How much relief will be given to drought declared taluks ಬರಗಾಲ ಘೋಷಿತ ತಾಲೂಕುಗಳಿಗೆ ಎಷ್ಟು ಪರಿಹಾರ ಕೊಡುತ್ತಾರೆ

ಆತ್ಮೀಯ ರೈತ ಬಾಂಧವರೇ ನಿಮಗೆ ತಿಳಿದ ಹಾಗೆ ಕರ್ನಾಟಕದಲ್ಲಿ ಬರ ಘೋಷಣೆಯೆಂದು ಹಲವಾರು ಜಿಲ್ಲೆಗಳ ಮತ್ತು ಜಿಲ್ಲೆಗಳಲ್ಲಿ ಬರುವ ತಾಲೂಕುಗಳ ಹೆಸರುಗಳನ್ನು ಈಗಾಗಲೇ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿದ್ದಾರೆ ಆದರೆ ಗೊಂದಲ ವಿಷಯ ಏನೆಂದರೆ ಕೇಂದ್ರ ಸರ್ಕಾರದ ಅನುಮತಿ ಪತ್ರವಿಲ್ಲದೇನೆ ರಾಜ್ಯ ಸರ್ಕಾರವು ಬರಗಾಲ ಘೋಷಣೆ ಮಾಡಿದ್ದು ಇದು ಮುಂದೆ ತೊಂದರೆ ಆಗಬಹುದು ಆದರೆ ಪರವಾಗಿಲ್ಲ ನಿಜವಾಗಿಯೂ ಕರ್ನಾಟಕದಲ್ಲಿ ಮಳೆ ಆಗದೇ ಇರುವ ಕಾರಣ ಕೇಂದ್ರ ಸರ್ಕಾರವು ಇದಕ್ಕೆ ಒಪ್ಪಿಗೆ ನೀಡಿ ನೋಡುತ್ತದೆ ಎಂಬುದರ ಭರವಸೆ ನಮ್ಮೆಲ್ಲರಿಗೂ ಇದ್ದೇ ಇರುತ್ತದೆ.

ಬರಗಾಲ ಸಮೀಕ್ಷೆ ಯಾವಾಗ :

ಏನಿದು ಬರಗಾಲ ಸಮೀಕ್ಷೆ ಏನೆಂದರೆ ನಿಮ್ಮ ನಿಮ್ಮ ತಾಲೂಕುಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ ಎಂದು ಗೊತ್ತಾಯಿತು ಆದರೆ ಮತ್ತೆ ಮತ್ತೆ ಅದರಲ್ಲಿ ಪ್ರತಿಯೊಬ್ಬರ ಮಾಹಿತಿಯನ್ನು ಸಹ ಸರ್ಕಾರಕ್ಕೆ ಅಂದರೆ ಜಂಟಿ ಕೃಷಿ ಉಪನಿರ್ದೇಶಕರು ಈ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ತಿಳಿಸಬೇಕು ಅದಕ್ಕಾಗಿ ಈಗಾಗಲೇ ಎಲ್ಲಾ ಜಂಟಿ ಕೃಷಿ ನಿರ್ದೇಶಕರು ಇದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಹಾಗೂ ಈಗಾಗಲೇ ಕೆಲವೊಬ್ಬರ ಮಾಹಿತಿಗಳನ್ನು ಮೇಲೆ ರಾಜ್ಯ ಸರ್ಕಾರಕ್ಕೆ ಕಳಿಸಲಾಗಿದೆ.

ರೈತರ ಬೆಳೆ ಸಮೀಕ್ಷೆ ಮಾಡುವುದಕ್ಕೆ ಮತ್ತು ಪರಿಹಾರ ನೀಡುವದಕ್ಕೆ ಏನು ಸಂಬಂಧ?

ಹೌದು ರೈತ ಬಾಂಧವರೇ ನಿಮ್ಮ ಬೆಳೆಗಳಲ್ಲಿ ಯಾವುದೋ ಹಾನಿಯಾಗಿದೆ ಮತ್ತು ಏನು ಆಗಿದೆ ಎಂಬುವುದರ ಬಗ್ಗೆ ಯಾವುದೇ ಅಧಿಕಾರಿಗಳು ಮಾಹಿತಿ ನೀಡಿದರು ಅದು ಸರ್ಕಾರ ನಂಬುವುದಿಲ್ಲ ಹೊರತಾಗಿ ನಿಮ್ಮನ್ನು ನೀವು ಸ್ವತಂತ್ರವಾಗಿ ಬೆಳೆ ಸಮೀಕ್ಷೆ ಮಾಡಿರುವ ಸಮಯದಲ್ಲಿ ನೀವು ಸರಿ ಹೇಳಿರುವ ಭಾವಚಿತ್ರಗಳು ನಿಮ್ಮ ನಿಮ್ಮ ಬೆಳೆಗಳ ಸ್ಥಿತಿಯನ್ನು ಮತ್ತು ಮಳೆ ಕೊರತೆಯಿಂದಾಗಿ ಬಾಡಿರುವ ಬೆಳೆಗಳ ಬಗ್ಗೆ ಮಾಹಿತಿಯನ್ನು ಸರ್ಕಾರ ನೇರವಾಗಿ ಪಡೆದುಕೊಳ್ಳುತ್ತದೆ.

ಬರಗಾಲ ಘೋಷಣೆಯಂತೂ ಮಾಡಿದೆ ಆದರೆ ಹಣ ನೀಡುವುದು ಎಷ್ಟು?

ನೀವು ಎರಡು ಎಕರೆ 20 ಗುಂಟೆ ಜಮೀನನ್ನು ಹೊಂದಿದ್ದರೆ ನಿಮಗೆ ಸರ್ಕಾರದಿಂದ 8,500 ನೀಡುವುದಾಗಿ ಘೋಷಣೆ ಮಾಡಿದೆ. ನೀರಾವರಿ ಜಮೀನು ಇದ್ದರೆ ಅದಕ್ಕೆ 17,000 ಪ್ರತಿ ಹೆಕ್ಟರ್ ಗೆ ಬಹು ವಾರ್ಷಿಕ ಬೆಳಗಳಿದ್ದರೆ ಪ್ರತಿ ಹೆಕ್ಟರ್ 22,500ರೂ.

ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಗೆ ಯಾವ ಇನ್ಶೂರೆನ್ಸ್ ಕಂಪನಿ ಇರುವ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ.👇🏻

https://samrakshane.karnataka.gov.in/HomePages/frmKnowYourInsCompany.aspx

ಹೊಸ ಓಪನ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಗ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂಬುದರ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.

ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್:-

(ಜೂಲೈ,ಆಗಸ್ಟ್,ಸೆಪ್ಟೆಂಬರ್ ) ಮೂರು ತಿಂಗಳ ಹಣ ಜಮಾ ಸ್ಟೇಟಸ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಂತರ ಅಲ್ಲಿ ಕಾಣಿಸುವ ತಿಂಗಳನ್ನು ಆಯ್ಕೆ ಮಾಡಿಕೊಂಡು ಕೆಳಗೆ ತೋರಿಸಿರುವ ಆರ್‌ಸಿ ನಂಬರ್ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಜಮಾ ಹಣವನ್ನು ತೋರಿಸುತ್ತದೆ.

https://ahara.kar.nic.in/status1/status_of_dbt_new.aspx

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ https://chat.whatsapp.com/K9mNNO3T6FzKJGch4oqd2m

Leave a Reply

Your email address will not be published. Required fields are marked *