Drought all market price increased :-

ಚಿತ್ರದುರ್ಗ, ಅಕ್ಟೋಬರ್‌ 24: ಪ್ರಸಕ್ತ ಸಾಲಿನಲ್ಲಿ ಮಳೆ ಕಡಿಮೆಯಾಗಿ ಬರಗಾಲ ಆವರಿಸಿದರೆ ಮತ್ತೊಂದು ಕಡೆ ನಾಡಿನಾದ್ಯಂತ ಸಡಗರ ಸಂಭ್ರಮಾಚರಣೆಯ ಆಯುಧ ಪೂಜೆ, ವಿಜಯದಶಮಿ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದೆ. ಪೂಜಾ ಸಾಮಗ್ರಿಗಳ ಖರೀದಿ ಬಲು ಜೋರಾಗಿಯೇ ಇದೆ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಇಂದು ಸೋಮವಾರ ಆಯುಧ ಪೂಜೆ ಆಚರಿಸಲಾಗುತ್ತಿದೆ. ಭಾನುವಾರದಿಂದಲೇ ಹಲವೆಡೆ ಪೂಜೆ ಕಾರ್ಯಗಳು ನಡೆಯುತ್ತಿವೆ. ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ ಸೇರಿದಂತೆ ಮೊಳಕಾಲ್ಮೂರು ಭಾಗದಲ್ಲಿ ಖರೀದಿ ಜೋರಾಗಿದೆ.

ಇಂದು ಆಯುಧ ಪೂಜೆ, ಮಂಗಳವಾರ ವಿಜಯದಶಮಿ ಹಿನ್ನೆಲೆ ಹೂ, ಹಣ್ಣು, ಕುಂಬಳಕಾಯಿ, ಬಾಳೆಕಂದು ಬೆಲೆಗಳು ಗಗನಕ್ಕೆ ತಲುಪಿವೆ. ಆದರೂ ಗ್ರಾಹಕರು ಮಾತ್ರ ಖರೀದಿಯಲ್ಲಿ ತೊಡಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ವಸ್ತುಗಳ ದರ ಹೆಚ್ಚಳವಾಗಿದೆ.

ತೆಂಗಿನ ಕಾಯಿ 20 ರಿಂದ 25/30 ರೂಪಾಯಿ ಆಗಿದೆ. ಪುಟ್ ಬಾಳೆ ಕೆಜಿಗೆ 80 ರಿಂದ 120 ರೂಪಾಯಿ, ಸೇವಂತಿ ಹೂ ಒಂದು ಮಾರಿಗೆ 80 ರಿಂದ 120 ರೂಪಾಯಿ,

ಕನಕಾಂಬರ ಹೂವು 100 ರಿಂದ 120/130 ರೂಪಾಯಿ,

ಗುಲಾಬಿ ಒಂದಕ್ಕೆ 20 -30 ರೂಪಾಯಿ,

ಚೆಂಡು ಹೂವು 50 ರಿಂದ 80 ರೂಪಾಯಿ,

ಸೇಬು ಕೆಜಿಗೆ ‌150 ರಿಂದ 200 ರೂಪಾಯಿ,

ಕಿತ್ತಳೆ ಕೆಜಿಗೆ 50 ರಿಂದ 80 ರೂಪಾಯಿ ,

ಬಾಳೆ ಕಂದು ಜೋಡಿ 20 ರಿಂದ 50 ರೂಪಾಯಿ ಈಗೆ ವಿವಿಧ ದರಗಳು ಗಗನಕ್ಕೇರುತ್ತಿವೆ. ಇದಲ್ಲದೆ ತರಕಾರಿ ಬೆಳೆಗಳು ಸಹ ಏರಿಕೆಯಾಗಿವೆ.

ಬೆಂಗಳೂರಿನಲ್ಲಿ ಹೂ-ಹಣ್ಣುಗಳ ದರಗಳ ವಿವರ

ಗಗನಕ್ಕೇರಿದ ಹೂಗಳ ದರ(ಕೆಜಿಗೆ)

ಮಲ್ಲಿಗೆ– 1000 ರಿಂದ 1200 ರೂ.

ಸೇವಂತಿಗೆ– 300 ರಿಂದ 500 ರೂ.

ಗುಲಾಬಿ-200 ರಿಂದ 309 ರೂ.

ಕನಕಾಂಬರ-1100 ದಿಂದ 1300 ರೂ.

ಮಳ್ಳೆ ಹೂವು-800 ರಿಂದ 1000 ರೂ.

➡️ ಹಣ್ಣುಗಳ ದರವೂ ದುಬಾರಿ

ಏಲಕ್ಕಿ ಬಾಳೆ -120 ರಿಂದ 140 ರೂ.

ಅನಾನಸ್ -40 ರಿಂದ 70 ರೂ.

ದಾಳಿಂಬೆ – 100 ರಿಂದ 150 ರೂ.

ಸೇಬು -180 ರಿಂದ 350 ರೂ.

ಇನ್ನು ಬೂದುಕುಂಬಳಕಾಯಿ ಕೆಜಿಗೆ 20 ರಿಂದ 30 ರೂ ಇದ್ದು, ಬಾಳೆ ಕಂಬ ಜೋಡಿಗೆ 100 ರಿಂದ 150 ರೂ. ಇದೆ.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಹೂ ಹಣ್ಣುಗಳು ಬೆಲೆ ಗಗನಕ್ಕೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಹೂ ಹಣ್ಣುಗಳು ಬೆಲೆ ಗಗನಕ್ಕೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಹೂ ಹಣ್ಣುಗಳು ಬೆಲೆ ಗಗನಕ್ಕೆ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಯಾವ ಬೆಳೆಗೆ ಎಷ್ಟು ಹೆಚ್ಚಾಗಿದೆ ಇಲ್ಲಿ ನೋಡಿರಿ… https://krushivahini.com/2023/10/25/rabi-2023-minimum-support-price/

➡️ ಬರಪೀಡಿತ ತಾಲೂಕುಗಳಿಗೆ ಸಾಲ ಮನ್ನಾ ಮರುಪಾವತಿ ಮಾಡುವಂತೆ ನೋಟೀಸ್ ಜಾರಿ?? ಇಲ್ಲಿದೆ ಮಹತ್ವದ ಮಾಹಿತಿ🙏🏻🙏🏻 https://krushivahini.com/2023/10/24/crop-loan-notice/

➡️ ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಿಗೆ ಹೆಚ್ಚಿನ ಮಳೆ ಸಾಧ್ಯತೆ ಇಲ್ಲಿದೆ ನೋಡಿ https://krushivahini.com/2023/10/24/karnataka-rain/

Leave a Reply

Your email address will not be published. Required fields are marked *