Pm kisan yojana money increased
ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ತಿಳಿದಿರಬಹುದು ಪ್ರಧಾನಮಂತ್ರಿ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ನಿಮಗೆ ಒಂದು ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ಪ್ರಧಾನಮಂತ್ರಿಯವರಿಂದ ನಿಮಗೆ ದೊರೆಯುತ್ತಿತ್ತು. ಈಗ ನಮ್ಮ ಮೋದಿಜಿಯವರು ರೈತರಿಗೆ ಬರಗಾಲ ಬಂದ ಕಾರಣ ಅವರಿಗೆ ಸಹಾಯವನ್ನು ಮಾಡುವ ದೃಷ್ಟಿಯಿಂದ ಈ 6,000ಗಳನ್ನು ರೂ.8000ಗಳಿಗೆ ಏರಿಕೆ ಮಾಡಬೇಕೆಂಬ ನಿರ್ಧಾರವನ್ನು ಕೈಗೊಂಡಿದ್ದಾರೆ.
ಕೇಂದ್ರ ಸರ್ಕಾರದಿಂದ ಈ ನಿರ್ಧಾರ
ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಪೂರಕವಾಗಿ ರೈತರ ಬೆಂಬಲ ಕ್ರೋಡೀಕರಿಸುವ ಉದ್ದೇಶದಿಂದ ಈಗ ಸಣ್ಣ ಹಿಡುವಳಿದಾರರಿಗೆ ನೀಡುತ್ತಿರುವ ನಗದು ನೆರವನ್ನು ಮೂರನೇ ಒಂದರಷ್ಟು ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತುತ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡುತ್ತಿರುವ ವಾರ್ಷಿಕ 6,000 ರೂಪಾಯಿ ಮೊತ್ತವನ್ನು 8,000 ರೂಪಾಯಿಗೆ ಏರಿಸಲು ಸರ್ಕಾರ ಚಿಂತನೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರಿಗಾಗಿ ಎಷ್ಟು ಕೋಟಿ ಹೆಚ್ಚಿಗೆ ಮೀಸಲು
ಒಂದು ವೇಳೆ ಈ ಅನು ಮೋದನೆ ಸಿಕ್ಕರೆ ಸರ್ಕಾರದ ಬೊಕ್ಕ ಸಕ್ಕೆ ಹೆಚ್ಚುವರಿಯಾಗಿ 22 ಸಾವಿರ ಕೋಟಿ ಹೊರೆ ಬೀಳಲಿದೆ ಎಂದು ಅವರು ಹೇಳಿದ್ದಾರೆ. ದೇಶದ 140 ಕೋಟಿ ಜನಸಂಖ್ಯೆಯ ಅಂದಾಜು ಶೇ. 65ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಈ ರೈತರು ನರೇಂದ್ರ ಮೋದಿ ಬೆಂಬಲದ ನಿರ್ಣಾಯಕ ಭಾಗವಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಆದಕಾರಣ ಕೇಂದ್ರದ ಬೊಕ್ಕಸಕ್ಕೆ 22,000 ಕೋಟಿ ಹೆಚ್ಚುವರಿ ಹೊರೆ, ಸಣ್ಣ ರೈತರಿಗೆ ಇನ್ನೂ ಹೆಚ್ಚು ನಗದು ಬೆಂಬಲ. 8000ಗಳನ್ನು ಪಡೆಯಲು ನೀವು ಅರ್ಹತೆಯನ್ನು ಹೊಂದುವುದು ತುಂಬಾ ಮುಖ್ಯವಾಗಿದೆ. ಈಗಾಗಲೇ 6000 ರುಪಾಯಿಗಳನ್ನು ತೆಗೆದುಕೊಳ್ಳುವ ಎಲ್ಲಾ ರೈತರಿಗೆ 8000 ಪಕ್ಕ ಬಂದೇ ಬರುತ್ತದೆ. ಕೆಲವೊಂದು ರೈತರಿಗೆ PM kisan ಹಣ ಯಾವುದೋ ಕಾರಣದಿಂದ ಬಂದಿರುವುದಿಲ್ಲ ಅದನ್ನು ಬೇಗನೆ ಸರಿಪಡಿಸಿಕೊಂಡು ಈ 8,000ಗಳನ್ನು ಪಡೆಯಬೇಕಾಗಿ ವಿನಂತಿ.
PM Kisan final list released
ಪಿ ಎಂ ಕಿಸಾನ್ ಅಂತಿಮ ಪಟ್ಟಿ ಬಿಡುಗಡೆ
ಪಿ ಎಂ ಕಿಸಾನ್ ಯೋಜನೆ ಕೊನೆಯ ಪಟ್ಟಿ ಬಿಡುಗಡೆ
ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ 15 ನೆ ಕಂತಿನ ಹಣ ಬರುತ್ತದೆ. ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಲು ಈ ಕೆಳಗೆ ತಿಳಿಸಿರುವಂತೆ ಮಾಡಿ.
1. ಮೊದಲು ನಿಮ್ಮ ಮೊಬೈಲ್ ನಲ್ಲಿ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು.
https://pmkisan.gov.in/Rpt_BeneficiaryStatus_pub.aspx
ಆಗ ಹೊಸ ಮುಖಪುಟದಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.
ಎಲ್ಲಾ ಆಯ್ಕೆಗಳನ್ನು ಸರಿಯಾಗಿ ಆಯ್ದುಕೊಂಡು ನಂತರ ಗೆಟ್ ರಿಪೋರ್ಟ್ ಎಂಬ option ಮೇಲೆ ಕ್ಲಿಕ್ ಮಾಡಿ. ನಿಮಗೆ ಅಲ್ಲಿ ನಿಮ್ಮ ಗ್ರಾಮವಾರು ಫಲಾನುಭವಿಗಳ ಪಟ್ಟಿ ದೊರೆಯುತ್ತದೆ.
ಗ್ರಾಮವಾರು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಗ್ರಾಮದ ಫಲಾನುಭವಿಗಳ ಹೆಸರುಗಳನ್ನು ನೀಡಲಾಗುತ್ತದೆ. ಅಲ್ಲಿ ನೀವು ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಬಹುದು.
ಪಿ ಎಂ ಕಿಸಾನ್ ನಿಮ್ಮ ಸ್ಟೇಟಸ್ ನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಕೆಳಕಂಡ ಲಿಂಕ್ ಅನ್ನು ಒತ್ತಿ…
https://pmkisan.gov.in/BeneficiaryStatus_New.aspx
ಅಂತರ ಮುಂದಿನ ಮುಖಪುಟದಲ್ಲಿ ಕಾಣುವ ನಿಮ್ಮ ರಿಜಿಸ್ಟ್ರೇಷನ್(ನೋಂದಣಿ )ನಂಬರನ್ನು ಹಾಕಿ Captcha ಎಂಟ್ರಿ ಮಾಡಿ get data ಮೇಲೆ ಒತ್ತಬೇಕು.
ಈ ಕೆಲಸ ಮಾಡಿದರೆ ಮಾತ್ರ ಅರ್ಹ ಫಲಾನುಭವಿಗಳಿಗೆ ಮುಂದಿನ ಕಂತಿನ ಹಣ ಜಮಯಾಗುತ್ತದೆ. ತಿಳಿಯಲು ಈ ಕೆಳಕಂಡ ಲಿಂಕನ್ನು ಒತ್ತಿ👇🏻👇🏻
E-Kyc status :-
https://exlink.pmkisan.gov.in/aadharekyc.aspx
…ಈ ಲಿಂಕ್ ಓಪನ್ ಆದಮೇಲೆ ಆಧಾರ್ ನಂಬರ್ ಅನ್ನು ನಮೂದಿಸಿ search ಮೇಲೆ ಒತ್ತಿರಿ.
ಮುಂದಿನ ಮುಖಪುಟದಲ್ಲಿ ನಿಮಗೆ ಆಧಾರ್ ಲಿಂಕ್ ನಲ್ಲಿರುವ ಮೊಬೈಲ್ ನಂಬರನ್ನು ನಮೂದಿಸಿ ನಂತರ ನಿಮ್ಮ ಆಧಾರ್ ನಂಬರ್ ಗೆ ಲಿಂಕ್ ಇರುವ ಮೊಬೈಲ್ ಗೆ ಬಂದಿರುವ ಒಟಿಪಿಯನ್ನು ಅಲ್ಲಿ ಹಾಕಿ ಇ-ಕೆ ವೈ ಸಿ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ನೋಡಿರಿ..
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಪಿ ಎಂ ಕಿಸಾನ್ ಹಣ ಹೆಚ್ಚಾಗಿದೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ಈ ಜಿಲ್ಲೆಯ ರೈತರಿಗೆ ಸದ್ಯದಲ್ಲೇ 6 ಕೋಟಿ ಪರಿಹಾರ ಹಣ ಜಮೆಯಾಗಲಿದೆ. ನಿಮ್ಮ ತಾಲೂಕಿಗೆ ಎಷ್ಟು ಪರಿಹಾರ ಹಣ ಬರುತ್ತದೆ ಇಲ್ಲಿ ಚೆಕ್ ಮಾಡಿಕೊಳ್ಳಿ https://krushivahini.com/2023/10/15/6-4-crore-crop-loss-compensation/