Bumper Price For Onion in Karnataka Market : ರಾಜ್ಯದಲ್ಲಿ ಮಳೆ ಕುಸಿದ ಪ್ರಯಾಣ ವಾಡಿಕೆಯಷ್ಟು ಈರುಳ್ಳಿ ಬೆಳೆಯಲು ಸಾಧ್ಯವಾಗಿಲ್ಲ. ಮಾರುಕಟ್ಟೆಯಲ್ಲಿ ಈರುಳ್ಳಿಗೆ ಹೆಚ್ಚಿನ ದರ ಇದೆ. ಆದರೆ, ಹೊಲಗಳಲ್ಲಿ ಈರುಳ್ಳಿ ಬೆಳೆಯೇ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಈ ಬಗ್ಗೆ ವರದಿ ಇಲ್ಲಿದೆ.

ಇದನ್ನು ಓದಿರಿ :-

ರಾಜ್ಯದಲ್ಲಿಅತ್ಯಧಿಕ ಮುಂಗಾರು ಈರುಳ್ಳಿ ಬೆಳೆಯುವ ಕರ್ನಾಟಕದ ಜಿಲ್ಲೆಗಳಲ್ಲಿ ಬೆಳೆ ಕುಸಿತ

1 ಪಾಕೆಟ್‌ ಈರುಳ್ಳಿಗೆ 1600ರಿಂದ 2000 ರೂ.

ಮಾರುಕಟ್ಟೆಗಳಲ್ಲಿ ಬಂಪರ್‌ ಬೆಲೆ ಇದೆ ಈರುಳ್ಳಿ ಬೆಳೆ ಇಲ್ಲ.

ಚಿತ್ರದುರ್ಗ : ಮಾರುಕಟ್ಟೆಯಲ್ಲಿ ದಿನೇ ದಿನೇ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಒಂದು ಪಾಕೆಟ್‌ ಈರುಳ್ಳಿಗೆ 1600 ರಿಂದ 2000 ರೂ. ತನಕ ಬಂಪರ್‌ ಬೆಲೆ ಸಿಗುತ್ತಿದೆ. ಆದರೆ, ಇದರ ಲಾಭ ಪಡೆಯಬೇಕಾದ ರೈತರ ಜಮೀನುಗಳಲ್ಲಿಈರುಳ್ಳಿ ದಾಸ್ತಾನೇ ಇಲ್ಲಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಅತ್ಯಧಿಕ ಮುಂಗಾರು ಈರುಳ್ಳಿ ಬೆಳೆಯುವ ಜಿಲ್ಲೆಗಳಲ್ಲಿ ಚಿತ್ರದುರ್ಗ ಜಿಲ್ಲೆಯೂ ಒಂದು. ಮಳೆಯಾಶ್ರಿತ, ನೀರಾವರಿ ಆಶ್ರಿತ ಎರಡೂ ವಿಧಾನಗಳಲ್ಲಿ ಮುಂಗಾರಿನಲ್ಲಿ ಜಿಲ್ಲೆಯ ರೈತರು ಈರುಳ್ಳಿ ಬೆಳೆಯುತ್ತಾರೆ. ಇಲ್ಲಿ ಅಡಕೆ, ದಾಳಿಂಬೆ ನಂತರ ಕೋಟಿ ಲೆಕ್ಕದ ದುಡಿಮೆ ಕನಸು ಕಂಡಿದ್ದರೆ ಅದು ಈರುಳ್ಳಿ ಬೆಳೆಯಲ್ಲಿ ಮಾತ್ರ. ಆದರೆ, ಕಳೆದ ನಾಲ್ಕೈದು ವರ್ಷಗಳ ಸತತ ಹವಾಮಾನ ವೈಪರೀತ್ಯದ ಕಾರಣ ನಿರೀಕ್ಷಿತ ಪ್ರಮಾಣದ ಈರುಳ್ಳಿ ಬೆಳೆಯಲಾಗದೇ ರೈತರು ನಿರಂತರ ನಷ್ಟ ಅನುಭವಿಸುತ್ತಲೇ ಬಂದರು. ಬೆಳೆ ಬಂದಾಗ ಬೆಲೆ ಇಲ್ಲ. ಬೆಲೆ ಇದ್ದಾಗ ಬೆಳೆ ಇಲ್ಲಎನ್ನುವ ಪರಿಸ್ಥಿತಿ ಜಿಲ್ಲೆಯ ಈರುಳ್ಳಿ ಬೆಳೆಗಾರರು ಎದುರಿಸುತ್ತಲೇ ಬಂದರು.

ಮಳೆ ತಡ; ಈರುಳ್ಳಿ ಬೆಳೆಯಲು ಆಸಕ್ತಿ ತೋರಲಿಲ್ಲ ರೈತರು

ಈ ಬಾರಿ ಮುಂಗಾರು ತಡವಾಗಿ ಪ್ರವೇಶಿಸಿದ್ದರಿಂದ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಯಲು ಬಹಳ ರೈತರು ಅಷ್ಟೇನೂ ದೊಡ್ಡ ಪ್ರಮಾಣದ ಆಸಕ್ತಿ ತೋರಿಸಲಿಲ್ಲ. ಆದರೂ, ಈ ಬಾರಿ ಬೆಲೆ ಸಿಗಬಹುದು ಎನ್ನುವ ಕಾರಣಕ್ಕೆ 25 ಸಾವಿರ ಹೆಕ್ಟೇರ್‌ ಗುರಿಗೆ 18 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದರು. 4779 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದರೆ, ಉಳಿದ 13 ಸಾವಿರ ಹೆಕ್ಟೇರ್‌ನಲ್ಲಿ ನೀರಾವರಿ ಆಶ್ರಿತ ಈರುಳ್ಳಿ ಬಿತ್ತನೆ ಮಾಡಿದರು.

ಸಾವಿರಾರು ಹೆಕ್ಟೇರ್‌ ಪ್ರದೇಶದ ಈರುಳ್ಳಿ ನಾಶ

ಮಳೆ ಕೊರತೆ ಕಾರಣ ಇಡೀ ಮಳೆಯಾಶ್ರಿತ ಪ್ರದೇಶದ ಸುಮಾರು ಐದು ಸಾವಿರ ಹೆಕ್ಟೇರ್‌ ಪ್ರದೇಶದ ಈರುಳ್ಳಿ ನಾಶವಾಗಿದ್ದು, ರೈತರು ಸಂಪೂರ್ಣ ನಷ್ಟದ ಸುಳಿಗೆ ಸಿಲುಕಿದ್ದಾರೆ. ಇನ್ನು ಮಳೆಯಾಶ್ರಿತ ರೈತರ ಜಮೀನುಗಳಲ್ಲಿ ನೀರಿನ ಸೌಲಭ್ಯ ಇದ್ದರೂ, ಮಳೆಯ ಕೊರತೆಯ ಕಾರಣ ನಿರೀಕ್ಷಿತ ಪ್ರಮಾಣದ ಇಳುವರಿ ಬಂದಿಲ್ಲ. ಶೇ.80ರಷ್ಟು ಬೆಳೆ ಮಾತ್ರ ರೈತರಿಗೆ ಸಿಕ್ಕಿದೆ ಎಂಬುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಂದಾಜು.

ಮಾರುಕಟ್ಟೆಯಲ್ಲಿ ಈರುಳ್ಳಿ ದರ ಎಷ್ಟಿದೆ?

ಸೆಪ್ಟೆಂಬರ್‌ ಮೊದಲ ವಾರದಿಂದ ಮುಂಗಾರು ಈರುಳ್ಳಿ ಕಟಾವು ಪ್ರಾರಂಭವಾಗಿ ಈಗಾಗಲೇ ಶೇ.60ರಷ್ಟು ರೈತರ ಈರುಳ್ಳಿ ದಾಸ್ತಾನು ಮಾರುಕಟ್ಟೆಯಲ್ಲಿ ಬಿಕರಿಯಾಗಿದೆ. ಆರಂಭದಲ್ಲಿ ಒಂದು ಪಾಕೆಟ್‌ಗೆ 1000 ರೂ. ನಿಂದ 1200 ರೂ. ತನಕ ರೈತರಿಗೆ ಬೆಲೆ ಸಿಕ್ಕಿದೆ. ಈಗ ಈರುಳ್ಳಿ ಬೆಲೆ 1600 ರೂ. ದಿಂದ 2000 ತನಕ ಏರಿಕೆ ಕಂಡಿದೆ. ಆದರೆ, ಜಿಲ್ಲೆಯ ರೈತರ ತಾಕುಗಳಲ್ಲಿನಿರೀಕ್ಷಿತ ಪ್ರಮಾಣದ ದಾಸ್ತಾನು ಇಲ್ಲ. ಹಾಗಾಗಿ, ಮಾರುಕಟ್ಟೆಯಲ್ಲಿಬೆಲೆ ಇದ್ದರೂ, ಅದರ ಲಾಭ ಜಿಲ್ಲೆಯ ರೈತರಿಗೆ ಸಿಗುತ್ತಿಲ್ಲ. ಇನ್ನು ಕೆಲ ದಿನಗಳಲ್ಲಿಈ ಬೆಲೆಯ ಏರಿಕೆ ಇನ್ನಷ್ಟು ಹೆಚ್ಚಳವಾಗುವ ಸಂಭವ ಇದೆ. ಆದರ ಪ್ರಯೋಜನ ಮಾತ್ರ ರೈತರಿಗೆ ಸಿಗದಂತಾಗಿದೆ.

ನಾಲ್ಕು ವರ್ಷದಿಂದ ನಷ್ಟ

‘ಒಂದಲ್ಲ, ಎರಡಲ್ಲ ರೈತರು ಸತತ ನಾಲ್ಕೈದು ವರ್ಷ ಈರುಳ್ಳಿಯಲ್ಲಿ ನಷ್ಟ ಅನುಭವಿಸಿದರು. ಬಹಳಷ್ಟು ರೈತರು ಸೆಪ್ಟಂಬರ್‌ನಲ್ಲೇ ಮಾರಾಟ ಮಾಡಿದರು. ಕಳೆದ ವರ್ಷಗಳ ನಷ್ಟ ಒಂದಷ್ಟು ತುಂಬಿಕೊಂಡರೇ ವಿನಃ ರೈತರಿಗೆ ದೊಡ್ಡ ಪ್ರಮಾಣದ ಲಾಭ ಆಗಲಿಲ್ಲ’ ಎನ್ನುತ್ತಾರೆ ದೊಡ್ಡ ಸಿದ್ದವ್ವನಹಳ್ಳಿಯ ಈರುಳ್ಳಿ ಬೆಳೆಗಾರ ಮಲ್ಲಿಕಾರ್ಜುನ.

ಮಳೆಯಾಶ್ರಿತ ಪ್ರದೇಶದ 4779 ಹೆಕ್ಟೇರ್‌ ಪ್ರದೇಶದ ಈರುಳ್ಳಿ ಬೆಳೆ ಹಾನಿ ಆಗಿರುವುದರ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮಳೆಯಾಶ್ರಿತ ಪ್ರದೇಶದ ಈರುಳ್ಳಿ ಶೇ.80ರಿಂದ 90ರಷ್ಟು ಫಸಲು ಬಂದಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಡಾ.ಸವಿತಾ.

ಈ ಸಮಯದಲ್ಲಿಬೆಂಗಳೂರಿನ ಮಾರುಕಟ್ಟೆಯಲ್ಲಿ 90 ರಿಂದ ಒಂದು ಲಕ್ಷಕ್ಕೂ ಅಧಿಕ ಪಾಕೆಟ್‌ ಈರುಳ್ಳಿ ಇರುತ್ತಿತ್ತು. ಈಗ 30, 40 ಸಾವಿರ ಪಾಕೆಟ್‌ ಬಂದರೆ ಹೆಚ್ಚು ಎನ್ನುವಂತಾಗಿದೆ. ಈಗ ಈರುಳ್ಳಿ ದಾಸ್ತಾನು ಇರುವ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ ಎಂದು ಈರುಳ್ಳಿ ಬೆಳೆಗಾರ ರಾಜೇಂದ್ರ ರೆಡ್ಡಿ ಬೇಸರ ವ್ಯಕ್ತಪಡಿಸಿದರು..

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಈರುಳ್ಳಿ ಮಾರುಕಟ್ಟೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈರುಳ್ಳಿ ಮಾರುಕಟ್ಟೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

ತಪ್ಪದೆ ಓದಿರಿ :-

➡️ ರೈತರ ಹೊಲದ ಕಾಲುದಾರಿ ಬಂಡಿದಾರಿ ಬಗ್ಗೆ ಸರ್ಕಾರದಿಂದ ಸಿಹಿಸುದ್ದಿ ನಿಮ್ಮ ಹೊಲದ ನಕ್ಷೆ ಇಲ್ಲಿ ಪಡೆಯಿರಿ👇🏻 https://krushivahini.com/2023/10/22/village-map/

➡️ ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಎಷ್ಟು ಜಮೆಯಾಗಬಹುದು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ https://krushivahini.com/2023/10/22/bele-vime/

➡️ ಎನ್ ಡಿ ಆರ್ ಎಫ್ ನಿಂದ ಕೂಡಲೇ ರೈತರಿಗೆ ಬರ ಪರಿಹಾರ ಕೊಡಬೇಕು ಸಚಿವ ಕೃಷ್ಣ ಬೈರೇಗೌಡ https://krushivahini.com/2023/10/22/bara-parihara-news/

➡️ ಬರ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ ಎಕರೆಗೆ 25,000 ಬೆಳೆ ಪರಿಹಾರ ಕೊಡುವಂತೆ ಪ್ರತಿಭಟನೆ 🙏🏻https://krushivahini.com/2023/10/21/drought-relief-protest/

➡️ ಹಿಂಗಾರು ಬೆಳೆ ವಿಮೆ ನೀವು ಯಾವ ಬೆಳೆಗೆ ಎಷ್ಟು ವಿಮೆ ಪಾವತಿಸಬೇಕು ಹಾಗೂ ಕೊನೆಯ ದಿನಾಂಕವನ್ನು ಇಲ್ಲಿ ನೋಡಿ https://krushivahini.com/2023/10/21/crop-you-can-insure/

➡️ ರಾಜ್ಯದಲ್ಲಿ 53,000 ಗಡಿ ದಾಟಿದ ಅಡಿಕೆ ಬೆಲೆ ನಿಮ್ಮ ಜಿಲ್ಲೆಯಲ್ಲಿ ಎಷ್ಟು ದರ ಇದೆ ಇಲ್ಲಿ ನೋಡಿ https://krushivahini.com/2023/10/21/arecaunt-price-increased/

➡️🌴ಅಡಿಕೆ ಎಲೆ ಚುಕ್ಕೆ ರೋಗದ ಸಂಪೂರ್ಣ ನಿರ್ವಹಣೆ! ✅ಯಾವ ಜಿಲ್ಲೆಯಲ್ಲಿ ಅಡಿಕೆ ಧಾರಣೆ💵 ಎಷ್ಟಿದೆ ಎಂದು ತೆಗೆದುಕೊಳ್ಳಿ 👇🏻..

https://krushivahini.com/2023/10/20/arecaunt-leaf-spot-management/

Leave a Reply

Your email address will not be published. Required fields are marked *