lack of monsoon rain in karnataka :-

ಮುಂಗಾರು ಮಳೆ ಕೊರತೆ, ಗಗನಕ್ಕೇರಿದ ಧಾನ್ಯಗಳ ಬೆಲೆ

ಮುಂಗಾರು ಮಳೆ ಕೊರತೆಯಿಂದ ನಾನಾ ರೀತಿಯ ಸಂಕಷ್ಟ ಎದುರಾಗಿದೆ. ರೈತರಿಗೆ ಬೆಳೆಗಳಿಗೆ ನೀರಿಲ್ಲ ಎಂಬ ಚಿಂತೆಯಾದರೆ, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದಸರಾಗೆ ಧಾನ್ಯಗಳ ದರ ಏರಿಕೆಯ ಬಿಸಿ ತಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬೆಲೆಯಲ್ಲಿ ಶೇ.30 ರಷ್ಟು ಏರಿಕೆಯಾಗಿದೆ. ಕೆಜಿ ತೊಗರಿಬೇಳೆ ಸಗಟು ದರದಲ್ಲಿ 160- 170 ರೂ. ಇದೆ. ಚಿಲ್ಲರೆ ಮಾರಾಟದಲ್ಲಿ 200 ರೂ. ಹಾಗೂ ಮೇಲ್ಪಟ್ಟು ಮಾರಾಟವಾಗುತ್ತಿದೆ.

ದಸರಾ ಉತ್ಸವ, ಮದುವೆ, ಗೃಹಪ್ರವೇಶ ಇತರೆ ಕಾರ್ಯಕ್ರಮಗಳಲ್ಲಿ ಧಾನ್ಯಗಳಿಗೆ ಭಾರಿ ಡಿಮ್ಯಾಂಡ್‌

ಕಳೆದ ಎರಡು ತಿಂಗಳಿಂದೀಚೆಗೆ ಶೇ.30 ರಷ್ಟು ಬೆಲೆ ಏರಿಕೆ

ಎರಡು ತಿಂಗಳ ಹಿಂದೆ 130-135 ರೂ. ಇದ್ದ ತೊಗರಿಬೇಳೆ ಈಗ 200 ರ ಗಡಿ ದಾಟಿದೆ

ಮುಂಗಾರು ಮಳೆ ಕೊರತೆ, ಗಗನಕ್ಕೇರಿದ ಧಾನ್ಯಗಳ ಬೆಲೆ

ಬೆಂಗಳೂರು: ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ನಾನಾ ಕೃಷಿ ಬೆಳೆಗಳಿಗೆ ಸಂಕಷ್ಟ ಎದುರಾಗಿದ್ದು, ದಿನದಿಂದ ದಿನಕ್ಕೆ ಧಾನ್ಯಗಳ ದರ ಗಗನಕ್ಕೇರುತ್ತಿದೆ. ಅದರಲ್ಲೂ ದಸರಾ ಹಬ್ಬಕ್ಕೆ ಎಲ್ಲೆಡೆ ದೇವರ ಉತ್ಸವಗಳು ನಡೆಯಲಿದ್ದು, ಅನ್ನದಾಸೋಹವೂ ಜೋರಾಗಿಯೇ ನಡೆಯುತ್ತದೆ.

ಈ ವೇಳೆ ಅಕ್ಕಿ, ಬೇಳೆ ಸೇರಿದಂತೆ ಧಾನ್ಯಗಳ ಖರೀದಿಯೂ ಹೆಚ್ಚಾಗಿರುತ್ತದೆ. ತೊಗರಿ, ಹೆಸರು, ಉದ್ದು, ಕಡಲೆ, ಗೋಧಿ, ಅಕ್ಕಿ ಸೇರಿದಂತೆ ಹಲವು ಪದಾರ್ಥಗಳ ಬೆಲೆ ಕಳೆದ ಎರಡು ತಿಂಗಳಿಂದೀಚೆಗೆ ಶೇ.30ರಷ್ಟು ಏರಿಕೆಯಾಗಿದೆ.

ನಾಡಹಬ್ಬ ದಸರಾಗೆ ಧಾನ್ಯಗಳ ದರ ಏರಿಕೆಯ ಬಿಸಿ ತಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬೆಲೆಯಲ್ಲಿ ಶೇ.30 ರಷ್ಟು ಏರಿಕೆಯಾಗಿದೆ. ಕೆಜಿ ತೊಗರಿಬೇಳೆ ಸಗಟು ದರದಲ್ಲಿ160- 170 ರೂ. ಇದೆ. ಚಿಲ್ಲರೆ ಮಾರಾಟದಲ್ಲಿ 200 ರೂ. ಹಾಗೂ ಮೇಲ್ಪಟ್ಟು ಮಾರಾಟವಾಗುತ್ತಿದೆ. ಎರಡು ತಿಂಗಳ ಹಿಂದೆ 130-135 ರೂ. ಇದ್ದ ತೊಗರಿಬೇಳೆ ಈಗ 200ರ ಗಡಿ ದಾಟಿದೆ. ಹಂತಹಂತವಾಗಿ ಏರಿಕೆಯಾಗುತ್ತಾ ಬಂದಿದ್ದು, ಈಗ ಬೆಲೆ ಮಿತಿಮೀರಿದೆ.

ಹೆಸರುಕಾಳು ಸಗಟು ದರದಲ್ಲಿ ಒಂದೇ ತಿಂಗಳಲ್ಲಿಕೆ.ಜಿ.ಗೆ 30-40 ರೂ. ಏರಿಕೆಯಾಗಿದೆ. 100- 120 ರೂ. ಇದ್ದುದು ಈಗ 150- 160 ರೂ.ವರೆಗೆ ಮುಟ್ಟಿದೆ. ಅಕ್ಕಿ, ಗೋಧಿ ಹಾಗೂ ಬೇಳೆಕಾಳುಗಳ ದರ ತಲಾ ಶೇ.25-30ರಷ್ಟು ಏರಿಕೆಯಾಗಿವೆ. ಮಳೆ ಕೊರತೆಯಿಂದಾಗಿ ಬೆಳೆ ಇಲ್ಲ. ಹೀಗಾಗಿ, ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದೆ ಇರುವುದರಿಂದ ಬೆಲೆ ಗಗನಕ್ಕೇರಿದೆ. ಅಕ್ಕಿ ಕೆ.ಜಿ.ಗೆ ಸಗಟು ದರದಲ್ಲಿ 2 ರೂ. ಏರಿಕೆಯಾಗಿದೆ. ಬೆಳೆ ಕಾಳುಗಳು ಕೆ.ಜಿ.ಗೆ 20-30 ರೂ.ವರೆಗೆ ಏರಿಕೆಯಾಗಿವೆ.

ಆಹಾರ ಧಾನ್ಯಗಳ ಉತ್ಪಾದನೆ ಇಳಿಕೆ ಹಾದಿಯಲ್ಲಿರುವ ಕಾರಣ ಬೆಲೆ ದುಬಾರಿಯಾಗುವುದು ನಿಶ್ಚಿತ. ರಾಜ್ಯದಲ್ಲಿವಾರ್ಷಿಕ 65 ಲಕ್ಷ ಟನ್‌ ಭತ್ತ ಉತ್ಪಾದನೆಯಾಗುತ್ತದೆ. ಮಳೆ ಕೊರತೆಯಿಂದ ಈ ಬಾರಿ 45 ಲಕ್ಷ ಟನ್‌ಗೆ ಕುಸಿಯುವ ಅಂದಾಜಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕಿ ರಫ್ತು ನಿಷೇಧಿಸಧಿಲಾಧಿಗಿಧಿದೆ. ಮುಂದಿನ ದಿನಗಳಲ್ಲಿಉತ್ತಮ ಗುಣಮಟ್ಟದ ಹಾಗೂ ಸಾಮಾನ್ಯ ಅಕ್ಕಿ ದರ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗುತ್ತಿದೆ.

ದಿನ ದಿನಕ್ಕೂ ದುಬಾರಿಯಾಗುತ್ತಿದೆ ಈರುಳ್ಳಿ, ಗ್ರಾಹಕರ ಜೇಬಿಗೆ ಕತ್ತರಿ ನಿಶ್ಚಿತ

ಪ್ರಸಕ್ತ ವರ್ಷದ ಸ್ಥಿತಿ

ಪ್ರಸಕ್ತ ವರ್ಷದ ಮುಂಗಾರು ಹಂಗಾಮಿಗೆ 82.35 ಲಕ್ಷ, ಹಿಂಗಾರಿನಲ್ಲಿ25.38 ಲಕ್ಷ ಹಾಗೂ ಬೇಸಿಗೆ ಹಂಗಾಮಿನಲ್ಲಿ6.54 ಲಕ್ಷ ಹೆಕ್ಟೇರ್‌ ಸೇರಿ ಒಟ್ಟು 114.27 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿಯಿದೆ. ಒಟ್ಟು 148.16 ಲಕ್ಷ ಟನ್‌ ಆಹಾರ ಧಾನ್ಯ, 13.84 ಲಕ್ಷ ಟನ್‌ ಎಣ್ಣೆಕಾಳುಗಳ ಉತ್ಪಾದನೆ ಗುರಿಯಿಟ್ಟುಕೊಳ್ಳಲಾಗಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ಶೇ. 26ರಷ್ಟು ಮಳೆ ಕೊರತೆಯಾಗಿದೆ. ನಿಗದಿತ 82.35 ಲಕ್ಷ ಹೆಕ್ಟೇರ್‌ ಪೈಕಿ ಸೆಪ್ಟೆಂಬರ್‌ ಅಂತ್ಯದವರೆಗೆ 45.49 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ಸದ್ಯ ಸಂಗ್ರಹವಿರುವ ಧಾನ್ಯಗಳ ಮಾರಾಟ ನಡೆಯುತ್ತಿದೆ. ಈಗ ಮದುವೆ, ಗೃಹ ಪ್ರವೇಶ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಧಾನ್ಯಗಳಿಗೆ ಹೆಚ್ಚು ಬೇಡಿಕೆಯಿದೆ. ಹೀಗಾಗಿ, ಬೆಲೆಗಳು ಏರಿಕೆಯಾಗಿವೆ. ಡಿಸೆಂಬರ್‌ನಲ್ಲಿ ಹೆಸರುಕಾಳು, ಹಲಸಂದೆ ಮತ್ತಿತರ ಧಾನ್ಯಗಳ ಹೊಸ ಬೆಳೆ ಬರಲಿದೆ. ಆಗ ಬೆಲೆಗಳ ಸ್ವಲ್ಪ ಇಳಿಕೆಯಾಗುತ್ತವೆ.

-ಸಾಯಿರಾಂ ಪ್ರಸಾದ್‌, ಎಪಿಎಂಸಿ, ಆಹಾರ ಧಾನ್ಯಗಳ ವರ್ತಕರ ಸಂಘದ ಕಾರ್ಯದರ್ಶಿ

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಮಳೆಯ ಕೊರತೆ ಗಗನಕ್ಕೇರಿದ ಧಾನ್ಯಗಳ ಬೆಲೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಮಳೆಯ ಕೊರತೆ ಗಗನಕ್ಕೇರಿದ ಧಾನ್ಯಗಳ ಬೆಲೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

ತಪ್ಪದೆ ಓದಿರಿ :-

➡️ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಯಾವ ಬೆಳೆಗೆ ಎಷ್ಟು ಹೆಚ್ಚಾಗಿದೆ ಇಲ್ಲಿ ನೋಡಿರಿ… https://krushivahini.com/2023/10/25/rabi-2023-minimum-support-price/

➡️ ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಎಷ್ಟು ಜಮೆಯಾಗಬಹುದು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ https://krushivahini.com/2023/10/22/bele-vime/

➡️ ಎನ್ ಡಿ ಆರ್ ಎಫ್ ನಿಂದ ಕೂಡಲೇ ರೈತರಿಗೆ ಬರ ಪರಿಹಾರ ಕೊಡಬೇಕು ಸಚಿವ ಕೃಷ್ಣ ಬೈರೇಗೌಡ https://krushivahini.com/2023/10/22/bara-parihara-news/

➡️ ಬರ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ ಎಕರೆಗೆ 25,000 ಬೆಳೆ ಪರಿಹಾರ ಕೊಡುವಂತೆ ಪ್ರತಿಭಟನೆ 🙏🏻https://krushivahini.com/2023/10/21/drought-relief-protest/

➡️ ಶೀಘ್ರದಲ್ಲಿ ಬರ ಪರಿಹಾರ ಬಿಡುಗಡೆ ಸಚಿವ ಕೃಷ್ಣ ಬೈರೇಗೌಡ ಭರವಸೆ.. ಇಲ್ಲಿದೆ ಮಹತ್ವದ ಮಾಹಿತಿ 👇🏻
https://krushivahini.com/2023/10/21/bara-parihara/

Leave a Reply

Your email address will not be published. Required fields are marked *