Onion crop is likely to increase:- ನಮಸ್ಕಾರ ಆತ್ಮೀಯ ರೈತ ಬಾಂಧವರಿಗೆ ಇಂದಿನ ದಿನ ನಾವು ಈರುಳ್ಳಿಯ ದರ ಗಗನಕ್ಕೆ ಇರುವುದು ಎಂಬ ಮಾಹಿತಿಯ ಸಂಕ್ಷಿಪ್ತ ಮಾಹಿತಿ ಇಲ್ಲಿ ನೋಡಿರಿ.

ಹೌದು ಹೀಗೆ ಹಿಂದಿನ ರೀತಿ ನೋಡಿದರೆ ರಾಜ್ಯದಲ್ಲಿ ಕಳೆದ ಬಾರಿ ಟಮ್ಯಾಟೋ ದರವು ಗಗನಕ್ಕೆ ಏರಿದ್ದನ್ನು ಎಲ್ಲ ರೈತರು ನೋಡಿದ್ದೀರಿ. ಜನರು ಆ ಸಮಯದಲ್ಲಿ ಪರದಾಡಿದ್ದಾರೆ ಅದೇ ರೀತಿಯಾಗಿ ಈಗ ಈರುಳ್ಳಿ ಯ ದರ ಹೆಚ್ಚಲಿದೆ.

ರಾಜ್ಯದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಟೊಮೆಟೊ ಬೆಲೆ ಗಗನಕ್ಕೇರಿ ಜನರನ್ನು ಕಂಗಾಲಾಗಿ ಮಾಡಿತ್ತು. ಇದೀಗ ಜನ ಬೆಲೆ ಇಳಿಕೆ ಕಂಡಿದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿಯೇ ಈರುಳ್ಳಿ ದರ ಏರಿಕೆ ಆತಂಕ ಎದುರಾಗಿದೆ.

ಕಳೆದ ವಾರ ಕೆಜಿಗೆ 15 ರಿಂದ 20 ಇದ್ದ ಈರುಳ್ಳಿ ದರ ಇದೀಗ, ಕೆಜಿಗೆ 35 ರಿಂದ 40 ಏರಿಕೆ ಕಂಡಿದೆ. ರಾಜ್ಯದಲ್ಲಿ ಈರುಳ್ಳಿ ಬೆಳೆಯುವ ಜಿಲ್ಲೆಗಳಿಂದ ಪೂರೈಕೆ ಬಹುತೇಕ ಕುಸಿದಿದೆ. ಅಲ್ಲದೇ ನಾಸಿಕ್ ಹಾಗೂ ಪುಣೆಯಿಂದ ಪೂರೈಕೆಯಾಗುತ್ತಿರುವುದು ಸ್ಥಗಿತವಾಗಿದೆ. ಈರುಳ್ಳಿಗೆ ಈಗ ಬಹು ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಪ್ರತಿ ವರ್ಷ ಚಳ್ಳಕೆರೆ, ಚಿಕ್ಕಬಳ್ಳಾಪುರ,ಚಿತ್ರದುರ್ಗ, ಸೇರಿ ದಕ್ಷಿಣದ ರಾಜ್ಯಗಳಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ. ನಂತರ ನವೆಂಬರ್ ಬಳಿಕ ಗದಗ,ಮತ್ತು ವಿಜಯಪುರದಿಂದ ಪೂರೈಕೆಯಾಗುತ್ತದೆ. ಕಳೆದೆರಡು ವರ್ಷ ಅತಿವೃಷ್ಟಿ. ರೋಗಬಾಧೆಯಿಂದ ಈರುಳ್ಳಿ ನಷ್ಟವಾಗಿದ್ದರೆ, ಈ ಬಾರಿ ಅನಾವೃಷ್ಟಿ ಬಿತ್ತನೆ ಪ್ರಮಾಣವನ್ನು ಕುಗ್ಗಿಸಿದೆ.

ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ ಈ ವೇಳೆಗೆ 1.20 ಲಕ್ಷ ಚೀಲ ಈರುಳ್ಳಿ ಬರಬೇಕಿತ್ತು. ಆದರೆ, ಶೇ. 35% ರಷ್ಟು ಕಡಿಮೆ ಅಂದರೆ, ಪ್ರತಿಸಾರಿ ಸರಿ ಸುಮಾರು 60 ಸಾವಿರದಿಂದ 70 ಸಾವಿರ ಚೀಲಗಳು ಮಾತ್ರ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕೊರತೆಯಾಗುವ ಸಾಧ್ಯತೆಗಳಿವೆ. ಯಶವಂತಪುರ, ದಾಸನಪುರ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ 11,000 ದಿಂದ 13,000 ಈರುಳ್ಳಿ ಬೆಲೆಯಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಕೇಂದ್ರ ಸರ್ಕಾರ ನಾಫೆಡ್ (ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ) ಮೂಲಕ ಮಹಾರಾಷ್ಟ್ರದ ಈರುಳ್ಳಿಯನ್ನು ರಾಜ್ಯಕ್ಕೆ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣದಲ್ಲಿದೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾದರೆ ರಾಜ್ಯದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆ ಹೆಚ್ಚಾಗಿದೆ.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ..

https://chat.whatsapp.com/HLCYrALalJpLbeEMnLRyZB

ಈರುಳ್ಳಿ ಬೆಳೆ ಗಗನಕ್ಕೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈರುಳ್ಳಿ ಬೆಳೆ ಗಗನಕ್ಕೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ಎನ್ ಡಿ ಆರ್ ಎಫ್ ನಿಂದ ಕೂಡಲೇ ರೈತರಿಗೆ ಬರ ಪರಿಹಾರ ಕೊಡಬೇಕು ಸಚಿವ ಕೃಷ್ಣ ಬೈರೇಗೌಡ https://krushivahini.com/2023/10/22/bara-parihara-news/

➡️ ದಿಡೀರ್ ಏರಿಕೆ ಕಂಡ ಈರುಳ್ಳಿ 💸🧅ಬೆಲೆ ಮಾರುಕಟ್ಟೆಯಲ್ಲಿ ಈರುಳ್ಳಿಯ ರೇಟ್ ಎಷ್ಟಿದೆ ಇಲ್ಲಿ ನೋಡಿ.. 👇🏻
https://krushivahini.com/2023/10/20/bumper-price-for-onion-in-karnataka/

➡️ ಬೆಳೆ ಸಾಲ ಮನ್ನಾದ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸರ್ಕಾರ ರೈತರ ಬೆಳೆ ಸಾಲ ಮನ್ನಾ ಆಗಿದೆ https://krushivahini.com/2023/10/19/crop-loan-waiver-big-update/

➡️ ಈ ಕೆಲಸ ಮಾಡದಿದ್ದರೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ. ಮೊಬೈಲ್ ನಲ್ಲಿ ಈ ಕೆಲಸವನ್ನು ಮಾಡಿ. https://krushivahini.com/2023/10/17/ration-card-correction-time-extended/

➡️ ರೈತರ ಸಾಲ ಮನ್ನಾ! ಬರಗಾಲ ಘೋಷಿತ ರೈತರಿಗೆ ಎಷ್ಟು ಸಾಲ ಮನ್ನಾ ಮಾಡುತ್ತಾರೆ ಎಂಬುದರ ಬಗ್ಗೆ ಇಲ್ಲಿ ನೋಡಿ https://krushivahini.com/2023/10/16/sala-manna/

➡️ ಅಂತಿಮ ಬರಗಾಲ ಪೀಡಿತ ತಾಲೂಕುಗಳ ಪಟ್ಟಿ ಘೋಷಣೆ?? ಪರಿಹಾರ ಹಣವನ್ನು ಎಷ್ಟು ಕೊಡುತ್ತಾರೆ ಇಲ್ಲಿ ನೋಡಿ https://krushivahini.com/2023/10/16/drought-declared-talukugalu/

One thought on “Onion crop is likely to increase- ಸದ್ಯದಲ್ಲೇ ಗಗನಕ್ಕೆ ಏರಲಿದೆ ಈರುಳ್ಳಿ ಬೆಲೆ”

Leave a Reply

Your email address will not be published. Required fields are marked *