Gruhalakshmi yojana :- ತಡವಾಗಿ ನೊಂದಣಿ ಯಾದರೂ ಅವರ ಖಾತೆಗೆ ಹಣ ಜಮೆ
ತಡವಾಗಿ ನೋಂದಣಿಯಾದವ್ರಿಗೂ ಗೃಹಲಕ್ಷ್ಮೀ ಯೋಜನೆ ಹಣ: ಎರಡನೇ ಕಂತಿನ ಹಣ ಶೀಘ್ರ ಬಿಡುಗಡೆ, ಇಲ್ಲಿದೆ ಮಹತ್ವದ ಮಾಹಿತಿ…
ಕೊಪ್ಪಳ ಜಿಲ್ಲೆಯಲ್ಲಿ ತಡವಾಗಿ ನೋಂದಣಿಯಾದ ಮಹಿಳೆಯರಿಗೂ ದಾಖಲೆಗಳು ಸರಿಯಾಗಿದ್ದರೆ ಎರಡನೇ ಕಂತಿನ ಹಣ ಎರಡ ದಿನ ಅಥವಾ ವಾರದೊಳಗೆ ಜಮೆಯಾಗಲಿದೆ ಎಂದು ಕೊಪ್ಪಳ ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲನೇ ಕಂತಿನಲ್ಲಿ ಫಲಾನುಭವಿಗಳಿಗೆ 49 ಕೋಟಿ ರೂ ಪಾವತಿಯಾಗಿತ್ತು. ಅರ್ಜಿ ಸಲ್ಲಿಸುವ ಮಹಿಳೆಯರ ಸಂಖ್ಯೆ ಪೂರ್ಣಗೊಳ್ಳದ ಹಿನ್ನಲೆ 6 ಕೋಟಿ ರೂ ಇಲಾಖೆಯಲ್ಲೇ ಉಳಿದಿತ್ತು. ಇದೀಗ ಕೆಲವರ ಅರ್ಜಿ ಸೇರ್ಪಡೆಯಾಗಿದ್ದು, ಎರಡನೇ ಕಂತಿನಲ್ಲಿ ಹಣ ಬರುವ ನಿರೀಕ್ಷೆಯಿದೆ.
Gruhalakshmi scheme
ಕೊಪ್ಪಳ: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಬಹುಮುಖ್ಯ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ಪಡೆಯಲು ಜಿಲ್ಲೆಯಲ್ಲಿ ಇನ್ನೂ 42,403 ಮಹಿಳೆಯರಿಗೆ ಸಾಧ್ಯವಾಗಿಲ್ಲ.
ಶಕ್ತಿ ಯೋಜನೆ ಮೂಲಕ ಎಲ್ಲ ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ಒದಗಿಸಿದ ಸರಕಾರಕ್ಕೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸುವುದಕ್ಕೆ ನಾನಾ ಅಡೆತಡೆ ಎದುರುಗಳಾಗಿವೆ.
ಕುಟುಂಬದ ಒಡತಿಗೆ ಮಾಸಿಕ ಎರಡು ಸಾವಿರ ರೂ. ಆರ್ಥಿಕ ಸಹಾಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ಪಡಿತರ ಚೀಟಿಗಳ ಮಾಹಿತಿ ಆಧಾರದ ಮೂಲಕ ಯೋಜನೆ ಅನುಷ್ಠಾನವಾಗುತ್ತಿದೆ. ಈ ಯೋಜನೆ ವ್ಯಾಪ್ತಿಗೆ ಜಿಲ್ಲೆಯಲ್ಲಿ 3,31,365 ಫಲಾನುಭವಿಗಳು ಇರುವುದನ್ನು ಗುರುತಿಸಲಾಗಿತ್ತು. ಜು.20ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅ. 11ರವರೆಗೆ 2,91,096 ಮಹಿಳೆಯರ ನೋಂದಣಿಯಾಗಿದೆದೆ.
ಇ-ಕೆವೈಸಿ ಸಮಸ್ಯೆ:
ಉಳಿದ ನಾರಿಯರ ಪಡಿತರ ಚೀಟಿಯಲ್ಲಿ ಹೆಸರು ವ್ಯತ್ಯಾಸ, ಆಧಾರ್ ಕಾರ್ಡ್‌ನಲ್ಲಿ ಹೆಸರಿನ ಗೊಂದಲ, ಇ-ಕೆವೈಸಿಯಾಗದಿರುವುದು ಸೇರಿ ನಾನಾ ಕಾರಣದಿಂದ ಅರ್ಜಿ ಸ್ವೀಕೃತವಾಗಿಲ್ಲ. ಅರ್ಜಿ ಸ್ವೀಕೃತವಾದ 2,91,096 ಮಹಿಳೆಯರ ಅರ್ಜಿ ಪರಿಶೀಲಿಸಿ, ಮೊದಲ ತಿಂಗಳ ಹಣ ಕಳೆದ ತಿಂಗಳು ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಎರಡನೇ ತಿಂಗಳ ಮಾಸಿಕ 2ಸಾವಿರ ರೂ.ಅನುದಾನ ನೋಂದಣಿಯಾದ ಫಲಾನುಭವಿಗಳಿಗೆ ವಾರದೊಳಗೆ ಬಿಡುಗಡೆಯಾಗಲಿದೆ. ಈ ಪೈಕಿ 1ಲಕ್ಷ ಫಲಾನುಭವಿಗಳ ಡಿಬಿಟಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎರಡು ದಿನದೊಳಗೆ ಆಯಾ ಮಹಿಳೆಯರ ಖಾತೆಗೆ ಜಮೆಯಾಗಲಿದೆ. ಉಳಿದವರ ಡಿಬಿಟಿ ಪ್ರಕ್ರಿಯೆ ನಡೆಯುತ್ತಿದ್ದು, ವಾರದೊಳಗೆ ಎರಡನೇ ತಿಂಗಳ ಹಣ ಆಯಾ ಮಹಿಳೆಯರ ಖಾತೆಗೆ ಪೂರ್ಣವಾಗಿ ಜಮೆಯಾಗಲಿದೆ.
ಈವರೆಗೆ ಮೊದಲ ತಿಂಗಳ ಹಣವಾದ 1 ನೇ ಹಂತದಲ್ಲಿ 19 ಕೋಟಿ 35 ಲಕ್ಷ ರೂ., 2ನೇ ಹಂತದಲ್ಲಿ 25 ಕೋಟಿ 44 ಲಕ್ಷ ರೂ., 3ನೇ ಹಂತದಲ್ಲಿ 4 ಕೋಟಿ 93 ಲಕ್ಷ ರೂ. ಸೇರಿ ಒಟ್ಟು 49 ಕೋಟಿ 73 ಲಕ್ಷದ 86ಸಾವಿರ ರೂ. ಆಯಾ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಿದೆ. ಇದಾದ ಬಳಿಕವೂ ಅರ್ಜಿ ಸಲ್ಲಿಸುವ ಮಹಿಳೆಯರ ಸಂಖ್ಯೆ ಪೂರ್ಣಗೊಳ್ಳದ ಹಿನ್ನೆಲೆ 6 ಕೋಟಿ 3 ಲಕ್ಷ 56 ಸಾವಿರ ರೂ. ಹಣ ಇಲಾಖೆಯಲ್ಲಿ ಉಳಿದಿತ್ತು. ಒಟ್ಟಾರೆ, ಪ್ರತಿ ತಿಂಗಳು ಯೋಜನೆಗೆ 55 ಕೋಟಿ 77ಲಕ್ಷ ರೂ.ಅನುದಾನ ಸರಕಾರದಿಂದ ಬಿಡುಗಡೆಯಾಗಬೇಕಿದೆ.
ಇವರಿಗಿಲ್ಲ ಅವಕಾಶ:
ಆಹಾರ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಸೇರಿ 3,56,566 ಪಡಿತರ ಚೀಟಿಗಳಿವೆ. 12,75,925 ಫಲಾನುಭವಿಗಳು ಪಡಿತರ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬವೊಂದರ ಒಬ್ಬ ಮಹಿಳೆ ಮಾತ್ರ ಫಲಾನುಭವಿ ಆಗುವುದಕ್ಕೆ ಅವಕಾಶವಿದೆ. ಹೀಗಾಗಿ 3,56,566 ಕುಟುಂಬಗಳು ಯೋಜನೆ ವ್ಯಾಪ್ತಿಗೆ ಒಳಪಡಲಿವೆ ಎಂದು ಮೊದಲು ಅಂದಾಜಿಸಲಾಗಿತ್ತು. ಆದಾಯ ತೆರಿಗೆ ಪಾವತಿದಾರರು, ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರಿಗೆ ಯೋಜನೆ ಅನ್ವಯಿಸುವುದಿಲ್ಲ. ಮಹಿಳೆಯ ಪತಿ ಆದಾಯ ತೆರಿಗೆ ಪಾವತಿದಾರನಾಗಿದ್ದರೂ ಮನೆಯೊಡತಿ ಯೋಜನೆ ಫಲಾನುಭವಿ ಆಗುವುದಕ್ಕೆ ಅವಕಾಶವಿಲ್ಲ. ಇದರಿಂದ ಹಲವರು ಪಡಿತರ ಚೀಟಿಯಿಂದ ಹೊರಹೋದ ಹಿನ್ನೆಲೆ 3,31,365 ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆ ವ್ಯಾಪ್ತಿಗೆ ಬಂದಿದ್ದಾರೆ.
ಇ- ಕೆವೈಸಿಯಿಂದ ನೋಂದಣಿ ವಿಳಂಬ:-
ಜಿಲ್ಲೆಯಲ್ಲಿ ಶೇ.87ರಷ್ಟು ಫಲಾನುಭವಿಗಳು ನೋಂದಣಿಯಾಗಿದ್ದರೂ, ಉಳಿದ ಶೇ.13ರಷ್ಟು ನೋಂದಣಿಯಾಗುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಕೆಲ ಮಹಿಳೆಯರ ಪಡಿತರ ಚೀಟಿ ಇ-ಕೆವೈಸಿ ಆಗದೇ ಇರುವುದರಿಂದ ನೋಂದಣಿಗೆ ತೊಂದರೆಯಾಗಿದೆ.
ಇನ್ನು ಹಲವು ಪ್ರಕರಣಗಳಲ್ಲಿ ಮಹಿಳೆಯರು ಜೀವಂತವಿದ್ದರೂ, ಪಡಿತರ ಚೀಟಿಯಲ್ಲಿ ಹೆಸರು ಕೈ ತಪ್ಪಿ ಹೋಗಿರುವ ಕಾರಣ ನೋಂದಣಿ ಸಾಧ್ಯವಾಗಿಲ್ಲ. ಕೆಲವರ ಹೆಸರು ಪಡಿತರ ಚೀಟಿಯಲ್ಲಿ ಹೆಸರಿದ್ದರೂ ಜೀವಂತವಿಲ್ಲ. ಇಂತಹ ಹಲವು ಕಾರಣದಿಂದ ಉಳಿದ ಶೇ.13ರಷ್ಟು ನೋಂದಣಿಗೆ ವಿಳಂಬವಾಗಿದೆ.
ಈ ಲಿಸ್ಟ್ ನಲ್ಲಿ ಹೆಸರಿದ್ದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ. 👇🏻
ಮೊದಲಿಗೆ ಈ ಕೆಳಕಂಡ ಲಿಂಕನ್ನು ಒತ್ತಿ 👇🏻https://ahara.kar.nic.in/Home/EServices
– ನಂತರ ಈ ಮುಖಪುಟದ ಎಡಗಡೆ ಕಾಣುವ ಮೂರು ಗೆರೆಗಳನ್ನು ಓತ್ತಿ
– ನಂತರ ಅಲ್ಲಿ ಕಾಣುವ ಹಾಗೆ e-Ration card ಮೇಲೆ ಕ್ಲಿಕ್ ಮಾಡಿ ಮತ್ತೆ ಕೆಳಗೆ ಕಾಣುವ “village list” ಅಲ್ಲಿ ಒತ್ತಿರಿ
ನಂತರ ಅಲ್ಲಿ ಕಾಣುವ ಹಾಗೆ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ, ಹಳ್ಳಿಯನ್ನು,ಆಯ್ಕೆ ಮಾಡಿಕೊಂಡು Go ಮೇಲೆ ಕ್ಲಿಕ್ ಮಾಡಬೇಕು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಮುಂದಿನ ಕಂತಿನ ಹಣ ಬರುತ್ತದೆ.
ಇವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ ನಿಮ್ಮ ಹೆಸರನ್ನು ಇಲ್ಲಿ ಚೆಕ್ ಮಾಡಿ :-
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
– ನಂತರ ಈ ಮುಖಪುಟದ ಎಡಗಡೆ ಕಾಣುವ ಮೂರು ಗೆರೆಗಳನ್ನು ಓತ್ತಿ
– ನಂತರ ಅಲ್ಲಿ ಕಾಣುವ ಹಾಗೆ e-Ration card ಮೇಲೆ ಕ್ಲಿಕ್ ಮಾಡಿ ಮತ್ತೆ ಕೆಳಗೆ ಕಾಣುವ show cancelled or suspended list ” ಇದರ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ ತಾಲೂಕು ತಿಂಗಳು ಹಾಗೂ ವರ್ಷ ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗಿದೆ. ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಪರಿಶೀಲಿಸಿಕೊಳ್ಳಲು ಕೆಳಕಂಡ ಲಿಂಕ್ ಅನ್ನು ಒತ್ತಿ👇..
https://play.google.com/store/apps/details?id=com.dbtkarnataka
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಡಿಬಿಟಿ(DBT Karnataka application)ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಹಾಗೂ ಇನ್ಸ್ಟಾಲ್(Install) ಮಾಡಿಕೊಳ್ಳಿ.
ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ get otp ಮೇಲೆ ಒತ್ತಬೇಕು.
ನಂತರ ನಿಮ್ಮ ಮೊಬೈಲ್ ಗೆ ಬರುವ ಓಟಿಪಿಯನ್ನು(OTP) ಹಾಕಿ ವೆರಿಫೈ (Verify OTP )ಓಟಿಪಿ ಮೇಲೆ ಒತ್ತಬೇಕು.
ನಂತರ ನಿಮಗೆ ಬೇಕಾಗಿರುವ ನಾಲ್ಕು ಅಂಕಿಯmPIN create ಮಾಡಿಕೊಂಡು, ನಂತರ confirm mPIN ಹಾಕಿ,Submit ಬಟನ್ ಮೇಲೆ ಒತ್ತಿರಿ..
ನಂತರ ಅಲ್ಲಿ ಕಾಣಿಸುವ Payment status ಮೇಲೆ ಕ್ಲಿಕ್ ಮಾಡಿ.
ತದನಂತರ ನಿಮಗೆ ಇಲ್ಲಿಯವರೆಗೂ ಸರ್ಕಾರದಿಂದ ಬಂದಿರುವ ಸಹಾಯಧನದ ಮಾಹಿತಿಯು ದೊರೆಯುತ್ತದೆ ಹಾಗೂ ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ನಿಮಗೆ 2000 ರೂ ಅಲ್ಲಿ ನೀವು ನೋಡಬಹುದು.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ಗೃಹಲಕ್ಷ್ಮಿ ಯೋಜನೆಯ ಅಪ್ಡೇಟ್:-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಗೃಹಲಕ್ಷ್ಮಿ ಯೋಜನೆಯ ಅಪ್ಡೇಟ್ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
ತಪ್ಪದೆ ತಿಳಿಯಿರಿ :-
➡️ಹಿಂಗಾರು ಬೆಳೆ ವಿಮೆ 2023 ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು? ಅರ್ಜಿ ಎಲ್ಲಿ ಸಲ್ಲಿಸಬೇಕು https://krushivahini.com/2023/10/18/rabi-crop-insurance-2023/