Arecaunt leaf spot management :-
ನಮಸ್ಕಾರ ಆತ್ಮೀಯ ರೈತ ಬಾಂಧವರೇ, ಈ ಲೇಖನದಲ್ಲಿ ನಾವು ಅಡಿಕೆಗೆ ಬರುವ ಎಲೆ ಚುಕ್ಕೆ ರೋಗ ಹಾಗೂ ಹಳದಿ ರೋಗದ ಬಗ್ಗೆ ತಿಳಿದುಕೊಳ್ಳೋಣ ಹಾಗೂ ಯಾವ ಜಿಲ್ಲೆಯಲ್ಲಿ ಅಡಿಕೆ ಗೆ ಇರುವ ಮಾರುಕಟ್ಟೆ ಎಷ್ಟು ಇದೆ ಎಂಬುದನ್ನು ನೋಡೋಣ.
* (ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ) ರಾಜ್ಯದಲ್ಲಿ ಬಹಳಷ್ಟು ಒತ್ತು ನೀಡುವ ಕೃಷಿ ಎಂದರೆ ಅದು ಅಡಿಕೆ ಕೃಷಿ (Arecanut Farming), ರೈತರು ಈ ಕೃಷಿಯನ್ನೆ ನಂಬಿ ಬದುಕುತ್ತಿದ್ದಾರೆ. ಈ ಬೆಳೆಯಲ್ಲಿ ಕಡಿಮೆ ಖರ್ಚು ಮಾಡಿ ಹೆಚ್ಚಿನ ಇಳುವರಿಯನ್ನು ಕೂಡ ಪಡೆಯ ಬಹುದಾಗಿದೆ.
ಅಡಿಕೆ ಬೆಳೆ ಬೆಳೆಯುವಾಗ ಕೆಲವೊಂದಿಷ್ಟು ಮುನ್ನೆಚರಿಕೆ ಕ್ರಮಗಳನ್ನು ವಹಿಸುವುದು ಕೂಡ ಅಷ್ಟೆ ಮುಖ್ಯ ವಾಗುತ್ತದೆ. ರಾಸಾಯನಿಕ ಗೊಬ್ಬರ ಬಳಸುವುದಕ್ಕಿಂತಲೂ ಸಾವಯವ ಗೊಬ್ಬರ ಬಳಸಿ. ಅಡಿಕೆ ಗಿಡಗಳಿಗೆ ರೋಗ ಹರಡುವ ಮುಂಚೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ. ನೀವು ಸಮತಟ್ಟಾಗಿರುವ ಪ್ರದೇಶದಲ್ಲಿ ಅಡಿಕೆ ಕೃಷಿ ಮಾಡಿದರೆ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಲಾಭ ಗಳಿಸಬಹುದು.
* ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆಯಾಗಿದೆ
ಶಿವಮೊಗ್ಗದಲ್ಲಿ ಅಡಿಕೆ 47,121 ರೂ.ನಂತೆ ಮಾರಾಟವಾಗುತ್ತಿದೆ.
ಅದೇ ರೀತಿಯಾಗಿತುಮಕೂರಿನಲ್ಲಿ ಅಡಿಕೆ 45,200 ರೂ.ನಂತೆ ವಹಿವಾಟು ನಡೆಸುತ್ತಿದೆ.
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗುರುವಾರ ಕೊಂಚ ಏರಿಕೆ ಕಂಡಿದೆ. ಇತ್ತೀಚೆಗಷ್ಟೇ 57 ಸಾವಿರ ರೂ. ಗಡಿ ದಾಟಿದ್ದ ಅಡಿಕೆ ಧಾರಣೆ ಇದೀಗ ಕೊಂಚ ಕುಸಿತ ಕಂಡಿದೆ. ಕೆಲವು ಜಿಲ್ಲೆಗಳಲ್ಲಿ ಅಡಿಕೆ ಬೆಲೆ ಉತ್ತಮ ಸ್ಥಿತಿಯಲ್ಲಿದೆ.
ಅಡಿಕೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸವಿದೆ.ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 45,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್ ಗಳಲ್ಲಿಇತ್ತೀಚಿನ ಅಡಿಕೆ ಬೆಲೆ ಎಷ್ಟಿದೆ ನೋಡಿ
ತಾಲೂಕು,ಅಡಿಕೆ,ಗರಿಷ್ಠ ಬೆಲೆ :-
ಕೊಪ್ಪ (ಚಿಕ್ಕಮಗಳೂರು ಜಿಲ್ಲೆ)ರಾಶಿ ಅಡಿಕೆ46,899 ರೂ.
ಚನ್ನಗಿರಿ (ದಾವಣಗೆರೆ ಜಿಲ್ಲೆ)ರಾಶಿ ಅಡಿಕೆ47,200 ರೂ.
ದಾವಣಗೆರೆ (ದಾವಣಗೆರೆ ಜಿಲ್ಲೆ)ರಾಶಿ ಅಡಿಕೆ48,569 ರೂ.
ಹೊನ್ನಾಳಿ (ದಾವಣಗೆರೆ ಜಿಲ್ಲೆ)ರಾಶಿ ಅಡಿಕೆ46,509 ರೂ.
ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ)ರಾಶಿ ಅಡಿಕೆ45,109 ರೂ.
ಶಿರಸಿ (ಉತ್ತರ ಕನ್ನಡ ಜಿಲ್ಲೆ)ರಾಶಿ ಅಡಿಕೆ46,861 ರೂ.
ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ)ರಾಶಿ ಅಡಿಕೆ54,000 ರೂ.
ಬಂಟ್ವಾಳ (ದಕ್ಷಿಣ ಕನ್ನಡ)ಹಳೆದು46,000 – 48,500 ರೂ.ಬಂಟ್ವಾಳ (ದಕ್ಷಿಣ ಕನ್ನಡ) ಕೋಕ 13,000 – 25,000 ರೂ.
ಮಂಗಳೂರು (ದಕ್ಷಿಣ ಕನ್ನಡ) ಹೊಸದು25,876 -31,000 ರೂ.
ಪುತ್ತೂರು (ದಕ್ಷಿಣ ಕನ್ನಡ) ಕೋಕ 11,000 – 26,000 ರೂ.ಪುತ್ತೂರು (ದಕ್ಷಿಣ ಕನ್ನಡ) ಹೊಸದು 34,000 – 45,000 ರೂ.
ಭದ್ರಾವತಿ (ಶಿವಮೊಗ್ಗ ಜಿಲ್ಲೆ)ರಾಶಿ ಅಡಿಕೆ46,500 ರೂ.
ಹೊಸನಗರ (ಶಿವಮೊಗ್ಗ ಜಿಲ್ಲೆ)ರಾಶಿ ಅಡಿಕೆ47,379 ರೂ.
ಸಾಗರ (ಶಿವಮೊಗ್ಗ ಜಿಲ್ಲೆ)ರಾಶಿ ಅಡಿಕೆ46,409 ರೂ.
ಶಿಕಾರಿಪುರ (ಶಿವಮೊಗ್ಗ ಜಿಲ್ಲೆ)ರಾಶಿ ಅಡಿಕೆ45,900 ರೂ
.ಶಿವಮೊಗ್ಗ (ಶಿವಮೊಗ್ಗ ಜಿಲ್ಲೆ)ರಾಶಿ ಅಡಿಕೆ47,121 ರೂ.
ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ)ರಾಶಿ ಅಡಿಕೆ46,500 ರೂ.
ತುಮಕೂರು (ತುಮಕೂರು ಜಿಲ್ಲೆ)ರಾಶಿ ಅಡಿಕೆ- 45,200 ರೂ
1) ಅಡಿಕೆ ಎಲೆಚುಕ್ಕಿ ರೋಗ :-
ಎಲೆಚುಕ್ಕೆ ರೋಗದ ಲಕ್ಷಣಗಳು :- ಎಲೆಗಳ ಮೇಲೆ ಬೂದು ಮಿಶ್ರಿತ ಕಂದು ಬಣ್ಣದ ಚುಕ್ಕೆಗಳು ಕಂಡು ಬಂದು ದೊಡ್ಡದಾಗಿ ಕೂಡಿಕೊಂಡು ಎಲೆ ಸುಟ್ಟಂತೆ ಕಂಡು ಬರುವದು. ತೀವ್ರ ಬಾಧೆಗೊಳಗಾದ ಎಲೆಗಳು ಒಣಗಿ ಉದುರುತ್ತವೆ.ಇದರಿಂದ ಅಡಿಕೆ ಸೋಗೆಗಳು ಸೊರಗಿ ಹೋಗುತ್ತದೆ. ಅಡಕೆ ಮರ ಆರೋಗ್ಯವಂತವಾಗಿರಲು ಸಾವಯವ ಗೊಬ್ಬರ ನೀಡಬೇಕು.
ಎಲೆಚುಕ್ಕೆ ರೋಗ ಕಾಣಿಸಿಕೊಂಡಾಗ 2 ಗ್ರಾಂ ಮ್ಯಾಂಕೋಜೆಬ್ 75 ಡಬ್ಲೂ.ಪಿ.(Mancozeb 75wp)ಅಥವಾ 3ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲೂ.ಪಿ.(Copper oxy chloride 50 wp) ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
2) ಹಳದಿ ಎಲೆ ರೋಗ:-
ರೋಗದ ಲಕ್ಷಣಗಳು :- ಎಲೆಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ನಂತರ ಪೂರ್ತಿ ಎಲೆಯು ಹಳದಿ ಮತ್ತು ಹಸಿರು ಪಟ್ಟಿಗಳಿಂದ ಮಿಶ್ರಿತವಾಗಿರುತ್ತದೆ. ನಂತರ ಹಂತದಲ್ಲಿ ಎಲೆಗಳ ಒಣಗುವಿಕೆಯನ್ನು ಕಾಣುತ್ತೇವೆ. ಬಾಧೆಗೊಳಗಾದ ಮರದ ಅಡಿಕೆಯು ಕಂದು ಬಣ್ಣದ್ದಾಗಿದ್ದು ತಿನ್ನಲು ಯೋಗ್ಯ ವಾಗಿರುವುದಿಲ್ಲ. ಬೇರುಗಳ ತುದಿಯು ಗಡುಸಾಗಿದ್ದು ಕಪ್ಪು ಬಣ್ಣಕ್ಕೆ ತಿರುಗಬಹುದು.ಬಳಕೆಯಲ್ಲಿರುವ ಸಸ್ಯ ಸಂರಕ್ಷಣಾ ಕ್ರಮಗಳಿಂದ ಈ ರೋಗವನ್ನು ನಿಯಂತ್ರಿಸಲು ಸಾಧ್ಯವಿಲ್ಲದೇ ಇರುವುದರಿಂದ ರೋಗವನ್ನು ನಿಯಂತ್ರಣದಲ್ಲಿಡಲು ಮತ್ತು ಬಾಧಿತ ಮರಗಳ ಇಳುವರಿಯನ್ನು ಹೆಚ್ಚಿಸಲು ಈ ಕೆಳಗಿನ ನಿರ್ವಹಣಾ ಕ್ರಮ ಗಳನ್ನು ತಪ್ಪದೆ ತೆಗೆದುಕೊಳ್ಳಬಹುದು.
*ಬೇಸಿಗೆಯಲ್ಲಿ ನೀರನ್ನು ಕೊಟ್ಟು ನೀರು ನಿರ್ವಹಣಾ ಕ್ರಮ ಗಳನ್ನು ಅನುಸರಿಸುವುದು.
*ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು ಹಾಗೂ ಲಘಪೋಷಕಾಂಶಗಳನ್ನು ಒದಗಿಸುವುದು.
* ಹಸಿರೆಲೆ ಮತ್ತು ತಿಪ್ಪೆಗೊಬ್ಬರಗಳನ್ನು ಒದಗಿಸುವುದು.
* ಒಂದು ಕಿ.ಗ್ರಾಂ. ಫಾಸ್ಟೇಟ್ ಗೊಬ್ಬರ, 2. ಕಿ.ಗ್ರಾಂ. ಬೇವಿನ ಹಿಂಡಿಯನ್ನು ಎರಡು ಕಂತುಗಳಲ್ಲಿ ಪ್ರತಿ ಗಿಡಕ್ಕೆ ಕೊಡಬೇಕು.
* ಏಪ್ರಿಲ್ ತಿಂಗಳಲ್ಲಿ ಸುಳಿತಿಗಣೆಯನ್ನು ನಿಯಂತ್ರಿಸಲು ರಂಧ್ರಗಳಿರುವ ಪ್ಲಾಸ್ಟಿಕ್ ಚೀಲದಲ್ಲಿ 2 ಗ್ರಾಂ. ಫೋರೇಟ್ ಹರಳುಗಳನ್ನು ಹಾಕಿ ಎಲೆಗಳಡಿಯಲ್ಲಿ ಇಡಬೇಕು.
* ಕೀಟಗಳ ನಿರ್ವಹಣೆಗೆ ಸೂಕ್ತ ಕ್ರಮಗಳನ್ನು ಅನುಸರಿಸಬೇಕು.
* ಬಸಿಗಾಲುವೆಗಳನ್ನು ನಿರ್ಮಿಸುವುದು.
* ಅಲಸಂದಿ ಅಥವಾ ಇನ್ನಿತರ ಹಸಿರೆಲೆ ಬೆಳೆಗಳನ್ನು ಗಿಡಗಳ ನಡುವಿನ ಸ್ಥಳದಲ್ಲಿ ಬೆಳೆಯುವುದು.
ಅನುದಾನ ಬಿಡುಗಡೆ: ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ಔಷದಿ ಹಾಗೂ ಸಿಂಪರಣೆ ವೆಚ್ಚ ಭರಿಸಲು ಮುಂದಾಗಿದೆ.ಇದಕ್ಕಾಗಿ ಅನುದಾನ ಬಿಡುಗಡೆ ಗೊಳಿಸಲು ತಿರ್ಮಾನ ಮಾಡಿದ್ದು, ಅದೇ ರೀತಿ ರೈತರಿಗೆ ಕೃಷಿಗೆ ಬೇಕಾದ ತರಭೇತಿ ನೀಡಲು ಸಹ ಮುಂದಾಗಿದೆ.
ಹೀಗೆ ಮಾಡಿ:- ಅಡಿಕೆ ಗಳಿಗೆ ರೋಗಬಾಧೆ ಕಾಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಳೆ ಆರಂಭವಾಗುವ ಮೊದಲೇ ಬೋರ್ಡೋ ದ್ರಾವಣ (bordo mixture)ಸಿಂಪಡಣೆ ಮಾಡುವುದು ಕೂಡ ಮುಖ್ಯವಾಗುತ್ತದೆ.ರೋಗ ಹರಡಿದ ಸೋಗೆಯನ್ನು ತೆಗೆದು ಬಿಡಬೇಕು. ಮರಗಳ ರೆಂಬೆ ಕತ್ತರಿಸಿ, ಗಾಳಿ, ಬೆಳಕು, ನೀರು ಚೆನ್ನಾಗಿ ಹೀರಿಕೊಳ್ಳಯವಂತೆ ಮಾಡಬೇಕು.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ಅಡಿಕೆ ಮಾರುಕಟ್ಟೆ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಅಡಿಕೆ ಮಾರುಕಟ್ಟೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಯಾವ ಬೆಳೆಗೆ ಎಷ್ಟು ಹೆಚ್ಚಾಗಿದೆ ಇಲ್ಲಿ ನೋಡಿರಿ… https://krushivahini.com/2023/10/25/rabi-2023-minimum-support-price/
➡️ ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ?? ಮಧ್ಯಂತರ ಬೆಳೆ ವಿಮೆ ಬಿಡುಗಡೆ ಇಲ್ಲ??? ಬರ ಪರಿಹಾರ ಯಾವಾಗ ಬರುತ್ತದೆ https://krushivahini.com/2023/10/23/karnataka-drought-news/
➡️ ನರೇಗಾ ಯೋಜನೆಯ ಅಡಿ ಹಣವನ್ನು ಹೆಚ್ಚಳ ಮಾಡಿದ ಸರ್ಕಾರ ಇಲ್ಲಿದೆ ಮಹತ್ವದ ಮಾಹಿತಿ https://krushivahini.com/2023/10/22/narega-amount-increased/