New ration card will be distributed on this day

ಎಲ್ಲರಿಗೂ ನಮಸ್ಕಾರ.ನಾವು ಇವತ್ತಿನ ವರದಿಯಲ್ಲಿ, ಹೊಸ ರೇಷನ್ ಕಾರ್ಡ್ ಗಳನ್ನು ಯಾವಾಗ ವಿತರಣೆ ಮಾಡಲಾಗುತ್ತದೆ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಶೀಘ್ರವೇ ಹೊಸ ಪಡಿತರ ಚೀಟಿ(New Ration card) ವಿತರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೌದು,BPL ಕಾರ್ಡ್‌ ನಿರೀಕ್ಷೆಯಲ್ಲಿದ್ದವರಿಗೆ ಶೀಘ್ರದಲ್ಲಿಯೇ ಪಡಿತರ ಚೀಟಿ ವಿತರಣೆ ಮಾಡಲಾಗುತ್ತದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ.

ಹೊಸ ರೇಷನ್ ಕಾರ್ಡ್ ಗಳ ವಿತರಣೆಗೆ ಸರ್ಕಾರ ಮುಂದಾಗಿದೆ :

ಒಟ್ಟಾರೆ 2.95 ಲಕ್ಷ ಜನರು ಪಡೆತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪಡೆತರ ಕಾರ್ಡ್‌ಗಳ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಅರ್ಹರಿಗೆ ಶೀಘ್ರದಲ್ಲೇ ಕಾರ್ಡ್‌ಗಳನ್ನು ನೀಡಲು ಆದೇಶ ಹೊರಡಿಸಿದೆ. ಈ ಹಿಂದೆ ರಾಜ್ಯಾದ್ಯಂತ ಪಡಿತರ ಚೀಟಿ ತಿದ್ದುಪಡಿಗೆ ಸೆಪ್ಟೆಂಬರ್ 1 ರಿಂದ 14 ವರೆಗೆ ಅವಕಾಶ ನೀಡಿದ್ದು, ಈಗ ಮತ್ತೊಮ್ಮೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ.

ಈಗಾಗಲೇ ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು 75% ರಷ್ಟು ಪರಿಶೀಲನಾ ಕಾರ್ಯವು ಮುಗಿದಿದೆ, ಇನ್ನೇನು ಪಡೆತರ ಚೀಟಿಗಳ ಪರಿಶೀಲನೆ ಕಾರ್ಯ ಕೊನೆಗೊಳ್ಳಲಿದ್ದು ಅರ್ಹರಿಗೆ ಕಾರ್ಡ್‌ ವಿತರಣೆ ಮಾಡಲಾಗುವುದು.

ಈ ಹಿಂದೆ ಲಕ್ಷಾಂತರ ಜನರು ಪಡೆತರ ಚೀಟಿಯನ್ನು ತಿದ್ದುಪಡೆ ಮಾಡಲು ಸಲ್ಲಿಸಿದ್ದು, ಹೊಸ ಪಡೆತರ ಚೀಟಿಯನ್ನು ಪಡೆದಿದ್ದಾರೆ ಹಾಗೆ ಮಹಿಳೆಯರು ಗೃಹಲಕ್ಷ್ಮಿ ಯೋಜನೆ(Gruhalakshmi scheme)ಯಡಿಯಲ್ಲಿ ಲಾಭವನ್ನು ಸಹ ಪಡೆದಿದ್ದಾರೆ.

*ಕಲಬುರ್ಗಿ :-67.21 ಕೋಟಿ ನೇರ ನಗದು ವರ್ಗಾವಣೆ

ಆಹಾರ ಇಲಾಖೆಯ ಮೂಲಕ ಅಂತ್ಯೋದಯ ಅನ್ನ ಹಾಗೂ ಆದ್ಯತಾ ಪಡಿತರ ಚೀಟಿಗಳಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ಕೊಡಬೇಕಿತ್ತು. ಆದರೆ ಅಷ್ಟೊಂದು ಪ್ರಮಾಣದ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಆಹಾರ ನಿಗಮವು ನಿರಾಕರಿಸಿದ್ದರಿಂದ ತಲಾ ಐದು ಕೆ.ಜಿ. ಅಕ್ಕಿಯ ಬದಲಾಗಿ ಹಣವನ್ನು ಫಲಾನುಭವಿಗಳ ಖಾತೆಗೆ ಪಾವತಿಸಲಾಗುತ್ತಿದೆ. ಜುಲೈನಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಒಟ್ಟು 3 67.21 ಕೋಟಿ ಹಣವನ್ನು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ 1479702– 25.15 ಕೋಟಿ ಆಗಸ್ಟ್ ತಿಂಗಳಲ್ಲಿ 1642228 ಫಲಾನುಭವಿಗಳಿಗೆ 1 26.69 ಕೋಟಿ ಸೆಪ್ಟೆಂಬರ್ ತಿಂಗಳಲ್ಲಿ 1695109 ಫಲಾನುಭವಿಗಳಿಗೆ 115.36 ಕೋಟಿಯನ್ನು ಪಾವತಿಸಲಾಗಿದೆ.

ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್
(ಜೂಲೈ,ಆಗಸ್ಟ್,ಸೆಪ್ಟೆಂಬರ್ ) ಮೂರು ತಿಂಗಳ ಹಣ ಜಮಾ ಸ್ಟೇಟಸ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಂತರ ಅಲ್ಲಿ ಕಾಣಿಸುವ ತಿಂಗಳನ್ನು ಆಯ್ಕೆ ಮಾಡಿಕೊಂಡು ಕೆಳಗೆ ತೋರಿಸಿರುವ ಆರ್‌ಸಿ ನಂಬರ್ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಜಮಾ ಹಣವನ್ನು ತೋರಿಸುತ್ತದೆ.

https://ahara.kar.nic.in/status1/status_of_dbt_new.aspx

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/K9mNNO3T6FzKJGch4oqd2m

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಹೊಸ ರೇಷನ್ ಕಾರ್ಡ್ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

ಲೇಖನ ಮುಕ್ತಾಯ :-

ತಪ್ಪದೆ ಓದಿರಿ :-

➡️ ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ಹೀಗೆ ಚೆಕ್ ಮಾಡಿಕೊಳ್ಳಿ https://krushivahini.com/2023/10/05/ration-card-amendment-status-check/

➡️ ಅನ್ನಭಾಗ್ಯ ಯೋಜನೆಯ ಜಮಾ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ https://krushivahini.com/2023/09/29/annabhagya-third-installment-money-deposit/

➡️ ಸದ್ಯದಲ್ಲೇ ಈ 28 ಲಕ್ಷ ಜನಕ್ಕೆ ಗೃಹಲಕ್ಷ್ಮಿ ಯೋಜನೆ ಹಣ ಜಮೆಯಾಗುತ್ತದೆ. ನಿಮ್ಮ ಹೆಸರನ್ನು ಇಲ್ಲಿ ಚೆಕ್ ಮಾಡಿಕೊಳ್ಳಿ https://krushivahini.com/2023/10/10/gruha-lakshmi-money-not-received/

➡️ ಎರಡು ತಿಂಗಳು ಆದರೂ ಗೃಹ ಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಖಾತೆಗೆ ಬರುತ್ತಿಲ್ಲ ಈ ಯೋಜನೆ ಸ್ಥಗಿತವಾಗಿದೆ ಎಂದು ಬಿಜೆಪಿ ಹೇಳಿಕೆ. https://krushivahini.com/2023/10/10/bjp-said-that-gruhalakshmi-yojana-has-been-stopped-for-2-months/

➡️ ಗೃಹಲಕ್ಷ್ಮಿ ಹಾಗೂ ಅನ್ನ ಭಾಗ್ಯ ಯೋಜನೆ ಹಣ ಇನ್ನೂ ಜನ ಆಗದಿದ್ದರೆ ಈ ಕೂಡಲೇ ಈ ಕೆಲಸ ಮಾಡಿ ನಿಮ್ಮ ಹಣ ಜಮೆಯಾಗುವುದು ಪಕ್ಕ https://krushivahini.com/2023/10/09/gruhalakshmi-amount-not-deposited-do-this-immediately/

➡️ ಹೊಸದಾಗಿ ಕೋಳಿ ಫಾರಂ ಆರಂಭಿಸಲು ಸರ್ಕಾರದಿಂದ 50% ಹಣ ಪಡೆಯಲು ಅರ್ಜಿ ಅಹ್ವಾನ ಈ ಕೂಡಲೇ ಅರ್ಜಿ ಸಲ್ಲಿಸಿರಿ

https://krushivahini.com/2023/10/10/poultry-farming-subsidy-national-livestock-mission/

Leave a Reply

Your email address will not be published. Required fields are marked *