Ration Card Suspend/cancelled list :- 6 ತಿಂಗಳಿನಿಂದ ರೇಷನ್ ಪಡೆಯದಿರುವ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಲು ಆಹಾರ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಸುಮಾರು 3.26 ಲಕ್ಷ ಕುಟುಂಬಗಳು ಕಳೆದ 6 ತಿಂಗಳಿಂದ ಪಡಿತರವನ್ನು ಪಡೆದಿಲ್ಲ. ಈ ಹಿನ್ನೆಲೆ ಅವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅಮಾನತು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಆಹಾರ ಮತ್ತು ನಾಗರಿಕ ಇಲಾಖೆಗೆ ಬಹಳಷ್ಟು ಅನುಕೂಲವಾಗಲಿದೆ.
ಬೆಂಗಳೂರು : ಸುಮಾರು ದಿನದಿಂದ ರೇಷನ್ ಪಡೆಯದವರಿಗೆ ಆಹಾರ ಇಲಾಖೆ ಶಾಕ್ ನೀಡಿದೆ. ರೇಷನ್ ಕಾರ್ಡ್ ಇದ್ದರೂ 6 ತಿಂಗಳಿಂದ ರೇಷನ್ ಪಡೆಯದವರ ಕಾರ್ಡ್ ಅನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಈ ಬಿಪಿಎಲ್, ಅಂತ್ಯೋದಯ ಹಾಗೂ ಪಿಎಚ್‌ಎಚ್ ಕಾರ್ಡ್‌ಗಳಿಂದ ರೇಷನ್ ಪಡೆಯದೇ ಆರು ತಿಂಗಳಾಗಿದ್ದರೆ ಅಂತಹ ರೇಷನ್ ಕಾರ್ಡ್‌ಗಳನ್ನು ಅಮಾನತು ಮಾಡಲು ಮುಂದಾಗಿದೆ.
ರದ್ದಾದ ರೇಷನ್ ಕಾರ್ಡ್ ಪಟ್ಟಿ ಇದರಲ್ಲಿ ನಿಮ್ಮ ಹೆಸರನ್ನು ಇಲ್ಲಿ ಚೆಕ್ ಮಾಡಿ :-
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
– ನಂತರ ಈ ಮುಖಪುಟದ ಎಡಗಡೆ ಕಾಣುವ ಮೂರು ಗೆರೆಗಳನ್ನು ಓತ್ತಿ
– ನಂತರ ಅಲ್ಲಿ ಕಾಣುವ ಹಾಗೆ e-Ration card ಮೇಲೆ ಕ್ಲಿಕ್ ಮಾಡಿ ಮತ್ತೆ ಕೆಳಗೆ ಕಾಣುವ show cancelled or suspended list ” ಇದರ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ ತಾಲೂಕು ತಿಂಗಳು ಹಾಗೂ ವರ್ಷ ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಿ.. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದು ಅರ್ಥ.
ಆರು ತಿಂಗಳಿಂದ ಒಟ್ಟು 3.26 ಲಕ್ಷ ಕುಟುಂಬಗಳು ಪಡಿತರವನ್ನೇ ಪಡೆದಿಲ್ಲ. ಈ ಹಿನ್ನೆಲೆ ಪಡಿತರ ಪಡೆಯದ ರೇಷನ್ ಕಾರ್ಡ್ಗಳ ಡೇಟಾ ಸಂಗ್ರಹಿಸಿ ಅವುಗಳ ಅಮಾನತಿಗೆ ಆದೇಶ ನೀಡಿದೆ. ಈ ವಾರದಲ್ಲಿ 3.26 ಲಕ್ಷ ಕಾರ್ಡ್ಗಳು ರದ್ದಾಗಲಿವೆ. ಸದ್ಯ ರಾಜ್ಯದಲ್ಲಿ ಅಂತ್ಯೋದಯ, ಪಿಎಚ್‌ಎಚ್ ಹಾಗೂ ಎನ್‌ಪಿಎಚ್‌ಎಚ್ ಸೇರಿ ಒಟ್ಟು 52.34 ಲಕ್ಷ ರೇಷನ್ ಕಾರ್ಡ್‌ಗಳಿದ್ದು, 1 ಕೋಟಿ 52 ಲಕ್ಷದಷ್ಟು ಫಲಾನುಭವಿಗಳಿದ್ದಾರೆ. ಬಿಪಿಎಲ್ ನಲ್ಲಿ 1,27,82,893 ರೇಷನ್ ಕಾರ್ಡ್ಗಳಿದ್ದು ಒಟ್ಟು 4,37,65,128 ರಷ್ಟು ಫಲಾನುಭವಿಗಳಿದ್ದಾರೆ.
ಇದರಲ್ಲಿ ಈಗ 6 ತಿಂಗಳಿಂದ ಪಡಿತರ ಪಡೆಯದ 3 ಲಕ್ಷದ 26 ಸಾವಿರ ರೇಷನ್ ಕಾರ್ಡ್‌ಗಳನ್ನು ಅಮಾನತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಎರಡು ತಿಂಗಳ ಹಿಂದೆ ಮೃತಪಟ್ಟವರ ಹೆಸರಿದ್ದ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಿ ಸಾರ್ವಜನಿಕರಿಗೆ ಆಹಾರ ಇಲಾಖೆ ಬಿಸಿ ಮುಟ್ಟಿಸಿತ್ತು. ಈಗ ಆರು ತಿಂಗಳಿನಿಂದ ಪಡಿತರ ಪಡೆಯದ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಮುಂದಾಗಿದೆ. ಇದರಿಂದ ಆಹಾರ ಇಲಾಖೆಗೆ ಅನುಕೂಲ ಆಗಲಿದ್ದು, ಹೊಸ ಕಾರ್ಡ್ ಸೇರ್ಪಡೆಗೂ ಸರ್ಕಾರ ಅವಕಾಶ ನೀಡುವ ನಿರೀಕ್ಷೆ ಇದೆ.
ರೇಷನ್ ಕಾರ್ಡ್ ತಿದ್ದುಪಡಿ ಅವಧಿ ವಿಸ್ತರಣೆ; ಯಾವ್ಯಾವ ಜಿಲ್ಲೆಗಳಲ್ಲಿ ಯಾವಾಗ ತಿದ್ದುಪಡಿಗೆ ಅವಕಾಶ? ಇಲ್ಲಿದೆ ಮಾಹಿತಿ
ಇನ್ನು, ಕರ್ನಾಟಕದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಿದ್ದ ಡೆಡ್‌ಲೈನ್ ಅನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಆಹಾರ ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ದಿನಾಂಕ ನಿಗದಿಪಡಿಸಿದೆ. ಈ ಮೊದಲು ಅಕ್ಟೋಬರ್ 5 ರಿಂದ 13ರವರೆಗೂ ಮೂರು ಹಂತಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಸರ್ವರ್ ಸಮಸ್ಯೆ ಉಂಟಾದ ಹಿನ್ನೆಲೆ ಕೆಲ ಜಿಲ್ಲೆಗಳಿಗೆ ತಿದ್ದುಪಡಿ ಅವಕಾಶ ನೀಡಲಾಗಿದೆ. ಅಕ್ಟೋಬರ್ 16,17,18 ರಂದು ಕೆಲ ಜಿಲ್ಲೆಗಳಲ್ಲಿ, ಅಕ್ಟೋಬರ್ 19 ,20, 21 ರಂದು ಕೆಲ ಜಿಲ್ಲೆಗಳಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ರದ್ದಾಗಿರುವ ರೇಷನ್ ಕಾರ್ಡ್ ಪಟ್ಟಿ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ರದ್ದಾಗಿರುವ ರೇಷನ್ ಕಾರ್ಡ್ ಪಟ್ಟಿ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
ತಪ್ಪದೆ ಓದಿರಿ :-
ದಿಡೀರ್ ಏರಿಕೆ ಕಂಡ ಈರುಳ್ಳಿ
ಬೆಲೆ ಮಾರುಕಟ್ಟೆಯಲ್ಲಿ ಈರುಳ್ಳಿಯ ರೇಟ್ ಎಷ್ಟಿದೆ ಇಲ್ಲಿ ನೋಡಿ..
https://krushivahini.com/2023/10/20/bumper-price-for-onion-in-karnataka/
ಸದ್ಯದಲ್ಲೇ 27 ಲಕ್ಷ ರೈತರಿಗೆ ಬರ ಪರಿಹಾರ ಹಣ ಕೊಡುವುದಾಗಿ ಹೇಳಿದ ಸರ್ಕಾರ!
* ಎಕರೆಗೆ 9,423 ರೂ ಬರ ಪರಿಹಾರ
* ಬೆಳೆ ಪರಿಹಾರ ಹಣವನ್ನು ರೈತರು ಪಡೆಯುವುದು ಹೇಗೆ??https://krushivahini.com/2023/10/19/drought-relief/
ಈ ಜಿಲ್ಲೆಯಿಂದ ಸರ್ಕಾರಕ್ಕೆ 212.11 ಕೋಟಿ ಪರಿಹಾರ ಕೊಡುವುದಾಗಿ ಪ್ರಸ್ತಾವನೆ https://krushivahini.com/2023/10/18/212-11-crore-compensation-proposal-to-govt/
ತಡವಾಗಿ ನೋಂದಣಿ ಆದರೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ ಯಾಗಿದೆ.. https://krushivahini.com/2023/10/18/gruhalakshmi-yojana/
ಹಿಂಗಾರು ಬೆಳೆ ವಿಮೆ 2023 ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು? ಅರ್ಜಿ ಎಲ್ಲಿ ಸಲ್ಲಿಸಬೇಕು https://krushivahini.com/2023/10/18/rabi-crop-insurance-2023/