drought declared talukugalu :-
ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ: ಇನ್ನೂ 22 ತಾಲೂಕುಗಳಲ್ಲಿ ಬರಪೀಡಿತ
ಬೆಂಗಳೂರು: ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ಸಮೀಕ್ಷೆ ದೃಢೀಕರಣ ವರದಿ ಆಧರಿಸಿ ಮತ್ತೆ 22 ತಾಲೂಕುಗಳನ್ನು ಹೆಚ್ಚುವರಿಯಾಗಿ ಬರಪೀಡಿತ ಎಂದು ರಾಜ್ಯ ಸರಕಾರ ಘೋಷಿಸಿದೆ. ಈ ಪೈಕಿ 11 ತಾಲೂಕುಗಳು ತೀವ್ರ ಬರಪೀಡಿತ ಎಂದು ಗುರುತಿಸಿದೆ.
ತೀವ್ರ ಬರಪೀಡಿತ;-
ಬೆಂಗಳೂರು ಉತ್ತರ, ಗುಂಡ್ಲುಪೇಟೆ, ಹನೂರು, ಬೇಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ, ಸೋಮವಾರಪೇಟೆ, ಮಾಲೂರು, ದೇವದುರ್ಗ, ಮಸ್ಕಿ ಹಾಗೂ ತುಮಕೂರು ತಾಲೂಕು ತೀವ್ರ ಬರಪೀಡಿತ;
ಸಾಧಾರಣ ಬರಪೀಡಿತ:-
ಮಂಗಳೂರು, ಮೂಡುಬಿದಿರೆ, ಬ್ರಹ್ಮಾವರ, ಕೊಳ್ಳೆಗಾಲ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ, ಸಕಲೇಶಪುರ, ಚನ್ನಪಟ್ಟಣ, ಮಾಗಡಿ ಹಾಗೂ ಕಾರವಾರಗಳನ್ನು ಸಾಧಾರಣ ಬರಪೀಡಿತ ಎಂದು ಗುರುತಿಸಲಾಗಿದೆ.
ಈ ಹಿಂದೆ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ 236 ತಾಲೂಕುಗಳ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕು ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತವೆಂದು ಒಟ್ಟು 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿತ್ತು.
ಈ ಫೈಕಿ 22 ಸಾಧಾರಣ ಬರಪೀಡಿತ ತಾಲೂಕುಗಳಲ್ಲಿ ಮತ್ತೊಮ್ಮೆ ಬೆಳೆ ಹಾನಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳು ನೀಡಿರುವ ವರದಿಯನ್ವಯ 11 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕು ಹಾಗೂ 11 ಸಾಧಾರಣ ಬರಪೀಡಿತ ತಾಲೂಕುಗಳೆಂದು ನಿರ್ಧರಿಸಲಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರದ ಬರ ನಿರ್ವಹಣೆ 2020ರ ಮಾರ್ಗಸೂಚಿಯಂತೆ 189 ತೀವ್ರ ಬರಪೀಡಿತ ತಾಲೂಕು ಹಾಗೂ 27 ಸಾಧಾರಣ ಬರಪೀಡಿತ ತಾಲೂಕುಗಳು ಒಳಗೊಂಡಂತೆ ಒಟ್ಟು 236 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ಆದೇಶಿಸಲಾಗಿದೆ.
ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಶೀಘ್ರ ದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟತಾ ವರದಿ ನೀಡಲಿದ್ದು, ಅದಾದ ನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ರೈತರಿಗೆ ಮಧ್ಯಂತರ ಬೆಳೆ ಪರಿಹಾರ ನೀಡುವುದು ಸೇರಿದಂತೆ ರೈತರಿಗೆ ಹೇಗೆ ನೆರವಾಗಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ಪರಿಹಾರ ಎಷ್ಟು ? ಈ ರೈತರಿಗೆ ಸದ್ಯದಲ್ಲೇ ಸಿಗಲಿದೆ ಪರಿಹಾರ ಹಣ
ಎನ್‌ಡಿಆರ್‌ಎಫ್‌ನಿಂದ ಜಿಲ್ಲೆಯ 10,261 ರೈತರಿಗೆ ಒಟ್ಟು 6.04 ಕೋಟಿ ರೂ. ಪರಿಹಾರ ಬರಲಿದೆ.
ಹಾವೇರಿ ತಾಲೂಕಿನ 1,459 ರೈತರಿಗೆ 78.29 ಲಕ್ಷ ರೂ., ರಾಣಿಬೆನ್ನೂರ ತಾಲೂಕಿನ 1,961 ರೈತರಿಗೆ 65,48 ಲಕ್ಷ ರೂ., ಹಿರೇಕೆರೂರ ತಾಲೂಕಿನ 750 ರೈತರಿಗೆ 56.78 ಲಕ್ಷ ರೂ. ರಟ್ಟಿಹಳ್ಳಿ ತಾಲೂಕಿನ 825 ರೈತರಿಗೆ 57.97 ಲಕ್ಷ ರೂ., ಸವಣೂರ ತಾಲೂಕಿನ 787 ರೈತರಿಗೆ 34.36 ಲಕ್ಷ ರೂ., ಬ್ಯಾಡಗಿ ತಾಲೂಕಿನ 1,567 ರೈತರಿಗೆ 1.59 ಕೋಟಿ ರೂ., ಹಾನಗಲ್ಲ ತಾಲೂಕಿನ 2,254 ರೈತರಿಗೆ 1.16 ಕೋಟಿ ರೂ. ಹಾಗೂ ಶಿಗ್ಗಾಂವಿ ತಾಲೂಕಿನ 659 ರೈತರಿಗೆ 35.29 ಲಕ್ಷ ರೂ. ಪರಿಹಾರ ದೊರೆಯಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ..
https://chat.whatsapp.com/IdgrNNJ7davJ82ndmV12M1
ಬರಗಾಲ ತಾಲೂಕ ಗಳು :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬರಗಾಲ ತಾಲೂಕಗಳು ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ..
➡️ ರಾಜ್ಯದಲ್ಲಿ 53,000 ಗಡಿ ದಾಟಿದ ಅಡಿಕೆ ಬೆಲೆ ನಿಮ್ಮ ಜಿಲ್ಲೆಯಲ್ಲಿ ಎಷ್ಟು ದರ ಇದೆ ಇಲ್ಲಿ ನೋಡಿ https://krushivahini.com/2023/10/21/arecaunt-price-increased/
➡️ ಹಿಂಗಾರು ಬೆಳೆ ವಿಮೆ 2023 ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು? ಅರ್ಜಿ ಎಲ್ಲಿ ಸಲ್ಲಿಸಬೇಕು https://krushivahini.com/2023/10/18/rabi-crop-insurance-2023/
➡️💸 ಸದ್ಯದಲ್ಲೇ 27 ಲಕ್ಷ ರೈತರಿಗೆ ಬರ ಪರಿಹಾರ ಹಣ ಕೊಡುವುದಾಗಿ ಹೇಳಿದ ಸರ್ಕಾರ!
* ಎಕರೆಗೆ 9,423 ರೂ ಬರ ಪರಿಹಾರ
* ಬೆಳೆ ಪರಿಹಾರ ಹಣವನ್ನು ರೈತರು ಪಡೆಯುವುದು ಹೇಗೆ??https://krushivahini.com/2023/10/19/drought-relief/
➡️ ತಡವಾಗಿ ನೋಂದಣಿ ಆದರೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ ಯಾಗಿದೆ.. https://krushivahini.com/2023/10/18/gruhalakshmi-yojana/
➡️ ಗೃಹಜೋತಿ ಫಲಾನುಭವಿಗಳಿಗೆ ಶಾಕಿಂಗ್ ನ್ಯೂಸ್ ಹೆಚ್ಚು ವಿದ್ಯುತ್ ಹಣ ಬರುತ್ತಿದೆ https://krushivahini.com/2023/10/17/free-electricity/
➡️ ಈ ಕೆಲಸ ಮಾಡದಿದ್ದರೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ. ಮೊಬೈಲ್ ನಲ್ಲಿ ಈ ಕೆಲಸವನ್ನು ಮಾಡಿ. https://krushivahini.com/2023/10/17/ration-card-correction-time-extended/
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com