Crop loan notice :- ಬರಗಾಲವಿದ್ದರೂ ನವಲಗುಂದ ರೈತರಿಗೆ ಬೆಳೆ ಸಾಲದ ನೋಟಿಸ್ ಬರೆ: ಅನ್ನದಾತರ ಗೋಳು ಕೇಳುವವರಿಲ್ಲ

ಅನ್ನದಾತ ಸಾಲ‌ ಸೂಲ ಮಾಡಿ ಬೆಳೆ ಬೆಳೆಯುತ್ತಾನೆ. ಆದರೆ ವಾತಾವರಣ ಕೈಕೊಟ್ಟಾಗ ಸಾಲ ತೀರಿಸದೇ ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕುತ್ತಾನೆ. ಈಗ ಸಾಲ ಕಟ್ಟಿಲ್ಲ ಎಂದು ಈಗ ಬ್ಯಾಂಕ್ ನೋಟಿಸ್ ಬರುತ್ತಿವೆ. ಕಳೆದ ವರ್ಷ ಅತಿವೃಷ್ಟಿಗೆ ಬೆಳೆಗಳೆಲ್ಲಾ ನೀರುಪಾಲಾಯಿತು. ಈ ಬಾರಿ ನೀರಿಲ್ಲದೆ ಒಣಗಿ ಹೋಯಿತು. ಅಂತೂ ರೈತನನ್ನು ಒಂದಿಲ್ಲೊಂದು ಸಮಸ್ಯೆ ಕಾಡುತ್ತಲೇ ಇದೆ. ಸದ್ಯ ಬರದಿಂದ ಕಂಗೆಟ್ಟಿರುವ ಧಾರವಾಡ ಜಿಲ್ಲೆಯ ರೈತರಿಗೆ ಈ ರೀತಿಯ ನೋಟಿಸ್ ಗಳು ಬರುತ್ತಿವೆ ನೋಡಿ.

ಸಾಲದ ನೋಟಿಸ್ ಪ್ರದರ್ಶಿಸುತ್ತಿರುವ ರೈತರು.

ಧಾರವಾಡ: ಸಾಲ‌ಸೋಲ ಮಾಡಿ ಹೊಲಗಳಲ್ಲಿ ಬಿತ್ತನೆ ಮಾಡಿರುವ ರೈತರಿಗೆ ಅನಾವೃಷ್ಟಿಯಿಂದಾಗಿ ಬೆಳೆ ನಷ್ಟವಾಗಿರುವ ಬೆನ್ನಲ್ಲೇ ಇದೀಗ ಸಾಲ ಕೊಟ್ಟಿರುವ ಬ್ಯಾಂಕ್ ಗಳು ಶಾಕ್ ನೀಡಿವೆ. ಕಳೆದ ಬಾರಿ ಅತಿವೃಷ್ಟಿಯಿಂದಾಗಿ ಕಂಗೆಟ್ಟಿದ್ದ ರೈತರು ಈ ಬಾರಿ ಮಳೆ ಕೊರತೆಯಿಂದಾಗಿ ಕಂಗೆಟ್ಚಿದ್ದಾರೆ. ಅದರೆ ಅದ್ಯಾವುದನ್ನೂ ಗಣನೆಗೆ ತೆರೆದುಕೊಳ್ಳದ ಬ್ಯಾಂಕ್ ಗಳು ಇದೀಗ ನೋಟಿಸ್ ಕಳಿಸಲು ಪ್ರಾರಂಭಿಸಿವೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ರೈತರಿಗೆ ಕೇವಲ ನೋಟೀಸ್ ಮಾತ್ರವಲ್ಲ ಸಮನ್ಸ್ ಸಹ ಜಾರಿ ಮಾಡಲಾಗಿದೆ.

ಬೆಂಗಳೂರಿನ ಡೆಬಿಟ್ ರಿಕವರಿ ಟ್ರಿಬ್ಯುನಲ್‌ದಿಂದ ಈ ನೋಟೀಸ್ ಜಾರಿಯಾಗಿದ್ದು, ಈಗ ಇಲ್ಲಿಯ ರೈತರು ನೋಟಿಸ್ ನೋಡಿ ಕಂಗಾಲಾಗಿದ್ದಾರೆ. ನವಲಗುಂದ ತಾಲೂಕಿನ ಶಿರೂರದಲ್ಲಿನ ಎಸ್‌ಬಿಐನಲ್ಲಿ 2019ರಲ್ಲಿ ಬೆಳೆ ಸಾಲ ಪಡೆದಿದ್ದ ಈ ರೈತರಿಗೆ, ಮೊದಲು ಕಾಡಿದ್ದು ಕೋವಿಡ್. ಎರಡು ವರ್ಷ ಕೊವಿಡ್ ದಿಂದ ತತ್ತರಿಸಿದ ಈ ರೈತರಿಗೆ ಬೆಳೆ ಕೈಗೆ ಬಂದರೂ ಮಾರಾಟಕ್ಕೆ ಅವಕಾಶ ಸಿಗಲಿಲ್ಲ.

ಅದರ ನಂತರ ಎರಡು ವರ್ಷ ಅತಿವೃಷ್ಟಿಯಿಂದ ಬೆಳೆದ ಬೆಳೆ‌ ನೀರು ಪಾಲಾಯಿತು. ಇದರಿಂದ ಈ ರೈತರು ಸಾಲ ತಿರಿಸಲಾಗಲಿಲ್ಲ. ಇದೇ‌ ಕಾರಣಕ್ಕೆ ಈಗ ಅವರಿಗೆ ನೋಟಿಸ್ ಬರುತ್ತಿವೆ.

ಯಾರು ಯಾರಿಗೆ ನೋಟಿಸ್?

ನವಲಗುಂದ ತಾಲೂಕಿನ ದ್ಯಾಮನಗೌಡ ಎಂಬವವರು 2019 ರಲ್ಲಿ 10 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ‌ಆದರೆ‌ ಆಗ ಸಾಲ ತುಂಬಲಾಗದೇ ಅದು ದುಪ್ಪಟ್ಟಾಗಿದೆ. ಅದೇ ರೀತಿ ಇದೇ ತಾಲೂಕಿನ ಬ್ಯಾಲ್ಯಾಳದ ರೈತ ದಯಾನಂದ 15 ಲಕ್ಷ ರೂಪಾಯಿ ಸಾಲ‌ ಪಡೆದಿದ್ದರು. ಈಗ ಅವರಿಗೆ ಕೂಡಾ ಅಸಲು ಸೇರಿ 21 ಲಕ್ಷ ರೂಪಾಯಿ ಆಗಿದೆ.

ಈ ಬಾರಿ ಇದೇ ರೈತರು ತಮಗೆ ಬೆಳೆ ಚೆನ್ನಾಗಿ ಬಂದರೆ ಅಲ್ಪ ಸ್ವಲ್ಪ ಸಾಲ ಮರು ಪಾವತಿ ಮಾಡಬಹುದು ಎಂದು ಕೊಂಡಿದ್ದರು. ಆದರೆ ಈ ಬಾರಿ ನವಲಗುಂದ ತಾಲೂಕಿನಲ್ಲಿ ಎಲ್ಲಿಲ್ಲದ ಬರ ಬಂದಿದೆ. ಮಳೆಗಾಲ ಮುಗಿಯುವ ಮುನ್ನವೇ ಇಂತಹ ಪರಿಸ್ಥಿತಿ ಎದುರಾಗಿರುವುದರಿಂದ ರೈತರು ದಿಕ್ಕು ತೋಚದಂತಾಗಿದ್ದಾರೆ.‌‌

ಸಚಿವರಿಂದ ಮಾತುಕತೆ ಭರವಸೆ:-

ಸರ್ಕಾರನೇ ಈ ತಾಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡಿದೆ. ಹೀಗಾಗಿ ಈ ಬಾರಿ‌ ಕೂಡ ಸಂಕಷ್ಟ ಎದುರಾಗಿದೆ. ಸದ್ಯ ಈ ಸಮಸ್ಯೆಯನ್ನು ನೋಟಿಸ್ ಪಡೆದಿರುವ ರೈತರು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದಾರೆ. ಸಚಿವರು ಲೀಡ್ ಬ್ಯಾಂಕ್ ನವರಿಗೆ ಕರೆಸಿ ಮಾತನಾಡ್ತಾರೆ ಎಂದಿದ್ದಾರೆ. ‌ಅಲ್ಲದೇ ನೋಟಿಸ್ ವಾಪಸ್ ಪಡೆಯಲು ಹೇಳಿ ಒನ್ ಟೈಮ್ ಸೆಟ್ಲಮೆಂಟ್ ಮಾಡಿಸುತ್ತೇವೆ ಎಂದಿದ್ದಾರೆ

ಸದ್ಯ ಇದೇ ರೀತಿ ಎಷ್ಟೋ ರೈತರು ಸಾಲ ಪಡೆದಿದ್ದಕ್ಕೆ ನೋಟಿಸ್ ಪಡೆಯುತ್ತಿದ್ದಾರೆ. ಮೊದಲು ಮಳೆಯಿಂದ ಬೆಳೆ ಹಾಳು ಮಾಡಿಕೊಂಡಿದ್ದ ರೈತರು, ಈ ಬಾರಿ ಮಳೆ ಇಲ್ಲದೇ ಬರಗಾಲದಿಂದ ತತ್ತರಿಸಿದ್ದಾರೆ. ಹೀಗಾಗಿ ಸರ್ಕಾರ ಇವರತ್ತ ಗಮನ ಹರಿಸಿದರೆ, ರೈತರು ನೆಮ್ಮದಿಯಿಂದ ಅನ್ನ ಬೆಳೆಯಬಹುದಾಗಿದೆ.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಬೆಳೆ ಸಾಲ ಮಹತ್ವದ ಮಾಹಿತಿ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬೆಳೆ ಸಾಲ ಮಹತ್ವದ ಮಾಹಿತಿ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️⛈️ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಗೆ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ⛈️
https://krushivahini.com/2023/10/29/karnataka-rain-update/

➡️ ಈ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ ಮಧ್ಯಂತರ ಬೆಳೆ ವಿಮೆ ಬಿಡುಗಡೆ https://krushivahini.com/2023/10/29/release-of-interim-crop-insurance-2/

➡️ ಬೆಳೆ ಸಾಲ ಮನ್ನಾ ಸ್ಟೇಟಸ್ ಅನ್ನು ಮೊಬೈಲ್ನಲ್ಲಿ ಚೆಕ್ ಮಾಡಿ?? ಎಷ್ಟು ಸಾಲ ಮನ್ನಾ ಆಗಿದೆ https://krushivahini.com/2023/10/28/sala-manna-status-check/

➡️ ಕೇಂದ್ರದಿಂದ 17,901 ಕೋಟಿ ರೂ.ಬರ ಪರಿಹಾರ ಯಾವಾಗ ಬರುತ್ತದೆ ಬರಪೀಡಿತ ತಾಲೂಕುಗಳಿಗೆ ಎಷ್ಟು ಪರಿಹಾರ ಹಣ ಸಿಗುತ್ತದೆ https://krushivahini.com/2023/10/26/bara-parihara-2/

➡️ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಯಾವ ಬೆಳೆಗೆ ಎಷ್ಟು ಹೆಚ್ಚಾಗಿದೆ ಇಲ್ಲಿ ನೋಡಿರಿ… https://krushivahini.com/2023/10/25/rabi-2023-minimum-support-price/

➡️ ಮಳೆ ಮುನ್ಸೂಚನೆ :- ಈ ಜಿಲ್ಲೆಗಳಲ್ಲಿ ಮುಂದಿನ ದಿನದ ಹೆಚ್ಚು ಮಳೆ ಸಾಧ್ಯತೆ https://krushivahini.com/2023/10/24/karnataka-rain/

Leave a Reply

Your email address will not be published. Required fields are marked *