Crop You can Insure :- ಅತ್ಮೀಯ ರೈತ ಭಾಂದವರೇ, ಹಿಂಗಾರು ಬೆಳೆ ವಿಮೆ ನೋಂದಣಿ ಆರಂಭವಾಗಿದೆ..
* ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು ? ಹಾಗೂ ಎಷ್ಟು ಹಣ ಕಟ್ಟಿದರೆ ಎಷ್ಟು ಪರಿಹಾರ ಧನ ಸಿಗಲಿದೆ ಎಂದು ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು..
https://samrakshane.karnataka.gov.in/Premium/Crops_You_Can_Insure.aspx
ನಂತರ ನಿಮ್ಮ ವೈಯಕ್ತಿಕ ದಾಖಲೆಗಳನ್ನು ತುಂಬವ ಸಮಯ ಬರುತ್ತದೆ ಅಲ್ಲಿ ನಿಮ್ಮ, ಜಿಲ್ಲೆ , ತಾಲೂಕು ಮತ್ತು ಹೋಬಳಿ ಹಾಗೂ ಗ್ರಾಮ ಯಾವುದು ಎಂದು ಆಯ್ಕೆ ಮಾಡಿ ನಂತರ display ಮೇಲೆ ಕ್ಲಿಕ್ ಮಾಡಿ. ಹೀಗೆ ಮಾಡಿದಾಗ ಕೆಳಗಡೆ ತೋರಿಸಿರುವ ಪೇಜ್ ಓಪನ್ ಆಗುತ್ತದೆ.
ಹೀಗೆ ಮಾಡಿದರೆ ಕೆಳಗಿನಂತೆ ನೀವು ಬೆಳೆ ವಿಮೆ ಕಟ್ಟಲು ಬರುವ ಬೆಳೆ ಹಾಗೂ ಬೆಳೆ ವಿಮೆ ಕಂತು ಎಷ್ಟು ಹಾಗೂ ನಿಮಗೆ ಬರಬೇಕಾದ ಬೆಳೆ ವಿಮೆ ಪರಿಹಾರದ ಮೊತ್ತ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲಿನ ಕಂತು ಇದರ ಸಂಪೂರ್ಣ ಮಾಹಿತಿ ನಿಮಗೆ ತೋರಿಸುತ್ತದೆ.
* ಯಾವ ಯಾವ ಬೆಳೆಗೆ ವಿಮೆ ಕಟ್ಟಲು ಯಾವುದು ಕೊನೆಯ ದಿನಾಂಕ ಇಲ್ಲಿ ನೋಡಿರಿ..
ಮೊದಲಿಗೆ ಈ ಕೆಳಕಂಡ ಲಿಂಕ್ ಅನ್ನು ಒತ್ತಿರಿ 👇🏻
https://samrakshane.karnataka.gov.in/PublicView/FindCutOff.aspx
ನಂತರ ಅಲ್ಲಿ ಮುಖಪುಟದಲ್ಲಿ ಕಾಣುವಹಾಗೆ ವರ್ಷ, season (ಹಿಂಗಾರು)Rabi ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡರೆ. ನೀವು ಬೆಳೆಗಳಿಗೆ ವಿಮೆ ಕಟ್ಟುವ ಕೊನೆಯ ದಿನಾಂಕ ನಿಮಗೆ ಕಾಣಿಸುತ್ತದೆ.
* ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಗೆ ಯಾವ ಇನ್ಶೂರೆನ್ಸ್ ಕಂಪನಿ ಇರುವ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ.👇🏻
https://samrakshane.karnataka.gov.in/HomePages/frmKnowYourInsCompany.aspx
ಹೊಸ ಓಪನ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಗ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂಬುದರ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.
* ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಮತ್ತು ಕೊನೆ ದಿನಾಂಕ?
ರೈತರು ತಮ್ಮ ಬೆಳೆಗಳಿಗೆ ನಿಮ್ಮ ಸಮೀಪದ ಗ್ರಾಮ ಒನ್ ಸೆಂಟರಗಳಿಗೆ ಭೇಟಿ ನೀಡಿ ಬೆಳೆವಿಮೆ ತುಂಬಲು ರೈತಬಾಂಧವರಲ್ಲಿ ವಿನಂತಿ. ಒಂದು ವೇಳೆ ನೀವು ಮುಂದೆ ನಿಮ್ಮ ಬೆಳೆಗಳ ಪರಿಹಾರವನ್ನು ಸರ್ಕಾರದಿಂದ ಪಡೆಯಬೇಕಾದರೆ ಈ ಬೆಳೆವಿಮೆಯನ್ನು ತುಂಬುವುದು ಅವಶ್ಯಕವಾಗಿದೆ. ಆದ ಕಾರಣ ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ಪ್ರತಿಯೊಂದು ಬೆಳೆಗೆ ತನ್ನದೇ ಆದ ಕೊನೆಯ ದಿನಾಂಕವನ್ನು ನೀಡಿದ್ದಾರೆ. ಕೆಲವೊಂದು ಬೆಳಗೆ ಡಿಸೆಂಬರ್ 1ನೇ ತಾರೀಕು ಕೆಲವೊಂದು ಕೊನೆ ದಿನಾಂಕ ಎಂದು ಸರ್ಕಾರವು ಘೋಷಣೆ ಮಾಡಿದೆ.
* ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು?
ರೈತರು ನಿಮ್ಮ ಆಧಾರ್ ಕಾರ್ಡ್, ನಿಮ್ಮ ಹೊಲದ ಪಹಣಿ ಪತ್ರ, ಬೆಳೆವಿಮೆ ತುಂಬುವ ಅರ್ಜಿ, ನಿಮ್ಮ ಹತ್ತಿರ ಇರುವ ಮೊಬೈಲ್ ಸಂಖ್ಯೆ, ನಿಮ್ಮ FID ನಂಬರ್ ಎಲ್ಲವನ್ನು ನೀವು ತೆಗೆದುಕೊಂಡು ಹೋಗಿ ಗ್ರಾಮವನ್ ಅಥವಾ ಸೇವಾ ಸಿಂಧುವಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ಬೆಳೆ ವಿಮೆ ಎಷ್ಟು ಕಟ್ಟಬೇಕು? :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬೆಳೆ ವಿಮೆ ಎಷ್ಟು ಕಟ್ಟಬೇಕು?ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ಈ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ ಮಧ್ಯಂತರ ಬೆಳೆ ವಿಮೆ ಬಿಡುಗಡೆ https://krushivahini.com/2023/10/29/release-of-interim-crop-insurance-2/
➡️ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಯಾವ ಬೆಳೆಗೆ ಎಷ್ಟು ಹೆಚ್ಚಾಗಿದೆ ಇಲ್ಲಿ ನೋಡಿರಿ… https://krushivahini.com/2023/10/25/rabi-2023-minimum-support-price/
➡️ ಮಳೆ ಮುನ್ಸೂಚನೆ :- ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಿಗೆ ಹೆಚ್ಚಿನ ಮಳೆಯ ಸಾಧ್ಯತೆ ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ https://krushivahini.com/2023/10/24/karnataka-rain/
➡️ ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ?? ಮಧ್ಯಂತರ ಬೆಳೆ ವಿಮೆ ಬಿಡುಗಡೆ ಇಲ್ಲ??? ಬರ ಪರಿಹಾರ ಯಾವಾಗ ಬರುತ್ತದೆ https://krushivahini.com/2023/10/23/karnataka-drought-news/
➡️ ತೇಜ್ ಚಂಡಮಾರುತ :- ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಮಹತ್ವದ ಮಾಹಿತಿ https://krushivahini.com/2023/10/23/tej-cyclone/
➡️ ರೈತರ ಹೊಲದ ಕಾಲುದಾರಿ ಬಂಡಿದಾರಿ ಬಗ್ಗೆ ಸರ್ಕಾರದಿಂದ ಸಿಹಿಸುದ್ದಿ ನಿಮ್ಮ ಹೊಲದ ನಕ್ಷೆ ಇಲ್ಲಿ ಪಡೆಯಿರಿ👇🏻 https://krushivahini.com/2023/10/22/village-map/
➡️ ನರೇಗಾ ಯೋಜನೆಯ ಅಡಿ ಹಣವನ್ನು ಹೆಚ್ಚಳ ಮಾಡಿದ ಸರ್ಕಾರ ಇಲ್ಲಿದೆ ಮಹತ್ವದ ಮಾಹಿತಿ https://krushivahini.com/2023/10/22/narega-amount-increased/
➡️ ಮಳೆ ಮುನ್ಸೂಚನೆ:- ಈ ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ⛈️🌧️ https://krushivahini.com/2023/10/22/weather-report/
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com