Onion rate increased :- ಟೊಮೆಟೊ ಆಯ್ತು… ಈಗ ಕೆಜಿಗೆ 100 ರೂ. ದಾಟುವ ಸರದಿ ಈರುಳ್ಳಿಯದ್ದು! ಕಾರಣವೇನು?

ಕರ್ನಾಟಕದಲ್ಲಿ ಕೆಲ ತಿಂಗಳುಗಳ ಹಿಂದೆ ಟೊಮೊಟೊ ಬೆಲೆ ಗಗನಕ್ಕೇರಿತ್ತು. 100 ರೂ. ಗಡಿ ದಾಟಿದ್ದ ಟೊಮೆಟೊ ದಾಸ್ತಾನು ಕಳ್ಳತನವಾಗಲು ಶುರುವಾಗಿದ್ದವು!

ಕಡೆಗೆ ಟೊಮೆಟೊಗಳನ್ನು ಪೊಲೀಸರ ಕಾವಲಿನೊಂದಿಗೆ ಮಾರಾಟ ಮಾಡುವಂಥ ಪರಿಸ್ಥಿತಿ ಬಂದಿತ್ತು. ಕೆಲವು ಕಡೆಗಳಲ್ಲಂತೂ ರೈತರು ತಮ್ಮ ಟೊಮೆಟೋ ದಾಸ್ತಾನು ಕಾಯಲು ಹೊಲಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು, ಮಾರುಕಟ್ಟೆಗಳಲ್ಲಿ ಬೌನ್ಸರ್ ಗಳನ್ನು ಕಾವಲಿಡುವುದು ಸಹ ಆಗಿತ್ತು. ಸದ್ಯದಲ್ಲೇ ಅಂಥದ್ದೇ ಪರಿಸ್ಥಿತಿ ಈರುಳ್ಳಿಗೆ ಬರುತ್ತೆ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಈರುಳ್ಳಿ ಇಳುವರಿ ಕುಸಿದಿದ್ದರಿಂದ ಬೆಲೆ ಅಧಿಕವಾಗಲಿದೆ ಎನ್ನಲಾಗಿದೆ.

ದಾವಣಗೆರೆ: ಟೊಮೋಟೊ ಆಯಿತು. ಈಗ ಈರುಳ್ಳಿಯ ಸರದಿ. ರೂ.100ರ ಗಡಿ ದಾಟಿ ಪೊಲೀಸ್ ರಕ್ಷಣೆಯಲ್ಲಿ ಮಾರಾಟವಾಗುತಿದ್ದ ಟಮೋಟೋ ಹಾದಿಯತ್ತ ಈರುಳ್ಳಿ ಸಾಗುತ್ತಿದೆ ಎನ್ನಬಹುದು. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಅಭಾವದಿಂದ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಇಳುವರಿ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ಪರಿಣಾಮ ಇನ್ನು ಕೆಲವೇ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ.

ದೇಶಾದ್ಯಂತ ಮಳೆಯ ಕೊರತೆ ಕೃಷಿ ವಲಯದ ಮೇಲೆ ಭಾರೀ ಪರಿಣಾಮ ಬೀರಿದೆ. ಮಳೆ ಆಧಾರಿತ ಬೆಳೆಗಳ ಉತ್ಪಾದನೆ ತೀವ್ರವಾಗಿ ಕುಂಠಿತವಾಗಿದ್ದು, ಪೂರೈಕೆಯಲ್ಲಿ ಭಾರೀ ವ್ಯತ್ಯಾಸ ಉಂಟು ಮಾಡಲಿದೆ.

ಈರುಳ್ಳಿ ಇಲ್ಲದ ಉಪ್ಪಿಟ್ಟು, ಚಿತ್ರಾನ್ನ, ಸಾಂಬಾರು ಹೇಗೆ ಮಾಡೋದು? ಬೆಲೆ ಏರಿಕೆ ತಂದ ಸಮಸ್ಯೆ

ದಾವಣಗೆರೆ ನಗರದ ಈರುಳ್ಳಿ ಮಾರುಕಟ್ಟೆಯಲ್ಲಿ ಸಗಟು 40 ರೂ ಗೆ ಮಾರಾಟವಾಗಿದ್ದು, ಗ್ರಾಹಕರ ಕೈ ಸೇರುವ ವೇಳೆಗೆ 50 ದಾಟಲಿದೆ ಎನ್ನುತ್ತಾರೆ ಈರುಳ್ಳಿ ಮಾರುಕಟ್ಟೆ ದಲ್ಲಾಲರ ಸಂಘದ ಅಧ್ಯಕ್ಷ ಎನ್.ಕೆ.ಬಸವಲಿಂಗಪ್ಪ.

ಕಳೆದ 15 ದಿನಗಳಿಂದ ನಗರದ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ ಸುಮಾರು 25ರಿಂದ 30 ರೂ.ಗಳಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 30 ರಿಂದ 35 ರೂ.ಗೆ ಮಾರಾಟವಾಗುತ್ತಿತ್ತು. ಸದ್ಯಕ್ಕೆ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ 45ರಿಂದ 50 ರೂ ಏರಿಕೆಯಾಗಿದೆ. ಮುಂದಿನ ತಿಂಗಳು ಈರುಳ್ಳಿ ಗ್ರಾಹಕರ ಕಣ್ಣಲ್ಲಿ ಮತ್ತಷ್ಟು ನೀರು ತರಿಸುವುದು ಗ್ಯಾರಂಟಿ ಎನ್ನಬಹುದು.

ದೇಶದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ ಮಹಾರಾಷ್ಟ್ರವಾಗಿದ್ದು, ಈರುಳ್ಳಿ ಮಾರುಕಟ್ಟೆಯಲ್ಲಿ ನಾಸಿಕ್ ಗಡ್ಡೆಯನ್ನೇ ಹೆಚ್ಚಾಗಿ ಜನರು ಕೊಳ್ಳುತ್ತಾರೆ. ಅಲ್ಲದೇ ಇದರ ಸೈಜ್ ಕೂಡ ದಪ್ಪವಾಗಿದ್ದು, ಒಣಗಿರುವ ಗಡ್ಡೆಯಾಗಿದೆ. ಆದರೆ ಈ ಬಾರಿ ಇಂತಹ ಈರುಳ್ಳಿಯನ್ನು ಮಹಾರಾಷ್ಟçದಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗಿದೆ. ಆದ್ದರಿಂದ ಲೋಕಲ್ ಎಪಿಎಂಸಿಗೆ ಈರುಳ್ಳಿಯ ಸಗಟು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.

ಬೇಡಿಕೆ ಹೆಚ್ಚಳ, ಪೂರೈಕೆ ಕೊರತೆ

ದಾವಣಗೆರೆ ಸೇರಿದಂತೆ ಎಲ್ಲ ಕಡೆ ದಿನ ಕಳೆದಂತೆ ಹೋಟೆಲ್‌ಗಳು, ಬೇಕರಿ ಸೇರಿದಂತೆ ಇತರೆ ಅಂಗಡಿಗಳು ಹೆಚ್ಚಾಗುತ್ತಿದೆ. ಆದರೆ ಬೇಡಿಕೆಗೆ ಅಗತ್ಯವಾದಷ್ಟು ಈರುಳ್ಳಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಪೂರೈಕೆಗೆ ಹೋಲಿಸಿದರೆ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿಗಳು.

ಇದಲ್ಲದೆ, ಬಾಂಗ್ಲಾದೇಶದಿಂದ ಹೆಚ್ಚಿನ ಬೇಡಿಕೆಯೂ ಬಂದಿದೆ ಎನ್ನುತ್ತಾರೆ ವರ್ತಕರು. “ಇದಕ್ಕೆ ವಿರುದ್ಧವಾಗಿ ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಈರುಳ್ಳಿಯ ಹೊಸ ಬೆಳೆ ಒಂದು ತಿಂಗಳು ವಿಳಂಬವಾಗಿದೆ. ಇದಲ್ಲದೆ ಸಣ್ಣ ಮತ್ತು ಮಧ್ಯಮ ರೈತರು ಸಂಗ್ರಹಿಸಿದ ಬೇಸಿಗೆ ಈರುಳ್ಳಿ ದಾಸ್ತಾನು ಕೂಡ ಮುಗಿಯುತ್ತಾ ಬಂದಿದೆ ಎಂದಿದ್ದಾರೆ.

ಬಂಪರ್‌ ಬೆಲೆ ಇದೆ ಆದರೆ ಈರುಳ್ಳಿ ಬೆಳೆಯೇ ಇಲ್ಲ! ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಎಷ್ಟಿದೆ ಗೊತ್ತಾ?

ಚಿತ್ರದುರ್ಗದ ಈರುಳ್ಳಿ ಇಳುವರಿಯೂ ಕಡಿಮೆ’

ದೊಡ್ಡ ರೈತರು ಅಂದರೆ ನೀರಾವರಿ ಇರುವವರು ಮಾತ್ರ ಬೆಳೆ ಬೆಳೆದಿದ್ದಾರೆ. ಇನ್ನು ದಾವಣಗೆರೆಯ ಜಗಳೂರು ಬಿಟ್ರೆ ಚಿತ್ರದುರ್ಗದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯುತ್ತಿದ್ದು, ಮಳೆ ಅಭಾವ ಕಡಿಮೆಯಾಗಿದೆ. ಕೆಲವರು ಅಡಕೆ ಬೆಳೆಯಲು ಮಾರುಹೋಗಿದ್ದಾರೆ. ಇನ್ನು ಕೆಲವರು ಮೆಕ್ಕೆಜೋಳ ಬೆಳೆಯಲು ಹೋಗುತ್ತಿರುವ ಕಾರಣ ಈರುಳ್ಳಿ ಬೆಳೆ ಇಲ್ಲವಾಗಿದೆ. ಈ ಎಲ್ಲ ಕಾರಣಗಳಿಂದ ಈರುಳ್ಳಿ ಬೆಲೆ ಹೆಚ್ಚಾಗಲಿದ್ದು, ಮುಂದಿನ ದಿನಗಳಲ್ಲಿ ಶತಕ ದಾಟುವ ಸಂಭವವಿದೆ.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಈರುಳ್ಳಿ ಮಾರುಕಟ್ಟೆ ಏರಿಕೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈರುಳ್ಳಿ ಮಾರುಕಟ್ಟೆ ಏರಿಕೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️⛈️ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಗೆ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ⛈️
https://krushivahini.com/2023/10/29/karnataka-rain-update/

➡️ ಈ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ ಮಧ್ಯಂತರ ಬೆಳೆ ವಿಮೆ ಬಿಡುಗಡೆ https://krushivahini.com/2023/10/29/release-of-interim-crop-insurance-2/

➡️ ಬೆಳೆ ಸಾಲ ಮನ್ನಾ ಸ್ಟೇಟಸ್ ಅನ್ನು ಮೊಬೈಲ್ನಲ್ಲಿ ಚೆಕ್ ಮಾಡಿ?? ಎಷ್ಟು ಸಾಲ ಮನ್ನಾ ಆಗಿದೆ https://krushivahini.com/2023/10/28/sala-manna-status-check/

➡️ 💚🌾🌾ಅಕ್ಕಿ ಬೆಲೆ ಏರಿಕೆ!* ಭತ್ತದ ಕಟಾವು ಆರಂಭವಾಗಿದೆ ಇನ್ನೂ ಆದರೂ ಸರ್ಕಾರದಿಂದ ಯಾವುದೇ ತರಹದ
💸ಬೆಂಬಲ ಬೆಲೆಯನ್ನು ಘೋಷಣೆ ಮಾಡಿಲ್ಲ💚🌾🌾
ಭತ್ತದ ಬೆಳೆಗೆ ಬೆಂಬಲ ಬೆಲೆಯನ್ನು ಯಾವಾಗ ಘೋಷಣೆ ಮಾಡುತ್ತಾರೆ?? ಹಾಗೂ ಎಷ್ಟು ಹಣ ಘೋಷಣೆಯಾಗುತ್ತದೆ ಇಲ್ಲಿ ನೋಡಿ 👇🏻
https://krushivahini.com/2023/10/28/rice-price-increased/

➡️ ಕೇಂದ್ರದಿಂದ 17,901 ಕೋಟಿ ರೂ.ಬರ ಪರಿಹಾರ ಯಾವಾಗ ಬರುತ್ತದೆ ಬರಪೀಡಿತ ತಾಲೂಕುಗಳಿಗೆ ಎಷ್ಟು ಪರಿಹಾರ ಹಣ ಸಿಗುತ್ತದೆ https://krushivahini.com/2023/10/26/bara-parihara-2/

Leave a Reply

Your email address will not be published. Required fields are marked *