Gruhalakshmi yojana money deposited :- ಗೃಹಲಕ್ಷ್ಮಿ ಯೋಜನೆಗೆ ತಡವಾಗಿ ಅರ್ಜಿ ಸಲ್ಲಿಸಿದರು ಹಣ ಬೇಗ ಬರಲಿದೆ :ಈ ಯೋಜನೆಯಲ್ಲಿ ಮಹಿಳೆಯರಿಗೆ ನಾನಾ ಅಡೆತಡೆ ಎದುರಾಗಿವೆ. ಆದ್ದರಿಂದ ಸ್ವಲ್ಪ ಜನ ಮಹಿಳೆಯರು ತಡವಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯ ಮುಖ್ಯ ಉದ್ದೇಶ, ಕುಟುಂಬದ ಒಡತಿಗೆ ಮಾಸಿಕ ಎರಡು ಸಾವಿರ ರೂ. ಆರ್ಥಿಕ ಸಹಾಯ ನೀಡುವುದಾಗಿದೆ. ಪಡಿತರ ಚೀಟಿಗಳ ಮಾಹಿತಿ ಆಧಾರದ ಮೂಲಕ ಯೋಜನೆ ಅನುಷ್ಠಾನವಾಗುತ್ತಿದೆ.
➡️ ಈ ಲಿಸ್ಟ್ ನಲ್ಲಿ ಹೆಸರಿದ್ದರೆ ಮಾತ್ರ ನಿಮಗೆ ಗೃಹ ಲಕ್ಷ್ಮಿ ಯೋಜನೆ ಹಣ ಜಮೆ ಆಗುತ್ತದೆ
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡhttps://ahara.kar.nic.in/Home/EServices
– ನಂತರ ಈ ಮುಖಪುಟದ ಎಡಗಡೆ ಕಾಣುವ ಮೂರು ಗೆರೆಗಳನ್ನು ಓತ್ತಿ
– ನಂತರ ಅಲ್ಲಿ ಕಾಣುವ ಹಾಗೆ e-Ration card ಮೇಲೆ ಕ್ಲಿಕ್ ಮಾಡಿ ಮತ್ತೆ ಕೆಳಗೆ ಕಾಣುವ show village list ಇದರ ಮೇಲೆ ಕ್ಲಿಕ್ ಮಾಡಿನಂತರ ನಿಮ್ಮ ಜಿಲ್ಲೆ ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಿ.. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಬರುತ್ತದೆ.ಗೃಹಲಕ್ಷ್ಮಿ 2 ನೇ ಕಂತಿನ ಹಣ ಎಲ್ಲ ಮಹಿಳೆಯರ ಖಾತೆಗೆ ಆದಷ್ಟು ಬೇಗ ಬರಲಿದೆ. ತಡವಾಗಿ ನೊಂದಣಿ ಆದವರಿಗೆ ಹಣ ಬಿಡುಗಡೆಯಾಗಲಿದೆ. ಆದರೆ ಇನ್ನೂ ಹಲವು ಫಲಾನುಭವಿ ಮಹಿಳೆಯರು ತಮ್ಮ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಹಣ ಬಿಡುಗಡೆಯಾದ ತಕ್ಷಣ ಎರಡೂ ಕಂತುಗಳನ್ನು ಸೇರಿಸಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
➡️ ಇವರಿಗೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಬರುವುದಿಲ್ಲ :-
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices– ನಂತರ ಈ ಮುಖಪುಟದ ಎಡಗಡೆ ಕಾಣುವ ಮೂರು ಗೆರೆಗಳನ್ನು ಓತ್ತಿ
– ನಂತರ ಅಲ್ಲಿ ಕಾಣುವ ಹಾಗೆ e-Ration card ಮೇಲೆ ಕ್ಲಿಕ್ ಮಾಡಿ ಮತ್ತೆ ಕೆಳಗೆ ಕಾಣುವ show cancelled /suspended list ಮೇಲೆ ಕ್ಲಿಕ್ ಮಾಡಿನಂತರ ನಿಮ್ಮ ಜಿಲ್ಲೆ ತಾಲೂಕು ತಿಂಗಳು ಹಾಗೂ ವರ್ಷ ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಿ.. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ನಿಮಗೆ ಬರುವುದಿಲ್ಲ..ಗೃಹ ಲಕ್ಷ್ಮಿ ಯೋಜನೆ ರೂ 2000 ನಿಮ್ಮ ಖಾತೆಗೆ ಜಮಾ ಮಾಡಬೇಕು ಮತ್ತು ಆಧಾರ್ ಸೀಡಿಂಗ್ ಜೊತೆಗೆ ಬ್ಯಾಂಕ್ ಖಾತೆ EKYC ಅಥವಾ NPCI ಕಡ್ಡಾಯವಾಗಿರಬೇಕು.
ಆದರೆ, ಹಲವು ಮಹಿಳೆಯರ ಖಾತೆಗಳಿಗೆ ಆಧಾರ್ ಲಿಂಕ್ ಆಗದ ಕಾರಣ ಅವರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿಲ್ಲ.ಪಡಿತರ ಚೀಟಿಯಲ್ಲಿ ಮೊದಲ ಸದಸ್ಯೆಯಾಗಿ ಗೃಹಿಣಿ ಹೆಸರು ಬದಲಾವಣೆ ಮಾಡಬೇಕಿತ್ತು, ತಿದ್ದುಪಡಿಗೆ ಸರಕಾರ ಅನುಮತಿ ನೀಡಿದ್ದು, ಬದಲಾವಣೆ ಮಾಡಿದ್ದರೆ ಸರ್ಕಾರಿ ಡೇಟಾಬೇಸ್ ನಲ್ಲಿ ಅಪ್ ಡೇಟ್ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು.ಆಧಾರ್ ಕಾರ್ಡ್ ಹೆಸರು, ವಿಳಾಸ, ಬ್ಯಾಂಕ್ ಖಾತೆ ಮತ್ತು ಪಡಿತರ ಚೀಟಿ ಸರಿಯಾಗಿ ಹೊಂದಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಿ. ಸರ್ಕಾರವು ಆಗಸ್ಟ್ 30 ರಂದು ಗೃಹ ಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸಿತು ಮತ್ತು ಹಣ ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದೆ. ಆದರೆ, ಗೃಹ ಲಕ್ಷ್ಮಿ ಹಣ ಮಾತ್ರ ಎಲ್ಲ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ, ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಇನ್ನೂ ಹಲವಾರು ಮಹಿಳೆಯರಿಗೆ ಕಂತುಗಳು ಬರಬೇಕಿದೆ.
ಹಣ ಸಿಗದಿರುವವರ ಖಾತೆಗೆ ಎರಡನೇ ಕಂತಿನ ಜತೆ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ. ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಫಲಾನುಭವಿಯ ಖಾತೆಗೆ 4000 ರೂ ಜಮೆ ಆಗಲಿದೆ.
ಇದರ ಬಗ್ಗೆ ಯಾವುದೇ ಗೊಂದಲವಿದ್ದರೆ, ನೀವು ಹತ್ತಿರದ ಸೇವಾ ಸಿಂಧು ಕೇಂದ್ರದಿಂದ ಮಾಹಿತಿಯನ್ನು ಪಡೆಯಬಹುದು ಅಥವಾ ಈ ಸಂಖ್ಯೆಗಳಿಗೆ 8147500500 ಮತ್ತು 1902 ಗೆ ಕರೆ ಮಾಡಬಹುದು ಅಥವಾ ನಿಮ್ಮ ಗೃಹ ಲಕ್ಷ್ಮಿ ಯೋಜನೆಯ ಅರ್ಜಿಯ ಬಗ್ಗೆ ತಿಳಿಯಲು ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಹಾಕಬಹುದು.
ಯಾವೆಲ್ಲ ಸಮಸ್ಯೆಗಳು ಎದುರಾಗಿವೆ :ಇ-ಕೆವೈಸಿ ಸಮಸ್ಯೆ: ಇನ್ನು ನೋಡುವುದಾದರೆ ಉಳಿದ ಮಹಿಳೆಯರ ಪಡಿತರ ಚೀಟಿಯಲ್ಲಿ ಹೆಸರು ವ್ಯತ್ಯಾಸ, ಆಧಾರ್ ಕಾರ್ಡ್‌ನಲ್ಲಿ ಹೆಸರಿನ ಗೊಂದಲ, ಇ-ಕೆವೈಸಿಯಾಗದಿರುವುದು ಸೇರಿ ನಾನಾ ಕಾರಣದಿಂದ ಅರ್ಜಿ ಸ್ವೀಕೃತವಾಗಿಲ್ಲ.ಎರಡನೇ ತಿಂಗಳ ಮಾಸಿಕ 2 ಸಾವಿರ ರೂ.ಅನುದಾನ ನೋಂದಣಿಯಾದ ಫಲಾನುಭವಿಗಳಿಗೆ ವಾರದೊಳಗೆ ಬಿಡುಗಡೆಯಾಗಲಿದೆ.ಈಗ ಹಲವಾರು ಫಲಾನುಭವಿಗಳ ಡಿಬಿಟಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆದಷ್ಟು ಬೇಗ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ. ಉಳಿದವರ ಡಿಬಿಟಿ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯದಲ್ಲೇ ಎರಡನೇ ತಿಂಗಳ ಹಣ ಮಹಿಳೆಯರ ಖಾತೆಗೆ ಪೂರ್ಣವಾಗಿ ಜಮೆಯಾಗಲಿದೆ.
ಇನ್ನು ಹಲವು ತೊಂದರೆಗಳು ಕಾಡುತ್ತಿವೆ.ಪಡಿತರ ಚೀಟಿಯಲ್ಲಿ ಹೆಸರು ಕೈ ತಪ್ಪಿ ಹೋಗಿರುವ ಕಾರಣ ನೋಂದಣಿ ಸಾಧ್ಯವಾಗಿಲ್ಲ. ಕೆಲವರ ಹೆಸರು ಪಡಿತರ ಚೀಟಿಯಲ್ಲಿ ಹೆಸರಿದ್ದರೂ ನೊಂದಣಿ ಆಗಿಲ್ಲ. ಇಂತಹ ಸಮಸ್ಯೆಯಿಂದ ನೋಂದಣಿಗೆ ವಿಳಂಬವಾಗಿದೆ. ಆದಷ್ಟು ಬೇಗ ಎಲ್ಲ ಸಮಸ್ಯೆಗಳನ್ನು ಸರಿ ಪಡಿಸಿಕೊಂಡರೆ ಬೇಗ ಹಣ ಖಾತೆಗೆ ಬರಲಿದೆ ಎಂದು ಸರಕಾರ ತಿಳಿಸಿದೆ.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ಗೃಹಲಕ್ಷ್ಮಿ ಹಣ ಇನ್ನೇನು ಎರಡೇ ದಿನಗಳಲ್ಲಿ ಬರಲಿದೆ. :-ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಗೃಹಲಕ್ಷ್ಮಿ ಹಣ ಇನ್ನೇನು ಎರಡೇ ದಿನಗಳಲ್ಲಿ ಬರಲಿದೆ. ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️💸 ಸದ್ಯದಲ್ಲೇ 27 ಲಕ್ಷ ರೈತರಿಗೆ ಬರ ಪರಿಹಾರ ಹಣ ಕೊಡುವುದಾಗಿ ಹೇಳಿದ ಸರ್ಕಾರ!
* ಎಕರೆಗೆ 9,423 ರೂ ಬರ ಪರಿಹಾರ
* ಬೆಳೆ ಪರಿಹಾರ ಹಣವನ್ನು ರೈತರು ಪಡೆಯುವುದು ಹೇಗೆ??https://krushivahini.com/2023/10/19/drought-relief/