Cotton sugarcane price increased :-

ತೊಗರಿ ನಾಡು ಕಲಬುರಗಿಯಲ್ಲಿ ಹತ್ತಿ- ಕಬ್ಬು ಬೆಳೆ ಭಾರಿ ಹೆಚ್ಚಳ

ಕಲಬುರಗಿ ಜಿಲ್ಲೆಯ ರೈತರು ಸಾಂಪ್ರದಾಯಿಕ ಬೆಳೆಗಳ ಬದಲು ವಾಣಿಜ್ಯ ಬೆಳೆಗಳ ಬಿತ್ತನೆಗೆ ಆಸಕ್ತಿ ತೋರುತ್ತಿದ್ದಾರೆ. ತೊಗರಿಗಿಂತ ಹತ್ತಿ ಮತ್ತು ಕಬ್ಬಿಗೆ ಹೆಚ್ಚು ದರ ಸಿಗುತ್ತಿರುವುದರಿಂದ ತೊಗರಿ ಬೆಳೆಗೆ ಹೋಲಿಸಿದರೆ ಇವುಗಳಿಂದ ಹೆಚ್ಚು ಲಾಭದಾಕವಾಗಿದೆ. ಹೀಗಾಗಿ ಹತ್ತಿ ಹಾಗೂ ಕಬ್ಬು ಬೆಳೆ ಗಣನೀಯವಾಗಿ ಏರಿಕೆ ಆಗಿದೆ.

ಬಿಳಿ ಬಂಗಾರಕ್ಕೆ ಬಂಪರ್‌ ಬೆಲೆ| ಸಕ್ಕರೆ ಕಾರ್ಖಾನೆ ಹೆಚ್ಚಿದ್ದರಿಂದ ಕಬ್ಬು ಕ್ಷೇತ್ರ ಭಾರಿ ಪ್ರಮಾಣದಲ್ಲಿ ಹೆಚ್ಚಳ

ಬಿಳಿ ಚಿನ್ನವೆಂದೇ ಕರೆಯುವ ಹತ್ತಿಗೆ ಭರಪೂರ ಬೆಲೆ ಸಿಗುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿ ರೈತರು ಆಕರ್ಷಿತರಾಗುತ್ತಿದ್ದಾರೆ.

ಹತ್ತಿ ಶೇ 105 ರಷ್ಟು ಮತ್ತು ಕಬ್ಬು ಶೇ 144ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಂಕಿ ಅಂಶಗಳು ದೃಢಪಡಿಸಿವೆ.

ದೇವಯ್ಯ ಗುತ್ತೇದಾರ್‌,

ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ ಪ್ರಸಕ್ತ ವರ್ಷ ಹತ್ತಿ ಮತ್ತು ಕಬ್ಬು ಬೆಳೆ ಕ್ಷೇತ್ರ ದಿಢೀರ್‌ ಹೆಚ್ಚಾಗಿ ಗಮನ ಸೆಳೆದಿದೆ. ಬಿಳಿ ಚಿನ್ನವೆಂದೇ ಕರೆಯುವ ಹತ್ತಿಗೆ ಭರಪೂರ ಬೆಲೆ ಸಿಗುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿ ರೈತರು ಆಕರ್ಷಿತರಾಗುತ್ತಿದ್ದಾರೆ. ಇನ್ನೊಂದೆಡೆ, ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಾಗಿದ್ದರಿಂದ ರೈತರು ಕಬ್ಬು ಬಿತ್ತನೆಗೆ ಮೊರೆ ಹೋಗಿದ್ದಾರೆ.

ಅಚ್ಚರಿ ಎಂದರೆ, ಕಬ್ಬು ಮತ್ತು ಹತ್ತಿ ಕ್ಷೇತ್ರ ಕಳೆದ ಮೂರು ವರ್ಷಗಳಿಂದಲೂ ನಿರಂತರವಾಗಿ ಹೆಚ್ಚಾಗುತ್ತಿದ್ದರೆ, ತೊಗರಿ ಕ್ಷೇತ್ರ ಎರಡು ವರ್ಷಗಳಿಂದ ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ಹವಾಮಾನ ವೈಪರೀತ್ಯದಿಂದಾಗಿ ಕಳೆದ ವರ್ಷ ತೊಗರಿಗೆ ನೆಟೆರೋಗ ಬಂದು ಹಾಳಾಗಿದ್ದರಿಂದ ಅನ್ನದಾತರು ಕೈ ಸುಟ್ಟುಕೊಂಡಿದ್ದರು.

2021-22 ರಲ್ಲಿ ಹತ್ತಿ ಕ್ಷೇತ್ರ 66,744 ಹೆಕ್ಟೇರ್‌ ಇದ್ದರೆ, ಈಗ 2023-24ರಲ್ಲಿ 1ಲಕ್ಷ ಹೆಕ್ಟೇರ್‌ಗೆ ವಿಸ್ತಾರವಾಗಿದೆ. ಕಬ್ಬು ಸಹ ಕ್ರಮವಾಗಿ 42,440 ಲಕ್ಷ ಹೆಕ್ಟೇರ್‌ನಿಂದ 60 ಸಾವಿರಕ್ಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಖರೀಫ್‌ನಲ್ಲಿಒಟ್ಟು 7.80 ಲಕ್ಷ ಹೆಕ್ಟೇರ್‌ ಬಿತ್ತನೆ ಕ್ಷೇತ್ರವಿದೆ. ಹತ್ತಿ ಮತ್ತು ಕಬ್ಬು ಬೆಳೆ ಗುರಿ ಮೀರಿ ಬಿತ್ತನೆಯಾಗಿವೆ. ಹತ್ತಿ ಶೇ 105 ರಷ್ಟು ಮತ್ತು ಕಬ್ಬು ಶೇ 144 ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಂಕಿ ಅಂಶಗಳು ದೃಢಪಡಿಸಿವೆ.

ಹತ್ತಿ- ಕಬ್ಬು ಹೆಚ್ಚಾಗಲು ಕಾರಣ ಏನು?:

-ಹತ್ತಿಗೆ ಬಂಗಾರದ ಬೆಲೆ ಸಿಗುತ್ತಿರುವುದರಿಂದ ರೈತರು ಖುಷಿಯಾಗಿದ್ದು, ಬಿತ್ತನೆ ಕ್ಷೇತ್ರ ಹೆಚ್ಚಾಗಲು ಇದು ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿ ಕಳೆದ 3 ವರ್ಷಗಳ ಹಿಂದೆ ಕ್ವಿಂಟಾಲ್‌ ಹತ್ತಿಗೆ 5-6 ಸಾವಿರ ರೂ. ಗಳಿಗೆ ಇದ್ದ ದರ ಈಗ 7-8 ಸಾವಿರಕ್ಕೆ ಏರಿದೆ. ಕಳೆದ ವರ್ಷ 10ಸಾವಿರಕ್ಕೂ ಹೆಚ್ಚು ರೂ. ದರ ಇತ್ತು. ಇದರಿಂದ ಪ್ರೇರಣೆಗೊಂಡ ರೈತರು ಕಬ್ಬು ಬೆಳೆಗೆ ಫಿದಾ ಆಗಿದ್ದಾರೆ. ಭರಪೂರ ದರದ ಜತೆಗೆ ನಿರ್ವಹಣಾ ವೆಚ್ಚವೂ ಕಡಿಮೆ ಇರುವುದರಿಂದ ಹತ್ತಿ ಬಿತ್ತನೆಗೆ ರೈತರು ಒಲವು ತೋರುತ್ತಿದ್ದಾರೆ.

ಜೇವರ್ಗಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಬಸವ ಸಾಗರದ ನಾಲೆಯಿಂದ ಮತ್ತು ಅಫಜಲಪುರದಲ್ಲಿ ಭೀಮಾ ನದಿ ನೀರು ಸಿಗುತ್ತಿದೆ. ನೀರಾವರಿ ಸೌಲಭ್ಯ ಇರುವುದರಿಂದ ರೈತರು ಹತ್ತಿ ಬಿತ್ತನೆಗೆ ಒಲವು ಹೆಚ್ಚಾಗಲು ಕಾರಣವಾಗಿದೆ.

ಸ್ಪಿನ್ನಿಂಗ್‌ ಜನ್ನಿ ಘಟಕಗಳು ಹೆಚ್ಚಾಗಿ ಸ್ಥಾಪನೆಯಾಗುತ್ತಿದ್ದು,ಸ್ಥಳೀಯವಾಗಿಯೇ ಹತ್ತಿ ಹೆಚ್ಚು ಮಾರಾಟವಾಗುತ್ತಿದೆ.

-ತೊಗರಿಗೆ ಹೋಲಿಸಿದರೆ ಕಬ್ಬು, ಹತ್ತಿ ಹೆಚ್ಚು ಲಾಭದಾಯಕವಾಗಿವೆ. ಆದಾಯ ದ್ವಿಗುಣವಾಗುತ್ತಿದೆ.

-ಜಿಲ್ಲೆಯ ಅಫಜಲಪುರ, ಆಳಂದ, ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆಗಳು ಶುರುವಾಗಿವೆ. ಕೆಪಿಆರ್‌, ಹಾವಳಗಾ, ರೇಣುಕಾ ಶುಗರ್ಸ್‌, ಆಳಂದನಲ್ಲಿಎನ್‌ಎಸ್‌ಎಲ್‌ ಸೇರಿದಂತೆ ಹಲವು ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುತ್ತಿವೆ. ಹೊಸದಾಗಿ ಇನ್ನೊಂದು ಕಾರ್ಖಾನೆ ಆರಂಭಕ್ಕೆ ಸಿದ್ಧತೆ ನಡೆದಿದೆ. 6 ಸಕ್ಕರೆ ಕಾರ್ಖಾನೆಗಳು ಬಂದಂತಾಗಿದ್ದು, ಒಂದು ಕಾರ್ಖಾನೆಗೆ ಕನಿಷ್ಠವೆಂದರೆ 10 ಸಾವಿರ ಹೆಕ್ಟೇರ್‌ ಕಬ್ಬು ಬೇಕು. ಕಾರ್ಖಾನೆಯವರೇ ರೈತರಿಗೆ ಕಬ್ಬು ಬೀಜ ನೀಡಿ ಬಿತ್ತನೆಗೆ ಪ್ರೋತ್ಸಾಹಿಸುತ್ತಿದ್ದಾರೆ. ದರವೂ ಚೆನ್ನಾಗಿದೆ. ರೈತರು ಕಬ್ಬು ಬಿತ್ತನೆಗೆ ಆಸಕ್ತಿ ವಹಿಸಿದ್ದರಿಂದ ಕ್ಷೇತ್ರ ಹೆಚ್ಚಳವಾಗಲು ಕಾರಣವಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಹತ್ತಿ ಕಬ್ಬಿನ ಬೆಲೆ ಬಾರಿ ಏರಿಕೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಹತ್ತಿ ಕಬ್ಬಿನ ಬೆಲೆ ಬಾರಿ ಏರಿಕೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️⛈️ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಗೆ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ⛈️
https://krushivahini.com/2023/10/29/karnataka-rain-update/

➡️ ಈ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ ಮಧ್ಯಂತರ ಬೆಳೆ ವಿಮೆ ಬಿಡುಗಡೆ https://krushivahini.com/2023/10/29/release-of-interim-crop-insurance-2/

➡️ ಬೆಳೆ ಸಾಲ ಮನ್ನಾ ಸ್ಟೇಟಸ್ ಅನ್ನು ಮೊಬೈಲ್ನಲ್ಲಿ ಚೆಕ್ ಮಾಡಿ?? ಎಷ್ಟು ಸಾಲ ಮನ್ನಾ ಆಗಿದೆ https://krushivahini.com/2023/10/28/sala-manna-status-check/

➡️ 🌾🌾ಅಕ್ಕಿ ಬೆಲೆ ಏರಿಕೆ!* ಭತ್ತದ ಕಟಾವು ಆರಂಭವಾಗಿದೆ ಇನ್ನೂ ಆದರೂ ಸರ್ಕಾರದಿಂದ ಯಾವುದೇ ತರಹದ
*💸ಬೆಂಬಲ ಬೆಲೆಯನ್ನು ಘೋಷಣೆ ಮಾಡಿಲ್ಲ*💚🌾🌾
ಭತ್ತದ ಬೆಳೆಗೆ ಬೆಂಬಲ ಬೆಲೆಯನ್ನು ಯಾವಾಗ ಘೋಷಣೆ ಮಾಡುತ್ತಾರೆ?? ಹಾಗೂ ಎಷ್ಟು ಹಣ ಘೋಷಣೆಯಾಗುತ್ತದೆ ಇಲ್ಲಿ ನೋಡಿ 👇🏻
https://krushivahini.com/2023/10/28/rice-price-increased/

➡️ ಮತ್ತೆ ಈರುಳ್ಳಿ ಬೆಲೆಯಲ್ಲಿ ಏರಿಕೆ ಕೆಜಿಗೆ ಎಷ್ಟು ಆಗಬಹುದು ಹಾಗೂ ಮಾರುಕಟ್ಟೆಯ ಸ್ಥಿತಿಯನ್ನು ತಿಳಿದುಕೊಳ್ಳಿ https://krushivahini.com/2023/10/28/onion-rate-hike/

➡️ ಕೇಂದ್ರದಿಂದ 17,901 ಕೋಟಿ ರೂ.ಬರ ಪರಿಹಾರ ಯಾವಾಗ ಬರುತ್ತದೆ ಬರಪೀಡಿತ ತಾಲೂಕುಗಳಿಗೆ ಎಷ್ಟು ಪರಿಹಾರ ಹಣ ಸಿಗುತ್ತದೆ https://krushivahini.com/2023/10/26/bara-parihara-2/

➡️ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಮತ್ತೆ ಏರಿಕೆ ಇಲ್ಲಿದೆ ನೋಡಿ ಎಷ್ಟು ದರ ಎಂದು… https://krushivahini.com/2023/10/26/onion-rate-increased/

➡️ ಮತ್ತೆ ಸ್ಥಿರತೆ ಕಂಡ ಅಡಿಕೆ ಬೆಲೆ ಯಾವ ಜಿಲ್ಲೆಯಲ್ಲಿ ಎಷ್ಟು ಬೆಲೆ ಇದೆ ಇಲ್ಲಿ ನೋಡಿ https://krushivahini.com/2023/10/25/arecaunut-rate/

Leave a Reply

Your email address will not be published. Required fields are marked *