Karnataka Drought news :-

ಹುಕ್ಕೇರಿ: ‘ರಾಜ್ಯ ಸರ್ಕಾರ ತಾಲ್ಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಲು ಮೀನಮೇಷ ಮಾಡುವುದಲ್ಲದೇ ಸಮರ್ಪಕವಾಗಿ ವಿದ್ಯುತ್‌ ಪೂರೈಸುತ್ತಿಲ್ಲ. ಮಧ್ಯಂತರ ಪರಿಹಾರ ಘೋಷಣೆಯೂ ಮಾಡಿಲ್ಲ. ಮೇಲ್ನೋಟಕ್ಕೆ ಸರ್ಕಾರ ವಿಫಲವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಬರಗಾಲದಿಂದ ಜನರು ತತ್ತರಿಸುತ್ತಿರುವಾಗ, ಹೊಸ ಕಾರು ಖರೀದಿ ಮಾಡುವುದು ಅವಶ್ಯವಿತ್ತೇ? ಆಡಳಿತಾರೂಢ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಒಂದು ರೂಪಾಯಿ ಅನುದಾನವೂ ಬಿಡುಗಡೆಯಾಗಿಲ್ಲ. ಜನರ ಮತ್ತು ಜನಪ್ರತಿನಿಧಿಗಳಿಗೆ ಈ ಸರ್ಕಾರದ ಬಗ್ಗೆ ದಿನದಿಂದ ದಿನಕ್ಕೆ ಅಸಮಾಧಾನ ಹೆಚ್ಚಾಗಿದೆ. ಶಾಸಕರ ಮತ್ತು ಸಚಿವರ ನಡುವಿನ ತಿಕ್ಕಾಟದಿಂದ ಯಾವ ಹೊತ್ತಿನಲ್ಲಾದರೂ ಸರ್ಕಾರ ಪತನವಾಗಬಹುದು’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

*136 ಶಾಸಕರನ್ನು ಒಳಗೊಂಡ ಬಹುಮತದ ಸರ್ಕಾರವಿದ್ದರೂ, ಅನಿಶ್ಚಿತ ಸರ್ಕಾರವಿದೆ ಎಂಬ ಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರೆಲ್ಲರ ಮಾನಸಿಕ ಸ್ಥಿತಿ ಹೇಗಿದೆ ಎಂದು ನೀವೇ ಕಾಣುತ್ತಿರುವಿರಿ’ ಎಂದರು.

ಬಿಜೆಪಿಯ ಚಿಕ್ಕೋಡಿ ಘಟಕದ ಅಧ್ಯಕ್ಷ ಡಾ.ರಾಜೇಶ್ ನೇರ್ಲಿ, ಹುಕ್ಕೇರಿ ಮಂಡಲ ಪ್ರಧಾನ ರಾಚಯ್ಯ ಹಿರೇಮಠ, ಮಹಿಳಾ ಮೋರ್ಚಾ ಅಧ್ಯಕ್ಷೆ ಶರ್ಮಿಳಾ ಬಡಮಲ್ಲನವರ, ಯುವಮೋರ್ಚಾ ಅಧ್ಯಕ್ಷ ಪ್ರಜ್ವಲ್ ನಿಲಜಗಿ, ಮುಖಂಡರಾದ ಪ್ರಥ್ವಿ ಕತ್ತಿ, ಪವನ್ ಕತ್ತಿ, ಪರಗೌಡ ಪಾಟೀಲ್, ಗುರುರಾಜ ಕುಲಕರ್ಣಿ, ಸಂಜು ಬಸ್ತವಾಡ ಇದ್ದರು.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಬರ ಮಾಹಿತಿ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬರ ಮಾಹಿತಿ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಯಾವ ಬೆಳೆಗೆ ಎಷ್ಟು ಹೆಚ್ಚಾಗಿದೆ ಇಲ್ಲಿ ನೋಡಿರಿ… https://krushivahini.com/2023/10/25/rabi-2023-minimum-support-price/

➡️ ಬರಪೀಡಿತ ತಾಲೂಕುಗಳಿಗೆ ಸಾಲ ಮನ್ನಾ ಮರುಪಾವತಿ ಮಾಡುವಂತೆ ನೋಟೀಸ್ ಜಾರಿ?? ಇಲ್ಲಿದೆ ಮಹತ್ವದ ಮಾಹಿತಿ🙏🏻🙏🏻 https://krushivahini.com/2023/10/24/crop-loan-notice/

➡️ ಮಳೆ ಮುನ್ಸೂಚನೆ :- ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಿಗೆ ಹೆಚ್ಚಿನ ಮಳೆಯ ಸಾಧ್ಯತೆ ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ https://krushivahini.com/2023/10/24/karnataka-rain/

➡️ ಈ ಜಿಲ್ಲೆಗಳಲ್ಲಿ ಹೂ ಹಣ್ಣುಗಳು ಬೆಲೆ ಗಗನಕ್ಕೆ ದಸರಾ ಹಬ್ಬದ ಪ್ರಯುಕ್ತ ಬೆಲೆ ಏರಿಕೆ ಯಾವ ಹೂವು ಮತ್ತು ಹಣ್ಣಿಗೆ ಎಷ್ಟು ಧರ ಇದೆ ಇಲ್ಲಿ ನೋಡಿ https://krushivahini.com/2023/10/23/drought-all-market-price-increased/

Leave a Reply

Your email address will not be published. Required fields are marked *