Free electricity :-
ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ 10 ಅಥವಾ 20 ರೂ ಬರುತ್ತಿದ್ದ ಬಿಲ್‌ನ ಮೊತ್ತ ಅಕ್ಟೋಬರ್‌ನಿಂದ ಹೆಚ್ಚು ಬರುತ್ತದೆ. ಇದಕ್ಕೆ ಕಾರಣ ಬೇಸಿಗೆಯಂತಿರುವ ವಾತಾವರಣದಿಂದ ಸರಾಸರಿ ಮೀರಿ ಹೆಚ್ಚು ವಿದ್ಯುತ್ ಬಳಕೆ ಮಾಡಿರುವುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಮಳೆ ಕೊರತೆಯಿಂದ ಸೃಷ್ಟಿಯಾದ ಬರ ಒಂದೆಡೆಯಾದರೆ, ಅವಧಿಗೂ ಮುನ್ನವೇ ಬಿಸಿಲಿನ ಬೇಗೆ ಆವರಿಸಿದ್ದರಿಂದ ವಿದ್ಯುತ್ ಬಳಕೆ ಹೆಚ್ಚಾಗಿ ಗೃಹ ಜ್ಯೋತಿ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳ ವಿದ್ಯುತ್ ಬಿಲ್ ತುಸು ಹೊರೆಯಾಗಿದೆ.
ನೀರಿದ್ದರೂ ಹೊಲಕ್ಕೆ ಹರಿಸಲು ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ ಕೆಲವೆಡೆ ಲೋಡ್‌ಶೆಡ್ಡಿಂಗ್ ಕಿರಿಕಿರಿ ಇಷ್ಟೆಲ್ಲ ಗೋಳಿನ ಮಧ್ಯೆ ಸೆಕೆ ತಡೆಯಲು ಅರಿವಿಲ್ಲದೆ ಅತಿಯಾಗಿ ವಿದ್ಯುತ್ ಬಳಸಿಕೊಂಡವರಿಗೆ ಹೆಚ್ಚುವರಿ ಹಣ ಪಾವತಿಸುವ ಬಿಲ್ ರವಾನೆಯಾಗುತ್ತಿದೆ. ಹಿಂದಿನ ತಿಂಗಳು ಗೃಹ ಜ್ಯೋತಿ ಗ್ಯಾರಂಟಿಯಿಂದ ಶೂನ್ಯ, 10, 20, 30 ರೂ. ವಿದ್ಯುತ್ ಬಿಲ್ ಪಾವತಿಸಿದವರಿಗೆ ಈ ತಿಂಗಳು 300, 400, 600 ರೂ. ವರೆಗೆ ಹೆಚ್ಚುವರಿ ಮೊತ್ತದ ಬಿಲ್ ಬಂದಿದೆ.
ಹೆಚ್ಚಿದ ಫ್ಯಾನ್ ಹಾಗೂ ಎಸಿ ಬಳಕೆ:-
ಗೃಹ ಜ್ಯೋತಿ ಫಲಾನುಭವಿಗಳಿಗೆ ವರ್ಷದ ಒಟ್ಟು ವಿದ್ಯುತ್ ಬಳಕೆ ಆಧಾರದ ಮೇಲೆ ತಿಂಗಳ ಸರಾಸರಿ ಲೆಕ್ಕ ಹಾಕಿ, ಅದರ ಮೇಲೆ ಶೇ.10ರಷ್ಟು ಹೆಚ್ಚುವರಿ ಯುನಿಟ್ ವಿದ್ಯುತ್ ಉಚಿತ ನೀಡಲಾಗುತ್ತದೆ. ಮಳೆಗಾಲದಲ್ಲಿ ಸಹಜವಾಗಿ ವಿದ್ಯುತ್ ಬಳಕೆ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ಹೆಚ್ಚಿರುತ್ತದೆ. ಕಳೆದ ವರ್ಷ ಮಳೆಗಾಲ 4-5 ತಿಂಗಳವರೆಗೆ ಇತ್ತು. ಈ ವರ್ಷ ಜುಲೈ ನಂತರ ಸರಿಯಾಗಿ ಮಳೆಯೇ ಆಗಿಲ್ಲ. ಎಲ್ಲೆಡೆ ಬೇಸಿಗೆ ಧಗೆ ಆವರಿಸಿಕೊಂಡಿದೆ. ಫ್ಯಾನ್, ಎಸಿ ಬಳಕೆ ಹೆಚ್ಚಾಗಿದೆ.
ಸರಾಸರಿ ಮಿತಿ ಮೀರಿ ವಿದ್ಯುತ್ ಬಳಕೆ
ಜತೆಗೆ ಗೃಹ ಜ್ಯೋತಿ ಯೋಜನೆಯ ಮೂರನೇ ತಿಂಗಳು ಇದಾಗಿದ್ದರಿಂದ ಸೆಪ್ಟೆಂಬರ್ ತಿಂಗಳಲ್ಲಿ ವಿದ್ಯುತ್ ಬಳಕೆ ನಿಯಂತ್ರಣ ತಪ್ಪಿದಂತಿದೆ. ಅ.12 ರಿಂದ ಎಲ್ಲೆಡೆ ವಿದ್ಯುತ್ ಬಿಲ್ ವಿತರಣೆ ಶುರುವಾಗಿದೆ. ಕರಾವಳಿ ಭಾಗದಲ್ಲಿ ಬಹುತೇಕ ಗ್ರಾಹಕರ ವಿದ್ಯುತ್ ಬಳಕೆ ಗೃಹ ಜ್ಯೋತಿಯ ಸರಾಸರಿ ಮಿತಿಯಿಂದ ಮೀರಿದೆ. ಅದರ ಜತೆಗೆ ಹೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 1.56 ರೂ. ವಿದ್ಯುತ್ ವೆಚ್ಚ ಮತ್ತು ಯುನಿಟ್ ಮೇಲೆ ಶೇ.9 ರಷ್ಟು ಜಿಎಸ್‌ಟಿ ಸೇರುವುದರಿಂದ ಹೆಚ್ಚುವರಿ ಯೂನಿಟ್ ವೆಚ್ ತಲಾ 9 ರೂ. ವರೆಗೆ ಆಗಿದೆ.
ಉದಾಹರಣೆಗೆ ಗೃಹ ಜ್ಯೋತಿ ಯೋಜನೆಯಡಿ ಸರಾಸರಿ 90 ಯೂನಿಟ್‌ವರೆಗೆ ಉಚಿತ ವಿದ್ಯುತ್‌ಗೆ ಅರ್ಹವಾಗಿದ್ದ ಮನೆಯೊಂದರಲ್ಲಿ ಸೆಪ್ಟೆಂಬರ್ ನಲ್ಲಿ ವಿದ್ಯುತ್ ಬಳಕೆ 130 ಯೂನಿಟ್ ಆಗಿದೆ. ಆ ಬಿಲ್ ಈಗ ವಿತರಣೆ ಆಗುತ್ತಿದೆ. 90 ಯುನಿಟ್ ಉಚಿತ ನಂತರದ ಹೆಚ್ಚುವರಿ ಪ್ರತಿ ಯುನಿಟ್‌ಗೆ ತಲಾ 1 ರೂ. ಮತ್ತು ಶೇ.9 ರಷ್ಟು ಜಿಎಸ್ ಟಿ ಹಾಗು 1.56 ವಿದ್ಯುತ್ ವೆಚ್ಚ ಸೇರಿಸಿ 40 ಯುನಿಟ್‌ಗೆ ಸುಮಾರು 360 ರೂ ಶುಲ್ಕ ವಿತರಣೆಯಾಗಿದೆ ಎನ್ನುತ್ತಾರೆ ಹೆಸ್ಕಾಂ ಸಿಬ್ಬಂದಿ.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ವಿದ್ಯುತ್ ಪೂರೈಕೆ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ವಿದ್ಯುತ್ ಪೂರೈಕೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ಈ ಜಿಲ್ಲೆಯಿಂದ ಸರ್ಕಾರಕ್ಕೆ 212.11 ಕೋಟಿ ಪರಿಹಾರ ಕೊಡುವುದಾಗಿ ಪ್ರಸ್ತಾವನೆ https://krushivahini.com/2023/10/18/212-11-crore-compensation-proposal-to-govt/
➡️ ತಡವಾಗಿ ನೋಂದಣಿ ಆದರೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ ಯಾಗಿದೆ.. https://krushivahini.com/2023/10/18/gruhalakshmi-yojana/
➡️ ಹಿಂಗಾರು ಬೆಳೆ ವಿಮೆ 2023 ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು? ಅರ್ಜಿ ಎಲ್ಲಿ ಸಲ್ಲಿಸಬೇಕು https://krushivahini.com/2023/10/18/rabi-crop-insurance-2023/