Gadag farmer’s says to stop guarante schemes- ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮದಲ್ಲಿ ಕೇಂದ್ರ ಅಧ್ಯಯನ ತಂಡ ಬರ ಪರಿಶೀಲನೆ ನಡೆಸಿದ ಬಳಿಕ ರೈತ ಮಹಿಳೆಯರು ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು. “ನಮಗೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ ಇದ್ಯಾವುದು ಬೇಡ”. ಸರ್ಕಾರ ನಮ್ಮ ಸಾಲಮನ್ನಾ ಮಾಡಲಿ, ನಮ್ಮನ್ನು ಬದುಕಿಸಬೇಕು” ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗಳು ಬೇಡ, ಸಾಲ ಮನ್ನಾ ಮಾಡಿ ಸಾಕು ಎಂದು ಕಣ್ಣೀರಿಟ್ಟ ರೈತ ಮಹಿಳೆ
ಗದಗ (ಅಕ್ಟೋಬರ್.06):- ರಾಜ್ಯದ 195 ತಾಲೂಕುಗಳಲ್ಲಿ ಬರ (Drought) ಆವರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬರ ಅಧ್ಯಯನ (Central Drought Study) ತಂಡ ರಾಜ್ಯಕ್ಕೆ ಆಗಮಿಸಿದ್ದು, ಕೇಂದ್ರ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ ನೇತೃತ್ವದಲ್ಲಿ ಅಧ್ಯಯನ ನಡೆಯುತ್ತಿದೆ. ಅಧಿಕಾರಿಗಳು ಶುಕ್ರವಾರ ಲಕ್ಷ್ಮೇಶ್ವರ ತಾಲೂಕಿನ ಹುಲಗೇರಿ, ಇಟ್ಟಿಗೇರಿ ಕೆರೆ, ದೊಡ್ಡೂರು, ಸೂರಣಗಿ, ಶಿರಹಟ್ಟಿ ತಾಲೂಕಿನ ಚಿಕ್ಕಸವನೂರು, ಬೆಳ್ಳಟ್ಟಿ, ವಡವಿ, ಛಬ್ಬಿ, ದೇವಿಹಾಳ, ಶೆಟ್ಟಿಕೇರಿ ಮತ್ತು ಗದಗ ತಾಲೂಕಿನ ಮುಳಗುಂದದಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸುತ್ತಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮದಲ್ಲಿ ಕೇಂದ್ರ ಅಧ್ಯಯನ ತಂಡ ಬರ ಪರಿಶೀಲನೆ ನಡೆಸಿದ ಬಳಿಕ ರೈತ ಮಹಿಳೆಯರು ಅಧಿಕಾರಿಗಳ ಎದರು ಗೋಳು ತೋಡಿಕೊಂಡರು. “ನಮಗೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ ಇದ್ಯಾವುದು ಬೇಡ”. ಸರ್ಕಾರ ನಮ್ಮ ಸಾಲ ಮನ್ನಾ ಮಾಡಿ, ನಮ್ಮನ್ನು ಬದುಕಿಸಬೇಕು” ಎಂದು ಆಗ್ರಹಿಸಿದರು.
ಮಳೆ ಇಲ್ಲದೆ ಬೆಳೆ ನಾಶವಾಗಿದ್ದು ಭೀಕರ ಬರಗಾಲ ಆರಂಭವಾಗಿದೆ. ಸಾಲ ಮಾಡಿ ಹೆಸರು, ಹತ್ತಿ, ಗೋವಿನ ಜೋಳ ಬಿತ್ತನೆ ಮಾಡಿದ್ದೇವೆ. ಮಳೆ ಇಲ್ಲದೆ ಬೆಳೆಗಳೆಲ್ಲಾ ಹಾಳಾಗಿದ್ದು ತುಂಬಾ ತೊಂದರೆ ಆಗುತ್ತಿದೆ. ಭೀಕರ ಬರಕ್ಕೆ ನಾವು ಕಂಗಾಲಾಗಿದ್ದೇವೆ. ನಮ್ಮ ಬದುಕು ಚಿಂತಾಜನಕವಾಗಿದೆ. ನಾವು ತೀವ್ರ ಸಂಕಷ್ಟದಲ್ಲಿದ್ದೇವೆ ಎಂದು ಅಳಲು ತೋಡಿಕೊಂಡರು.
ಮಕ್ಕಳು ಮದುವೆ ಬಂದಿದ್ದಾರೆ. ಮದುವೆ ಮಾಡಬೇಕು ಅಂದ್ರೆ ಕನ್ಯಾ ಸಿಗುತ್ತಿಲ್ಲ. ಭೀಕರ ಬರ ಇದೆ. ನಿಮ್ಮ ಹೊಲದಲ್ಲಿ ಏನಿದೆ ಅಂತ ಕೇಳುತ್ತಾರೆ. ಹೀಗಾಗಿ ನಮ್ಮ ಬದುಕು ಸಂಕಷ್ಟದಲ್ಲಿದೆ. ರೈತ ಕುಟುಂಬಗಳಿಗೆ ಎಲ್ಲಿ ಪ್ರಯಾಣ ಮಾಡಲು ಆಗುತ್ತೆ? ಎರಡು ಸಾವಿರ ಯಾವುದಕ್ಕೆ ಸಾಲುತ್ತೆ ? ಚೆನ್ನಾಗಿ ಮಳೆ ಬೆಳೆ ಆದರೆ ಮನಗೆ ಏನೂ ಬೇಡ. ಈ ಯೋಜನೆಗಳ ಬದಲು ರೈತರ ಸಾಲ ಮನ್ನಾ ಮಾಡಬೇಕು. ಕೂಡಲೇ ಬರ ಪರಿಹಾರ ನೀಡಿ ನಮ್ಮನ್ನು ಬದುಕಿಸಬೇಕು. ಇಲ್ಲಾಂದ್ರೆ ನೇಣು ಹಾಕಿಕೊಂಡು ಸಾಯುವುದು ಬಾಕಿ ಇದೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್:-
(ಜೂಲೈ,ಆಗಸ್ಟ್,ಸೆಪ್ಟೆಂಬರ್ ) ಮೂರು ತಿಂಗಳ ಹಣ ಜಮಾ ಸ್ಟೇಟಸ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಂತರ ಅಲ್ಲಿ ಕಾಣಿಸುವ ತಿಂಗಳನ್ನು ಆಯ್ಕೆ ಮಾಡಿಕೊಂಡು ಕೆಳಗೆ ತೋರಿಸಿರುವ ಆರ್‌ಸಿ ನಂಬರ್ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಜಮಾ ಹಣವನ್ನು ತೋರಿಸುತ್ತದೆ.
https://ahara.kar.nic.in/status1/status_of_dbt_new.aspx
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿhttps://chat.whatsapp.com/K9mNNO3T6FzKJGch4oqd2m
ತಪ್ಪದೆ ಓದಿರಿ :-
ಈ ಜಿಲ್ಲೆಗೆ ಶೇಕಡ 25% ಮಧ್ಯಂತರ ಬೆಳೆ ವಿಮೆ ಬಿಡುಗಡೆ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ https://krushivahini.com/2023/10/01/release-of-interim-crop-insurance/
ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಲಕ್ಷ್ಮಿ ಮುಂದಿನ ಕಂತನ ಹಣ ಜಮಾ ಆಗುತ್ತದೆ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ https://krushivahini.com/2023/10/06/gruha-lakshmi-money-status/