಿ ಕೇಂದ್ರ ಆರಂಭಿಸುತ್ತದೆ. ಇದಕ್ಕೆ ವ್ಯಾಪಾರಸ್ಥರ ಲಾಬಿಯೇ ಕಾರಣ. ಜನಪ್ರತಿನಿಧಿಗಳೂ ಈ ಬಗ್ಗೆ ಚಿಂತಿಸುವುದಿಲ್ಲ. ಹಾಗಾಗಿ ಪ್ರತೀ ಬಾರಿಗ ಇಲ್ಲಿನ ರೈತರಿಗೆ ಅನ್ಯಾಯವಾಗುತ್ತಿದೆ ಎನ್ನುತ್ತಾರೆ ರೈತ ಸಂಘ ತ್ರಾಸಿ ವಲಯದ ಅಧ್ಯಕ್ಷ ಶರತ್‌ ಕುಮಾರ್‌ ಶೆಟ್ಟಿ.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಮೇಲುಸ್ತುವಾರಿಯೆಲ್ಲ ಎಪಿಎಂಸಿಯದ್ದಾಗಿದೆ.

– ಸೀತಾ ಎಂ.ಸಿ./

ಕೆಂಪೇಗೌಡ ಎಚ್‌.,

ಜಂಟಿ ನಿರ್ದೇಶಕರು,

ಕೃಷಿ ಇಲಾಖೆ ಉಡುಪಿ, ದ.ಕ. ಜಿಲ್ಲೆ,

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಅಕ್ಕಿ ಬೆಲೆ ಏರಿಕೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈರುಳ್ಳಿ ಮಾರುಕಟ್ಟೆ ಏರಿಕೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಗೆ ಗುಡುಗು ಮಿಂಚು ಸಹಿತ ಭಾರಿ ಮಳೆಯ ಸಾಧ್ಯತೆ https://krushivahini.com/2023/10/29/karnataka-rain-update/

➡️ ಈ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ ಮಧ್ಯಂತರ ಬೆಳೆ ವಿಮೆ ಬಿಡುಗಡೆ https://krushivahini.com/2023/10/29/release-of-interim-crop-insurance-2/

Leave a Reply

Your email address will not be published. Required fields are marked *