ಗೃಹ ಲಕ್ಷ್ಮಿ ಮುಂದಿನ ಕಂತಿನ ಹಣ ಇವರಿಗೆ ಮಾತ್ರ ಬರುತ್ತದೆ. ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಹಣ ತಮ್ಮ ಖಾತೆಗೂ ಬರಬೇಕು ಎನ್ನುವ ಮಹಿಳೆಯರ ನಿರೀಕ್ಷೆ ಹೆಚ್ಚಾಗಿದೆ. ಇದಕ್ಕಾಗಿ ಹೇಗಾದರೂ ಹಣ ಪಡೆಯಬೇಕು ಅಂತ ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ದಿನವು ಬ್ಯಾಂಕ್ ನಿಂದ ಬ್ಯಾಂಕ್ ಗೆ ಸೇವಾ ಕೇಂದ್ರಗಳಿಗೆ ಮಹಿಳೆಯರು ಹಾಗೂ ಅವರ ಮನೆಯವರು ಅಲೆದಾಡುತ್ತಿದ್ದಾರೆ.

ಸರ್ಕಾರ ತಿಳಿಸಿರುವ ಪ್ರಕಾರ ಈಗಾಗಲೇ ಸುಮಾರು 65% ಮಹಿಳೆಯರಿಗೆ ಮೊದಲ ಕಂತಿನ ಹಣ ಜಮಾ ಆಗಿದೆ ಆದರೆ ಇನ್ನೂ 35% ನಷ್ಟು ಮಹಿಳೆಯರಿಗೆ ಹಣ ಸಿಕ್ಕಿಲ್ಲ. ಗೃಹ ಲಕ್ಷ್ಮಿ ಯೋಜನೆಯ ಜಾರಿಯಾಗಿ ಒಂದು ತಿಂಗಳು ಆದರೂ ಇನ್ನೂ 35% ಜನಕ್ಕೆ ಹಣ ಸಿಕ್ಕಿಲ್ಲ.

ಮೊದಲನೆಯದಾಗಿ ಈ ಕೆಳಗಡೆ ಕೊಟ್ಟ ಲಿಂಕನ್ನು ಒತ್ತಬೇಕು..

https://ahara.kar.nic.in/Home/EServices

ನಂತರ ಈ ಕೆಳಗಡೆ ತೋರಿಸುವ ಹಾಗೆ ಮುಂದುವರೆಯಬೇಕು.

ನಂತರ ಈ ಕೆಳಗಡೆ ತೋರಿಸುವ ಹಾಗೆ ಮುಖಪುಟ ಬರುತ್ತದೆ ಅದರಲ್ಲಿ e-Ration card ಒತ್ತಿ ಅಲ್ಲೇ ಕೆಳಗಡೆ ತೋರಿಸುವ show village list ಅದನ್ನು ಒತ್ತಿದ ನಂತರ ಮುಂದೆ ಬರುವ ಮುಖಪುಟದಲ್ಲಿ

ಮುಂದೆ ಬರುವ ಮುಖಪುಟದಲ್ಲಿ ನಿಮ್ಮ ಜಿಲ್ಲೆಯ, ತಾಲೂಕು, ಗ್ರಾಮ ಪಂಚಾಯಿತಿ, ಹಳ್ಳಿಯನ್ನು,ಆಯ್ಕೆ ಮಾಡಿಕೊಂಡು ನಂತರ ಗೋ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಬರುವ ಲಿಸ್ಟ್ ತೋರಿಸುತ್ತದೆ..

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಜಮಾ ಆಗಿರುವ ಹಣದ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿ :-

ಕೇವಲ ನಿಮ್ಮ ಆಧಾರ್ ನಂಬರ್ ಅನ್ನು ನಮೂದಿಸಿ ಗೃಹಲಕ್ಷ್ಮಿ ಯೋಜನೆಯ ಹಣ ಎಷ್ಟು ಜಮಾ ಆಗಿದೆ ಹಣ ಯಾವಾಗ ನಿಮ್ಮ ಖಾತೆಗೆ ಬಂದಿದೆ ಎಂಬುದನ್ನು ತಿಳಿದುಕೊಳ್ಳಿ..

ಹಂತ 1:- ಮೊದಲಿಗೆ ಈ ಕೆಳಗಡೆ ಕೊಟ್ಟಿರುವ ಲಿಂಕನ್ನು ಉಪಯೋಗಿಸಿ ಪ್ಲೇ ಸ್ಟೋರ್ ನಲ್ಲಿ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

https://play.google.com/store/apps/details?id=com.dbtkarnataka

ಹಂತ 2:- ನಂತರ ರಿಜಿಸ್ಟ್ರೇಷನ್ ಆಗಲು ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ get otp ಮೇಲೆ ಒತ್ತಬೇಕು ನಂತರ ಅಲ್ಲಿ ಬರುವ ಓಟಿಪಿಯನ್ನು ನಮೂದಿಸಬೇಕು.

ನಂತರ ಇಲ್ಲಿ ಕೆಳಗೆ ಕಾಣಿಸುವ ಹಾಗೆ ನಾಲ್ಕು ಅಂಕೆ ಯಾವುದಾದರೂ ನಂಬರ್ m-pin ಹಾಗೆ ಸಬ್ಮಿಟ್(submit)ಬಟನ್ ಮೇಲೆ ಒತ್ತಬೇಕು.

ಇಲ್ಲಿ ಮೇಲೆ ಕಾಣಿಸುವ ಹಾಗೆ ಪೇಮೆಂಟ್ ಸ್ಟೇಟಸ್ ಅನ್ನು ಒತ್ತಿದರೆ ನಿಮಗೆ ಎಷ್ಟು ಹಣ ಜಮಾ ಆಗಿದೆ, ಡಿಬಿಟಿ ಸ್ಥಿತಿಯನ್ನು ಅಲ್ಲಿ ತೋರಿಸುತ್ತಾರೆ. ಅದೇ ರೀತಿಯಾಗಿ ನಿಮ್ಮ ಬ್ಯಾಂಕಿಗೆ ಆಧಾರ್ ಸೀಡಿಂಗ್ ಆಗಿದೆ ಇನ್ನು ಎಂಬುದನ್ನು ತಿಳಿದುಕೊಳ್ಳಬಹುದು.

ಇದಾದ ಮೇಲೆ ನಿಮ್ಮ ಖಾತೆಗೆ ಹಣ ಬಂದಿರುವುದು ಆಗಿದ್ದರೆ ಈ ಕೆಳಗಿನಂತೆ ಸ್ಟೇಟಸ್ ಅನ್ನು ತೋರಿಸುತ್ತದೆ. ಈ ಕೆಳಗಿನಂತೆ ಸ್ಟೇಟಸ್ ತೋರಿಸಿದರೆ ನಿಮ್ಮ ಖಾತೆಗೆ ಹಣ ಜಮೆ ಯಾಗಿರುತ್ತದೆ ಎಂದು ಅರ್ಥ.

ನಿಮ್ಮ ರೇಷನ್ ಕಾರ್ಡ್ ನ ಸಂಪೂರ್ಣ ಸ್ಥಿತಿ ಏನಾಗಿದೆ ಎಂದು ತಿಳಿಯಿರಿ :-

ನಿಮ್ಮ ಜಿಲ್ಲೆ ಹಾಗೂ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಇಲ್ಲಿ ನಮೂದಿಸಿ ನಿಮ್ಮ ರೇಷನ್ ಕಾರ್ಡ್ ಸದ್ಯದ ಪರಿಸ್ಥಿತಿ ಏನು ನೀವು ಎಷ್ಟು ಅಕ್ಕಿಯನ್ನು ಪಡೆದಿದ್ದೀರಿ ಎಷ್ಟು ಎಣ್ಣೆ ಪಡೆದಿದ್ದೀರಿ ಎಲ್ಲವೂ ಅಲ್ಲಿ ತಿಳಿಯುತ್ತದೆ ಎಂಬುದನ್ನು ಸಂಪೂರ್ಣವಾಗಿ ತಿಳಿಯಿರಿ.

https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010

ಯಾಕೆ ಇನ್ನು ಬಂದಿಲ್ಲ ಮೊದಲ ಕಂತಿನ ಹಣ? ಇದನ್ನು ಓದಿರಿ

ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂದ್ರೆ ಅದಕ್ಕೆ ಕೆಲವೊಂದು ಇಷ್ಟು ನಿಯಮಗಳನ್ನು ಪಾಲಿಸಲೇ ಬೇಕಾಗಿತ್ತು. ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್(Adhaar Card) ಬ್ಯಾಂಕ್ ಖಾತೆಯ(Bank account) ಈ ಕೆವೈಸಿ ಮಾಡಿಸಿಕೊಳ್ಳುವುದು

ಆಧಾರ್ ಸೀಡಿಂಗ್ ತಪ್ಪದೇ ಆಗಿರಬೇಕು , ಅದೇ ರೀತಿಯಾಗಿ ರೇಷನ್ ಕಾರ್ಡ್ (ration card) ಮಹಿಳೆಯರ ಹೆಸರಿಗೆ ಮಾಡಿಕೊಳ್ಳುವುದು, ಮೊದಲಾದ ಬದಲಾವಣೆಗಳು ಆಗಬೇಕಿತ್ತು. ಇದರ ಜೊತೆಗೆ ಮಹಿಳೆಯ ರೇಷನ್ ಕಾರ್ಡ್ ಆಧಾ‌ರ್ ಕಾರ್ಡ್ (Aadhaar card) ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಒಂದಕ್ಕೊಂದು ಮ್ಯಾಚ್ ಆಗಬೇಕು. ಇವುಗಳು ಸರಿ ಆಗದೆ ಇದ್ದ ಕಾರಣದಿಂದ ಹಲವರ ಖಾತೆಗೆ ಹಣ ಜಮಾ ಆಗಿಲ್ಲ.

ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಮಾಹಿತಿ ತಪ್ಪದೆ ಓದಿರಿ :-

ಇನ್ನು ಮೊದಲ ಕಂತಿನ ಹಣ ಯಾರ ಖಾತೆಗೆ ಜಮಾ ಆಗಿಲ್ಲವೋ ಅವರು ನೇರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ವರ್ ಅವರನ್ನೇ ಪ್ರಶ್ನಿಸುತ್ತಿದ್ದಾರೆ. ತಮ್ಮ ಖಾತೆಯಲ್ಲಿ ಎಲ್ಲವೂ ಸರಿ ಇದ್ರೂ ಹಣ ಮಾತ್ರ ಬರ್ತಿಲ್ಲ ಅನ್ನುತ್ತಿದ್ದಾರೆ ಮಹಿಳೆಯರು.

ಈ ಬಗ್ಗೆ ಮಾಹಿತಿ ನೀಡಿರುವ ಲಕ್ಷ್ಮಿ ಹೆಬ್ಬಾಳ್ವರ್ ಅವರು ಮೊದಲ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗದೆ ಇರಲು ಅವರ ಖಾತೆಗೆ ಈ-ಕೆವೈಸಿ(E-kyc) ಆಗದೆ ಇರುವುದೇ ಮುಖ್ಯ ಕಾರಣ.

ಇದರ ಜೊತೆಗೆ ತಾಂತ್ರಿಕ ದೋಷಗಳು, ಸರ್ವರ್ ಸಮಸ್ಯೆ ಮೊದಲಾದವುಗಳಿಂದ ಮೊದಲ ಕಂತಿನ ಹಣ ಎಲ್ಲ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ. ಇನ್ನು ಎರಡನೇ ಕಂತಿನ ಹಣ ಸದ್ಯದಲ್ಲಿಯೇ ಜಮಾ ಆಗಲಿದ್ದು ಮೊದಲನೆಯ ಕಂತಿನ ಹಣ ಯಾರ ಖಾತೆಗೆ ಜಮಾ ಆಗಿಲ್ಲವೋ ಅಂತವರ ಖಾತೆಗೆ ಎರಡು ಕಂತಿನ ಹಣ ಸೇರಿಸಿ ನಾಲ್ಕು ಸಾವಿರ ರೂಪಾಯಿಗಳನ್ನು ಜಮಾ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಇನ್ನು ಮುಂದೆ ಪ್ರತಿ ತಿಂಗಳು 15 ನೇ ತಾರೀಖಿನೊಳಗೆ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂಬುದಾಗಿಯೂ ಭರವಸೆ ನೀಡಿದ್ದಾರೆ.

ಹಣ ಬಾರದೆ ಇದ್ದರೆ ಏನು ಮಾಡಬೇಕು?

ಗೃಹಲಕ್ಷ್ಮಿಯ 2000 ಉಚಿತವಾಗಿ ಸಿಗುವಂತಹ ಅವಕಾಶದಿಂದ ಹಲವು ಮಹಿಳೆಯರು ವಂಚಿತರಾಗಿದ್ದಾರೆ. ಇದಕ್ಕೆ ಸಾಕಷ್ಟು ಕಾರಣಗಳು ಕೂಡ ಇವೆ ಇನ್ನು ಯಾವ ಸಮಸ್ಯೆ ಇದೆ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಾಗದೆ ಇದ್ದ ಪಕ್ಷದಲ್ಲಿ ಇನ್ನು ಮುಂದೆ ಮನೆ ಮನೆಗೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರನ್ನು ಕಳುಹಿಸಿ ಮಹಿಳೆಯರಿಗೆ ಸಹಾಯ ಮಾಡಲಿದೆ.

ನಿಮಗೆ 2,000 ಬರದೇ ಇದ್ದರೆ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಸಹಾಯಕಿಯರು ಮನೆಗೆ ಬಂದಾಗ ಅವರಿಗೆ ಮಾಹಿತಿ ನೀಡಿ ಸೂಕ್ತ ಸಲಹೆ ಪಡೆದುಕೊಳ್ಳಬಹುದು ಎಂದು ಸಚಿವೆ ತಿಳಿಸಿದ್ದಾರೆ.

ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್

(ಜೂಲೈ,ಆಗಸ್ಟ್,ಸೆಪ್ಟೆಂಬರ್ ) ಮೂರು ತಿಂಗಳ ಹಣ ಜಮಾ ಸ್ಟೇಟಸ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಂತರ ಅಲ್ಲಿ ಕಾಣಿಸುವ ತಿಂಗಳನ್ನು ಆಯ್ಕೆ ಮಾಡಿಕೊಂಡು ಕೆಳಗೆ ತೋರಿಸಿರುವ ಆರ್‌ಸಿ ನಂಬರ್ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಜಮಾ ಹಣವನ್ನು ತೋರಿಸುತ್ತದೆ.

https://ahara.kar.nic.in/status1/status_of_dbt_new.aspx

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/K9mNNO3T6FzKJGch4oqd2m

ಲೇಖನ ಮುಕ್ತಾಯ :-

ತಪ್ಪದೆ ಓದಿರಿ :-

➡️ ಬರಗಾಲ ಘೋಷಿತ ರೈತರಿಗೆ ಬೆಳೆ ಸಾಲ ಮರುಪಾವತಿ ಬಗ್ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ ಇಲ್ಲಿದೆ ಮಹತ್ವದ ಮಾಹಿತಿ ತಪ್ಪದೆ ತಿಳಿಯಿರಿ https://krushivahini.com/2023/10/11/crop-loan-repayment-for-drought-declared-farmers/

➡️ ಈ ಕೆಲಸ ಮಾಡಿದವರಿಗೆ ಮಾತ್ರ ಬರಗಾಲ ಪರಿಹಾರ ಹಣ ಜಮಯಾಗುತ್ತದೆ ತಪ್ಪದೇ ಮೊಬೈಲ್ನಲ್ಲಿ ಈ ಕೆಲಸ ಮಾಡಿ https://krushivahini.com/2023/10/09/baragala-samikshe-2023/

➡️ ಫಸಲ್ ಭೀಮಾ ಯೋಜನೆಯಡಿ ರೈತರ ಹೊಸ ಪಟ್ಟಿ ಹಾಗೂ ಮಧ್ಯಂತರ ಬೆಳೆವಿಮೆ ಮತ್ತು ಹೆಸರು ಬೆಳೆ ವಿಮೆ ನಿಮ್ಮ ಖಾತೆಗೆ ಜಮಾ ಆಗಿರುವ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ https://krushivahini.com/2023/10/09/fasal-bhima-yojana-new-list-released/

➡️ ಅನ್ನಭಾಗ್ಯ ಯೋಜನೆಯ ಅರ್ಹ ಮತ್ತು ಅನರ್ಹ ಪಟ್ಟಿಯನ್ನು ಈಗಲೇ ನೋಡಿರಿ ನಿಮ್ಮ ಹೆಸರನ್ನು ಈ ಲಿಸ್ಟ್ ನಲ್ಲಿ ಚೆಕ್ ಮಾಡಿ.

https://krushivahini.com/2023/10/04/annabhagya-yojana-eligible-and-ineligible-list/

➡️ ಈ ಜಿಲ್ಲೆಗೆ 25% ಮಧ್ಯಂತರ ಬೆಳೆವಿಮೆ ಬಿಡುಗಡೆ ನಿಮಗೆ ಎಷ್ಟು ಬೆಳೆ ವಿಮೆ ಜಮಾ ಆಗಿದೆ ಹೀಗೆ ತಿಳಿದುಕೊಳ್ಳಿ.

https://krushivahini.com/2023/10/01/release-of-interim-crop-insurance/

➡️ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ನೀಡಲಾಗಿದೆ ತಪ್ಪದೇ ನಿಮ್ಮ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಿ. https://krushivahini.com/2023/10/05/ration-card-amendment-status-check/

➡️ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಯಾವಾಗ ಹೇಗೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

https://krushivahini.com/2023/10/04/gruhalakshmi-funds-the-next-installment/

➡️ ಪಿಎಂ ಕಿಸಾನ್ 15ನೇ ಕಂತಿನ ಅಂತಿಮ ಪಟ್ಟಿ ಬಿಡುಗಡೆ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ https://krushivahini.com/2023/10/04/pm-kisan-final-list-released/

Leave a Reply

Your email address will not be published. Required fields are marked *