Crop loan repayment for drought declared farmers
ಬೆಂಗಳೂರು: ಬರಗಾಲದಿಂದ ತತ್ತರಿಸಿರುವ ಅನ್ನದಾತರಿಗೆ ಆಸರೆಯಾಗಲು ಬ್ಯಾಂಕ್‌ಗಳು ಮುಂದೆ ಬಂದಿದ್ದು, ಸಾಲ ಮರು ಪಾವತಿ ಹೊರೆಗೆ ತಾತ್ಕಾಲಿಕ ರಿಲೀಫ್ ಸಿಗಲಿದೆ !. ಅರ್ಹ ರೈತರ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸಾಲ(crop loan) ಗಳನ್ನು ಪುನರ್ ರಚಿಸಬೇಕೆಂಬ ಸೂಚನೆ ರವಾನೆಯಾಗಿದೆ.
ಇದರಿಂದಾಗಿ ಅಲ್ಪಾವಧಿ ಸಾಲಗಳು ದೀರ್ಘಾವಧಿ ಸಾಲದ ರೂಪದಲ್ಲಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ರಿಸರ್ವ್ ಬ್ಯಾಂಕ್ ಆ್ ಇಂಡಿಯಾ(Reserve bank of India) ನಿರ್ದೇಶನದಂತೆ ಪರಿಹಾರ ಕ್ರಮಗಳನ್ನು ಬ್ಯಾಂಕ್‌ಗಳು ಕೈಗೊಳ್ಳಲಿವೆ.
ಮುಂಗಾರು ಮಳೆ ವೈಲ್ಯ, ತೀವ್ರತರ ಶುಷ್ಕ ವಾತಾವರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ(State government) ಬರ ಪೀಡಿತ ತಾಲೂಕುಗಳು ಎಂದು ಘೋಷಿಸಿ, ಅಗತ್ಯ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
ಎಸ್‌ಎಲ್‌ಬಿಸಿ(SLBC) ವಿಶೇಷ ಸಭೆ ನಿರ್ಧಾರ:-
ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಆಯುಕ್ತರಾದ ಡಾ.ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ (ಎಸ್‌ಎಲ್‌ಬಿಸಿ) ವಿಶೇಷ ಸಭೆ ನಡೆದು, ಅರ್ಹ ರೈತರ ಸಾಲಗಳ ಮರು ರಚನೆ ತೀರ್ಮಾನ ತೆಗೆದುಕೊಂಡಿದೆ.
ಕೃಷಿ, ತೋಟಗಾರಿಕೆ ಬೆಳೆಗಳ ನಷ್ಟದ ಆಧಾರದಲ್ಲಿ ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳು ಎಂದು ಘೋಷಿಸಿ, ನೈಸರ್ಗಿಕ ವಿಕೋಪ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ. ಈಗಾಗಲೇ 161 ತೀವ್ರ, 34 ಸಾಧಾರಣ ಬರಪೀಡಿತ ತಾಲೂಕಗಳನ್ನು ಗುರುತಿಸಿದ್ದು, ಇನ್ನೂ 21 ತಾಲೂಕುಗಳನ್ನು ಬರ ಪೀಡಿತಪಟ್ಟಿಗೆ ಸೇರಿಸಲು ತಯಾರಿ ನಡೆಸಿದೆ. ಮತ್ತೆ 43 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿದ್ದಾರೆ ಅದರಲ್ಲಿ 21 ಸಾಧಾರಣ ಹಾಗೂ 22 ಘೋಷಣೆಯನ್ನು ಈಗಾಗಲೇ ಮಾಡಿದ್ದಾರೆ.
ಸರ್ಕಾರ ಕೈಗೊಳ್ಳಲಿರುವ ಪರಿಹಾರ ಕ್ರಮಗಳನ್ನು ವಿಸ್ತರಿಸುವ ಭಾಗವಾಗಿ ಅರ್ಹ ರೈತರ ಸಾಲಗಳ ಪುನರ್ ರಚಿಸಬೇಕು ಎಂದು ತೀರ್ಮಾನಿಸಿದ್ದು, ಸೂಕ್ತ ಕ್ರಮವಹಿಸುವಂತೆ ಎಲ್ಲ ಶೆಡ್ಯೂಲ್ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಆರ್‌ಆರ್‌ಬಿಗಳಿಗೆ(RRB) ಸಭೆ ನಡವಳಿ ಸಹಿತ ಸೂಚನೆ ರವಾನಿಸಲಾಗಿದೆ.
ಪರಿಹಾರ ಕ್ರಮ ಕೈಗೊಳ್ಳುವಾಗ ಆರ್‌ಬಿಐ ನಿರ್ದೇಶನವನ್ನು ಪಾಲಿಸಬೇಕು ಎಂದು ಈ ಬ್ಯಾಂಕ್ ಶಾಖೆಗಳು ಮತ್ತು ಆರ್‌ಆರ್‌ಬಿಗಳಿಗೆ ತಿಳಿಸುವಂತೆ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದು ಎಸ್‌ಎಲ್‌ಬಿಸಿ ಉಸ್ತುವಾರಿ ಸಂಚಾಲಕ ಬಿ.ಪಾರ್ಶ್ವನಾಥ್ ತಿಳಿಸಿದ್ದಾರೆ.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತ
https://chat.whatsapp.com/HLCYrALalJpLbeEMnLRyZB
ಬೆಳೆ ಸಾಲ ಮರು ಪಾವತಿ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬೆಳೆ ಸಾಲ ಮರು ಪಾವತಿ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಜಾಲತಾಣದ ಸಂಪರ್ಕ ದಲ್ಲಿರಿ..ಸದಾ ರೈತರ ಸೇವೆಯಲ್ಲಿ.
➡️ ಈ ಜಿಲ್ಲೆಯ ರೈತರಿಗೆ ಸದ್ಯದಲ್ಲೇ 6 ಕೋಟಿ ಪರಿಹಾರ ಹಣ ಜಮೆಯಾಗಲಿದೆ. ನಿಮ್ಮ ತಾಲೂಕಿಗೆ ಎಷ್ಟು ಪರಿಹಾರ ಹಣ ಬರುತ್ತದೆ ಇಲ್ಲಿ ಚೆಕ್ ಮಾಡಿಕೊಳ್ಳಿ https://krushivahini.com/2023/10/15/6-4-crore-crop-loss-compensation/
➡️ ಪಿಎಂ ಕಿಸಾನ್ ಯೋಜನೆಯ ಹಣ ಹೆಚ್ಚಳ ಈ ಕೆಲಸ ಮಾಡಿದವರಿಗೆ ಮಾತ್ರ ಹಣ ಜಮೆಯಾಗುತ್ತದೆ https://krushivahini.com/2023/10/14/pm-kisan-yojana-money-increased/
➡️ ಕೃಷಿ ಪಂಪ್ಸೆಟ್ ಗಳಿಗೆ ಐದು ತಾಸು ವಿದ್ಯುತ್ ಪೂರೈಕೆ ಮಾಡಬೇಕೆಂದು ಸಿಎಂ ಖಡಕ್ ವಾರ್ನಿಂಗ್ https://krushivahini.com/2023/10/14/continuous-5-hour-power-supply/
➡️ 216 ತಾಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಿದ ಸಿಎಂ ಸಿದ್ದರಾಮಯ್ಯ ನಿಮ್ಮ ತಾಲೂಕು ಇದೆ ಚೆಕ್ ಮಾಡಿಕೊಳ್ಳಿ https://krushivahini.com/2023/10/13/baragala-talukugalu/
➡️ ಈ ಕೆಲಸ ಮಾಡಿದವರಿಗೆ ಮಾತ್ರ ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಹಣ ಜಮೆಯಾಗುತ್ತದೆ ಈ ಕೂಡಲೇ ಮೊಬೈಲ್ನಲ್ಲಿ ಈ ಕೆಲಸ ಮಾಡಿ https://krushivahini.com/2023/10/12/fruits-id/
➡️ ರಾಜ್ಯದಲ್ಲಿ ಮತ್ತೆ ಏರಿಕೆ ಖಂಡ ಅಡಿಕೆ ಧಾರಣೆ ಇಂದಿನ ಮಾರುಕಟ್ಟೆ ವಿವರಗಳನ್ನು ಇಲ್ಲಿ ಪಡೆಯಿರಿ
https://krushivahini.com/2023/10/13/arecanut-price-increased/