Baragala samikshe 2023:- ಆತ್ಮೀಯ ರೈತರೇ ಕೇಂದ್ರದಿಂದ ಬರ ಪರಿಕ್ಷಣೆ (drought verification)ಮಾಡಲು ಅಂದರೆ ಕೇಂದ್ರದಿಂದ ಬರ ಪರಿಶೀಲನೆ ಮಾಡಲು ರಾಜ್ಯಕ್ಕೆ ಸುಮಾರು 30 ಜನರನ್ನು ಕಳಿಸಿಕೊಟ್ಟಿದೆ,

ಇದರಲ್ಲಿ ಮತ್ತೆ ನಮ್ಮ ಮುಖ್ಯಮಂತ್ರಿಗಳು ಅವರೊಂದಿಗೆ ಸಭೆ ನಡೆಸಿ ಮತ್ತು ಬೇರೆ ಬೇರೆ ಜನರಿಗೆ ಬೇರೆ ಬೇರೆ ಪ್ರದೇಶಗಳಲ್ಲಿ ಬರ ಸಮೀಕ್ಷೆ ಮಾಡಲು ಕಳುಹಿಸಿದ್ದಾರೆ.ಈಗಾಗಲೇ ಎರಡು ದಿನ ಆಗಿದೆ ಈ ಎರಡು ದಿನಗಳ ಮಾಹಿತಿ ಪ್ರಕಾರ ಸ್ವಲ್ಪ ಮಟ್ಟಿಗೆ ಈಗಾಗಲೇ ಪರಿಶೀಲನೆ ಮುಗಿದಿದೆ ಮತ್ತು ಇನ್ನೂ ಬಹಳಷ್ಟು ಪರಿಶೀಲನೆ ಮಾಡುವುದು ಬಾಕಿ ಇದೆ.

ಏಕೆಂದರೆ ಕೇಂದ್ರ ಸರಕಾರದ ಬರ ನಿರ್ಧಾರ ಮಾಡಬೇಕಾದರೆ ಕೆಲವೊಂದು ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.ಏಕೆಂದರೆ ಸಾಮಾನ್ಯವಾಗಿ ಕರ್ನಾಟಕಕ್ಕೆ ಬರಗಾಲ (Karnataka baragala announced taluks)ಎಂದು ಘೋಷಣೆ ಮಾಡಿದರೆ ಮಾತ್ರಕ್ಕೆ ಕೇಂದ್ರ ಸರ್ಕಾರವು ಹಣ ನೀಡುವುದಿಲ್ಲ ಸ್ವತಹ ತಾವು ಪರಿಶೀಲನೆ ಮಾಡಿ ಯಾವ ಯಾವ ಪ್ರದೇಶಗಳಲ್ಲಿ ನಿಜವಾಗಿಯೂ ಮಳೆಯಾಗಿಲ್ಲ ಮತ್ತು ಬೆಳೆಗಳು ಯಾವ ಹಂತದಲ್ಲಿವೆ ಎಂಬುದನ್ನು ತೆಗೆದುಕೊಂಡು ಕೇಂದ್ರದ ಎನ್ ಡಿ ಆರ್ ಎಫ್(NDRF) ಮಾನದಂಡಗಳನ್ನು ಪಾಲಿಸಿ ಬರ ಘೋಷಣೆ ಮಾಡಲಾಗುತ್ತದೆ.

ಎಲ್ಲಾ ತಾಲೂಕುಗಳು ಬರ ಘೋಷಣೆಯಲ್ಲಿ ಬರುತ್ತವೆ ಎಂಬುದನ್ನು ಹೇಳಲಾಗದು ಏಕೆಂದರೆ ಕೇಂದ್ರದ ಮಾನದಂಡಗಳು ಬೇರೆ ಬೇರೆ ಆಗಿರುತ್ತದೆ ಮತ್ತು ರಾಜ್ಯ ಸರ್ಕಾರದ ಮಾನದಂಡಗಳು ಬೇರೆ ಬೇರೆ ಆಗಿರುತ್ತವೆ.

ಹೀಗಾಗಿ ಈಗಾಗಲೇ ಬಾಗಲಕೋಟೆ, ಬಳ್ಳಾರಿಯಲ್ಲಿ ಬಹಳಷ್ಟು ತಾಲೂಕುಗಳು ಬರಗಾಲ ಪಟ್ಟಿಯಲ್ಲಿ ಬರಬಹುದು ಎಂದು ಎರಡು ದಿನಗಳ ಸಮೀಕ್ಷೆ ಪ್ರಕಾರ ತಿಳಿದು ಬಂದಿದೆ. ಇದಾದ ನಂತರ ಉಳಿದ ಜಿಲ್ಲೆಗಳಲ್ಲಿಯೂ ಸಮೀಕ್ಷೆ ನಡೆಯುತ್ತಿದೆ ಆದರೆ ಇನ್ನೂ ಪ್ರತ್ಯೇಕವಾದ ಯಾವ ತಾಲೂಕುಗಳು ಬರ ಪಟ್ಟಿಯಲ್ಲಿ ಬರಬಹುದು ಎಂದು ತಿಳಿಸಿಲ್ಲ ಆದರೆ ಇನ್ನೆರಡು ಮೂರು ದಿನಗಳಲ್ಲಿ ಅದರ ಮಾಹಿತಿಯು ಲಭ್ಯವಾಗುತ್ತದೆ ಅದನ್ನು ನಾವು ನಿಮ್ಮೊಂದಿಗೆ ಮತ್ತೊಮ್ಮೆ ತರಿಸಲು ಪ್ರಯತ್ನಿಸುತ್ತೇವೆ.

ಬರಗಾಲದ ಪರಿಹಾರ ಹಣ ಬರಬೇಕಾದರೆ ರೈತರು ಏನು ಮಾಡಬೇಕು ಇಲ್ಲಿ ನೋಡಿ??

ಬೆಳೆ ಸಮೀಕ್ಷೆ ಸರಿಯಾದ ರೀತಿಯಲ್ಲಿ ಬೆಳೆ ಸಮೀಕ್ಷೆ ಮಾಡಬೇಕು ಬೆಳೆ ಪರಿಹಾರದ ಕೇಂದ್ರ ತಂಡವು ಬೆಳೆ ಸಮೀಕ್ಷೆಗೆ ಬರುತ್ತಿರುವ ಕಾರಣ ಅಂದರೆ ನೀವು ಸ್ವತಂತ್ರವಾಗಿ ಮೊಬೈಲ್ ನಲ್ಲಿಯೇ ಬೆಳೆ ಸಮೀಕ್ಷೆ ಮಾಡುವ ಅವಕಾಶ ಈಗಾಗಲೇ ಕಳೆದ ಎರಡು ವರ್ಷಗಳಿಂದ ಅವಕಾಶವನ್ನು ಕಲ್ಪಿಸಲಾಗಿದೆ.

ಹೀಗಾಗಿ ಪ್ರತಿಯೊಂದು ಬೆಳೆ ದಾಖಲೆಗಳನ್ನು ಸರಿಯಾಗಿ ನಮೂದಿಸಿ ಒಂದು ವೇಳೆ ನಿಮ್ಮಲ್ಲಿ ಪ್ರಸ್ತುತ ಇರುವ ಬೆಳೆಯು ಮತ್ತು ಬೆಳೆ ಸಮೀಕ್ಷೆಯಲ್ಲಿ ಬರೆದಿರುವ ಬೆಳೆಯು ವಿಸ್ತೀರ್ಣ ಆಗಲಿ ಅಥವಾ ಬೆಳೆಯನ್ನೇ ಬದಲಾವಣೆಯಾಗಿಕೊಂಡರೆ ಖಂಡಿತವಾಗಿಯೂ ಈ ಬರಗಾಲದ ಪರಿಹಾರ ಆಗಿರಬಹುದು ಮತ್ತು ಬೆಳೆ ವಿಮೆ ಆಗಿರಬಹುದು 2 ಸೌಲಭ್ಯಗಳಿಂದ ನೀವು ವಂಚಿತರಾಗಬಹುದು ಅಂದರೆ ನಿಮಗೆ ಆ ಪರಿಹಾರ ಹಣವು ಬರುವುದಿಲ್ಲ ಹೀಗಾಗಿ ಈ ಬಾರಿ ಬೆಳೆ ಸಮೀಕ್ಷೆ ಅತ್ಯಂತ ಕಟ್ಟುನಿಟ್ಟಿನಿಂದಾಗಿ ಮಾಡಬೇಕು ಇದರಿಂದಾಗಿ ನಿಮಗೆ ಲಾಭವಿದೆ..

ಬೆಳೆ ಸಮೀಕ್ಷೆ ಪ್ರಯೋಜನಗಳ ವಿವರ:1. ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ರೈತರೇ ದಾಖಲಿಸಬಹುದಾಗಿದೆ.2. ಸದರಿ ಬೆಳ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ, ಕೃಷಿ ಸಾಲ ಸೌಲಭ್ಯ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ರೈತರಿಗೆ ಒದಗಿಸಲು ಮತ್ತು RTC ಯಲ್ಲಿ ಬೆಳೆ ಮಾಹಿತಿ ಅಳವಡಿಸಲು ಬಳಸಲಾಗುತ್ತದೆ.

ಬೆಳೆ ಸಮೀಕ್ಷೆ ಮಾಡುವ ವಿಧಾನ:-

ರೈತರ ಪೂರ್ವ ಮುಂಗಾರು ಬೆಳೆ ಸಮೀಕ್ಷೆ 2023-24 ಆ್ಯಪ್‌ ಅಂದರೆ ಈ ಕೆಳಗೆ ಕೊಟ್ಟಿರುವ ಲಿಂಕನ್ನು ಉಪಯೋಗಿಸಿಕೊಂಡು ಪ್ಲೇ ಸ್ಟೋರ್ ನಲ್ಲಿ ಮೊದಲು ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

https://play.google.com/store/apps/details?id=com.csk.farmer23_24.cropsurvey ಡೌನ್ಲೋಡ್ ಮಾಡಿಕೊಂಡ ನಂತರ ಅಲ್ಲಿ ತೋರಿಸುವ ಮುಖಪುಟದಲ್ಲಿ ತಮ್ಮ ಆಧಾರ್ ಕಾರ್ಡ್ ನ ಮೂಲಕ EKYC ಪ್ರಕ್ರಿಯೆ ಪೂರ್ಣಗೊಳಿಸಿ ನೊಂದಾಯಿಸಿಕೊಂಡು ತಮ್ಮ ಜಮೀನಿನ ವಿವರಗಳನ್ನು ನಿಮ್ಮ ಹೊಲದ ಸರ್ವೆ ನಂಬರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕು. ಆನಂತರ ತಮ್ಮ ಜಮೀನುಗಳಿಗೆ ತೆರಳಿ ಸಂಬಂಧಪಟ್ಟ ಸರ್ವೆ ನಂಬರ್ ನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರಗಳನ್ನು ತೆಗೆದು ಅಪ್ ಲೋಡ್ ಮಾಡಬೇಕು..

ಈ ಮೇಲಿನ ಮುಖಪುಟದಲ್ಲಿ ಕಾಣುವಹಾಗೆ ನಿಮ್ಮ ಬೆಳೆ ಸಮೀಕ್ಷೆಯ ಛಾಯಾಚಿತ್ರವು ಸರಿಯಾಗಿದ್ದು ಬರಗಾಲ ಸಮೀಕ್ಷೆಯ ತಂಡವು ಇದಕ್ಕೆ ಅನುಮತಿ ಕೊಟ್ಟಲ್ಲಿ ಮಾತ್ರ ನಿಮಗೆ ಬೆಳೆ ಹಾನಿ ಬೆಳೆಯುವ ಇಂತಹ ಪರಿಹಾರ ಹಣ ಜಮಯಾಗುತ್ತವೆ.

ನಿಮ್ಮ ಬೆಳೆ ಸಮೀಕ್ಷೆಯ ಸ್ಟೇಟಸ್ ಹೀಗೆ ಚೆಕ್ ಮಾಡಿರಿ :

ಹಂತ 1) ಮೊದಲಿಗೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮೂಲಕ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

https://play.google.com/store/apps/details?id=com.crop.offcskharif_2021

ಹಂತ 2) ಈ ಮೇಲೆ ಕಾಣಿಸಿದ ಆಪನ್ನು ಡೌನ್ಲೋಡ್ ಮಾಡಿದ ನಂತರ ವರ್ಷ, ಋತು,ಜಿಲ್ಲೆಯ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರನ್ನು ಅಲ್ಲಿ ನಮೂದಿಸಿ ನಂತರ ವಿವರ ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಿ. ಈ ಮುಖಪುಟದಲ್ಲಿ ಕೆಳಗೆ ತೋರಿಸುವ ಹಾಗೆ ನಿಮ್ಮ ಗ್ರಾಮದ ಬೆಳೆ ಸಮೀಕ್ಷೆ ಗಾರರ ವಿವರ. ಅಥವಾ ನಿಮ್ಮ ಬೆಳೆ ಸಮೀಕ್ಷೆಯ ಸಂಪೂರ್ಣ ವಿವರವನ್ನು ಪಡೆಯಿರಿ.

ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..

https://landrecords.karnataka.gov.in/PariharaPayment/

ನಿಮ್ಮ ಪರಿಹಾರ ಹಣ ಸಂದಾಯವಾಗಿದೆ ಇಲ್ಲ ಇಲ್ಲಿ ಚೆಕ್ ಮಾಡಿಕೊಳ್ಳಿ calamity type ಹಾಗೂ year select ಮಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ captcha ಎಂಟ್ರಿ ಮಾಡಿ fetch details ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಪರಿಹಾರ ಹಣದ ಎಲ್ಲ ವಿವರಗಳನ್ನು ಇಲ್ಲಿ ಪಡೆಯಿರಿ..

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ https://chat.whatsapp.com/HLCYrALalJpLbeEMnLRyZB

ಲೇಖನ ಮುಕ್ತಾಯ :-

ತಪ್ಪದೆ ಓದಿರಿ :-

➡️ ಈ ಜಿಲ್ಲೆಯ ರೈತರಿಗೆ ಸದ್ಯದಲ್ಲೇ 6 ಕೋಟಿ ಪರಿಹಾರ ಹಣ ಜಮೆಯಾಗಲಿದೆ. ನಿಮ್ಮ ತಾಲೂಕಿಗೆ ಎಷ್ಟು ಪರಿಹಾರ ಹಣ ಬರುತ್ತದೆ ಇಲ್ಲಿ ಚೆಕ್ ಮಾಡಿಕೊಳ್ಳಿ https://krushivahini.com/2023/10/15/6-4-crore-crop-loss-compensation/

➡️ ಪಿ ಎಂ ಕಿಸಾನ್ ಯೋಜನೆಯ ಹಣ ಹೆಚ್ಚಳ ಎಷ್ಟು ಹಣ ಸಿಗುತ್ತದೆ?? ಈ ಕೆಲಸ ಮಾಡಿದವರಿಗೆ ಮಾತ್ರ ಹಣ ಸಿಗುತ್ತದೆ https://krushivahini.com/2023/10/14/pm-kisan-yojana-money-increased/

➡️ ಕೃಷಿ ಪಂಸೆಟ್ ಗಳಿಗೆ 5 ತಾಸು ಕೊಡುವುದಾಗಿ ಘೋಷಣೆ ಮಾಡಿದ ಸಿಎಂ https://krushivahini.com/2023/10/14/continuous-5-hour-power-supply/

➡️ 216 ತಾಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಿದ ಸಿಎಂ ಸಿದ್ದರಾಮಯ್ಯ ನಿಮ್ಮ ತಾಲೂಕು ಇದೆ ಚೆಕ್ ಮಾಡಿಕೊಳ್ಳಿ https://krushivahini.com/2023/10/13/baragala-talukugalu/

➡️ ಅನುಗ್ರಹ ಯೋಜನೆಯ ಅಡಿ ಜಾನುವಾರುಗಳು ಮರಣ ಹೊಂದಿದರೆ ಕರ್ನಾಟಕ ಸರ್ಕಾರದಿಂದ 10,000/- ಸಹಾಯಧನ ಕೊಡುತ್ತಾರೆ https://krushivahini.com/2023/10/12/anugraha-yojana-subsidy/

➡️ ಬರಗಾಲ ಘೋಷಿತ ರೈತರಿಗೆ ಬೆಳೆ ಸಾಲ ಮರುಪಾವತಿ ಬಗ್ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ ಇಲ್ಲಿದೆ ಮಹತ್ವದ ಮಾಹಿತಿ ತಪ್ಪದೆ ತಿಳಿಯಿರಿ https://krushivahini.com/2023/10/11/crop-loan-repayment-for-drought-declared-farmers/

➡️ ಹೊಸ ಪಡಿತರ ಚೀಟಿಯನ್ನು ಈ ದಿನ ವಿತರಿಸಲಾಗುತ್ತದೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ ಬಿಡುಗಡೆ https://krushivahini.com/2023/10/11/new-ration-card-will-be-distributed-on-this-day/

➡️ ಕೋಳಿ ಫಾರಂ ಹೊಸದಾಗಿ ಪ್ರಾರಂಭಿಸಲು ಸರ್ಕಾರದಿಂದ 50% ಸಹಾಯಧನ ಈ ಕೂಡಲೇ ಅರ್ಜಿ ಸಲ್ಲಿಸಿ https://krushivahini.com/2023/10/10/poultry-farming-subsidy-national-livestock-mission/

➡️ ಮತ್ತೆ 43 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ ರಾಜ್ಯ ಸರ್ಕಾರ 21 ಸಾಧಾರಣ 22 ಬಲಪೀಡಿತ ತಾಲೂಕುಗಳು https://krushivahini.com/2023/10/09/bargala-declared-for-43-talukas/

Leave a Reply

Your email address will not be published. Required fields are marked *