6.4 crore Crop loss compensation :-

ನಮಸ್ಕಾರ ಆತ್ಮೀಯ ರೈತ ಬಾಂಧವರೇ, ಇಂದಿನ ಈ ಲೇಖನದಲ್ಲಿ ನಾವು ಈ ಜಿಲ್ಲೆಯ ರೈತರಿಗೆ ಒಟ್ಟು 6 ಕೋಟಿ ರೂ ಪರಿಹಾರ ಬರಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಈ ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿ..

ಹಾವೇರಿ ಜಿಲ್ಲೆಯಲ್ಲಿ ಕೃಷಿ ಇಲಾಖೆ ವ್ಯಾಪ್ತಿಗೆ ಒಳಪಡುವ ಮೆಕ್ಕೆಜೋಳ, ಹತ್ತಿ, ಶೇಂಗಾ, ಹೆಸರು, ಜೋಳ ಮತ್ತಿತರ ಬೆಳೆಗಳ ಜತೆಗೆ ತೋಟಗಾರಿಕೆ ಬೆಳೆಗಳಿಗೂ ಈ ವರ್ಷ ಬರಗಾಲದ ಬರಸಿಡಿಲು ತಟ್ಟಿದೆ. ಜಿಲ್ಲೆಯಲ್ಲಿ 4,462 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಇವುಗಳ ಸಮೀಕ್ಷೆ ಕಾರ್ಯ ಭರದಿಂದ ಸಾಗಿದೆ.

ತೋಟಗಾರಿಕೆ ಬೆಳೆಗಳಾದ

ಮೆಣಸಿನಕಾಯಿ, ಬೆಂಡಿಕಾಯಿ, ಹೂವು ಮತ್ತಿತರ ಬೆಳೆಗಳೂ ಹಾನಿಗೀಡಾಗಿವೆ. ರಾಣಿಬೆನ್ನೂರ ಭಾಗದಲ್ಲಿ ಉಳ್ಳಾಗಡ್ಡಿ, ಬೆಳ್ಳುಳ್ಳಿ, ಹಾನಗಲ್ಲ, ಶಿಗ್ಗಾಂವಿ ಹಾಗೂ ಸವಣೂರ ಭಾಗದಲ್ಲಿ ಮೆಣಸಿನಕಾಯಿ, ಹಾನಗಲ್ಲ, ಶಿಗ್ಗಾಂವಿ ಹಾಗೂ ಬ್ಯಾಡಗಿ ಭಾಗದಲ್ಲಿ ಶುಂಠಿ ಬೆಳೆಗಳಿಗೆ ಬಹಳ ಹಾನಿ ಉಂಟಾಗಿದೆ.

2023-24 ನೇ ಬರಗಾಲದಿಂದ ಜಿಲ್ಲೆಯ 4,462 ಹೆಕ್ಟರ್ ನಲ್ಲಿ ಬೆಳೆದಿದ್ದ ಒಟ್ಟು 40,87 ಕೋಟಿ ರೂ. ಮೌಲ್ಯದ ಬೆಳೆಗಳು ಹಾನಿಗೀಡಾಗಿವೆ ಎಂದು ಇಲಾಖೆ ಅಂದಾಜಿಸಿದೆ. ಹಾವೇರಿ ತಾಲೂಕಿನಲ್ಲಿ 671 ಹೆಕ್ಟೇರ್‌ನಲ್ಲಿನ ಬೆಳೆ ಹಾನಿಯಿಂದ 6.14 ಕೋಟಿ ರೂ. ನಷ್ಟ ಉಂಟಾಗಿದೆ. ರಾಣಿಬೆನ್ನೂರ ತಾಲೂಕಿನಲ್ಲಿ 770 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಿಂದ 7.05 ಕೋಟಿ ರೂ. ನಷ್ಟವಾಗಿದೆ. ಹಿರೇಕೆರೂರ ತಾಲೂಕಿನಲ್ಲಿ 334 ಹೆಕ್ಟೇರ್‌ನ ಬೆಳೆ ಹಾನಿಯಿಂದ 3.05 ಕೋಟಿ ರೂ. ಹಾನಿಯಾಗಿದೆ. ರಟ್ಟಿಹಳ್ಳಿ ತಾಲೂಕಿನಲ್ಲಿ 366 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಿಂದ 3.35 ಕೋಟಿ ರೂ. ನಷ್ಟ ಉಂಟಾಗಿದೆ.

ಸವಣೂರ ತಾಲೂಕಿನಲ್ಲಿ 404 ಹೆಕ್ಟೇರ್ ಬೆಳೆ ನಷ್ಟದಿಂದ 3.70 ಕೋಟಿ ರೂ. ಹಾನಿಯಾಗಿದೆ. ಬ್ಯಾಡಗಿ ತಾಲೂಕಿನಲ್ಲಿ 937 ಹೆ. ಬೆಳೆ ನಷ್ಟದಿಂದ 8.58 ಕೋಟಿ ರೂ. ಹಾನಿಯಾಗಿದೆ. ಹಾನಗಲ್ಲ ತಾಲೂಕಿನಲ್ಲಿ 682 ಹೆ ಬೆಳೆ ನಷ್ಟದಿಂದ 6.25 ಕೋಟಿ ರೂ. ಹಾನಿಯಾಗಿದೆ. ಶಿಗ್ಗಾಂವಿ ತಾಲೂಕಿನಲ್ಲಿ 297 ಹೆ ಬೆಳೆ ನಷ್ಟದಿಂದ 2.72 ಕೋಟಿ ರೂ. ಮೌಲ್ಯದ ಬೆಳೆಗಳು ಹಾನಿಗೀಡಾಗಿವೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದ

ಪರಿಹಾರ ಎಷ್ಟು ?

ಎನ್‌ಡಿಆರ್‌ಎಫ್‌ನಿಂದ ಜಿಲ್ಲೆಯ 10,261 ರೈತರಿಗೆ ಒಟ್ಟು 6.04 ಕೋಟಿ ರೂ. ಪರಿಹಾರ ಬರಲಿದೆ.

ಹಾವೇರಿ ತಾಲೂಕಿನ 1,459 ರೈತರಿಗೆ 78.29 ಲಕ್ಷ ರೂ., ರಾಣಿಬೆನ್ನೂರ ತಾಲೂಕಿನ 1,961 ರೈತರಿಗೆ 65,48 ಲಕ್ಷ ರೂ., ಹಿರೇಕೆರೂರ ತಾಲೂಕಿನ 750 ರೈತರಿಗೆ 56.78 ಲಕ್ಷ ರೂ. ರಟ್ಟಿಹಳ್ಳಿ ತಾಲೂಕಿನ 825 ರೈತರಿಗೆ 57.97 ಲಕ್ಷ ರೂ., ಸವಣೂರ ತಾಲೂಕಿನ 787 ರೈತರಿಗೆ 34.36 ಲಕ್ಷ ರೂ., ಬ್ಯಾಡಗಿ ತಾಲೂಕಿನ 1,567 ರೈತರಿಗೆ 1.59 ಕೋಟಿ ರೂ., ಹಾನಗಲ್ಲ ತಾಲೂಕಿನ 2,254 ರೈತರಿಗೆ 1.16 ಕೋಟಿ ರೂ. ಹಾಗೂ ಶಿಗ್ಗಾಂವಿ ತಾಲೂಕಿನ 659 ರೈತರಿಗೆ 35.29 ಲಕ್ಷ ರೂ. ಪರಿಹಾರ ದೊರೆಯಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ಜಿಲ್ಲೆಯ 10,261 ರೈತರಿಗೆ ಬೆಳೆ ಪರಿಹಾರ ಬರುತ್ತದೆ.

•14,462 ಹೆ. ತೋಟಗಾರಿಕೆ ಬೆಳೆ ಹಾನಿ.

• ಅಂದಾಜು 40.87 ಕೋಟಿ ರೂ. ನಷ್ಟ

• ಎನ್‌ಡಿಆರ್‌ಎಫ್‌ನಿಂದ ಬರಲಿರುವ ಪರಿಹಾರ 6.04 ಕೋಟಿ ರೂ.

• ಪರಿಹಾರ ಪಡೆಯಲಿರುವ ರೈತರ ಸಂಖ್ಯೆ 10,261

ತಾಲೂಕುವಾರು ಅಂಕಿ ಅಂಶ:-

ತಾಲೂಕು – ಒಟ್ಟು ಬೆಳೆ ಹಾನಿ(ಹೆಕ್ಟರ್)

ಹಾವೇರಿ – 671.00

ರಾಣಿಬೆನ್ನೂರ – 770.37

ಹಿರೇಕೆರೂರ – 334.00

ರಟ್ಟಿಹಳ್ಳಿ – 366.00

ಸವಣೂರ – 404.20

ಬ್ಯಾಡಗಿ – 937.45

ಹಾನಗಲ್ – 682.53

Baragala parihara-ಬರಗಾಲ ಪರಿಹಾರ ಘೋಷಣೆ,ಬರಗಾಲ ಪರಿಹಾರ ಚೆಕ್ ಮಾಡುವ ವಿಧಾನ ಈ ಕೆಳಗಿನಂತೆ ಚೆಕ್ ಮಾಡಿಕೊಳ್ಳಿ.

ಮಳೆಯಾಶ್ರಿತ ಬೆಳೆಗೆ ಎರಡು ಹೆಕ್ಟರಿಗೆ ಸೀಮಿತವಾಗಿ ಪ್ರತಿ ಹೆಕ್ಟರಿಗೆ 8500 ರೂಪಾಯಿ ಪರಿಹಾರವನ್ನು ನೀಡಲಾಗುತ್ತದೆ.

ನೀರಾವರಿ ಬೆಳೆಗೆ ಪ್ರತಿ ಹೆಕ್ಟರಿಗೆ 17000 ರೂಪಾಯಿ.

ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟರಿಗೆ 22,000

ರೇಷ್ಮೆ ಬೆಳೆಗೆ ಪ್ರತಿ ಹೆಕ್ಟರಿಗೆ 6000 ಪರಿಹಾರ ಮೊತ್ತ ನಿಗದಿಪಡಿಸಲಾಗಿದೆ.

ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಇಲ್ಲಿ ನೋಡಿ:-

ಬರಗಾಲ ಪರಿಹಾರವನ್ನು ಈ ಕೆಳಗಿನಂತೆ ಚೆಕ್ ಮಾಡಿಕೊಳ್ಳಿ..

ಹಂತ 1:- ಮೊದಲಿಗೆ ಈ ಕೆಳಕಂಡ ಲಿಂಕನ್ನು ಒತ್ತಿ

https://landrecords.karnataka.gov.in/PariharaPayment/

ನಂತರ ಮುಂದೆ ಕಾಣುವ ಮುಖಪುಟದಲ್ಲಿ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ.

ನಂತರ calamity type ಅಲ್ಲಿ “drought” ಎಂದು select year type ಅಲ್ಲಿ 2023 ಎಂದು ಹಾಕಿ ನಂತರ ಆಧಾರ್ ನಂಬರ್ ಅನ್ನು ನಮೂದಿಸಿ ಅಲ್ಲೇ ಕಾಣುವ Captha ಎಂಟ್ರಿ ಮಾಡಿ. Fetch details ಮೇಲೆ ಒತ್ತಬೇಕು.

ನಂತರ ನೀವು ನಿಮಗೆ ಎಷ್ಟು ಬೆಳೆ ಪರಿಹಾರ ಜಮೆ ಆಗಿರುವ ಸ್ಟೇಟಸ್ ಅನ್ನು ಅಲ್ಲಿ ನೀವು ನೋಡಬಹುದು..

ಬೆಳೆವಿಮೆಯ ಸಂಪೂರ್ಣ ಮಾಹಿತಿ ಇಲ್ಲಿದೆ..

ಹಂತ 1) ಮೊದಲಿಗೆ ಇಲ್ಲಿ ಕೆಳಗೆ ತೋರಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ Captha ಹಾಗೂ season ಆಯ್ಕೆ ಮಾಡಿಕೊಂಡು search ಮೇಲೆ ಒತ್ತಿದರೆ ನಿಮ್ಮ ಖಾತೆಗೆ ಎಷ್ಟು ಬೆಳೆ ವಿಮೆ ಆಗಿರುವ ಸ್ಟೇಟಸ್ ಅನ್ನು ನೋಡಬಹುದು.. https://samrakshane.karnataka.gov.in/Premium/CheckStatusMain_aadhaar.aspx

ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಗೆ ಯಾವ ಇನ್ಶೂರೆನ್ಸ್ ಕಂಪನಿ ಇರುವ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ.👇🏻

https://samrakshane.karnataka.gov.in/HomePages/frmKnowYourInsCompany.aspx

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ..

https://chat.whatsapp.com/IdgrNNJ7davJ82ndmV12M1

ಜಿಲ್ಲೆಯ 10,261 ರೈತರಿಗೆ ಒಟ್ಟು 6.04 ಕೋಟಿ ರೂ. ಪರಿಹಾರ ಬರಲಿದೆ.:-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬೆಳೆ ಪರಿಹಾರ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

ತಪ್ಪದೆ ಓದಿರಿ :-

➡️ ಬರಪೀಡಿತ ಪ್ರದೇಶದ ಜನರಿಗೆ ಸಾಲ ಮನ್ನಾ ಬಗ್ಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ https://krushivahini.com/2023/10/23/crop-loan-waiver-news/

➡️ ರೈತರ ಬೆಳೆ ಸಾಲ ಮನ್ನಾ ಬರಫೀಡಿತ ತಾಲೂಕಗಳ ರೈತರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ https://krushivahini.com/2023/10/16/sala-manna/

➡️ ಆಸ್ತಿ ಖರೀದಿ ಹಾಗೂ ಮಾರಾಟ ಮಾಡುವವರಿಗೆ ಹೊಸ ರೂಲ್ಸ್ ಕಡ್ಡಾಯ https://krushivahini.com/2023/10/15/new-rules-for-buying-and-selling-property/

➡️ ಸದ್ಯದಲ್ಲಿ ಗಗನಕ್ಕೆ ಏರಿಯಾದೆ ಈರುಳ್ಳಿ ಬೆಲೆ https://krushivahini.com/2023/10/15/onion-crop-is-likely-to-increase/

➡️ ಪಿ ಎಂ ಕಿಸಾನ್ ಯೋಜನೆಯ ಹಣ ಹೆಚ್ಚಳ ನಿಮಗೆ ಎಷ್ಟು ಹಣ ಬರುತ್ತದೆ ಇಲ್ಲಿ ನೋಡಿ https://krushivahini.com/2023/10/14/pm-kisan-yojana-money-increased/

3 thoughts on “6.4 crore Crop loss compensation :- ಈ ಜಿಲ್ಲೆಯ ರೈತರಿಗೆ ಪರಿಹಾರ ಬರಲಿದೆ.”
  1. […] ➡️ ಈ ಜಿಲ್ಲೆಯ ರೈತರಿಗೆ ಸದ್ಯದಲ್ಲೇ 6 ಕೋಟಿ ಪರಿಹಾರ ಹಣ ಜಮೆಯಾಗಲಿದೆ. ನಿಮ್ಮ ತಾಲೂಕಿಗೆ ಎಷ್ಟು ಪರಿಹಾರ ಹಣ ಬರುತ್ತದೆ ಇಲ್ಲಿ ಚೆಕ್ ಮಾಡಿಕೊಳ್ಳಿ https://krushivahini.com/2023/10/15/6-4-crore-crop-loss-compensation/ […]

  2. […] ➡️ ಈ ಜಿಲ್ಲೆಯ ರೈತರಿಗೆ ಸದ್ಯದಲ್ಲೇ 6 ಕೋಟಿ ಪರಿಹಾರ ಹಣ ಜಮೆಯಾಗಲಿದೆ. ನಿಮ್ಮ ತಾಲೂಕಿಗೆ ಎಷ್ಟು ಪರಿಹಾರ ಹಣ ಬರುತ್ತದೆ ಇಲ್ಲಿ ಚೆಕ್ ಮಾಡಿಕೊಳ್ಳಿ https://krushivahini.com/2023/10/15/6-4-crore-crop-loss-compensation/ […]

  3. […] ➡️ ಈ ಜಿಲ್ಲೆಯ ರೈತರಿಗೆ ಸದ್ಯದಲ್ಲೇ 6 ಕೋಟಿ ಪರಿಹಾರ ಹಣ ಜಮೆಯಾಗಲಿದೆ. ನಿಮ್ಮ ತಾಲೂಕಿಗೆ ಎಷ್ಟು ಪರಿಹಾರ ಹಣ ಬರುತ್ತದೆ ಇಲ್ಲಿ ಚೆಕ್ ಮಾಡಿಕೊಳ್ಳಿ https://krushivahini.com/2023/10/15/6-4-crore-crop-loss-compensation/ […]

Leave a Reply

Your email address will not be published. Required fields are marked *