Ration card correction time extended :- ಬೆಂಗಳೂರು:- ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಬಡತನ ರೇಖೆಗಿಂತ ಕೆಳಗಿನವರಿಗೆ (BPL ಕಾರ್ಡುದಾರರು) ಮಾರ್ಪಾಡು ಮಾಡಲು, ಹೊಸ ಹೆಸರುಗಳ ಸೇರ್ಪಡೆ, ತೆಗೆಯುವುದು ಸೇರಿದಂತೆ ಪಡಿತರ ಕಾರ್ಡುಗಳ ತಿದ್ದುಪಡಿಗೆ ಬೇಡಿಕೆ ಹೆಚ್ಚಾಗಿದೆ. ಈ ಕಾರಣದಿಂದ ಈ ತಿದ್ದುಪಡಿ ಇರುವ ಅವಕಾಶದ ಸೌಲಭ್ಯವನ್ನು ಇನ್ನೂ 03 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ಆದರೆ ಈ ಕಾರ್ಯಕ್ರಮ ನಿರ್ದಿಷ್ಟ ಜಿಲ್ಲೆಗಳಿಗೆ ಮಾತ್ರ ಅನ್ವಯಿಸಲಿದೆ.
ಹೌದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ತಿದ್ದುಪಡಿಗೆ ಅವಕಾಶ ನೀಡಿ ಸೋಮವಾರ ತಿಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್-ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಚೀಟಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಸರ್ಕಾರದ ‘ಅನ್ನ ಭಾಗ್ಯ’ ಮತ್ತು ‘ಗೃಹ ಲಕ್ಷ್ಮಿ’ ಯೋಜನೆಗಳ ಲಾಭ ಪಡೆಯಲು ಇದು ಉಪಯೋಗವಾಗುತ್ತಿದೆ.
ಈ ಸಂಬಂಧ ಇಲಾಖೆಯು ಬಿಪಿಎಲ್ ಕಾರ್ಡುದಾರರಿಗೆ ಹೆಸರುಗಳ ಮಾರ್ಪಾಡು, ವಿಳಾಸ ಸೇರ್ಪಡೆಯಂತಹ ತಿದ್ದುಪಡಿಗಳಿಗೆ ಮತ್ತೊಂದು ಅವಕಾಶ ನೀಡಿದೆ. ಇನ್ನೂ ಇಲಾಖೆಯ ತೀರ್ಮಾನವು ರಾಜ್ಯದ ಯಾವ ಜಿಲ್ಲೆಗಳಲ್ಲಿ ಅತೀ ಹೆಚ್ಚು ಬೇಡಿಕೆ ಇದೆಯೆ ಆ ಜಿಲ್ಲೆಗಳಿಗೆ ಸೀಮಿತಿವಾಗಿದೆ. ಇದಕ್ಕೆ ಬೆಂಗಳೂರಿನ ನಿವಾಸಿಗಳು ತಿದ್ದುಪಡಿಗೆ ಅನುಮತಿಸಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಕರ್ನಾಟಕದ ಬೆಳಗಾವಿ, ಬೆಂಗಳೂರು, ಗದಗ, ದಕ್ಷಿಣ ಕನ್ನಡ, ಹಾಸನ, ಹಾವೇರಿ, ಮೈಸೂರು, ವಿಜಯಪುರ, ಕೊಡಗು, ಮಂಡ್ಯ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ಬಿಪಿಎಲ್ ಕಾರ್ಡುದಾರರು ಮಾತ್ರ ತಿದ್ದುಪಡಿಗೆ ಮಾಡಿಕೊಳ್ಳಲು ಅವಕಾಶ ಇದೆ. ಇಲ್ಲಿನ ನಾಗರಿಕಕುರ ಇದೇ ಅಕ್ಟೋಬರ್ 16, 17 ಮತ್ತು 18 ರಂದು ತಿದ್ದುಪಡಿಗಾಗಿ ಅರ್ಜಿಗಳನ್ನು ಸಲ್ಲಿಸಬೇಕಿದೆ.
ಅದೇ ರೀತಿ ದಾವಣಗೆರೆ, ಕಲಬುರಗಿ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಯಾದಗಿರಿ, ವಿಜಯನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳ ಜನರಿಗೆ ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 19, 20 ಮತ್ತು 21 ರಂದು ಅವಕಾಶ ನೀಡಲಾಗಿದೆ.
ಎಲ್ಲೆಲ್ಲಿ ಪಡಿತರ ಚೀಟಿ (BPL ಕಾರ್ಡ್) ತಿದ್ದುಪಡಿಗೆ ಅವಕಾಶ ಇದೆ:-
ಮೇಲೆ ತಿಳಿಸಲಾದ ಜಿಲ್ಲೆಗಳ ನಾಗರಿಕರು ತಮ್ಮ ಪಡಿತರ ಕಾರ್ಡುಗಳಲ್ಲಿ ಏನಾದರೂ ತಪ್ಪುಗಳು ಇದ್ದರೆ. ವಿಳಾಸ, ಹೆಸರು ಬದಲಾಯಿಸುವುದು ಇದ್ದರೆ ಇಲ್ಲವೇ ಇನ್ನಿತರ ತಿದ್ದುಪಡಿಗಳು ಇದ್ದಲ್ಲಿ ಅವರು ಹತ್ತಿರದ ಕರ್ನಾಟಕ ಒನ್ ಮತ್ತು ಗ್ರಾಮ್ ಒನ್ ಕೇಂದ್ರಗಳನ್ನು ಸಂಪರ್ಕಿಸಬೇಕು. ಅವುಗಳು ಬೆಳಗ್ಗೆ 10ಗಂಟೆಯಿಂದ ಸಂಜೆ 7 ರವರೆಗೆ ಬೇಟಿ ನೀಡಬಹುದಾಗಿದೆ.
BPL ಕಾರ್ಡ್‌ಗಳಲ್ಲಿ ಬದಲಾವಣೆಗಳನ್ನು ಮಾಡಲು ಕಾರ್ಡುದಾರರು ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಿದ ನಂತರ, ಅದನ್ನು ಪರಿಶೀಲಿಸಲಾಗುತ್ತದೆ ಮತ್ತು ಅನುಮೋದನೆಯಾದರೆ ಹೊಸ ಕಾರ್ಡ್ ನೀಡಲಾಗುತ್ತದೆ.
ಗೃಹ ಲಕ್ಷ್ಮಿ ಯೋಜನೆ ಪ್ರಯೋಜನಗಳನ್ನು ಪಡೆಯಲು ಕುಟುಂಬ ಮಹಿಳೆಯು ಆ ಕುಟುಂಬದ ಮುಖ್ಯಸ್ಥಳಾಗಿರಬೇಕು ಎಂಬ ನಿಯಮ ರೂಪಿಸಳಾಗಿದೆ. ಹೀಗಾಗಿ ಮಹಿಳೆಯು ಬಿಪಿಎಲ್ ಕಾರ್ಡಿನಲ್ಲಿ ಮುಖ್ಯಸ್ಥರ ಸ್ಥಳ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಇಲಾಖೆ ತಿಳಿಸಿದೆ.
ಈ ಲಿಸ್ಟ್ ನಲ್ಲಿ ಹೆಸರಿದ್ದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ. 👇🏻
ಮೊದಲಿಗೆ ಈ ಕೆಳಕಂಡ ಲಿಂಕನ್ನು ಒತ್ತಿ 👇🏻https://ahara.kar.nic.in/Home/EServices
– ನಂತರ ಈ ಮುಖಪುಟದ ಎಡಗಡೆ ಕಾಣುವ ಮೂರು ಗೆರೆಗಳನ್ನು ಓತ್ತಿ
– ನಂತರ ಅಲ್ಲಿ ಕಾಣುವ ಹಾಗೆ e-Ration card ಮೇಲೆ ಕ್ಲಿಕ್ ಮಾಡಿ ಮತ್ತೆ ಕೆಳಗೆ ಕಾಣುವ “village list” ಅಲ್ಲಿ ಒತ್ತಿರಿ
ನಂತರ ಅಲ್ಲಿ ಕಾಣುವ ಹಾಗೆ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ, ಹಳ್ಳಿಯನ್ನು,ಆಯ್ಕೆ ಮಾಡಿಕೊಂಡು Go ಮೇಲೆ ಕ್ಲಿಕ್ ಮಾಡಬೇಕು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಮುಂದಿನ ಕಂತಿನ ಹಣ ಬರುತ್ತದೆ.
ನಿಮ್ಮ ಸಾಲ ಮನ್ನಾ ಸ್ಟೇಟಸ್ ಅನ್ನು ಇಲ್ಲಿ ಚೆಕ್ ಮಾಡಿ ಹಾಗೂ ನಿಮ್ಮ ಸಾಲ ಎಷ್ಟು ಮನ್ನಾ ಆಗಿದೆ ಎಂಬ ಮಾಹಿತಿಯನ್ನು ಪಡೆಯಿರಿ 👇🏻
ಮೊದಲಿಗೆ ಈ ಕೆಳಕಂಡ ಲಿಂಕನ್ನು ಒತ್ತಿ
https://mahitikanaja.karnataka.gov.in/department
ನಂತರ ಅಲ್ಲಿ ಕಾಣುವ “ಕಂದಾಯ ಇಲಾಖೆಯ” ಮೇಲೆ ಕ್ಲಿಕ್ ಮಾಡಬೇಕು..
ನಂತರ ಕಂದಾಯ ಇಲಾಖೆ ಸೇವೆಗಳು ಇದರ ಮೇಲೆ ಕ್ಲಿಕ್ ಮಾಡಿ.
ನಂತರ ಅಲ್ಲಿ ಕಾಣುವ ವಾಣಿಜ್ಯ ಬ್ಯಾಂಕಿನ ಸಾಲ ಮನ್ನಾ ಚೆಕ್ ಮಾಡಲು ‘loan waiver report for commercial bank’ ಇದರ ಮೇಲೆ ಕ್ಲಿಕ್ ಮಾಡಬೇಕು. ಹಾಗೂ ಸೊಸೈಟಿಯಲ್ಲಿನ ಸಾಲವನ್ನು ಚೆಕ್ ಮಾಡಲು ‘ loan waiver report for primary agricultural cooperative societies” ಮೇಲೆ ಕ್ಲಿಕ್ ಮಾಡಿರಿ.
ನಂತರ ಅಲ್ಲಿ ರೈತ ಎಂದು ಸೆಲೆಕ್ಟ್(select) ಮಾಡಿಕೊಳ್ಳಿ.
ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸು” ಮೇಲೆ ಒತ್ತಿರಿ..
ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆ ಎಷ್ಟು ಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಬಹುದು. Search button ಅಲ್ಲಿ ನಿಮ್ಮ ನಿಮ್ಮ ಹೆಸರನ್ನು ಹಾಕಿದರೆ ಅಲ್ಲಿ ಮಾಹಿತಿಯನ್ನು ತೋರಿಸುತ್ತದೆ.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ರೇಷನ್ ಕಾರ್ಡ್ ತಿದ್ದುಪಡಿ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ರೇಷನ್ ಕಾರ್ಡ್ ತಿದ್ದುಪಡಿ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ಗೃಹಜೋತಿ ಫಲಾನುಭವಿಗಳಿಗೆ ಶಾಕಿಂಗ್ ನ್ಯೂಸ್ ಹೆಚ್ಚು ವಿದ್ಯುತ್ ಹಣ ಬರುತ್ತಿದೆ https://krushivahini.com/2023/10/17/free-electricity/