Onion rate hike :-

ಬೆಂಗಳೂರು: ರಾಜ್ಯದಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ರೀತಿಯಲ್ಲಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಸಗಟು ಮತ್ತು ಚಿಲ್ಲರೆ ಮಾರಾಟ ದರ ಏರಿಕೆ ಕಾಣುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸದ್ಯ ಕೆ.ಜಿಗೆ ಗರಿಷ್ಠ 70 ರಂತೆ ಮಾರಾಟ ಆಗುತ್ತಿದ್ದು, ಪೂರೈಕೆ ಸುಧಾರಿಸದೇ ಇದ್ದರೆ ಕೆ.ಜಿಗೆ 110 ರ ಗಡಿ ದಾಟುವ ಸಾಧ್ಯತೆ ಇದೆ.ಬೆಂಗಳೂರು: ರಾಜ್ಯದಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಾಗುತ್ತಿರುವ

ರೀತಿಯಲ್ಲಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಸಗಟು ಮತ್ತು ಚಿಲ್ಲರೆ ಮಾರಾಟ ದರ ಏರಿಕೆ ಕಾಣುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸದ್ಯ ಕೆ.ಜಿಗೆ ಗರಿಷ್ಠ 70ರಂತೆ ಮಾರಾಟ ಆಗುತ್ತಿದ್ದು, ಪೂರೈಕೆ ಸುಧಾರಿಸದೇ ಇದ್ದರೆ ಕೆ.ಜಿಗೆ 110ರ ಗಡಿ ದಾಟುವ ಸಾಧ್ಯತೆ ಇದೆ.

ಮಳೆ ಕೊರತೆಯಿಂದಾಗಿ ಹಲವೆಡೆ ಇಳುವರಿ ತಗ್ಗಿದರೆ, ಇನ್ನೂ ಕೆಲವು ಭಾಗಗಳಲ್ಲಿ ಬೆಳೆ ನಾಶವಾಗಿದೆ. ಆದರೆ ಬೇಡಿಕೆ ಮಾತ್ರ ಹೆಚ್ಚಾಗುತ್ತಿದೆ. ಈ ಕಾರಣಗಳಿಂದಾಗಿ ಈರುಳ್ಳಿ ದರದಲ್ಲಿ ಏರಿಕೆ ಕಾಣುತ್ತಿದೆ ಎಂದು ಎಪಿಎಂಸಿ ಅಧಿಕಾರಿಗಳು, ವ್ಯಾಪಾರಿಗಳು ಹೇಳುತ್ತಿದ್ದಾರೆ.

10 ದಿನಗಳಿಂದಲೂ ಬೆಲೆ ಏರಿಕೆ ಕಾಣುತ್ತಿದೆ. ದೊಡ್ಡ ಗಾತ್ರದ ಈರುಳ್ಳಿಯ ಸಗಟು ದರವು ಶುಕ್ರವಾರ ಕ್ವಿಂಟಲ್‌ಗೆ * 5,800 ರಿಂದ 7600 ಸಾವಿರದವರೆಗೆ ಆಗಿದೆ ಎಂದು ಯಶವಂತಪುರದಲ್ಲಿ ಸಗಟು ವ್ಯಾಪಾರ ನಡೆಸುವ ಬಾಬುರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಪೂರೈಕೆ ಆಗದಿರುವುದೇ ಈರುಳ್ಳಿ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನುತ್ತಾರೆ ಯಶವಂತಪುರದ ಮಹೇಶ್ ಟ್ರೇಡಿಂಗ್ ಆ್ಯಂಡ್ ಕಂಪನಿಯ ವೈಶಾಖ್‌. ರಾಜ್ಯದಲ್ಲಿಯೂ ಹೊಸ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ.

ಮಹಾರಾಷ್ಟ್ರದಿಂದ ಪೂರೈಕೆ ಕಡಿಮೆ ಆಗಿದೆ. ಪೂರೈಕೆ ಸ್ಥಿತಿ ಸುಧಾರಿಸದೇ ಇದ್ದರೆ ದೀಪಾವಳಿ ವೇಳೆಗೆ ಕೆ.ಜಿಗೆ 110 ನ್ನು ದಾಟುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಯಶವಂತಪುರ ಎಪಿಎಂಸಿಗೆ ಕಳೆದ ತಿಂಗಳು ದಿನಕ್ಕೆ ಸರಾಸರಿ 70- 75 ಸಾವಿರ ಚೀಲ ಈರುಳ್ಳಿ ಬಂದಿತ್ತು. ಆದರೆ ಈ ತಿಂಗಳು ಸರಾಸರಿ 40-50 ಸಾವಿರ ಚೀಲ ಮಾತ್ರ ಬರುತ್ತಿದೆ ಎನ್ನುತ್ತಾರೆ ಸಗಟು ವ್ಯಾಪಾರಿ ಲೋಕಪ್ಪ ಜಿ.

ಯಶವಂತಪುರ ಎಪಿಎಂಸಿಯಲ್ಲಿಕ್ವಿಂಟಲ್‌ಗೆ 14800ರಂತೆ 60 ಕ್ವಿಂಟಲ್ ಈರುಳ್ಳಿಯನ್ನು ಶುಕ್ರವಾರ ಮಾರಾಟ ಮಾಡಿದ್ದೇನೆ. ಕಳೆದ 4 ವರ್ಷದಿಂದ ಉತ್ತಮ ಬೆಲೆ ಇರಲಿಲ್ಲ. ಈಗ ಬೆಲೆ ಹೆಚ್ಚಾಗಿರುವುದರಿಂದ ಅನುಕೂಲ ಆಯಿತು ಎನ್ನುತ್ತಾರೆ ಚಿತ್ರದುರ್ಗ ಜಿಲ್ಲೆಯ ರೈತ ಕೊಟ್ರೇಶ್‌.

ಉಡುಪಿ ಜಿಲ್ಲೆಯಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟ ದರವು ಬುಧವಾರ ಕೆ.ಜಿಗೆ 145 ಇದ್ದಿದ್ದು ಶುಕ್ರವಾರ ಕೆ.ಜಿಗೆ 170ಕ್ಕೆ ಏರಿಕೆ ಕಂಡಿದೆ. ಮಂಗಳೂರಲ್ಲಿ ಚಿಲ್ಲರೆ ದರ ಕೆ.ಜಿಗೆ 360ರಿಂದ 165ರವರೆಗೆ ಮಾರಾಟ ಆಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಡೂರು ಮತ್ತು ತರೀಕೆರೆ ಭಾಗದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. 10,950 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಹೊಂದಲಾಗಿತ್ತು. ಮಳೆ ಕೊರತೆಯಿಂದ 6,214 ಹೆಕ್ಟೇರ್‌ನಲ್ಲಿ ಮಾತ್ರ ಬೆಳೆಯಲು ಸಾಧ್ಯವಾಗಿದೆ. ಇಳುವರಿ ಕೂಡ ಕುಂಠಿತವಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಚಿಕ್ಕಮಗ ಳೂರು ಜಿಲ್ಲೆಯಲ್ಲಿ ಸಗಟು ದರ ಕ್ವಿಂಟಲ್‌ಗೆ ದಪ್ಪ ಈರುಳ್ಳಿ 24,000 ಇದೆ.

ತಗ್ಗಿದ ಅವಕ; ಏರಿದ ಧಾರಣೆ

ಹುಬ್ಬಳ್ಳಿ: ಧಾರವಾಡ, ವಿಜಯಪುರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಈರುಳ್ಳಿ ದರ ಕೆಜಿಗೆ 1 60 ರಿಂದ 7 70ಕ್ಕೆ ಏರಿಕೆಯಾಗಿದೆ. ಗದಗ, ಹಾವೇರಿ, ಬಾಗಲಕೋಟೆ, ಹುಬ್ಬಳ್ಳಿ ಸೇರಿ ಬಹುತೇಕ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಈರುಳ್ಳಿಯ ಅವಕದ ಪ್ರಮಾಣ ಕಡಿಮೆಯಾಗಿದೆ.

ಮಳೆ ಕೊರತೆ, ಫಸಲು ನಾಶ: ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೆಳೆ ಹಾಳಾಗಿ ಫಸಲು ಕಡಿಮೆ ಆಗಿರುವುದರಿಂದ ಬೆಲೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ 21,862 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದು, 18,898 ಹೆಕ್ಟೇರ್‌ನಷ್ಟು ಬೆಳೆ ಹಾಳಾಗಿದೆ. ಇದರಿಂದ ರೈತರಿಗೆ 1236 ಕೋಟಿ ನಷ್ಟವಾಗಿದೆ. ಎಪಿಎಂಸಿಗೆ ಕಳೆದ ವಾರ 2,400 ಚೀಲ ಈರುಳ್ಳಿ ಆವಕವಾಗಿದ್ದು, ಪ್ರತಿ ಕ್ವಿಂಟಲ್‌ಗೆ 33,200 ರಿಂದ 15,500ರವರೆಗೆ ಮಾರಾಟವಾಗುತ್ತಿದೆ.

ಮಳೆ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಂದಿಲ್ಲ. ಎರಡು ವರ್ಷಗಳಿಂದ ಈರುಳ್ಳಿ ದರದಲ್ಲಿ ಹೆಚ್ಚು ವ್ಯತ್ಯಾಸ ಕಂಡು ಬಾರದ ಹಿನ್ನೆಲೆಯಲ್ಲಿ ಬಹುತೇಕ ರೈತರು ಪರ್ಯಾಯ ಬೆಳೆಯ ಮೊರೆ ಹೋಗಿದ್ದಾರೆ. ಹುಬ್ಬಳ್ಳಿಯಲ್ಲಿ 15 ದಿನದ ಹಿಂದೆ ಎಪಿಎಂಸಿ ಮಾರುಕಟ್ಟೆಯಲ್ಲಿ 1 ಕ್ವಿಂಟಲ್‌ಗೆ ಸರಾಸರಿ 73 ಸಾವಿರ ಇದ್ದ ಈರುಳ್ಳಿ ದರ ಈಗ 16 ಸಾವಿರದ ಗಡಿ ದಾಟಿದೆ.

‘ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಲ್ಲಿ 6,799 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯುವ ಗುರಿಯಿತ್ತು. ಮಳೆ ಕೊರತೆಯಿಂದ 6,126 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

‘ಇದೇ ಪರಿಸ್ಥಿತಿ ಮುಂದುವರಿದರೆ, ಮುಂದಿನ 15 ದಿನಗಳಲ್ಲಿ ಈರುಳ್ಳಿ ಒಂದು ಕ್ವಿಂಟಲ್‌ಗೆ 18 ಸಾವಿರದಿಂದ 19 ಸಾವಿರಕ್ಕೆ ಏರಿಕೆಯಾಗಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ 1100 ರಿಂದ 7120ಕ್ಕೆ ಏರಿಕೆಯಾಗಬಹುದು’ ಎಂದು ಮಹಾವೀರ ಟ್ರೇಡರ್ಸ್ ಮಾಲೀಕ ಮಹಾವೀರ ಪಾಟೀಲ ಹೇಳಿದರು.

‘ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ದರ ತಿಂಗಳ ಹಿಂದೆ ಕ್ವಿಂಟಲ್‌ಗೆ 1 2,500 ಇತ್ತು. ಈಗ ಸರಾಸರಿ 35,500ಕ್ಕೆ ಮಾರಾಟವಾಗಿದೆ. ಪ್ರತಿವರ್ಷ ಈ ಅವಧಿಯಲ್ಲಿ ವಾರಕ್ಕೆ 40 ಸಾವಿರ ಕ್ವಿಂಟಲ್ ಈರುಳ್ಳಿ ಅವಕವಾಗುತ್ತಿತ್ತು. ಈಗ 30 ಸಾವಿರ ಕ್ವಿಂಟಲ್ ಆವಕವಾಗಿದೆ’ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದರು.

ಮಳೆ ಕೊರತೆ: ಬಿತ್ತನೆ, ಇಳುವರಿ ಕುಸಿತ

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಬಿತ್ತನೆ ಪ್ರಮಾಣ ಕುಂಠಿತವಾಗಿದೆ. ಇದರಿಂದಾಗಿ ಇಳುವರಿಯೂ ತಗ್ಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ 26,823 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, ಅಂದಾಜು 18,000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಈರುಳ್ಳಿ ಬಿತ್ತನೆ ಆಗಿದೆ. ಆಗಸ್ಟ್‌ನಲ್ಲಿ ಏಕಾಏಕಿ ಮಳೆ ಕೈಕೊಟ್ಟಿದ್ದರಿಂದ ಬೆಳೆಗೆ ನೀರಿನ ಕೊರತೆ ಉಂಟಾಗಿ ಬೆಳೆ ಕೈ ಸೇರದಂತಾಯಿತು. ಪ್ರತಿ ಹೆಕ್ಟೇರ್‌ಗೆ ನಿರೀಕ್ಷಿತ ಇಳುವರಿ ದೊರೆತಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿಗೆ ಶುಕ್ರವಾರ 160 ದರ ಇತ್ತು.

ಮಹಾರಾಷ್ಟ್ರದಿಂದ ಬಾರದ ದಾಸ್ತಾನು: ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳ ಗ್ರಾಹಕರು ಈರುಳ್ಳಿಗಾಗಿ ಮಹಾರಾಷ್ಟ್ರದ ನಾಸಿಕ್, ಸೋಲಾಪುರ ಅವಲಂಬಿಸಿದ್ದು, ಅಲ್ಲಿಂದ ಬೇಡಿಕೆಯಷ್ಟು ಬಾರದ ಕಾರಣ ಕಳೆದ ಎರಡು-ಮೂರು ದಿನಗಳಿಂದ ಈರುಳ್ಳಿ ಬೆಲೆ ದುಪ್ಪಟ್ಟಾಗಿದೆ.

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸರಾಸರಿ ಒಂದು ಕೆ.ಜಿಗೆ – 30 ಇದ್ದ ಈರುಳ್ಳಿ ದರ ಇದೀಗ 7 60ಕ್ಕೆ ಮಾರಾಟವಾಗುತ್ತಿದೆ. ದೊಡ್ಡ ಗಾತ್ರದ ಈರುಳ್ಳಿ ಬೆಲೆ ಕೆ.ಜಿಗೆ 7 80ಕ್ಕೆ ಮಾರಾಟವಾಗುತ್ತಿದೆ. ಕಲಬುರಗಿಯ ಕಣ್ಣಿ ಮಾರ್ಕೆಟ್ ಹಾಗೂ ತಾಜ್ ಸುಲ್ತಾನಪುರ ಮಾರುಕಟ್ಟೆಯಲ್ಲಿ ಬುಧವಾರ ಪ್ರತಿ ಕೆ.ಜಿಗೆ 130 ರಿಂದ 7 40ನಂತೆ ಮಾರಾಟವಾಗಿದ್ದ ಈರುಳ್ಳಿ ಶುಕ್ರವಾರ ಪ್ರತಿ ಕೆ.ಜಿಗೆ 7 60ರಿಂದ 7 70ರಂತೆ ಮಾರಾಟವಾಗಿದೆ.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ.🙏🏻 ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಈರುಳ್ಳಿ ಮಾರುಕಟ್ಟೆ ಏರಿಕೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈರುಳ್ಳಿ ಮಾರುಕಟ್ಟೆ ಏರಿಕೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

ತಪ್ಪದೇ ತಿಳಿಯಿರಿ 🙏🏻👇🏻

➡️ ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 324 ಕೋಟಿ ರೂ ಅನುದಾನ ಬಿಡುಗಡೆ ಯಾವ ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆ ಇಲ್ಲಿ ನೋಡಿರಿ 👇🏻https://krushivahini.com/2023/11/03/324-crore-drought-relief-released/

➡️ ನಿಮಗೆ ಎಷ್ಟು ಬೆಳೆ ಹಾನಿ ಹಣ ಜಮೆಯಾಗಿದೆ?? ವಿಮಾ ಕಂಪನಿಯಿಂದ ಈ ಜಿಲ್ಲೆಗೆ 26.17 ಕೋಟಿ ಬೆಳೆ ವಿಮೆ ಜಮಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ https://krushivahini.com/2023/10/30/crop-loss-compensation-status-check/

➡️ ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಗೆ ಗುಡುಗು ಮಿಂಚು ಸಹಿತ ಭಾರಿ ಮಳೆಯ ಸಾಧ್ಯತೆ https://krushivahini.com/2023/10/29/karnataka-rain-update/

➡️ ಈ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ ಮಧ್ಯಂತರ ಬೆಳೆ ವಿಮೆ ಬಿಡುಗಡೆ https://krushivahini.com/2023/10/29/release-of-interim-crop-insurance-2/

➡️ ಸರ್ಕಾರದಿಂದ ಯಾವ ಯೋಜನೆಗೆ ಎಷ್ಟು ಹಣ ನಿಮಗೆ ಜಮೆಯಾಗಿದೆ?? ಇಲ್ಲಿ ನೋಡಿ ಪಿಎಂ ಕಿಸಾನ್, ಗೃಹಲಕ್ಷ್ಮಿ, ರೈತ ಶಕ್ತಿ ಎಷ್ಟು ಹಣ ಬಂದಿದೆ https://krushivahini.com/2023/10/28/direct-benefit-transfer/

➡️ ಬೆಳೆ ಸಾಲ ಮನ್ನಾ ಸ್ಟೇಟಸ್ ಅನ್ನು ಮೊಬೈಲ್ನಲ್ಲಿ ಚೆಕ್ ಮಾಡಿ?? ಎಷ್ಟು ಸಾಲ ಮನ್ನಾ ಆಗಿದೆ https://krushivahini.com/2023/10/28/sala-manna-status-check/

➡️ 💚ಅಕ್ಕಿ ಬೆಲೆ ಏರಿಕೆ! ಭತ್ತದ ಕಟಾವು ಆರಂಭವಾಗಿದೆ ಇನ್ನೂ ಆದರೂ ಸರ್ಕಾರದಿಂದ ಯಾವುದೇ ತರಹದ 💸ಬೆಂಬಲ ಬೆಲೆಯನ್ನು ಘೋಷಣೆ ಮಾಡಿಲ್ಲ
ಭತ್ತದ ಬೆಳೆಗೆ ಬೆಂಬಲ ಬೆಲೆಯನ್ನು ಯಾವಾಗ ಘೋಷಣೆ ಮಾಡುತ್ತಾರೆ?? ಹಾಗೂ ಎಷ್ಟು ಹಣ ಘೋಷಣೆಯಾಗುತ್ತದೆ ಇಲ್ಲಿ ನೋಡಿ 👇🏻
https://krushivahini.com/2023/10/28/rice-price-increased/

Leave a Reply

Your email address will not be published. Required fields are marked *