Crop loan waiver big update :- ನಮಸ್ಕಾರ ಆತ್ಮೀಯ ರೈತ ಬಾಂಧವರೇ, ರೈತರು ಈ ದೇಶದ ಮುಖ್ಯ ಬೆನ್ನೆಲುಬು. ರೈತ ದುಡಿಯುತ್ತಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಹ, ಹೀಗಾಗಿ ರೈತರ ಅಭಿವೃದ್ಧಿಗಾಗಿ ಸರಕಾರ ಹಲವು ರೀತಿಯ ಯೋಜನೆಯನ್ನು ಸಹ ಜಾರಿಗೆ ತರುತ್ತಿದೆ. ಈಗಾಗಲೇ ಬರ ಮತ್ತು ಬೆಳೆ ನಷ್ಟದಿಂದಾಗಿ ರೈತರು ಹಲವು ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಮಳೆಯ ಅಭಾವ ದಿಂದಾಗಿ ಯಾವುದೇ ಬೆಳೆಯಲ್ಲಿ ಇಳುವರಿ ಸಹ ಕಂಡು ಬರುತ್ತಿಲ್ಲ. ಇದೀಗ ರಾಜ್ಯ ಸರ್ಕಾರವು ಹೆಚ್ಚು ಅಗತ್ಯವಿರುವ ಪರಿಹಾರ ಯೋಜನೆಯೊಂದಿಗೆ ನೆಮ್ಮದಿಯ ಸುದ್ದಿಯನ್ನು ನೀಡಿದೆ.
* ಬರಗಾಲದ ಸಮಸ್ಯೆ:-
ಇಂದು ರೈತರು ಯಾವುದೇ ಕೃಷಿ ಮಾಡುದಾದರೂ ನೀರು ಪ್ರಮುಖ ಹಂತವಾಗಿದೆ. ಈ ವರ್ಷ ಮುಂಗಾರು ಮಳೆಯ ಅಭಾವ ರೈತರಿಗೆ ಸವಾಲಿನ ಪರಿಸ್ಥಿತಿಗೆ ಕಾರಣವಾಗಿದೆ, ಕೃಷಿಯಲ್ಲಿಯೇ ಬದುಕು ಕಟ್ಟಿಕೊಂಡ ರೈತರಿಗೆ ಬಹಳಷ್ಟು ಸಮಸ್ಯೆ ಆಗಿದೆ.
* ಸಾಲ ಮರುಪಾವತಿ ಪರಿಹಾರ ನೀಡಿದೆ:-
ಇದೀಗ ರೈತರಿಗಾಗಿ ಸಾಲ ಮರುಪಾವತಿ (Loan Waiver) ಪರಿಹಾರ ನೀಡಿದೆ. ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡಲು, ರೈತರು ಕೃಷಿ ಸಾಲಗಳನ್ನು ಪಡೆದಿದ್ದರೆ ಈ ಸಮಯದಲ್ಲಿ ಸಾಲ ಮರುಪಾವತಿ ಪಡೆಯದಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ, ಬರಗಾಲದ ಸಮಸ್ಯೆ ಇಂದ ಕೃಷಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಇಲ್ಲ ಹಾಗಾಗಿ ರೈತರಿಗೆ ಬಹಳಷ್ಟು ನಷ್ಟವಾಗಿದೆ. ಸಾಲದ ಒತ್ತಡದಿಂದಾಗಿ ರೈತರು ಬಹಳಷ್ಟು ಕಷ್ಟ ಅನುಭವಿಸ್ತಾ ಇದ್ದಾರೆ. ಹಾಗಾಗಿ ಸಾಲ ಮರುಪಾವತಿ ಪರಿಹಾರ ಒದಗಿಸಿದೆ.
* ಕೃಷಿ ಯೇತರ ಚಟುವಟಿಕೆಗೂ ವಿದ್ಯುತ್ ಪೂರೈಕೆ:-
ನೀರಿನ ಅಭಾವ ದಿಂದ ಕೃಷಿ ಮಾಡಲು ಕಷ್ಟ ಸಾಧ್ಯ ವಾಗ್ತ ಇದೆ. ವಿದ್ಯುತ್ ಅಭಾವದ ಸಮಸ್ಯೆ ಯು ಉಂಟಾಗಿದೆ. ಇದಕ್ಕೆ ಪರಿಹಾರವಾಗಿ ರೈತರಿಗೆ ದಿನದಲ್ಲಿ ಐದು ಘಂಟೆ ವಿದ್ಯುತ್ ಪೂರೈಕೆ ಮಾಡುವುದು ಕಡ್ಡಾಯ ಎಂಬ ಮಾಹಿತಿಯನ್ನು ಸಹ ರಾಜ್ಯ ಸರಕಾರ ತಿಳಿಸಿದೆ.
* ಪಾವತಿ ಮಾಡಬಹುದು:-
ಬೆಳೆ ಸಾಲ ಪಡೆದ ರೈತರು ಈ ವರ್ಷದ ವೇಳೆಗೆ ಸಾಲವನ್ನು ಮರುಪಾವತಿ ಮಾಡುವ ಅಗತ್ಯವಿಲ್ಲ. ಸಾಲ ಕಟ್ಟಲು 3 ರಿಂದ 5 ವರ್ಷಗಳವರೆಗೆ ಹೆಚ್ಚು ಅವಧಿಯಲ್ಲಿ ಮರುಪಾವತಿ ಮಾಡಲು ಅವಕಾಶ ಇದೆ ಎನ್ನಲಾಗುತ್ತಿದೆ.
1) ನಿಮ್ಮ ಸಾಲ ಮನ್ನಾ ಎಷ್ಟು ಆಗಿದೆ ಎಂದು ಚೆಕ್ ಮಾಡಿಕೊಳ್ಳಿರಿ :-
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು..
https://mahitikanaja.karnataka.gov.in/department
ನಂತರ ಅಲ್ಲಿ ಕಾಣುವ “ಕಂದಾಯ ಇಲಾಖೆಯ” ಮೇಲೆ ಕ್ಲಿಕ್ ಮಾಡಬೇಕು..
ನಂತರ “ಕಂದಾಯ ಇಲಾಖೆ ಸೇವೆಗಳು” ಇದರ ಮೇಲೆ ಕ್ಲಿಕ್ ಮಾಡಿ
ನಂತರ ಅಲ್ಲಿ ಕಾಣುವ ವಾಣಿಜ್ಯ ಬ್ಯಾಂಕಿನ ಸಾಲ ಮನ್ನಾ ಚೆಕ್ ಮಾಡಲು ‘loan waiver report for commercial bank‘ ಇದರ ಮೇಲೆ ಕ್ಲಿಕ್ ಮಾಡಬೇಕು.
ನಂತರ ಅಲ್ಲಿ ರೈತ ಎಂದು ಸೆಲೆಕ್ಟ್(select) ಮಾಡಿಕೊಳ್ಳಿ..
ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸು” ಮೇಲೆ ಒತ್ತಿರಿ..
Drought relief protest- ಬರ ಪರಿಹಾರಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ.
ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆ ಎಷ್ಟು ಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಬಹುದು. Search button ಅಲ್ಲಿ ನಿಮ್ಮ ನಿಮ್ಮ ಹೆಸರನ್ನು ಹಾಕಿದರೆ ಅಲ್ಲಿ ಮಾಹಿತಿಯನ್ನು ತೋರಿಸುತ್ತದೆ.
ಬಹಳಷ್ಟು ರೈತರಿಗೆ ಅವರ ಸಾಲ ಮನ್ನಾ ಆಗಿಲ್ಲ ಎಂದು ಹೇಳುತ್ತಾರೆ ಆದರ
2) ಸಾಲ ಮನ್ನಾ ಮಾಡಲು ಕೆಲವು ದಾಖಲೆ ಮತ್ತು ಅರ್ಹತೆಗಳು ಮುಖ್ಯ,ಈ ಕೆಳಗಿನಂತೆ ನಿಮ್ಮ ಅರ್ಹತೆ ಚೆಕ್ ಮಾಡಿಕೊಳ್ಳಿ..
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಸಾಲ ಮನ್ನಾ ಆಗಲು ಬೇಕಾದ ಅರ್ಹತೆ ಹಾಗೂ ದಾಖಲಾತಿಗಳನ್ನು ನೋಡಬಹುದು. 👇🏻
https://mahitikanaja.karnataka.gov.in/department
ನಂತರ ಅಲ್ಲಿ ಕಾಣುವ “ಕಂದಾಯ ಇಲಾಖೆಯ” ಮೇಲೆ ಕ್ಲಿಕ್ ಮಾಡಬೇಕು..
ನಂತರ “ಕಂದಾಯ ಇಲಾಖೆ ಸೇವೆಗಳು” ಇದರ ಮೇಲೆ ಕ್ಲಿಕ್ ಮಾಡಿ
ನಂತರ clws ರೈತನ ಅರ್ಹತೆ ಮೇಲೆ ಕ್ಲಿಕ್ ಮಾಡಿ
ನಂತರ ಮುಂದಿನ ಮುಖಪುಟದಲ್ಲಿ ಕಾಣುವ ನಿಮ್ಮ ಜಿಲ್ಲೆ, ಮತ್ತು ಬ್ಯಾಂಕ್ ಸೆಲೆಕ್ಟ್ ಮಾಡಿ, ಸಲ್ಲಿಸು ಮೇಲೆ ಕ್ಲಿಕ್ ಮಾಡಿ.
ನಂತರ ಈ ಕೆಳಗೆ ಸೂಚಿಸಿರುವ ಸಾಲ ಮನ್ನಾ ಅರ್ಹತೆ ಹಾಗೂ ದಾಖಲೆಗಳನ್ನು ನೀವು ನೋಡಬಹುದು.ಹಾಗೂ ಸಾಲ ಮನ್ನಾ ಸ್ಥಿತಿ ಗತಿ ಯನ್ನು ಅಲ್ಲಿ ಕಾಣುತ್ತಿರಿ.
3) ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಸಾಲ ಪಡೆದಿದ್ದರೆ ಸ್ಟೇಟಸ್ ಚೆಕ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
https://mahitikanaja.karnataka.gov.in/Revenue/LoanWaiverReportPACSNew?ServiceId=2060&Type=TABLE&DepartmentId=2066
ಮಾದರಿ ಕೆಳಗಡೆ ರೈತ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಿಲ್ಲೆ ತಾಲೂಕು, ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಂಡು ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನಲ್ಲಿ ಯಾರು ಯಾರಿಗೆ ಬೆಳೆ ಸಾಲಮನ್ನಾ ಆಗಿದೆ ಎಂಬ ಪಟ್ಟಿ ಕಾಣಿಸುತ್ತದೆ.
ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 2018 ರಲ್ಲಿ 1 ಲಕ್ಷ ರೂಪಾಯಿಯವರೆಗೆ ಬೆಳೆ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಇದಾಗಿ ಐದು ವರ್ಷಗಳಾದರೂ ಸಹ ಇನ್ನೂ ಹಲವಾರು ರೈತರು ಸಾಲಮನ್ನಾ ದೊರೆತಿಲ್ಲ. ಕೂಡಲೇ ಸರ್ಕಾರವು ಬೆಳೆ ಸಾಲಮನ್ನಾ ಆಗದೆ ಉಳಿದಿರುವ ರೈತರ ಸಾಲ ಮನ್ನಾ ಮಾಡಬೇಕೆಂಬ ರೈತರ ಒತ್ತಾಯವಾಗಿದೆ.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ಸಾಲ ಮನ್ನಾ ಅಪ್ಡೇಟ್ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಸಾಲ ಮನ್ನಾ ಅಪ್ಡೇಟ್ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ಕೇಂದ್ರದಿಂದ 17,901 ಕೋಟಿ ರೂ.ಬರ ಪರಿಹಾರ ಯಾವಾಗ ಬರುತ್ತದೆ ಬರಪೀಡಿತ ತಾಲೂಕುಗಳಿಗೆ ಎಷ್ಟು ಪರಿಹಾರ ಹಣ ಸಿಗುತ್ತದೆ https://krushivahini.com/2023/10/26/bara-parihara-2/
➡️ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಇಲ್ಲಿ ನೋಡಿ ಯಾವ ಬೆಳೆಗೆ ಎಷ್ಟು ನಿಗದಿಯಾಗಿದೆ https://krushivahini.com/2023/10/25/rabi-2023-minimum-support-price/
➡️ ಮಳೆ ಮುನ್ಸೂಚನೆ :- ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಿಗೆ ಹೆಚ್ಚಿನ ಮಳೆಯ ಸಾಧ್ಯತೆ ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ https://krushivahini.com/2023/10/24/karnataka-rain/
➡️ ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ?? ಮಧ್ಯಂತರ ಬೆಳೆ ವಿಮೆ ಬಿಡುಗಡೆ ಇಲ್ಲ??? ಬರ ಪರಿಹಾರ ಯಾವಾಗ ಬರುತ್ತದೆ https://krushivahini.com/2023/10/23/karnataka-drought-news/
➡️ ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಎಷ್ಟು ಜಮೆಯಾಗಬಹುದು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ https://krushivahini.com/2023/10/22/bele-vime/
➡️ ನರೇಗಾ ಯೋಜನೆಯ ಅಡಿ ಹಣವನ್ನು ಹೆಚ್ಚಳ ಮಾಡಿದ ಸರ್ಕಾರ ಇಲ್ಲಿದೆ ಮಹತ್ವದ ಮಾಹಿತಿ https://krushivahini.com/2023/10/22/narega-amount-increased/
➡️ ಬರ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ ಎಕರೆಗೆ 25,000 ಬೆಳೆ ಪರಿಹಾರ ಕೊಡುವಂತೆ ಪ್ರತಿಭಟನೆ 🙏🏻https://krushivahini.com/2023/10/21/drought-relief-protest/
➡️🌴ಅಡಿಕೆ ಎಲೆ ಚುಕ್ಕೆ ರೋಗದ ಸಂಪೂರ್ಣ ನಿರ್ವಹಣೆ! ✅ಯಾವ ಜಿಲ್ಲೆಯಲ್ಲಿ ಅಡಿಕೆ ಧಾರಣೆ💵 ಎಷ್ಟಿದೆ ಎಂದು ತೆಗೆದುಕೊಳ್ಳಿ 👇🏻..
https://krushivahini.com/2023/10/20/arecaunt-leaf-spot-management/
[…] ➡️ ಬೆಳೆ ಸಾಲ ಮನ್ನಾದ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸರ್ಕಾರ ರೈತರ ಬೆಳೆ ಸಾಲ ಮನ್ನಾ ಆಗಿದೆ https://krushivahini.com/2023/10/19/crop-loan-waiver-big-update/ […]
[…] ➡️ ಬೆಳೆ ಸಾಲ ಮನ್ನಾದ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸರ್ಕಾರ ರೈತರ ಬೆಳೆ ಸಾಲ ಮನ್ನಾ ಆಗಿದೆ https://krushivahini.com/2023/10/19/crop-loan-waiver-big-update/ […]