Distribution of Pahani with land survey map

ಮತ್ತೋಮ್ಮೆ ಭೂ ಸರ್ವೆ ಮಾಡಲು ಸರ್ಕಾರದಿಂದ ಅವಕಾಶ ಸಿಗಲಿದೆಯೇ? ಬನ್ನಿ ಸರ್ಕಾರವು ಹೇಗೆ ಮತ್ತೋಮ್ಮೆ ಭೂ ಸರ್ವೆ ಮಾಡುತ್ತದೆ ಎಂದು ನೋಡೋಣ.

ಪ್ರೀಯ ರೈತರೇ ಸರ್ಕಾರವು ರೈತರ ಪರವಾಗಿ ನಿಂತು ಹಾಗೂ ರೈತರ ಏಳಿಗೆಗೆ ತಮ್ಮದೇ ಆದ ರೀತಿಯಲ್ಲಿ ಸಹಾಯಮಾಡಲು ಸರ್ಕಾರವು ಮುಂದಾಗಿದೆ. ಹಾಗೂ ರೈತರು ಸಹ ಸರ್ಕಾರದ ನಡೆಗಳನ್ನು ಅನುಸರಿಸಿ ತಮ್ಮ ಜಮೀನಿನ ದಾಖಲೆಗಳನ್ನು ಪಡೆಯಬೇಕು.

ಡ್ರೋನ್ ನೆರವಿನಿಂದ ಮರುಭೂಮಾಪನ 150 ವರ್ಷಗಳ ಹಳೇ ದಾಖಲೆಗಳ ಗಣಕೀಕರಣ ಭೂಮಾಲೀಕರಿಗೆ ನಕ್ಷೆಸಹಿತ ಪಹಣಿ ವಿತರಣೆ

ಗಂಗಾಧರ್ ಬೈರಾಪಟ್ಟಣ ರಾಮನಗರ ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನು ಕೆಲವೇ ತಿಂಗಳುಗಳಲ್ಲಿ ನಕ್ಷೆ ಒಳಗೊಂಡ ಪಹಣಿ ಆ‌ಟಿಸಿಗಳು ಭೂ ಮಾಲೀಕರ ಕೈಸೇರಲಿವೆ. ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಕನಕಪುರದ 35 ಕಂದಾಯ ಗ್ರಾಮಗಳ ಆಯ್ಕೆ ಹೊಸತನ ತರಲು ಮುಂದಾಗಿರುವ ಸರ್ಕಾರ ಮರು ಮಾಡುವ ಮೂಲಕ ಭೂಮಾಲೀಕರಿಗೆ ಹಲವು ಅನುಕೂಲಗಳನ್ನು ಕಲ್ಪಿಸಲಿದೆ. ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿ ಇದಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಿದೆ. ಜಮೀನಿನ ನಕ್ಷೆ ಒಳಗೊಂಡ ಪಹಣಿ/ಆ‌ ಟಿಪಿಯನ್ನು ರೈತರಿಗೆ ನೀಡುವುದು, ಅಂದಾಜು 150 ವರ್ಷಗಳ ಹಳೇ ದಾಖಲೆಗಳನ್ನು ಗಣಕೀಕರಣಗೊಳಿಸುವುದೂ ಸೇರಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣಿಗಳನ್ನು ತರಲು

ಇದರಿಂದ ರೈತರಿಗೆ ಅನುಕೂಲ ಏನು?

• ಜಂಟಿ ಬಹು ಮಾಲೀಕತ್ವದ ಜಮೀನುಗಳ ಸರ್ವೇ, ಏಕ ಮಾಲೀಕತ್ವದ / ಪ್ರತ್ಯೇಕ ಆರ್‌ಟಿಸಿ ಸೃಜನೆ.

• ಪೋಡಿ ವಿಳಂಬ ತಪ್ಪಿಸಿ ಮಂಜೂರು ಭೂಮಿಯ ಹಕ್ಕು ದಾಖಲೆ ಒದಗಿಸಬಹುದು

• ಆರ್‌ಟಿಸಿ ಹಕ್ಕುದಾರರು ಮರಣ ಹೊಂದಿದ್ದರೆ ವಾರಸುದಾರರಿಗೆ ಆರ್‌ಟಿಸಿ ಒದಗಿಸಬಹುದು

• 150 ವರ್ಷಗಳ ಹಳೇ ದಾಖಲೆಗಳ ಗಣಕೀಕರಣ

• ನಕ್ಷೆಸಹಿತ ಪಹಣಿ/ಆರ್‌ಟಿಸಿ ವಿತರಣೆ ಯಿಂದ ಒತ್ತುವರಿ ತಡೆಗೆ ಅನುಕೂಲ

• ದಿಶಾಂಕ್ ಆಪ್ ಮೂಲಕ ಜಮೀನಿನ ನಿಖರವಾದ ಗಡಿಯನ್ನು ನೋಡಬಹುದು

• ದೋಷಮುಕ್ತ ಸರ್ವೇ ದಾಖಲೆಗಳ ಸೃಜನೆಗೆ ಅವಕಾಶ

ಮುಂದಾಗಿರುವ ಸರ್ಕಾರ, ಇದಕ್ಕಾಗಿ ಮರು ಭೂಮಾಪನ ಕಾರ್ಯ ಕೈಗೊಂಡಿದೆ.

ಕಾರ್ಯವಿಧಾನ ಹೇಗೆ?:

ಸರ್ವೇ ಆಫ್ ಇಂಡಿಯಾ ರಾಜ್ಯದಲ್ಲಿ ಒಟ್ಟು 49 ಕಡೆಗಳಲ್ಲಿ ಸಿಒಟರ್‌ಎಸ್‌ (ಕಂಟಿನ್ಯೂಯಸ್‌ ಆಪರೇಟಿಂಗ್ ರೆಫರೆನ್ಸ್ ಸಿಸ್ಟಂ) ಬಿಂದುಗಳನ್ನು ಸ್ಥಾಪಿಸಿದ್ದು, ಕನಕಪುರದಲ್ಲಿಯೂ ಇದರ ಕೇಂದ್ರವಿದೆ. ಈ ಕೇಂದ್ರದ ಆಧಾರದಲ್ಲಿ ಅಂದಾಜು 100 ಮೀಟರ್ ಎತ್ತರದಲ್ಲಿ ಡೋನ್ ಬಳಸಿ ಚಿತ್ರ ತೆಗೆದು, ನಂತರ ಅರ್ಥ ರೆಕ್ಟಿಫೈಡ್ ಪರಿವರ್ತಿಸಲಾಗುವುದು. ನಂತರ ರೋವರ್ ಉಪಕರಣಗಳನ್ನು ಬಳಕೆ ಮಾಡಿಕೊಂಡು ಜಮೀನಿನ ಬಿಂದುಗಳನ್ನು ಅಳತೆ ಮಾಡಿ, ಕ್ಯೂ-ಜಿಐಎಸ್‌ ತಂತ್ರಾಂಶ ಬಳಸಿ ನಕ್ಷೆಯನ್ನು ಒಳಗೊಂಡ ಆರ್‌ಟಿಸಿಯನ್ನು ಭೂ ಮಾಲೀಕರಿಗೆ ನೀಡಲಾಗುತ್ತದೆ.

ಎಲ್ಲಿ ಭೂ ಮರುಮಾಪನ?:-

ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ 35 ಕಂದಾಯ ಗ್ರಾಮಗಳನ್ನು ಪ್ರಾಯೋಗಿಕ ಭೂ ಮರು ಮಾಪನಕ್ಕೆ ಆಯ್ಕೆ ಮಾಡಲಾಗಿದೆ. ರೈತರು ಸಹ ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ರೈತರು ಸರ್ಕಾರದ ನಿಯಮಗಳನ್ನು ಅನುಸರಿಸಿ ರೈತರಿಗೆ ಒಳ್ಳೆ ತಂತ್ರಜ್ಞಾನ ಬಳಕೆ ಆಗಬೇಕು ಎಂದು ಸರ್ಕಾರವು ಸಹ ರೈತರ ಪರವಾಗಿ ನಿಂತು ಕೆಲಸ ಮಾಡುತ್ತಿದೆ.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/K9mNNO3T6FzKJGch4oqd2m

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಭೂ ಸರ್ವೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ.

ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini)ಜಾಲತಾಣದ ಸಂಪರ್ಕಿದಲ್ಲಿರಿ..ಸದಾ ರೈತರ ಸೇವೆಯಲ್ಲಿ..

Leave a Reply

Your email address will not be published. Required fields are marked *